Lakshmi Nivasa:ಮನೆಯಿಂದ ಜಾಹ್ನವಿ ಎಸ್ಕೇಪ್; ಮುಂದೇನು ಮಾಡ್ತಾನೆ ಸೈಕೋ ಜಯಂತ್

By ಪೂರ್ವ

ಜಾಹ್ನವಿಗೆ ಇದೀಗ ಜಯಂತ್ ಬಗ್ಗೆ ಎಲ್ಲಾ ವಿಚಾರವೂ ತಿಳಿದಿದೆ. ಜಯಂತ್ ಎಂದರೆ ಮುಂಚೆಲ್ಲ ಪ್ರಾಣವನ್ನೇ ಬಿಡುತ್ತಿದ್ದಳು. ಆದರೆ, ಇದೀಗ ಜಯಂತ್ ಅನ್ನುವ ಹೆಸರು ಕೇಳಿದರೆ ಆಕೆಗೆ ಬಹಳ ಭಯ ಶುರು ಆಗಿದೆ. ಜಾಹ್ನವಿಗೆ ಎಲ್ಲಾ ವಿಚಾರವನ್ನು ಈ ವಾಚ್‌ಮ್ಯಾನ್ ಹೇಳಿ ಬಿಟ್ಟಿದ್ದಾನೆ. ಈತ ಹೇಳಿರುವುದರಿಂದ ಆತನಿಗೆ ಇದೀಗ ಜಾಹ್ನವಿ ಬಳಿ ಮಾತನಾಡಲು ಹೆದರಿಕೆ ಆಗುತ್ತದೆ. ಹಾಗೆಯೇ ಆ ವಾಚ್‌ಮ್ಯಾನ್ ಅನ್ನು ಸಾಯಿಸಲು ಜಯಂತ್ ಮುಂದಾಗುತ್ತಾನೆ.

ಆಗ ವಾಚ್‌ಮ್ಯಾನ್ ಬೇಡಿಕೊಳ್ಳುತ್ತಾನೆ. ದಯವಿಟ್ಟು ಹಾಗೆಲ್ಲ ಮಾಡಬೇಡಿ. ನನ್ನನ್ನು ಸಾಯಿಸಬೇಡಿ ನನಗೆ ಬದುಕಬೇಕೆಂಬ ಆಸೆ ಇದೆ. ನನಗೆ ಹೆಂಡತಿ ಹಾಗೂ ಮಕ್ಕಳು ಇದ್ದಾರೆ. ನನ್ನನ್ನೇ ಅವರು ನಂಬಿದ್ದಾರೆ. ದಯವಿಟ್ಟು ನನ್ನ ಬಿಟ್ಟು ಬಿಡಿ ಎಂದು ಹೇಳುತ್ತಾನೆ. ಆದರೂ ಜಯಂತ್ ಮಾತ್ರ ಆತನ ಕುತ್ತಿಗೆ ಪಟ್ಟಿ ಹಿಡಿದುಕೊಂಡು ಯಾಕೆ ಹೀಗೆಲ್ಲ ಮಾಡಿದ್ದಿಯೋ ಎಂದು ಕೇಳುತ್ತಾನೆ. ಆತನ ಕುತ್ತಿಗೆಯನ್ನು ಒಮ್ಮೆಯೇ ಬಿಟ್ಟು ಸೈಕೋ ತರ ಆಲೋಚನೆ ಮಾಡುತ್ತಾನೆ. ನಿನ್ನ ಮಾತನ್ನು ಕೇಳಿದ ಜಾಹ್ನವಿ ಮನಸ್ಸಿಗೆ ಎಷ್ಟು ಆಘಾತ ಆಗಿರಬೇಡ. ನನ್ನ ಜೊತೆ ಅವರು ಹೇಗೆ ಕಾಲ ಕಳೆಯುತ್ತಾರೆ. ಇಲ್ಲ ನಾನು ಈ ವಾಚ್‌ಮ್ಯನ್‌ ಅನ್ನು ಸುಮ್ಮನೆ ಬಿಡುವುದು ಇಲ್ಲ ಎಂದು ಹಿಂದೆ ತಿರುಗಿ ನೋಡಿದಾಗ ವಾಚ್‌ಮ್ಯಾನ್‌ ಅಲ್ಲಿ ಇರುವುದಿಲ್ಲ.

Kannada serial Lakshmi Nivasa November 12th episode update

ವಾಚ್‌ಮ್ಯಾನ್‌ ಭಯದಿಂದ ಓಡಿ ಹೋಗಿರುತ್ತಾನೆ. ಮನೆಯಲ್ಲಿ ಜಾಹ್ನವಿ ಒಬ್ಬೊಂಟಿಯಾಗಿ ಇರುತ್ತಾಳೆ. ಆಕೆಗೆ ಜಯಂತ್‌ನದ್ದೆ ಭಯ. ಜಯಂತ್ ಏನಾದರು ಪ್ರಶ್ನೆ ಮಾಡಿದರೆ ನಾನು ಏನು ಅಂತ ಅವರಿಗೆ ಉತ್ತರವನ್ನು ನೀಡಲಿ. ಅಷ್ಟಕ್ಕೂ ಜಯಂತ್ ಅವರಿಗೆ ನಾನು ವಾಚ್ ಮ್ಯಾನ್ ಭೇಟಿ ಆಗಿದ್ದು ತಿಳಿದಿದೆ. ಅವರಿಗೆ ಈ ವಿಚಾರಗಳು ನಿಜವಾಗಲೂ ತಿಳಿದಿರುತ್ತದೆ. ಏನು ಮಾಡಲಿ ಎಂದುಕೊಂಡು ಜಾಹ್ನವಿ ಮನೆಯಿಂದ ಹೋಗಲು ನಿರ್ಧಾರ ಮಾಡುತ್ತಾಳೆ. ಅವರು ಬರುವ ಮುಂಚೆ ಅಮ್ಮನ ಮನೆಗೆ ಹೋಗೋಣ ಅವರಿಗೆ ಆ ಮೇಲೆ ಫೋನ್ ಮಾಡಿ ಹೇಳಿದರೆ ಆಯಿತು ಎಂದುಕೊಂಡು ಜಯಂತ್ ಬರುವ ಮುನ್ನ ಜಾಹ್ನವಿ ಅಲ್ಲಿಂದ ಹೊರಟು ಹೋಗುತ್ತಾಳೆ.

