ಇತ್ತ ವೆಂಕಿ ಮೇಲೆ ಸಂತೋಷ್ ಹಗೆ.. ಅತ್ತ ಭಾವನಾ ವಿರುದ್ಧ ಅತ್ತೆಯ ಟೀಕೆ.. ಲಕ್ಷ್ಮಿ ನಿವಾಸದಲ್ಲಿ ಏನಾಗ್ತಿದೆ?
ಶ್ರೀನಿವಾಸ್ ಹುಟ್ಟು ಹಬ್ಬವನ್ನು ಮನೆಯವರೆಲ್ಲರೂ ಸೇರಿ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದ್ದಾರೆ. ಹೆತ್ತ ಮಕ್ಕಳಿಗೆ ಶ್ರೀನಿವಾಸ್ ಹುಟ್ಟುಹಬ್ಬದ ನೆನಪಿರಲಿಲ್ಲ. ಆದರೆ, ದತ್ತು ಪುತ್ರ ತಂದೆ ಶ್ರೀನಿವಾಸ್ ಹುಟ್ಟುಹಬ್ಬವನ್ನು ನೆನಪಿಟ್ಟುಕೊಂಡು ಬಂದು ಆಚರಣೆ ಮಾಡಿದ್ದಾನೆ. ವೆಂಕಿಯ ಪ್ರೀತಿಯೇ ಅಂತಹದ್ದು. ವೆಂಕಿಗೆ ತಂದೆ-ತಾಯಿ ಎಂದರೆ ಬಹಳ ಪ್ರೀತಿ. ಅದು ಸಂತೋಷ್ ಮಾತಿನಿಂದ ನೊಂದು ವೆಂಕಿ ಹಾಗೂ ಚೆಲುವಿ ಇಬ್ಬರೂ ಮನೆ ಬಿಟ್ಟು ಹೋಗುತ್ತಾರೆ.
ಸಂತೋಷ್‌ಗೂ ಕೂಡ ಅದೇ ಬೇಕಾಗಿತ್ತು. ಆದರೆ ಮತ್ತೆ ವೆಂಕಿ ಮನೆಗೆ ಬಂದಿರುವುದನ್ನು ನೋಡಿದ ಸಂತೋಷನಿಗೆ ಬಹಳ ಕೋಪ ಬರುತ್ತೆ. ಆದರೂ ಅದನ್ನು ತಡೆದುಕೊಳ್ಳುತ್ತಾನೆ. ಒಂದು ಮಾತು ಆಡದೆ ಸುಮ್ಮನೆ ತುಟಿ ಬಿಗಿ ಹಿಡಿದುಕೊಂಡಿರುತ್ತಾನೆ.

ಇನ್ನು ಸಿದ್ದೇಗೌಡ ಹಾಗೂ ಭಾವನಾ ಬರುತ್ತಾರೆ. ಅವರನ್ನು ನೋಡಿ ಬಹಳ ಖುಷಿಯಿಂದ ಮನೆ ಮಂದಿ ವೆಲ್ ಕಮ್ ಮಾಡುತ್ತಾರೆ. ಭಾವನಾಗೆ ತಂದೆಯ ಹುಟ್ಟು ಹಬ್ಬದ ಖುಷಿ ಮನೆ ಮಾಡಿರುತ್ತೆ. ಮನೆಗೆ ಬಂದವಳೇ ಮನೆಯವರ ಜೊತೆಗೆ ಬಹಳ ಖುಷಿಯಲ್ಲಿ ಇರುತ್ತಾಳೆ. ಅಷ್ಟರಲ್ಲಿ ವೆಂಕಿ ಹಾಗೂ ಚೆಲುವಿ ಮನೆಗೆ ಹೋಗುತ್ತೇವೆ ಎಂದು ಹೊರಡಲು ರೆಡಿಯಾಗುತ್ತಾರೆ.
ಆಗ ಭಾವನಾಗೆ ಬಹಳ ನೋವು ಆಗುತ್ತೆ. ನಾವು ಈಗ ಬಂದಿದ್ದೇವೆ. ಅಷ್ಟರಲ್ಲಿ ನೀನು ಹೊರಟು ಬಿಟ್ಟೆ. ಊಟ ಮಾಡಿ ಹೋಗು ಎಂದು ಹೇಳಿದಾಗ ಭಾವನಾಗೆ ಸಿದ್ದೇ ಗೌಡರು ಸಾಥ್ ನೀಡುತ್ತಾರೆ. ಇದೆಲ್ಲವನ್ನೂ ನೋಡಿದ ಸಂತೋಷ್‌ಗೆ ಒಳಗೊಳಗೆ ಕೋಪ ಹೆಚ್ಚಾಗುತ್ತೆ. ಬಿಸಿ ತುಪ್ಪವನ್ನು ಗಂಟಲಲ್ಲಿ ಇಟ್ಟುಕೊಂಡ ಹಾಗೆ ಭಾಸವಾಗುತ್ತದೆ.

