ಸಿದ್ದೇಗೌಡರ ಪ್ರೀತಿಯಲ್ಲಿ ಬಿದ್ದ ಭಾವನಾ? ಸಿದ್ದೇ ಗೌಡರ ಮಾತಿಗೆ ಗಪ್ ಚುಪ್ ಆಗಿದ್ದೇಕೆ?

By ಪೂರ್ವ

ಸಿದ್ದೇಗೌಡರು ಖುಷಿಯನ್ನು ಸೌಪರ್ಣಿಕ ಹಾಗೂ ರವಿಯ ಕೈಯಿಂದ ಬಿಡಿಸಿಕೊಂಡು ಈಗ ನೇರವಾಗಿ ಭಾವನಾ ತಂದೆ-ತಾಯಿಯ ಮನೆಗೆ ಬಿಡುತ್ತಾನೆ. ಇದನ್ನು ನೋಡಿ ಭಾವನಾ ಸಿದ್ದೇಗೌಡರಿಗೆ ಧನ್ಯವಾದ ಹೇಳಿದ್ದಾಳೆ. ಭಾವನಾ ಇದೇ ಮೊದಲ ಬಾರಿಗೆ ಸಿದ್ದೇಗೌಡರ ಜೊತೆ ಮೌನ ಮುರಿದು ಮಾತನಾಡಿದ್ದಾಳೆ. ಸೌಕರ್ಣಿಕಾ ಹಾಗೂ ರವಿ ಖುಷಿಯನ್ನು ಚೆನ್ನಾಗಿ ನೋಡಿಕೊಂಡರೆ ನನಗೆ ಯಾವುದೇ ಪ್ರಾಬ್ಲಮ್ ಇಲ್ಲ. ಆದರೆ, ಅವರಿಬ್ಬರು ಆಕೆಗೆ ಕೊಡಬಾರದ ಕಷ್ಟವನ್ನು ಕೊಡುತ್ತಾರೆ ಎಂದು ಬೇಸರ ಹೊರ ಹಾಕಿದ್ದಾಳೆ.

ಈ ಕಾರಣಕ್ಕೆ ಖುಷಿ ಅವರ ಜೊತೆ ಇರುವುದು ಸೂಕ್ತವಲ್ಲ ಎಂದು ನನಗೆ ಅನಿಸಿತು. ಆ ಕಾರಣ ಖುಷಿಯನ್ನು ಅಲ್ಲಿಂದ ಕರೆದುಕೊಂಡು ಬಂದಿದ್ದರ ಬಗ್ಗೆ ಸಿದ್ದೇಗೌಡರ ಬಳಿ ಭಾವನಾ ಹೇಳುತ್ತಾಳೆ. ಭಾವನಾಗೆ ಇದೀಗ ಸಿದ್ದೇಗೌಡರ ಮೇಲೆ ಕೊಂಚ ಪ್ರೀತಿ ಹೆಚ್ಚಾಗಿದೆ. ಮೊದಲು ಸಿದ್ದೇಗೌಡರನ್ನು ನೋಡಿದರೆ ಮುಖ ತಿರುಗಿಸಿಕೊಂಡು ಹೋಗುತ್ತಿದ್ದ ಭಾವನಾ ಇದೀಗ ಆತನ ಜೊತೆ ಮಾತನಾಡುವ ಹಂತಕ್ಕೆ ಬಂದಿದ್ದಾಳೆ. ಸಿದ್ದೇಗೌಡರು ಹೇಳದೆ ಕೇಳದೆ ಭಾವನಾಗೆ ತಾಳಿ ಕಟ್ಟಿದ್ದರು. ಆದರೆ ಅದನ್ನ ಭಾವನಾ ಬಳಿ ಹೇಳಿ ಕೊಳ್ಳಬೇಕೆಂದು ಅದೆಷ್ಟೇ ಸಲ ಪ್ರಯತ್ನಪಟ್ಟರೂ ಕೂಡ ಅದು ಸಾಧ್ಯವಾಗಿರಲಿಲ್ಲ.

