Lakshmi Bharamma: ಕಾವೇರಿಯ ಮಾತಿಗೆ ಕೋಪಗೊಂಡ ವೈಷ್ಣವ್.. ಮನೆಗೆ ಬಂದು ತಾಯಿಯನ್ನೇ ತರಾಟೆಗೆ ತೆಗೆದುಕೊಂಡ ಮಗ?

By ಪೂರ್ವ

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದು,ನೋಡುಗರಿಗೆ ಬಹಳ ಹಿತ ಎನಿಸಿದೆ. ಈಗ ಕಾವೇರಿ ಹಾಗೂ ವೈಷ್ಣವ್ ನಡುವೆ ದೊಡ್ಡ ಜಗಳ ನಡೆಯುತ್ತಿದೆ. ಕಾವೇರಿಯ ವರ್ತನೆಗೆ ಸ್ವತಃ ಮಗನೇ ಅಸಮಾಧಾನ ಹೊರಹಾಕಿದ್ದಾರೆ.

ಇತ್ತೀಚಿಗೆ ಕಾವೇರಿ ಆಡುತ್ತಾ ಇರುವುದನ್ನು ನೋಡಿದ ವೈಷ್ಣವ್ ಮನದಲ್ಲಿ ಬಹಳ ನೋವನ್ನು ಅನುಭವಿಸುತ್ತಾ ಇರುತ್ತಾನೆ. ವಿಧಿ ಲಕ್ಷ್ಮೀ ಬಳಿ ಬಂದು ಒಂದು ಲೋಟ ಹಾಲು ಕುಡಿಯಲು ಕೊಡುತ್ತಾರೆ. ಬಳಿಕ ಲಕ್ಷ್ಮೀ ಜೊತೆ ಕೊಂಚ ಹೀಯಾಳಿಸಿ ಮಾತನಾಡುತ್ತಾ ಇರುತ್ತಾರೆ ವಿಧಿ. ತಗೊಳ್ಳಿ ಚೆನ್ನಾಗಿ ಹಾಲು ಕುಡಿದು ಮಲಗಿ. ಯಾಕೆ ನೀವು ಏನು ಗೊತ್ತಿಲ್ಲದ ಹಾಗೆ ಇದ್ದೀರಾ. ಅಲ್ಲಿ ಅಮ್ಮ ಮಗನಿಗೆ ತಂದಿತ್ತು ನೀವು ತಮಾಷೆ ನೋಡುತ್ತಾ ಇದ್ದೀರಾ ಎಂದು ಹೇಳುತ್ತಾಳೆ. ಇದನ್ನೆಲ್ಲ ಕೇಳಿದ ಲಕ್ಷ್ಮೀ ಗೆ ಕೊಟ್ಟಿರುವ ಹಾಲ ನ್ನೂ ಏನು ಮಾಡಬೇಕು ಎಂದು ತಿಳಿಯದೇ ಕುಡಿಯುತ್ತಾರೆ.

Kannada serial Lakshmi Bharamma written updated on May 11th

ವಿಧಿಯ ಮಾತಿಗೆ ಪೆಚ್ಚಾದ ಲಕ್ಷ್ಮೀ

ಇದನ್ನು ನೋಡಿದ ವಿಧಿ ಅಲ್ಲಿಂದ ಹೋಗುತ್ತಾಳೆ. ಇತ್ತ ವೈಷ್ಣವ್ ತನ್ನ ತಾಯಿಯ ಬಳಿ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾ ಇರುತ್ತಾನೆ. "ಅಮ್ಮ ನೀನೇ ಅಲ್ವಾ ನನಗೆ ಲಕ್ಷ್ಮೀನ ಮದುವೆ ಆಗು ಅಂದಿದ್ದು ಅದಕ್ಕೆ ನಾನು ಆದೆ.. ನೀನು ಯಾವ ಹುಡುಗಿಗೆ ತಾಳಿ ಕಟ್ಟು ಎಂದು ಹೇಳಿದ್ದರು ಆ ಸಂದರ್ಭದಲ್ಲಿ ನಾನು ತಾಳಿ ಕಟ್ಟುತ್ತಿದ್ದೆ. ಆದರೆ ನೀವು ಈ ರೀತಿ ಲಕ್ಷ್ಮೀ ಹಾಗೂ ಆಕೆಯ ಮನೆಯವರ ಬಳಿ ಮಾತನಾಡುತ್ತಾ ಇರುವುದು. ಲಕ್ಷ್ಮೀ ಈ ಮನೆಗೆ ಬಂದ ಮೇಲೆ ನಿನ್ನ ವರ್ತನೆ ಬದಲಾಗಿದೆ" ಎನ್ನುತ್ತಾನೆ

ಅದಕ್ಕೆ ಕಾವೇರಿ ಏನು ಹೇಳದೆ ಸುಮ್ಮನೆ ಇರುತ್ತಾಳೆ. ವೈಷ್ಣವ್‌ನ ಮಾತಿಗೆ ಉತ್ತರಿಸಲು ಆಗದೆ ಬಹಳ ಬೇಸರ ಪಟ್ಟುಕೊಂಡು ಇರುತ್ತಾಳೆ. ಆಕೆಯ ಮನದಲ್ಲಿ ಆಗಬಹುದು ಲಕ್ಷ್ಮೀ ಬಂದು ನನ್ನ ಮಗ ನನ್ನನ್ನೇ ಪ್ರಶ್ನೆ ಮಾಡುವ ಹಾಗೆ ಆಗುತ್ತಾ ಇದೆ ಅಲ್ವಾ ಎಂದೆಲ್ಲ ಯೋಚನೆ ಮಾಡುತ್ತಾ ಇರುತ್ತಾರೆ.

