Lakshmi Baramma: ವೈಷ್ಣವ್ ಆಲ್ಬಮ್ ಸಾಂಗ್‌ಗಾಗಿ ಕಾಯುತ್ತಿರುವ ಅಭಿಮಾನಿಗಳು: ಟೆನ್ಶನ್‌ನಲ್ಲಿ ಕಾವೇರಿ, ಕೀರ್ತಿ!

By ಶೃತಿ ಹರೀಶ್ ಗೌಡ

ಲಕ್ಷ್ಮೀ ಬಾರಮ್ಮ ಧಾರಾವಾಹಿ ಪ್ರತಿದಿನವೂ ಕೂಡ ಹೊಸದೊಂದು ತಿರುವನ್ನು ಪಡೆದುಕೊಂಡು ಸಾಗುತ್ತಿದೆ. ಲಕ್ಷ್ಮಿ ಬರೆದಿರುವ ಹಾಡಿಗೆ ವೈಷ್ಣವ್ ಧ್ವನಿಯಾಗಿದ್ದಾನೆ. ಲಕ್ಷ್ಮಿ ಕೂಡ ಡ್ಯಾನ್ಸ್ ಮಾಡಿ ಆಲ್ಬಮ್ ಸಾಂಗ್ ರಿಲೀಸ್ ಮಾಡಬೇಕು ಎಂದುಕೊಂಡಿದ್ದರು. ಆದರೆ ಇದರ ನಡುವೆ ಕೀರ್ತಿ ಮಾಡಿದ ಹಲವಾರು ತೊಂದರೆಯಿಂದಾಗಿ ಕೊನೆಗೆ ಲಕ್ಷ್ಮಿ ನಾನು ಆಲ್ಬಮ್ ಸಾಂಗ್‌ನಲ್ಲಿ ನಟಿಸುವುದಿಲ್ಲ ಎಂದಿದಳು. ಇದರಿಂದಾಗಿ ಕೀರ್ತಿ ಹಾಗೂ ಕಾವೇರಿ ಇಬ್ಬರಿಗೂ ಕೂಡ ಖುಷಿಯಾಗಿತ್ತು. ಆದರೆ ವೈಷ್ಣವ್ ಮಾಡಿದ ಪ್ಲಾನ್ ಬೇರೆ.

ವೈಷ್ಣವ್ ತನ್ನ ಆಲ್ಬಮ್ ಸಾಂಗ್‌ನಲ್ಲಿ ತನ್ನ ಹೆಂಡತಿಯ ಜೊತೆಗೆ ವೈಷ್ಣವ್ ಕುಣಿದಿರುವಂತೆ ಕಾಣಿಸುತ್ತಾ ಇದೆ ಆದರೆ ಇದು ಯಾರಿಗೂ ಕೂಡ ಗೊತ್ತಿಲ್ಲ. ವೈಷ್ಣವ್ ಕೀರ್ತಿಯ ದಿಕ್ಕನ್ನು ತಪ್ಪಿಸಲು ಇಂದು ಆಲ್ಬಮ್ ಸಾಂಗ್‌ನ ಶೂಟಿಂಗ್ ಇದೆ ಅದಕ್ಕೆ ನೀನೇ ನನ್ನ ಜೊತೆ ನಟಿಸಬೇಕು ಎಂದು ಹೇಳಿದ್ದನು. ಕೀರ್ತಿಯು ಸಹ ಕಾಸ್ಟ್ಯೂಮ್ ಎಲ್ಲವನ್ನು ಸರಿ ಹೊಂದಿಸಿಕೊಂಡು ಇನ್ನೇನು ಡ್ಯಾನ್ಸ್ ಮಾಡಬೇಕು ಎಂದು ಕೊಂಡಿರುವಾಗಲೇ ಶೂಟಿಂಗ್ ಕ್ಯಾನ್ಸಲ್ ಎಂದು ವೈಷ್ಣವ್ ಹೇಳಿದ್ದನು. ಆದರೆ ಇದನ್ನು ನಂಬಲು ಕೀರ್ತಿ ಕೈಯಲ್ಲಿ ಸಾಧ್ಯವಾಗಿರಲಿಲ್ಲ ನಂತರ ವೈಷ್ಣವ್ ಮನೆಗೆ ಬಂದಾಗ ಕೀರ್ತಿಗೆ ಎಲ್ಲವೂ ಕೂಡ ಅರ್ಥವಾಗಿದೆ. ವೈಷ್ಣವ್ ಆಲ್ಬಮ್ ಸಾಂಗ್‌ನಲ್ಲಿ ಯಾರು ನಟಿಸುತ್ತಾ ಇದ್ದಾರೆ ಎಂಬುದು ಮಾತ್ರ ಇನ್ನೂ ಸರ್ಪ್ರೈಸ್ ಆಗಿದೆ. ವೈಷ್ಣವ್ ಹೇಳುತ್ತಿರುವುದು ಕೀರ್ತಿಗೆ ಟೆನ್ಶನ್ ತಂದಿಟ್ಟಿದೆ.

