Lakshmi Baramma: ಲಕ್ಷ್ಮೀ ಕುತ್ತಿಗೆಯಲ್ಲಿರಬೇಕಾದ ತಾಳಿ ಕೀರ್ತಿ ಕೈಯಲ್ಲಿ.. ಸುಪ್ರೀತಾ ಗೇಮ್ ಆಡ್ತಾಳಾ?

By ಎಸ್ ಸುಮಂತ್

ಲಕ್ಷ್ಮೀ ಮತ್ತು ವೈಷ್ಣವ್ ಮದುವೆಯಾಗಿ ಮೂರು ತಿಂಗಳಾಗಿದೆ. ಆ ಸಂಭ್ರಮವನ್ನು ಮನೆಯವರೆಲ್ಲಾ ಸೇರಿ, ಆಚರಣೆ ಮಾಡಿ, ಸಂತಸದ ಕ್ಷಣವನ್ನು ದುಪ್ಪಟ್ಟು ಮಾಡಬೇಕು ಎಂದೇ ಪ್ಲ್ಯಾನ್ ಹಾಕಿಕೊಂಡಿದ್ದರು. ಆದರೆ ಕೀರ್ತಿಯಿಂದಾಗಿ ಆ ಸಂಭ್ರಮವೆಲ್ಲಾ ನುಚ್ಚು ನೂರಾಯ್ತು. ಬರೀ ಕೀರ್ತಿ ಅಲ್ಲ, ಸುಪ್ರೀತಾಳಿಂದಾನೂ ಆ ಕನಸು ಭಗ್ನವಾಯ್ತು.

ಏನೋ ಆಗಿದ್ದೆಲ್ಲವೂ ಆಗೋಯ್ತು ಅಂತ ಮನೆಯವರೆಲ್ಲ ಸೇರಿ, ತುಂಬಾ ಸಮಯ ತೆಗೆದುಕೊಳ್ಳದ, ತಾಳಿ ಶಾಸ್ತ್ರವನ್ನು ಮರುದಿನವೇ ಇಟ್ಟುಕೊಂಡಿದ್ದಾರೆ. ಈಗ ಸುಪ್ರೀತಾ, ಕಾವೇರಿಗೆ ವಿರುದ್ಧವೇ, ಆದ್ರೆ ಲಕ್ಷ್ಮೀಗೆ ಒಳಗೊಳಗೆ ಒಳ್ಳೆಯದ್ದನ್ನೇ ಬಯಸುತ್ತಿದ್ದಾಳೆ.

Kannada Serial Lakshmi Baramma Written Update on July 31st episode

ಮನೆಯ ಅಲಂಕಾರ ಕಂಡು ಕಾವೇರಿ ಶಾಕ್

ನಿನ್ನೆಯೆಲ್ಲಾ ಕಶ್ಯಪ್ ಮನೆಯಲ್ಲಿ ಆಗಿದ್ದು ಸಣ್ಣ ರಾದ್ಧಾಂತವಲ್ಲ. ಕೀರ್ತಿಯಿಂದಾಗಿ ದೊಡ್ಡ ರಾಮಾಯಣವೇ ನಡೆದು ಹೋಯ್ತು. ಸುಪ್ರೀತಾಳನ್ನು ಮನೆಯಿಂದ ಹೊರ ಹಾಕುವ ಸ್ಥಿತಿ‌ ತಲುಪಿದ್ದರು. ಅದೇ ಬೇಸರದಲ್ಲಿ ವೈಷ್ಣವ್ ಮಳೆಯಲ್ಲಿ ನೆನೆಯುತ್ತಾ ಕೂತಿದ್ದ. ಒಂದು ಹಂತಕ್ಕೆ ಎಲ್ಲವೂ ಸಮಾಧಾನಗೊಂಡು, ಮನೆಯಲ್ಲಿ ಮತ್ತೆ ಪೂಜೆಯ ವಾತಾವರಣ ನಿರ್ಮಾಣವಾಗಿತ್ತು. ಗಂಡ-ಹೆಂಡತಿಗೆ ಮಧು ಮಕ್ಕಳಂತೆ ರೆಡಿಯಾಗಲು ಹೇಳಿ, ಎಲ್ಲರೂ ದೇವರ ಕೋಣೆಯಲ್ಲಿ ಸಿದ್ಧತೆ ನಡೆಸುತ್ತಿದ್ದರು. ಬೆಳಗ್ಗೆ ಎದ್ದು ಕಾವೇರಿ ಹೊರ ಬರುತ್ತಿದ್ದಂತೆ, ಅದೊಂತರ ಶಾಕ್ ಆಗಿತ್ತು. ಏನು ಅಂತ ಕೇಳಿದ್ರೆ, ತಾಳಿ ಶಾಸ್ತ್ರದ ಪೂಜೆ ಕಣೇ ಅಂದ್ರೆ, ಎಲ್ಲರ ಮೇಲೆ ಎಗರಾಡಿ ಮುಂದಕ್ಕೆ ಸಾಗಿದ್ದಳು.