Kannada serial Lakshmi Nivasa December 5th episode update

ಕೊನೆಗೆ ಹೇಗಾದರೂ ಮಾಡಿ ಭಾವನೆಗೆ ತಾಳಿ ಕಟ್ಟಿದ ವಿಚಾರವನ್ನು ಎಲ್ಲರ ಮುಂದೆ ಸಿದ್ದೇಗೌಡರು ಬಿಚ್ಚಿಡುತ್ತಾರೆ. ಆ ಕೋಪ ಸಿದ್ದೇಗೌಡರ ತಾಯಿಗೆ ಇನ್ನೂ ಹೋಗಿಲ್ಲ. ಸಿದ್ದೇಗೌಡರ ತಾಯಿಗೆ ಭಾವನಾ ಅಂದರೆ ಸ್ವಲ್ಪನೂ ಇಷ್ಟ ಇಲ್ಲ. ಭಾವನಾಳನ್ನು ಯಾವತ್ತೂ ನೋಡಿದರೂ ಮನೆಯಿಂದ ಹೊರ ಹೋಗಲು ಹೇಳುತ್ತಲೇ ಇರುತ್ತಾರೆ. ಆದರೆ ಭಾವನಾ ಯಾವುದೇ ಮಾತನಾಡದೆ ಸುಮ್ಮನೆ ನಿಂತಿರುತ್ತಾಳೆ. ಸಿದ್ದೇಗೌಡರು ಅಮ್ಮನಿಗೆ ಅದೆಷ್ಟೇ ಹೇಳಿದರು ಕೂಡ ಸಿದ್ದೇಗೌಡರ ತಾಯಿ ಯಾರ ಮಾತನ್ನು ಕೇಳುವ ಗೋಜಿಗೆ ಹೋಗುತ್ತಿಲ್ಲ. ಇನ್ನು ಸಿದ್ದೇಗೌಡರ ಬಳಿ ಭಾವನಾ ಧನ್ಯವಾದಗಳು ಹೇಳಿದ್ದಾಳೆ.

ಸಿದ್ದೇಗೌಡರ ಪ್ರೀತಿಯಲ್ಲಿ ಬಿದ್ದ ಭಾವನಾ

ಹೊರಗಿನವರಿಗೆ ನಾವು ಸಹಾಯ ಮಾಡಿದಾಗ ಅವರು ಧನ್ಯವಾದ ಹೇಳುವುದು ಸರಿ. ಆದರೆ ನಮ್ಮೊಳಗಿನವರಿಗೆ ಸಹಾಯ ಮಾಡಿದರೆ ಅದು ಕರ್ತವ್ಯ ಎನಿಸಿಕೊಳ್ಳುತ್ತದೆ ಎಂದಾಗ ಭಾವನಾಗೆ ಏನು ಮಾತನಾಡಬೇಕು ತಿಳಿಯದೇ ಸುಮ್ಮನೆ ಇರುತ್ತಾಳೆ. ವೆಂಕಿ ತನ್ನ ತಾಯಿಯ ನೆನಪಿನಲ್ಲೇ ದಿನ ದೂಡುತ್ತಿದ್ದಾರೆ. ಅಮ್ಮ ಎಂದರೆ ವೆಂಕಿಗೆ ಬಹಳ ಪ್ರೀತಿ. ಅಮ್ಮನನ್ನು ಬಿಟ್ಟಿರಲು ವೆಂಕಿಗೆ ಸಾಧ್ಯ ಆಗುವುದು ಇಲ್ಲ. ವೆಂಕಿ ಹೆಂಡತಿ ಅದೆಷ್ಟೇ ಸಮಾಧಾನ ಹೇಳಿದರು ಕೂಡ ಅದನ್ನು ಕೇಳುವ ಸ್ಥಿತಿಯಲ್ಲಿ ವೆಂಕಿ ಇರುವುದಿಲ್ಲ.

Kannada serial Lakshmi Nivasa December 5th episode update

ಅಮ್ಮನನ್ನು ನೋಡಿ ಖುಷಿಪಟ್ಟ ವೆಂಕಿ

ಆತನಿಗೆ ಅಮ್ಮ ಬೇಕೆ ಬೇಕು ಎಂದು ಅನ್ನ ನೀರು ಬಿಟ್ಟು ಜೋರಾಗಿ ಅಳುತ್ತಾನೆ. ಲಕ್ಷ್ಮೀ ಹಾಗೂ ಶ್ರೀನಿವಾಸ್ ತನ್ನ ಮಗನನ್ನು ನೋಡಲು ವೆಂಕಿಯ ಮನೆ ಬಾಗಿಲಿಗೆ ಬರುತ್ತಾರೆ. ವೆಂಕಿಯನ್ನು ನೋಡಿದ ಲಕ್ಷ್ಮೀಗೆ ಬಹಳ ಖುಷಿ ಆಗುತ್ತದೆ. ಮಗನನ್ನು ಬಾಚಿ ತಬ್ಬಿಕೊಂಡು ಜೋರಾಗಿ ಲಕ್ಷ್ಮೀ ಅಳುತ್ತಾರೆ. ಮಗನಿಗೆ ಸಾಂತ್ವನದ ಮಾತುಗಳನ್ನಾಡಿದ ಲಕ್ಷ್ಮೀ ತನ್ನದಲ್ಲದ ತಪ್ಪಿಗೆ ಮಗನ ಬಳಿ ಕ್ಷಮೆ ಕೇಳುತ್ತಾರೆ.

More from Filmibeat

English summary
Kannada serial Lakshmi Nivasa December 5th episode update;
Read more about: tv serial poorva
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X