ಲಕ್ಷ್ಮೀ ಮನೆಗೆ ಹೋದ ಭಾವನಾಗೆ ಶಾಕ್; ಭಾವನಾ ಜೊತೆ ಬರುತ್ತಾಳಾ ಖುಷಿ?
ರವಿ ಹಾಗೂ ಸೌಪರ್ಣಿಕಾ ಖುಷಿಯನ್ನ ಬಹಳ ಒತ್ತಾಯದ ಮೇರೆಗೆ ತನ್ನ ಮನೆಗೆ ಕರೆದುಕೊಂಡು ಬರುತ್ತಾರೆ. ಆದರೆ ಈ ವಿಚಾರ ಭಾವನಾಗೆ ತಿಳಿದಿರುವುದಿಲ್ಲ. ಭಾವನಾ ಖುಷಿಯ ನೆನಪಿನಲ್ಲಿ ದಿನ ಕಳೆಯುತ್ತಿದ್ದಾಳೆ. ಖುಷಿನಾ ನೋಡಿಕೊಂಡು ಬರಬೇಕು ಎಂದುಕೊಂಡಿರುತ್ತಾಳೆ ಭಾವನಾ.
ಭಾವನಾಗೆ ಅತ್ತೆಯ ಕಟುವಾದ ಮಾತುಗಳು ಬಹಳ ನೋವನ್ನು ನೀಡುತ್ತದೆ. ಸಿದ್ದೇಗೌಡರು ಭಾವನಾಳ ಭಾವನೆಗಳಿಗೆ ಬೆಲೆಯನ್ನು ನೀಡುತ್ತಿದ್ದಾರೆ. ಆದರೆ, ಅದ್ಯಾಕೋ ಸಿದ್ದೇಗೌಡರ ತಾಯಿಗೆ ಸರಿ ಕಾಣುತ್ತಿಲ್ಲ. ಸಿದ್ದೇಗೌಡ ಮದುವೆಯಾದ ಬಳಿಕ ಆತನಿಗೆ ನಮ್ಮ ಮೇಲೆ ಪ್ರೀತಿಯೇ ಇಲ್ಲ ಎನ್ನುವ ಹಾಗೆ ತಾಯಿ ಮಾತನಾಡುತ್ತಿದ್ದಾರೆ.

ಈ ಮಾತುಗಳನ್ನು ಕೇಳಿದ ಭಾವನಾಗೆ ಬಹಳ ಬೇಸರವಾಗುತ್ತೆ. ತನ್ನಿಂದಾಗಿ ಸಿದ್ದೇಗೌಡರು ಅದೆಷ್ಟು ನೋವುಗಳನ್ನು ಬೈಗುಳಗಳನ್ನು ಸಹಿಸಿಕೊಳ್ಳಬೇಕು ಎಂದು ಮನದಲ್ಲಿ ನೋವು ಪಟ್ಟುಕೊಳ್ಳುತ್ತಾರೆ. ಇತ್ತ ಹರೀಶ್ ಹೆಂಡತಿ ಮನೆ ಬಿಟ್ಟು ಹೋಗಿರುವ ವಿಚಾರದಲ್ಲಿ ಬಹಳ ನೊಂದಿರುತ್ತಾನೆ. ಹೆಂಡತಿಗೆ ಅದೆಷ್ಟೇ ಬಾರಿ ಕರೆ ಮಾಡಿದರು ಕೂಡ ಆಕೆ ಯಾವುದಕ್ಕೂ ಕೂಡ ಸ್ಪಂದಿಸುವುದಿಲ್ಲ.
ಈ ವಿಚಾರವನ್ನು ಹರೀಶ್ ಸಂತೋಷ್ ಬಳಿ ಹೇಳಿಕೊಳ್ಳುತ್ತಾನೆ. ಆಗ ಸಂತೋಷ್ ಒಂದು ಹೊಸ ಮಾಸ್ಟರ್ ಪ್ಲಾನ್ ಮಾಡುತ್ತಾನೆ. ಸಿಂಚನಾಗೆ ಕರೆ ಮಾಡಿದ ಸಂತೋಷ್, ಹರೀಶ್ ಸೂಸೈಡ್ ಮಾಡಲು ಯತ್ನಿಸುತ್ತಿದ್ದಾನೆ ಎಂದು ಹೇಳಿದಾಗ ಸಿಂಚನಾ, ಭಾವನಾ ಹಾಗೂ ಸಿದ್ದೇಗೌಡರು ಓಡೋಡಿ ಮನೆಗೆ ಬರುತ್ತಾರೆ. ಸಂತೋಷ್ ಹಾಗೂ ಹರೀಶ್ ಮಾಡಿದ ಪ್ಲಾನ್ ವರ್ಕ್‌ಔಟ್ ಆಗಿತ್ತು.