Kannada Serial Lakshmi Baramma: vaishanva and Lakshmi album song release

ಕೀರ್ತಿ ತಾನೇ ವೈಷ್ಣವ ಜೊತೆಯಲ್ಲಿ ಆಲ್ಬಮ್ ಸಾಂಗ್‌ನಲ್ಲಿ ಇರಬೇಕು ಎಂದು ಲಕ್ಷ್ಮಿಗೆ ತೊಂದರೆ ನೀಡಿದ್ದಳು. ಆದರೆ ಈ ಎಲ್ಲಾ ತೊಂದರೆಗಳು ಕೂಡ ಲಕ್ಷ್ಮಿಗೆ ವರವಾಗಿ ಪರಿಣಮಿಸಿವೆ. ಹೀಗಾಗಿ ವೈಷ್ಣವ್ ಇನ್ನೂ ಸ್ವಲ್ಪ ಲಕ್ಷ್ಮಿಗೆ ಹತ್ತಿರವಾಗಿದ್ದಾನೆ. ಪಾರ್ಟಿಗೆ ಬೇಕಾದ ಎಲ್ಲಾ ತಯಾರಿಯನ್ನ ಮಾಡಿಕೊಳ್ಳಲಾಗಿದೆ.ಇದೊಂದು ಸರ್ಪ್ರೈಸ್ ಪಾರ್ಟಿಯಾಗಿದ್ದು ಯಾವಾಗ ಆಲ್ಬಮ್ ಸಾಂಗ್ ರಿಲೀಸ್ ಆಗುತ್ತದೆ ಆಲ್ಬಮ್ ಸಾಂಗ್‌ನಲ್ಲಿ ಯಾರು ನಟಿಸಿದ್ದಾರೆ ಎಂಬುದಕ್ಕೆಲ್ಲ ಉತ್ತರ ಸಿಗಲಿದೆ. ಕಾವೇರಿ ಕೂಡ ನನ್ನ ಮಗನ ಜೊತೆಯಲ್ಲಿ ಯಾರೂ ನಟಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

ವೈಷ್ಣವ್ ಆಲ್ಬಮ್ ಸಾಂಗ್ ರಿಲೀಸ್

ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳು

ವೈಷ್ಣವ್ ಈಗ ಮತ್ತೊಂದು ಆಲ್ಬಮ್ ಸಾಂಗ್ ರಿಲೀಸ್ ಮಾಡಲು ಕಾತುರದಿಂದ ಕಾಯುತ್ತಾ ಇದ್ದಾರೆ. ಇದು ವೈಷ್ಣವಿಗೆ ಒಂದು ರೀತಿಯಲ್ಲಿ ಪ್ಲಸ್ ಪಾಯಿಂಟ್ ಆಗಿದೆ. ಯಾಕೆಂದರೆ ತನ್ನ ಹೆಂಡತಿಯೇ ಈ ಹಾಡನ್ನು ಬರೆದಿದ್ದು ಜೊತೆಗೆ ಹೆಂಡತಿಯ ಜೊತೆಗೆ ನಟನೆಯನ್ನು ಕೂಡ ಮಾಡಿರುವುದು ಈ ಲಕ್ಷ್ಮಿ ಮೇಲೆ ಮತ್ತಷ್ಟು ಪ್ರೀತಿ ಮೂಡಲು ಸಾಧ್ಯವಾಗಿದೆ. ಈ ಕಡೆ ಕಾವೇರಿ ಲಕ್ಷ್ಮಿಯನ್ನು ದೂರ ಮಾಡಿ ಮಗನನ್ನು ಇನ್ನಷ್ಟು ಹತ್ತಿರ ಮಾಡಿಕೊಳ್ಳಬೇಕು ಎಂದು ಮಾಡುತ್ತಿರುವ ಪ್ಲಾನ್ ಎಲ್ಲವೂ ಕೂಡ ಪ್ಲಾಫ್ ಆಗುವಂತೆ ಕಾಣಿಸುತ್ತಾ ಇದೆ. ಆದರೆ ಸುಪ್ರಿಯಾಗೆ ಮಾತ್ರ ಲಕ್ಷ್ಮಿಯೇ ವೈಷ್ಣವ್ ಜೊತೆಯಲ್ಲಿ ನಟಿಸಿರಬೇಕು ಎಂಬ ಒಂದು ಆತ್ಮವಿಶ್ವಾಸವಿದೆ. ಆದರೆ ಎಲ್ಲೂ ಕೂಡ ವೈಷ್ಣವ್ ಒಂದಿಷ್ಟು ಸುಳಿವನ್ನು ಕೂಡ ಬಿಟ್ಟು ಕೊಟ್ಟಿಲ್ಲ.