ವೆಂಕಿ ಜೊತೆ ಸಂತೋಷ್ ನಾಟಕ
ಸಂತೋಷ್‌ಗೆ ವೆಂಕಿಯನ್ನು ಕಂಡರೆ ಸ್ವಲ್ಪವೂ ಆಗುವುದೇ ಇಲ್ಲ. ಆದರೆ, ಸಿದ್ದೇಗೌಡ ಇದ್ದಾರೆ ಎನ್ನುವ ಕಾರಣಕ್ಕೆ ಸಂತೋಷ್ ವೆಂಕಿ ಬಳಿ "ವೆಂಕಿ ನೀನು ಊಟ ಮಾಡಿ ಇಲ್ಲಿಯೇ ಇರು. ಇದು ನಿಂದು ಮನೆಯಲ್ವ" ಎಂದು ಹೇಳುತ್ತಾನೆ. ಇದನ್ನು ಕೇಳಿ ವೆಂಕಿಗೆ ಏನು ಮಾಡಬೇಕೆಂದೇ ತಿಳಿಯದಾಗುತ್ತದೆ. ಸಂತೋಷ್‌ಗೆ ಬಿಸಿ ತುಪ್ಪ ಬಾಯಲ್ಲಿ ಇಟ್ಟುಕೊಂಡ ಅನುಭವ ಆಗುತ್ತದೆ. ಆದರೂ ಎಲ್ಲರ ಎದುರು ತಾನು ಒಳ್ಳೆಯವನು ಎಂದು ತೋರಿಸಿಕೊಂಡಿದ್ದಾನೆ.
ಸೊಸೆಗೆ ಕ್ಲಾಸ್ ತೆಗೆದುಕೊಂಡ ಅತ್ತೆ
ಸಿದ್ದೇಗೌಡ ಹಾಗೂ ಭಾವನಾ ಮನೆಗೆ ಹೊರಡುತ್ತಾರೆ. ಅವರಿಬ್ಬರನ್ನು ಶ್ರೀನಿವಾಸ್ ಹಾಗೂ ಲಕ್ಷ್ಮೀ ಬಹಳ ಪ್ರೀತಿಯಿಂದ ಕಳುಹಿಸಿಕೊಡುತ್ತಾರೆ. ಜವರೇ ಗೌಡರ ಮನೆಗೆ ಬಂದ ಭಾವನಾ ಹಾಗೂ ಸಿದ್ದೇಗೌಡನನ್ನು ಅವರ ತಾಯಿ ಬಾಯಿಗೆ ಬಂದ ಹಾಗೆ ಬಯ್ಯುತ್ತಾಳೆ. ಅತ್ತೆಯ ಮಾತಿಗೆ ನೊಂದ ಭಾವನಾ ಮೆತ್ತಗೆ ಮನೆಯ ಒಳಗೆ ಹೋಗುತ್ತಾಳೆ. ಭಾವನಾಗೆ ಬಹಳ ನೋವಿದೆ. ಆದರೆ, ಅದನ್ನು ಯಾರ ಜೊತೆಯೂ ಹೇಳಲು ಅವಕಾಶ ಸಿಕ್ಕಿರಲಿಲ್ಲ. ಇದೀಗ ಗಂಡನ ತಾಯಿ ಕೂಡ ಪದೇ ಪದೆ ನಿಂದಿಸುತ್ತಲೇ ಇರುವುದು ಭಾವನಾಗೆ ಬೇಸರ ತರಿಸಿದೆ.


Click it and Unblock the Notifications