ಇತ್ತ ಭಾವನಾ ತವರು ಮನೆಗೆ ಬಂದು ತನ್ನ ಮಗಳ ಬಗ್ಗೆ ವಿಚಾರಣೆ ಮಾಡುತ್ತಾಳೆ. ಖುಷಿ ನಾಲ್ಕು ಗಂಟೆಗೆ ಮನೆಗೆ ಬರುತ್ತಾಳೆ. ಆದರೆ ಇಂದು ಯಾಕೋ ಖುಷಿ ಮನೆಗೆ ಬಂದಿಲ್ಲ ಎಂದು ಯೋಚನೆ ಮಾಡುತ್ತಿರುತ್ತಾಳೆ. ತಾಯಿಯ ಬಳಿ ಕೇಳಿದಾಗ ಲಕ್ಷ್ಮೀ ಅಳುತ್ತಾ ರವಿ ಹಾಗೂ ಸೌಪರ್ಣಿಕಾ ಮನೆಗೆ ಬಂದು ಖುಷಿಯನ್ನು ಕರೆದುಕೊಂಡು ಹೋಗಿರುವ ಬಗ್ಗೆ ಮಾಹಿತಿ ನೀಡುತ್ತಾರೆ. ಇದನ್ನು ಕೇಳಿದ ಭಾವನಾಗೆ ಬಹಳ ಬೇಸರವಾಗುತ್ತದೆ. ಆದರೆ, ಸಂತೋಷ್ ಮಾತ್ರ ಅವರ ಮಗುವನ್ನು ಅವರು ಕರೆದುಕೊಂಡು ಹೋಗಿದ್ದು ಒಳ್ಳೆಯದೇ ಆಯಿತು ಎನ್ನುವ ಹಾಗೆ ಮಾತನಾಡುತ್ತಾನೆ.
ಸಂತೋಷ್ ಮಾತಿಗೆ ಕಿವಿಗೊಡದೆ ಸಿದ್ದು ಭಾವನಾಳನ್ನು ಕರೆದುಕೊಂಡು ಸೌಪರ್ಣಿಕಾ ಮನೆಗೆ ಹೋಗುತ್ತಾನೆ. ಸೌಪರ್ಣಿಕಾ ಮನೆಯೊಳಗೆ ಹೋದ ಸಿದ್ದು ಹಾಗೂ ಭಾವನಾ ಖುಷಿಯನ್ನು ಜೋರಾಗಿ ಕರೆಯುತ್ತಾರೆ. ಆದರೆ, ಖುಷಿ ಎಲ್ಲಿಯೂ ಕಾಣಿಸದೆ ಇರುವುದನ್ನು ಕಂಡು ಭಾವನಾಗೆ ದು:ಖಕ್ಕೆ ಒಳಗಾಗುತ್ತಾಳೆ. ಅಲ್ಲಿಗೆ ಬಂದ ಸೌಪರ್ಣಿಕಾ ಭಾವನಾಗೆ ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಆದರೆ ಇದನ್ನು ನೋಡಿದ ಸಿದ್ದೇಗೌಡರಿಗೆ ಕೋಪ ಬರುತ್ತೆ. ಆತ ನೇರವಾಗಿ ಖುಷಿಯ ರೂಮ್ ಕಡೆ ಹೋಗಿ ನೋಡಿದಾಗ ಖುಷಿ ಮಲಗಿರುತ್ತಾಳೆ. ರವಿ ಸಿದ್ದೇಗೌಡರನ್ನು ತಡೆಯಲು ಮುಂದಾದರೂ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆ ಬಳಿಕ ಖುಷಿಯನ್ನು ತಮ್ಮ ಜೊತೆಯಲ್ಲಿಯೇ ಕರೆದುಕೊಂಡು ಹೋಗಲು ನಿರ್ಧರಿಸುತ್ತಾನೆ.


Click it and Unblock the Notifications











