ವೆಂಕಿಯ ಜೊತೆ ಅಸಭ್ಯವಾಗಿ ನಡೆದುಕೊಂಡ ಸಂತೋಷ್‌ಗೆ ಕ್ಲಾಸ್ ತೆಗೆದುಕೊಂಡ ನೆಟ್ಟಿಗರು?
ಸಂತೋಷ್ ತಂದೆ ತಾಯಿಗೆ ಮೋಸ ಮಾಡಿದ ವಿಚಾರ ವೀಣಾಗೆ ತಿಳಿದು ಬಿಟ್ಟಿದೆ. ವೀಣಾಗೆ ಅತ್ತೆ ಮಾವ ಎಂದರೆ ಬಹಳ ಗೌರವ. ಆದರೆ, ಸಂತೋಷ್‌ಗೆ ಅದರಲ್ಲಿ ಎಳ್ಳಷ್ಟೂ ಇಲ್ಲ. ತಂದೆ-ತಾಯಿಗೆ ಮೋಸ ಮಾಡಿ ಹಣವನ್ನು ಗಿಟ್ಟಿಸಿಕೊಂಡು ಮನೆ ಕಟ್ಟುತ್ತಿದ್ದಾನೆ. ಪೂಜೆ ಎಂದು ಹೇಳಿದಾಗ ವೀಣಾಗೆ ಸಂತೋಷ್ ಮೇಲೆ ಅದ್ಯಾಕೋ ಡೌಟ್ ಬಂದಿದೆ.
ಸಂತೋಷ್‌ನನ್ನು ರೂಮ್‌ನಿಂದಾ ಹೊರಗೆ ಕರೆದುಕೊಂಡು ಬಂದು ಮಾವನ ಕೈಯಿಂದ ಹಣ ತೆಗೆದುಕೊಂಡಿದ್ದು ಯಾಕೆ ಎಂದು ನನಗೆ ಗೊತ್ತಾಯಿತು ಎಂದು ಸುಳ್ಳು ಹೇಳುತ್ತಾಳೆ. ಆಗ ಸಂತೋಷ್ ಮನೆ ಕಟ್ಟಲು ಹಣ ತೆಗೆದುಕೊಂಡೆ ಎಂದು ವೀಣಾ ಬಳಿ ನಿಜ ವಿಚಾರ ಹೇಳಿ ಬಿಡುತ್ತಾನೆ.

ಈ ಮಾತನ್ನು ಕೇಳಿ ವೀಣಾ ಬಹಳ ಬೇಸರ ಪಟ್ಟುಕೊಳ್ಳುತ್ತಾಳೆ. ತನ್ನ ಗಂಡ ಈ ರೀತಿ ಹೇಳಿ ಅತ್ತೆ ಮಾವನಿಂದ ಹಣ ಪಡೆದುಕೊಂಡಿದ್ದಾರಲ್ಲ ಎಂದು ಮರುಗುತ್ತಾಳೆ. ವೆಂಕಿ ತಂದೆಯ ಹುಟ್ಟು ಹಬ್ಬವನ್ನು ಆಚರಿಸಿ ರಾತ್ರಿ ಮನೆಯಲ್ಲಿ ಉಳಿದುಕೊಳ್ಳುತ್ತಾನೆ. ಸಂತೋಷ್ ಬೆಳಗ್ಗೆ ಎದ್ದು ನೋಡಿದಾಗ ವೆಂಕಿ ಮನೆಯ ಹಾಲ್‌ನಲ್ಲಿ ಮಲಗಿರುತ್ತಾನೆ. ವೆಂಕಿ ಹಾಲ್‌ನಲ್ಲಿ ಮಲಗಿರುವುದನ್ನು ನೋಡಿದ ಸಂತೋಷ್ ಕೊಂಚ ಗಾಬರಿ ಆಗುತ್ತಾನೆ. ಇದೇನು ನಾನು ವೆಂಕಿಯನ್ನು ನೆನೆದುಕೊಂಡೇ ಇಲ್ಲ. ಆದರೆ ಸಡನ್ ಆಗಿ ವೆಂಕಿ ಕಾಣಿಸಿಕೊಂಡಿದ್ದಾನೆ ಅಂದುಕೊಳ್ಳುತ್ತಾನೆ. ಸಂತೋಷ್, ವೀಣಾ ಬಳಿಯೂ ಅದನ್ನೇ ಹೇಳುತ್ತಾನೆ. ವೆಂಕಿ ಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ ಎಂದಾಗ ವೀಣಾ ರಾತ್ರಿ ಮಾವನ ಹುಟ್ಟುಹಬ್ಬವನ್ನು ಆಚರಣೆ ಮಾಡಿದ. ತುಂಬಾ ರಾತ್ರಿ ಆಗಿದ್ದ ಕಾರಣ ಚೆಲುವಿ ಹಾಗೂ ವೆಂಕಿ ಮನೆಯಲ್ಲಿ ಉಳಿದುಕೊಂಡರು ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಸಂತೋಷ್‌ಗೆ ಕೋಪ ಬರುತ್ತದೆ. ಮನೆಗೆ ಬಂದು ಎಲ್ಲರ ಜೊತೆ ಅನ್ಯೋನ್ಯವಾಗಿ ಇರುವ ಹಾಗೆ ನಾಟಕ ಮಾಡುತ್ತಿದ್ದಾನೆ. ಇದನ್ನೇ ಬಳಸಿಕೊಂಡು ಮನೆಯಲ್ಲಿ ಜಾಂಡ ಊರಿ ಬಿಟ್ಟರೆ ಎನ್ನುವ ಭಯ ಆತನಿಗೆ ಕಾಡುತ್ತದೆ. ಅದಕ್ಕೋಸ್ಕರ ವೆಂಕಿಯನ್ನು ಕುತ್ತಿಗೆ ಪಟ್ಟಿ ಹಿಡಿದುಕೊಂಡು ಮನೆಯ ಹೊರಗೆ ಕರೆದುಕೊಂಡು ಬಂದು ಹುಟ್ಟುಹಬ್ಬ, ನಾಳೆ ನಾಮಕರಣ, ಮದುವೆ ಹೀಗೆಲ್ಲ ಸಾವಿರ ನೆಪ ಮಾಡಿಕೊಂಡು ಮನೆಗೆ ಬಂದು ಇಲ್ಲಿಯೇ ಜಾಂಡ ಊರಬೇಕು ಎಂದುಕೊಂಡು ಇದ್ದೀಯಾ? ಮರ್ಯಾದೆ ಇಲ್ವಾ ನಿನಗೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ವೆಂಕಿ ಮಾತ್ರ ಸುಮ್ಮನೆ ನಿಂತಿರುತ್ತಾನೆ.
ತಂದೆಯ ಮನೆಯಲ್ಲಿ ಬರ್ತ್ ಡೇ ಸೆಲೆಬ್ರೇಷನ್
ತಂದೆಯ ಹುಟ್ಟು ಹಬ್ಬ ಇದ್ದ ಕಾರಣ ವೆಂಕಿ ಮನೆಗೆ ಬಂದು ಸೆಲೆಬ್ರೇಟ್ ಮಾಡಿದ. ಆದರೆ ಸಂತೋಷ್‌ಗೆ ತಂದೆಯ ಹುಟ್ಟು ಹಬ್ಬದ ನೆನಪೇ ಇಲ್ಲ. ಸುಳ್ಳು ಹೇಳಿ ತಂದೆಯ ಕೈಯಿಂದ ಹಣ ತೆಗೆದುಕೊಂಡು ಮನೆ ಕಟ್ಟಲು ಉಪಯೋಗಿಸುತ್ತಾನೆ. ಆದರೆ, ವೆಂಕಿಯದ್ದು ನಿಸ್ವಾರ್ಥ ಪ್ರೀತಿ. ತಂದೆಯ ಕೈಯಿಂದ ಒಂದು ರೂಪಾಯಿ ಬಯಸದೆ ತನ್ನ ತಂದೆ ತಾಯಿಯನ್ನೇ ದೇವರೆಂದು ಅಂದುಕೊಳ್ಳುತ್ತಾನೆ.