ವೈಷ್ಣವನ ಮಾತು ಕೇಳಿ ಕಾವೇರಿ ಶಾಕ್

ನಾನು ಈ ಮನೆಯಲ್ಲಿ ಇಬ್ಬರನ್ನೂ ತುಂಬಾ ದ್ವೇಷ ಮಾಡುತ್ತೇನೆ. ಅದು ಬೇರೆ ಯಾರೂ ಅಲ್ಲ ಸುಪ್ರೀತಾ ಅತ್ತಿಗೆನ ಯಾಕೆ ಎಂದರೆ ಆಕೆ ಎಲ್ಲರ ಹುಳುಕನ್ನು ಹುಡುಕಿ ಅವರ ಬಗ್ಗೆ ತುಚ್ಛವಾಗಿ ಮಾತನಾಡುತ್ತಾ ಇರುತ್ತಾರೆ. ಅದಕ್ಕೆ ನನಗೆ ಇಷ್ಟ ಆಗಲ್ಲ. ಇದೀಗ ನೀನು ಈ ರೀತಿ ಆಡುತ್ತಾ ಇದ್ದೀಯಲ್ಲ ಯಾಕೆ ಅಮ್ಮ. ನನಗೆ ಲಕ್ಷ್ಮೀ ಮನೆಯವರು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾ ಇದ್ದರೂ ಅವರ ಮನೆಯಲ್ಲಿ ದೊಡ್ಡ ರಾದ್ದಂತ ಮಾಡಿದೆ, ಬರು ಬರುತ್ತಾ ನೀನು ಸುಪ್ರಿಯಾ ಅತ್ತಿಗೆಯ ಹಾಗೆ ಆಗುತ್ತಾ ಬರುತ್ತಿದ್ದಿಯಾ ಎನ್ನುತ್ತಾನೆ. ಆಗ ಕಾವೇರಿಗೆ ಮಗನ ಮಾತಿಗೆ ಏನು ಹೇಳಬೇಕು ಎಂದು ತಿಳಿಯದೇ ಸುಮ್ಮನೆ ಆಗುತ್ತಾಳೆ

Kannada serial Lakshmi Bharamma written updated on May 11th

ಲಕ್ಷ್ಮೀ ಸ್ಥಿತಿ ಕಂಡು ಮರುಕ ಪಡುತ್ತಿರುವ ದೊಡ್ಡಪ್ಪ.

ಇನ್ನು ಲಕ್ಷ್ಮೀ ದೊಡ್ಡಪ್ಪ ಮಾತ್ರ ಲಕ್ಷ್ಮೀ ಮನೆಯಲ್ಲಿ ಏನಾಯಿತೋ ಎಂಬ ಆತಂಕ ಪಡುತ್ತಾ ಇರುತ್ತಾರೆ ಇದಕ್ಕೆಲ್ಲ ಕಾರಣ ತನ್ನ ಹೆಂಡತಿ ಮಕ್ಕಳು ಎನ್ನುವ ವಿಚಾರವೂ ಅವರಿಗೆ ತಿಳಿದಿದೆ ಆದರೆ ಎನು ಮಾಡಲಾಗದ ಸ್ಥಿತಿಯಲ್ಲಿ ಇರುತ್ತಾರೆ. ವಿಠ್ಠಲ್ ತನ್ನ ಹೆಂಡತಿ ಸುನಂದಾ ಬಳಿ ಹೇಳುತ್ತಾರೆ. ತನ್ನ ಮಗಳಿಗೆ ಏನಾದರು ಆಗಬೇಕು ಎಂದು ಜೋರಾಗಿ ಹೇಳಿದಾಗ ಸುನಂದಾ ಗಂಡ ನ ಬಳಿ ಜೋರಾಗಿ ಹೇಳುತ್ತಾಳೆ ಇದಕ್ಕೆಲ್ಲ ಕಾರಣ ನಾನು ಅಲ್ಲ. ಇದಕ್ಕೆ ಕಾರಣ ಆ ಲಕ್ಷ್ಮೀ. ಆಕೆಯ ಗಂಡನನ್ನು ಸರಿಯಾಗಿ ನೋಡಿಕೊಳ್ಳಲು ಆಕೆಗೆ ಬರುವುದು ಇಲ್ಲ ಎಂದು ಹೇಳುತ್ತಾರೆ ಇದನ್ನು ಕೇಳಿದ ವಿಠಲ್ ಕೊಂಚ ಹೆಂಡತಿಗೆ ದಬಾಯಿಸುತ್ತಾರೆ.

More from Filmibeat

English summary
Kannada serial Lakshmi Bharamma written updated on May 11th, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X