Lakshmi Baramma: ಅತ್ತೆಯ ಬಳಿ ನಿಜ ಹೇಳಿದ ಲಕ್ಷ್ಮೀ; ಸತ್ಯ ಹೇಳಿದ ಸೊಸೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಾವೇರಿ

By Poorva
Kannada serial Lakshmi bharamma written update on 3rd June

ಲಕ್ಷ್ಮೀ ಬಾರಮ್ಮ ಧಾರವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಲಕ್ಷ್ಮೀ ತನ್ನ ಅತ್ತೆಯ ಜೊತೆ ನಿಜ ವಿಚಾರವನ್ನು ಹೇಳಿದ್ದಾಳೆ. ಲಕ್ಷ್ಮೀ ಮನೆಯಲ್ಲಿ ಬಹಳ ಕಷ್ಟ, ಆಕೆಯ ದೊಡ್ಡಪ್ಪ ಅತಿಯಾದ ಸಾಲ ಮಾಡಿ ಇದೀಗ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆ ಸಾಲದ ಹೊರೆಯನ್ನು ಲಕ್ಷ್ಮೀ ತನ್ನ ಮೇಲೆ ಹೊರೆಸಿಕೊಂಡಿದ್ದಾಳೆ.

ಲಕ್ಷ್ಮೀ ಸಾಲಗಾರರ ಸುಳಿಯಲ್ಲಿ ಸಿಲುಕಿದ್ದ ಆಕೆಯ ದೊಡ್ಡಪ್ಪನನ್ನು ರಕ್ಷಣೆ ಮಾಡಲು ತನ್ನ ತಂದೆಯ ಮನೆಯನ್ನೇ ಅಡವಿಡುವ ಸ್ಥಿತಿ ಆಕೆಗೆ ಬಂದು ಒದಗಿದೆ. ಆದರೆ ಅತ್ತೆಯ ಮನೆಯಲ್ಲಿ ಲಕ್ಷ್ಮೀ ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ತಡೆ ಹಾಕುವವರೇ.. ಮಾವ ಒಬ್ಬರೇ ಲಕ್ಷ್ಮೀ ಏನೇ ಮಾಡಿದರೂ ಸಪೋರ್ಟ್ ಮಾಡುತ್ತಾ ಇದ್ದರು.

ಇನ್ನು ಕಾವೇರಿಗೆ ಮಾತ್ರ ಲಕ್ಷ್ಮೀ ನನ್ನ ಮಾತು ಕೇಳುತ್ತಿಲ್ಲವಲ್ಲ ಎನ್ನುವ ಕೋಪ. ಲಕ್ಷ್ಮೀ ತನ್ನ ಗಂಡ ವೈಷ್ಣವ ಹೇಳಿದ ಹಾಗೆ ಕೇಳುತ್ತಾ ಇದ್ದಳು. ಆದರೆ ವೈಷ್ಣವ್ ತನ್ನ ಮಡದಿಯ ಕಷ್ಟ ನೋಡಲಾಗದೆ ಸ್ಟುಡಿಯೋಗೆ ಲಕ್ಷ್ಮೀ ಯನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ದಿನ ಮನೆಯಿಂದ ಕರೆದುಕೊಂಡು ಹೋಗಿ ಆಕೆಯ ಅಂಗಡಿಯ ಬಳಿ ಬಿಡುತ್ತಿದ್ದ.

ಲಕ್ಷ್ಮೀ ಹಾಗೂ ಆಕೆಯ ಮನೆಯವರಿಗೆ ಕಿರಾಣಿ ಅಂಗಡಿಯೊಂದೆ ಬದುಕಿಗೆ ಆಧಾರ. ಅದರಲ್ಲಿ ಸಂಪಾದನೆ ಇರಲಿಲ್ಲ ಎಂದರೆ ಅವರ ಜೀವನಕ್ಕೂ ಕಷ್ಟ. ಹಾಗೆಯೇ ಲಕ್ಷ್ಮೀ ದೊಡ್ಡಪ್ಪ ಮಾಡಿದ ಸಾಲ ತೀರಿಸುವುದು ಕಷ್ಟ. ಆ ಕಾರಣಕ್ಕೆ ಲಕ್ಷ್ಮೀ ಮದುವೆ ಆಗಿದ್ದರೂ ಕುಟುಂಬದ ಹೊರೆ ನಾನೇ ಹೊರುತ್ತೇನೆ ಎಂದು ಹೇಳುತ್ತ ಇರುತ್ತಾಳೆ. ಅದಕ್ಕೆ ವೈಷ್ಣವ್ ಸಪೋರ್ಟ್ ಮಾಡುತ್ತಾನೆ.