ಜಾಹ್ನವಿ ಮನೆಯಿಂದ ಹೋದ ಬಳಿಕ ಜಯಂತ್ ಮನೆಗೆ ಬರುತ್ತಾನೆ. ಮನೆಯಲ್ಲಿ ಕತ್ತಲು ಆವರಿಸಿ ಇರುವುದನ್ನು ಕಂಡು ಚಿನ್ನುಮರಿ ಎಂದು ಕರೆಯುತ್ತಾನೆ. ಆದರೆ, ಜಾಹ್ನವಿ ಎಲ್ಲೂ ಕಾಣಿಸದೆ ಇರುವುದನ್ನು ಕಂಡು ಜಯಂತ್‌ಗೆ ಭಯ ಆಗುತ್ತದೆ. ಇತ್ತ ಹರೀಶ ಮಾಡಿದ ಪ್ಲಾನ್ ಆತನಿಗೆ ಉಲ್ಟಾ ಆಗಿದೆ. ತಂದೆಯ ಹಣವನ್ನು ಹೇಗಾದರೂ ಮಾಡಿ ಉಡಾಯಿಸಬೇಕು. ಐದು ಲಕ್ಷ ಸಾಲ ಮಾಡಿದ್ದೇನೆ ಎಂದು ಸುಳ್ಳು ಹೇಳಿ ತಂದೆಯ ಕೈಯಿಂದ ಹಣವನ್ನು ತೆಗೆದುಕೊಳ್ಳಬೇಕು ಅಂದುಕೊಳ್ಳುತ್ತಾನೆ ಹರೀಶ.

Kannada serial Lakshmi Nivasa November 12th episode update

ಆದರೆ ಸಿಂಚನಾಗೆ ಮಾತ್ರ ಅದ್ಯಾವುದೂ ಇಷ್ಟ ಆಗುವುದು ಇಲ್ಲ. ಆಕೆ ಬಹಳ ಸ್ವಾಭಿಮಾನಿ. ಹರೀಶ್ ನೀನು ನನ್ನ ಬಳಿ ಏನು ಹೇಳಿದ್ದೆ ವ್ಯಾಪಾರ ಚೆನ್ನಾಗಿ ಹೋಗುತ್ತಿದೆ ಎಂದು ಹೇಳಿ ಇದೀಗ ಏನು ಮಾಡುತ್ತಿದ್ದೀರಾ? ನೀವು ಮಾಡುತ್ತಿರುವುದು ಮಾತ್ರ ಸ್ವಲ್ಪವೂ ಸರಿ ಇಲ್ಲ. ಯಾಕೆ ಹೀಗೆಲ್ಲ ಮಾಡಿದಿರಿ ಎಂದು ಪ್ರಶ್ನೆ ಮಾಡುತ್ತಾಳೆ. ಆದರೆ, ಆತನಿಗೆ ಏನು ಮಾತನಾಡಬೇಕು ಎಂದು ತಿಳಿಯದ ಹಾಗೆ ಆಗುತ್ತದೆ. ಕೊನೆಗೆ ಹರೀಶ ನೀನು ಈ ಥರ ಎಲ್ಲಾ ಮಾಡುತ್ತೀಯಾ ಅಂದುಕೊಂಡಿರಲಿಲ್ಲ. ನಿನ್ನ ಜೊತೆ ನನಗೆ ಬದುಕಲು ಖಂಡಿತ ಆಗುವುದು ಇಲ್ಲ. ನಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಹೇಳಿ ಸಿಂಚನಾ ಮನೆ ಬಿಟ್ಟು ಹೋಗಲು ರೆಡಿ ಆಗುತ್ತಾಳೆ.

ಸಿಂಚನಾಳನ್ನು ನೋಡಿ ಲಕ್ಷ್ಮೀ ಗೆ ಆಘಾತ ಆಗುತ್ತದೆ. ಸಿಂಚನಾ ಏನು ಮಾಡಲು ಹೊರಟಿದ್ದಿಯಾ ಎಂದು ಕೇಳಿದಾಗ ಆಕೆ ಅಮ್ಮನ ಮನೆಗೆ ಹೋಗುತ್ತೇನೆ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಮನೆ ಮಂದಿ ಅದೆಷ್ಟೇ ಕೇಳಿಕೊಂಡರು ಅವರು ಮಾತ್ರ ಸಿಂಚನಾ ಕಿವಿಗೆ ಹಾಕಿಕೊಳ್ಳುವುದಿಲ್ಲ.

More from Filmibeat

English summary
Kannada serial Lakshmi Nivasa November 12th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X