ಸ್ಟೇಜ್ ಮೇಲೆ ಬಂದಿರುವ ವೈಷ್ಣವ್ ಎಲ್ಲರನ್ನೂ ಕೂಡ ವೆಲ್ಕಮ್ ಮಾಡಿದ್ದಾನೆ. ಇದು ನನ್ನ ಎರಡನೆಯ ಆಲ್ಬಮ್ ಸಾಂಗ್ ಆಗಿದೆ. ಈ ಸಾಂಗ್ ಅನ್ನು ನನ್ನ ಹೆಂಡತಿ ಲಕ್ಷ್ಮಿ ವೈಷ್ಣವ್ ಕಶ್ಯಪ್ ಬರೆದಿದ್ದಾರೆ . ಈ ಹಾಡಿಗೆ ನಾನೇ ಇದಕ್ಕೆ ಧ್ವನಿಯಾಗಿದ್ದೆನೆ ಇಂದು ಹೊಸ ಪ್ರತಿಭೆಯನ್ನು ಸಹ ನಿಮ್ಮ ಮುಂದೆ ಅನಾವರಣ ಮಾಡಲಿದ್ದೇನೆ. ನೀವೆಲ್ಲರೂ ಕಾಯುತ್ತಿರುವ ಒಂದು ಕುತೂಹಲಕ್ಕೆ ಇಂದು ತೆರೆ ಬೀಳಲಿದೆ ಎಂದಿದ್ದಾನೆ.

Kannada Serial Lakshmi Baramma: vaishanva and Lakshmi album song release

ಗೊಂದಲದಲ್ಲಿ ಕೀರ್ತಿ, ಕಾವೇರಿ..!

ವೈಷ್ಣವ್ ತನ್ನ ಹಾಡಿನ ಬಗ್ಗೆ ಹೇಳುತ್ತಾ ಇದ್ದರೆ, ಇತ್ತ ಕಡೆ ಕಾವೇರಿ ಹಾಗೂ ಕೀರ್ತಿಗೆ ತುಂಬಾನೆ ಟೆನ್ಶನ್ ಆಗುತ್ತಿದೆ. ನನ್ನ ಮಗ ನನಗೆ ಗೊತ್ತಿಲ್ಲದ ರೀತಿಯಲ್ಲಿ ಏನಾದರೂ ಮಾಡಿದ್ದಾನಾ ಎಂದುಕೊಂಡು ಕಾವೇರಿ ಯೋಚನೆ ಮಾಡುತ್ತಿದ್ದಾರೆ. ಈ ಕಡೆ ಕೀರ್ತಿ ಯಾರದು ಹೊಸ ಪ್ರತಿಭೆ ಎಂದುಕೊಂಡು ತಲೆಗೆ ಹುಳ ಬಿಟ್ಟು ಕೊಂಡಿದ್ದಾಳೆ‌. ನನ್ನ ಜೊತೆಯಲ್ಲಿ ಆಲ್ಬಮ್ ಸಾಂಗ್ ಮಾಡುತ್ತೇನೆ ಎಂದಿದ್ದ ವೈಷ್ಣವ್ ಈಗ ಯಾರ ಜೊತೆಯಲ್ಲಿ ನಟನೆ ಮಾಡಿರಬಹುದು ಎಂದು ಕೀರ್ತಿ ಯೋಚಿಸುತ್ತಾ ಇದ್ದಾಳೆ. ಎಲ್ಲರ ಚಿತ್ತ ಈಗ ವೈಷ್ಣವ್ ಹಾಗೂ ಲಕ್ಷ್ಮಿಯತ್ತ ನೆಟ್ಟಿದೆ.

More from Filmibeat

English summary
lakshmibaramma serial written update on January 1st episode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X