ಇನ್ನು ಲಕ್ಷ್ಮೀ ಕಾವೇರಿ ಬಳಿ ಸುಳ್ಳು ಹೇಳುತ್ತ ಅಂಗಡಿಗೆ ಹೋಗುತ್ತಾ ಇದ್ದಳು. ಆದರೆ ಅತ್ತೆಯ ಜೊತೆ ಸುಳ್ಳು ಹೇಳಿಬಿಟ್ಟೆ ಅಲ್ವಾ ಎಂದು ಯೋಚನೆ ಮಾಡುತ್ತಾ ಇರುತ್ತಿದ್ದಳು. ಆದರೆ ವೈಷ್ಣವ ಮಾತ್ರ ಯಾವುದೇ ಕಾರಣಕ್ಕೂ ಅಮ್ಮನ ಬಳಿ ಅಂಗಡಿಗೆ ಹೋಗುವ ವಿಚಾರ ಹೇಳಬೇಡ ಎಂದು ಲಕ್ಷ್ಮಿಗೆ ಹೇಳಿರುತ್ತಾನೆ. ಆದರೆ ಲಕ್ಷ್ಮೀಗೆ ಮನಸ್ಸು ತಡೆಯದಾಗುತ್ತದೆ .

ಆಕೆ ಕಾವೇರಿಯ ಬಳಿ ನಿಜ ಹೇಳುತ್ತಾಳೆ. ಆಗ ಕಾವೇರಿ ಮೊದಲು ಮುನಿಸಿಕೊಂಡರೂ ಆ ಬಳಿಕ ಲಕ್ಷ್ಮೀಯ ಕೆನ್ನೆ ಮುಟ್ಟಿ ನೀನು ಕೂಡ ನನ್ನ ಹಾಗೆಯೇ ಯಾವತ್ತೂ ಸತ್ಯದ ದಾರಿಯಲ್ಲಿ ಸಾಗುವವಳು ಎನ್ನುತ್ತಾಳೆ. ಆಗ ಸುಪ್ರೀತಾ ಕಾವೇರಿ ಬಳಿ ನಿಮ್ಮ ಥರ ಅಂದರೆ ಹೇಗೆ ಎಂದೆಲ್ಲ ಪ್ರಶ್ನೆ ಮಾಡುತ್ತಾಳೆ.

ಆಗ ಕಾವೇರಿ ತನ್ನ ಸೊಸೆಯ ಪರವಾಗಿ ಹೇಳುತ್ತಾಳೆ. ಏನೇ ವಿಚಾರ ಇದ್ದರೂ ಅದನ್ನು ಧೈರ್ಯವಾಗಿ ಹೇಳುತ್ತೇನೆ. ಮುಚ್ಚಿ ಇಡುವ ಕೆಲಸ ಮಾಡುವುಚಿಲ್ಲ ಎಂದಾಗ ಸುಪ್ರೀತಾ ಮುಖ ತಿರುಗಿಸುತ್ತಾ ಇರುತ್ತಾಳೆ. ಆ ಬಳಿಕ ಕಾವೇರಿ ಮತ್ತೆ ನನಗೆ ನನ್ನ ಸೊಸೆ ಮಾಡಿದ ಕೆಲಸ ಇಷ್ಟ ಆಗಿದೆ ಆಕೆಯ ನೇರ ನುಡಿ ನನಗೆ ಬಹಳ ಇಷ್ಟ ಆಗಿತ್ತು ಕೂಡ, ಸತ್ಯ ಹೇಳುವ ಧೈರ್ಯ ಇರುವವರು ಯಾವತ್ತೂ ಮನೆ ಮರ್ಯಾದೆಯನ್ನು ಹಾಳು ಮಾಡುವುದಿಲ್ಲ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಮನೆಯವರಿಗೆ ಖುಷಿ ಆಗುತ್ತದೆ. ಹಾಗೆಯೇ ಲಕ್ಷ್ಮೀ ಅಂಗಡಿಗೆ ಹೋಗಲು ಪರ್ಮಿಷನ್ ಕೂಡ ಸಿಗುತ್ತದೆ.

More from Filmibeat

English summary
Kannada serial Lakshmi bharamma written update on 3rd June
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X