Lakshmi Nivasa: ಭಾವನಾ ಮೇಲೆ ಕಿಡಿಕಾರಿದ ಸಿದ್ದು ತಾಯಿಯ ಬೈಗುಳಕ್ಕೆ ಪ್ರೇಕ್ಷಕರು ಸುಸ್ತೋ ಸುಸ್ತು
ಶ್ರೀನಿವಾಸ್ ತನ್ನ ಮಗನ ಗೋಡೋನ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾರೆ. ಶ್ರೀನಿವಾಸ್‌ಗೆ ತನ್ನ ಮಗಳದ್ದೆ ಚಿಂತೆ. ಜಾಹ್ನವಿ ಬಾಣಂತನಕ್ಕೆ ಬಂದಾಗ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ದೃಷ್ಟಿಯಿಂದ ರಾತ್ರಿ ಪಾಳಿಯಲ್ಲಿಯೂ ಕೆಲಸ ಮಾಡುವುದಕ್ಕೆ ಶ್ರೀನಿವಾಸ್ ಯೋಚನೆ ಮಾಡಿರುತ್ತಾರೆ. ಇದೀಗ ಸಂತೋಷ್ ಕೊಂಚ ನೆಮ್ಮದಿಯಾಗಿದ್ದಾನೆ. ತನ್ನ ತಂದೆಯೇ ತನ್ನ ಸೈಟ್ ಅನ್ನು ಕಾವಲು ಕಾಯುತ್ತಿದ್ದಾರೆ ಎನ್ನುವ ವಿಚಾರ ಆತನಿಗೆ ತಿಳಿದಿಲ್ಲ.
ಶ್ರೀನಿವಾಸ್‌ಗೆ ಒಮ್ಮೆ ಅನಿವಾರ್ಯ ಕಾರಣ ಎದುರಾಗುತ್ತದೆ. ಆ ಕೂಡಲೇ ಒನರ್‌ಗೆ ಕರೆ ಮಾಡಿ ನನಗೆ ಇವತ್ತು ಒಂದು ದಿನ ರಜೆ ಬೇಕಿತ್ತು ಎಂದಾಗ ಸಂತೋಷ್ ಬಿಲ್ ಕುಲ್ ಆಗುವುದು ಇಲ್ಲ ಎಂದು ಹೇಳಿ ಬಿಡುತ್ತಾನೆ. ಕೂಡಲೇ ಶ್ರೀನಿವಾಸ್ ಆ ಕರೆಯನ್ನು ಕಟ್ ಮಾಡಿ ಬಿಡುತ್ತಾರೆ. ನಂತರ ಅವರಿಬ್ಬರಿಗೂ ಈ ಧ್ವನಿಯನ್ನು ಎಲ್ಲೋ ಕೇಳಿದ್ದೀನಿ ಅಂತ ಅನಿಸುವುದಕ್ಕೆ ಶುರುವಾಗುತ್ತೆ.

ಇತ್ತ ಭಾವನಾ ಎಲ್ಲರೆದುರು ಬಹಳ ಖುಷಿಯಲ್ಲಿ ಇರುತ್ತಾಳೆ. ಇದನ್ನು ನೋಡಿ ಸಹಿಸಲು ಆಗದೆ ಸಿದ್ದು ತಾಯಿ ಭಾವನಾಗೆ ಒಂದೇ ಸಮನೆ ಬೈಯ್ಯುತ್ತಾಳೆ. ಇದೆಲ್ಲವನ್ನೂ ದೂರದಿಂದ ನೋಡಿದ ನೀಲು ಮಾತ್ರ ಸಖತ್ ಮಜಾ ತೆಗೆದುಕೊಳ್ಳುತ್ತಿದ್ದಾಳೆ. ಇದಕ್ಕಿಂತ ಮುಂಚೆ ಭಾವನಾ ಬಳಿಗೆ ಬಂದು ನೀನು ಹೀಗೆ ಒಬ್ಬಳೇ ಇರಬೇಡ ಮನೆ ಕೆಲಸಗಳನ್ನು ಮಾಡು, ಎಲ್ಲರೆದುರು ಓಡಾಡಿಕೊಂಡು ಬಹಳಷ್ಟು ಖುಷಿಯಲ್ಲಿ ಇರು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಭಾವನಾ ಮನೆ ತುಂಬಾ ಓಡಾಡುತ್ತಿರುತ್ತಾಳೆ. ಭಾವನಾಳನ್ನು ಹೀಗೆ ನೋಡಿ ಸಿದ್ದೇಗೌಡರ ಅಮ್ಮನಿಗೆ ಬಹಳ ಕೋಪ ಬರುತ್ತೆ. ಭಾವನಾಗೆ ಸಿಕ್ಕಾಪಟ್ಟೆ ಬೈದು ಬಿಡುತ್ತಾಳೆ. ಆಗ ಸಿದ್ಧುಗೆ ಏನು ಮಾಡಬೇಕು ಎಂದು ತಿಳಿಯದೇ ಸಮಾಧಾನ ಮಾಡುತ್ತಾನೆ.
ಈ ಘಟನೆಯಿಂದ ಭಾವನಾಗೆ ಬಹಳಷ್ಟು ಭಯ ಆಗಿರುತ್ತೆ. ಸಿದ್ದು ಸಮಾಧಾನ ಮಾಡಲು ಬಂದಾಗ , ನೀವು ತಾಳಿ ಕಟ್ಟುವ ಮುಂಚೆ ಯೋಚನೆ ಮಾಡಬೇಕಾಗಿತ್ತು ಎಂದು ಹೇಳುತ್ತಾಳೆ. ಈ ಮಾತು ಸಿದ್ದುಗೆ ನೋವು ಕೊಟ್ಟರೂ, ಹೆಂಡತಿಯನ್ನು ಸಮಾಧಾನ ಮಾಡುತ್ತಾನೆ. ಇತ್ತ ಸಿದ್ದು ತಂದೆ ತನ್ನ ಹೆಂಡತಿಗೆ ಬುದ್ದಿ ಹೇಳುತ್ತಾರೆ. ಭಾವನಾಗೆ ಏನು ಹೇಳಬಾರದು ಎನ್ನುವ ಖಡಕ್ ಸಂದೇಶವನ್ನು ನೀಡುತ್ತಾರೆ. ಸಿದ್ದು ತಾಯಿ ಯಾವಾಗಲೂ ಭಾವನಾಳ ಬಗ್ಗೆ ತಪ್ಪಾಗಿಯೆ ಮಾತನಾಡುತ್ತಾರೆ. ಇದು ಕಿರುತೆರೆ ವೀಕ್ಷಕರಿಗೆ ಬೇಸರ ತರಿಸಿದೆ.

ಭಾವನಾ ಹಾಗೂ ಸಿದ್ದು ಮನೆಯಲ್ಲಿ ನಿಂತರು ತಪ್ಪು ಕೂತರೂ ತಪ್ಪು. ಇದು ಭಾವನಾಗಂತೂ ಬಹಳಷ್ಟು ನೋವು ಆಗುತ್ತಿದೆ. ಆಕೆಯ ಅತ್ತೆಯ ಚುಚ್ಚು ಮಾತುಗಳು ಆಕೆಯನ್ನು ಇದ್ದು ಸತ್ತ ಹಾಗೆಯೇ ಮಾಡುತ್ತಿದೆ. ಯಾರ ಜೊತೆಯೂ ನೋವು ಹೇಳಿಕೊಳ್ಳಲು ಆಗದೆ ಎಲ್ಲವನ್ನೂ ಮನದಲ್ಲಿ ಇಟ್ಟುಕೊಂಡ ಭಾವನಾ ಬಗ್ಗೆ ಅಭಿಮಾನಿಗಳು ಕನಿಕರ ಪಡುತ್ತಿದ್ದಾರೆ. ಏನು ತಪ್ಪು ಮಾಡದ ಭಾವನಾ ಮೇಲೆ ಸಿದ್ದು ತಾಯಿಗೆ ಯಾಕೆ ಅಷ್ಟು ಸಿಟ್ಟು? ತನ್ನ ಮಗನಿಗೆ ಬುದ್ದಿ ಹೇಳದ ತಾಯಿ ಇದ್ದರೆ ಏನಂತೆ ಎಂದು ಕಿರುತೆರೆ ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