ಕೀರ್ತಿಗೆ ವಿಚಾರ ಮುಟ್ಟಿಸಿದ ಸುಪ್ರೀತಾ

ಆ ಕಡೆ ಕೀರ್ತಿ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದಳು. ಆದ್ರೆ ಸುಪ್ರೀತಾಗೆ ಈಗ ಕಾವೇರಿ ಜೊತೆಗೆ ಕೀರ್ತಿಯೂ ಟಾರ್ಗೆಟ್ ಆಗಿರುವಾಗ ಬಿಡುವುದುಂಟೆ? ನೋ ವೇ ಚಾನ್ಸೇ ಇಲ್ಲ. ಹಂಗೆ ಕೀರ್ತಿ ನಂಬರ್‌ಗೆ ಕರೆಯೂ ಹೋಯ್ತು. ಆ ಕಡೆ ಕೋಪದಲ್ಲಿಯೇ ಕರೆ ಸ್ವೀಕರಿಸಿದ ಕೀರ್ತಿಗೆ ಶಾಕಿಂಗ್ ವಿಚಾರ. ಯಾವುದು ಬೇಡ ಅಂತಿದ್ದಳೋ ಅದೇ ವಿಚಾರ ಕಿವಿಗೆ ಬಿತ್ತು. ಅದು ಮುಹೂರ್ತದ ದಿವ್ಯ ಘಳಿಗೆಯ ಸಮೇತ.

Kannada Serial Lakshmi Baramma Written Update on July 31st episode

ಲಕ್ಷ್ಮೀ ಬಗ್ಗೆ ಕಾವೇರಿಗೆ ಬೇಸರ

ಲಕ್ಷ್ಮೀ ಜಗಳದ ನಡುವೆ, ಕೀರ್ತಿಯ ಬಾಯಿ ಮುಚ್ಚಿಸಿ, ಸುಪ್ರೀತಾಳ ಪರ ನಿಂತಿದ್ದಳು. ಅದಕ್ಕೆ ಈಗ ಕಾವೇರಿ ಮಾತನಾಡಿಸದೆ ರಿವೇಂಜ್ ತೀರಿಸಿಕೊಳ್ಳುತ್ತಿದ್ದಾಳೆ. ಕಾಫಿ ತರಲಾ ಅತ್ತೆ ಅಂದ್ರೆ ಸುಪ್ರೀತಾಗೆ ಕೊಡು ಹೋಗು ಅಂತ ಮುಖ ತಿರುಗಿಸಿ ಹೊರಟೆ ಬಿಟ್ಟಿದ್ದಾಳೆ. ಲಕ್ಷ್ಮೀ ತಕ್ಷಣ ಎಚ್ಚೆತ್ತುಕೊಂಡು ಅತ್ತೆಯನ್ನು ಸಮಾಧಾನ ಮಾಡುವುದಕ್ಕೆ ಹಿಂದೆಯೇ ಹೊರಟಿದ್ದಾಳೆ. ಕ್ಷಮಿಸಿ ಎನ್ನುವಾಗಲೇ ಮಾವ ಹಿಂದೆ ನಿಂತಿದ್ದು ಕಂಡಿದೆ. ಗಂಡನನ್ನು ಕಂಡ ಕಾವೇರಿ ನಾಟಕ ಶುರು ಮಾಡಿದ್ದಾಳೆ.

ಕಾವೇರಿ ಬದಲು ಸುಪ್ರೀತಾ ನಿಲ್ತಾಳಾ ಸಹಾಯಕ್ಕೆ..?

ತಾಳಿ ಶಾಸ್ತ್ರ ಮಾಡುವ ಮನಸ್ಸು ಕಾವೇರಿಗೆ ಇಲ್ಲ. ಯಾಕಂದ್ರೆ, ಕೀರ್ತಿಗೆ ಗೊತ್ತಾಗಿ ಬಿಟ್ಟರೆ ಮತ್ತೆ ದೊಡ್ಡ ಸಮಸ್ಯೆ ಎದುರಾಗುತ್ತದೆ ಎಂಬ ಆತಂಕ. ಆದರೆ, ಅದಾಗಲೇ ತಿಳಿದು ಆಗಿದೆ. ಕೀರ್ತಿ ಜೊತೆಗೆ ಶಾಪಿಂಗ್ ಹೋದಾಗಲೇ ಕಾವೇರಿ ತನ್ನ ಸೊಸೆಗೆಂದು ತಾಳಿಯನ್ನು ತೆಗೆದಿಟ್ಟುಕೊಂಡಿದ್ದು, ಕೀರ್ತಿಯ ನೆನಪಿಗೆ ಬಂದಿದೆ. ತಕ್ಷಣ ಕಾವೇರಿಯ ಮನೆಗೆ ಹೋದವಳು, ತಾಳಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದಾಳೆ. ಆ ಕಡೆ ಮುಹೂರ್ತಕ್ಕೆ ಸಮಯ ಮೀರುತ್ತಿದೆ. ಕಾವೇರಿ ಬಳಿ ತಾಳಿ ಕೊಡು ಅಂತ ಕೇಳಿದರೆ, ಕಾವೇರಿ ಹುಡುಕಾಟ ಶುರು ಮಾಡಿದ್ದಾಳೆ‌. ಆದರೆ ಕೀರ್ತಿಯ ಬಳಿ ಇರುವ ತಾಳಿ ಕಾವೇರಿ ಬಳಿಗೆ ಬರುವುದು ಕಷ್ಟವೇ. ಈಗ ಸುಪ್ರೀತಾನೆ ಏನಾದ್ರೂ ಹೊಸ ಐಡಿಯಾ ಮಾಡಬೇಕಿದೆ.

More from Filmibeat

English summary
Kannada Serial Lakshmi Baramma Written Update on July 31st episode
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X