ಭಾವನಾ ಜೊತೆ ಕ್ಷಮೆ ಕೇಳಿದ ಸಿದ್ದೇ ಗೌಡರು
ಭಾವನಾಗೆ ಸಿದ್ದೇಗೌಡ ಅದೆಷ್ಟೇ ಸಹಾಯ ಮಾಡಿದರು ಕೂಡ ಆಕೆ ಕರಗುವ ಮಾತೇ ಇಲ್ಲ. ಗೌಡ್ರು ಎಂದು ಬೇರೆಯವರ ಜೊತೆ ಮಾತನಾಡುತ್ತಿದ್ದ ಭಾವನಾಗೆ ಆತ ಬೇರೆಯವರು ಅಲ್ಲ ತನ್ನ ಗಂಡ ಎಂದು ತಿಳಿದರೆ ಖುಷಿ ಪಡುತ್ತಾಳೆ ಎಂದುಕೊಂಡು ಇದ್ದ ಸೀರಿಯಲ್ ಪ್ರೇಮಿಗಳಿಗೆ ಶಾಕ್ ಆಗಿದೆ. ಭಾವನಾಗೆ ಸಿದ್ದೇಗೌಡ ಏನೇ ಮಾಡಿದರೂ ತಪ್ಪಾಗಿಯೇ ಕಾಣಿಸುತ್ತದೆ. ಆದರೆ ಭಾವನಾಗೆ ಸಿದ್ದೇಗೌಡ ಸಮಾಧಾನ ಮಾಡಲು ಪದೇ ಪದೇ ಬರುತ್ತಾರೆ. ಆದರೆ ಭಾವನಾ ಮಾತ್ರ ಇನ್ನೂ ನನಗೆ ಏನೆಲ್ಲ ಸುಳ್ಳು ಹೇಳಬೇಕು ಎಂದು ಅಂದುಕೊಂಡು ಇದ್ದೀರಿ.ನೀವು ಮಾಡಿದ್ದು ನನಗೆ ಸರಿ ಎಂದು ಅನ್ನಿಸುತ್ತಿಲ್ಲ ಎಂದು ಹೇಳುತ್ತಾಳೆ.
ಭಾವನಾ ನಡೆಗೆ ಸೀರಿಯಲ್ ಪ್ರೇಮಿಗಳು ಬೇಸರ
ಕದ್ದು ತಾಳಿ ಕಟ್ಟಿ ನನಗೆ ಮೋಸ ಮಾಡಿದ್ದೀರಿ. ಹಾಗೆಯೇ ಇದೀಗ ಮತ್ತೊಮ್ಮೆ ನನಗೆ ಮೋಸ ಮಾಡಲು ಯತ್ನಿಸಿದ್ದೀರಿ. ಇನ್ನೂ ನನ್ನ ಬಳಿ ಎಷ್ಟು ಸುಳ್ಳು ಹೇಳಬೇಕು ಎಂದುಕೊಂಡು ಇದ್ದೀರಿ ಎಂದು ಬಹಳ ಜೋರಾಗಿಯೇ ಮಾತನಾಡುತ್ತಾಳೆ. ಭಾವನಾ ನಡೆಗೆ ಸೀರಿಯಲ್ ಪ್ರೇಮಿಗಳು ಬೇಸರ ಮಾಡಿಕೊಂಡಿದ್ದಾರೆ.


Click it and Unblock the Notifications











