Lakshmi Nivasa: ಆಶ್ರಮಕ್ಕೆ ಬಂದ ಜಾಹ್ನವಿ; ಜಯಂತ್ ನಿಜ ರೂಪ ಹೇಳ್ತಾರಾ ಫಾದರ್?
'ಲಕ್ಷ್ಮೀ ನಿವಾಸ' ಧಾರಾವಾಹಿ ಇತ್ತೀಚಿನ ದಿನಗಳಲ್ಲಿ ದಿನೇ ದಿನೆ ಕುತೂಹಲವನ್ನು ಹೆಚ್ಚು ಮಾಡುತ್ತಿದೆ. ಜಯಂತ್ ರೂಪ ಎಳೆ ಎಳೆಯಾಗಿ ಜಾಹ್ನವಿ ಮುಂದೆ ತೆರೆದುಕೊಳ್ಳುತ್ತಿದೆ. ಜಯಂತ್‌ಗೆ ಜಾಹ್ನವಿ ಎಂದರೆ ಬಹಳ ಪ್ರೀತಿ. ಆದರೆ, ಅತಿಯಾದ ಪ್ರೀತಿಯನ್ನು ನೋಡಿ ಜಯಂತ್ ಒಂಥರ ಸೈಕೋ ಅನ್ನೋ ನಿರ್ಧಾರಕ್ಕೆ ಕಿರುತೆರೆ ವೀಕ್ಷಕರು ಬಂದಿದ್ದಾರೆ.
ಜಾಹ್ನವಿ ಮನೆಯಲ್ಲಿ ಒಬ್ಬೊಂಟಿಯಾಗಿ ಇದ್ದರೂ ಕೂಡ ಜಯಂತ್ ಆಳುಗಳನ್ನು ಇಟ್ಟಿಲ್ಲ. ಜಾಹ್ನವಿ ಯಾರ ಜೊತೆಯಾದರು ಹೆಚ್ಚಾಗಿ ಬೆರೆತರೆ ಅವರಿಗೆ ನನ್ನ ಬಗ್ಗೆ ತಿಳಿದರೆ ಎನ್ನುವ ಭಯ ಆತನಿಗೆ. ಅದಕ್ಕಾಗಿ ಮನೆಯಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಅನ್ನು ಓಡಿಸಿ ಬಿಟ್ಟಿದ್ದಾನೆ ಜಯಂತ್.

ಜಯಂತ್ ನೀಚ ಕೃತ್ಯ ದಿನೇ ದಿನೆ ಹೆಚ್ಚಾಗುತ್ತಲೇ ಇತ್ತು. ಇದು ಜಾಹ್ನವಿಗೆ ತಿಳಿಯಲು ಸ್ವಲ್ಪ ಸಮಯವೇ ಬೇಕಾಗಿತ್ತು. ಇದೀಗ ಜಾಹ್ನವಿ ಜಯಂತ್‌ನ ಮನೆ ಬಿಟ್ಟು ಬಂದಿದ್ದಾಳೆ. ಜಯಂತ್ ಎಲ್ಲಾದರೂ ನನಗೆ ಅಪಾಯ ಮಾಡಿದರೆ ಎನ್ನುವ ಭಯ ಆಕೆಯನ್ನು ಕಾಡುತ್ತಿತ್ತು. ಆಕೆ ನೇರವಾಗಿ ಜಯಂತ್ ಮುಂಚೆ ಇದ್ದ ಆಶ್ರಮಕ್ಕೆ ಬರುತ್ತಾಳೆ. ಎಲ್ಲಿಯಾದರೂ ಜಯಂತ್ ಬಗ್ಗೆ ಹೆಚ್ಚಿನ ಸುಳಿವು ಸಿಗಬಹುದು ಎನ್ನುವ ಭರವಸೆ ಆಕೆಗೆ ಇತ್ತು. ಆದ ಕಾರಣಕ್ಕೆ ಆಕೆ ಆಶ್ರಮಕ್ಕೆ ಬಂದಾಗ ಫಾದರ್ ಅಲ್ಲಿಯೇ ಕುಳಿತಿರುತ್ತಾಳೆ.
ಜಾಹ್ನವಿಯನ್ನು ನೋಡಿದ ಫಾದರ್‌ಗೆ ಯಾರು ಎಂದು ತಿಳಿಯದಾಗುತ್ತೆ. ಒಬ್ಬಂಟಿ ಹುಡುಗಿ ಇಷ್ಟು ರಾತ್ರಿ ಒಬ್ಬಳೆ ಬಂದಿದ್ದಾಳೆ ಎಂದು ತಿಳಿದ ಫಾದರ್ "ಯಾರಮ್ಮ ನೀನು? ನಿನಗೆ ಏನು ಬೇಕಾಗಿತ್ತು?" ಎಂದು ಕೇಳುತ್ತಾರೆ. ಆಗ ಜಾಹ್ನವಿ ಜಯಂತ್ ಬಗ್ಗೆ ಕೇಳುತ್ತಾ ನಾನು ಆತನ ಪತ್ನಿ ಎಂದು ಹೇಳುತ್ತಾಳೆ. "ಜಯಂತ್ ಯಾಕೆ ಹೀಗೆ ಆಡುತ್ತಾರೆ. ನನ್ನ ಜೊತೆ ಯಾರೆ ಮಾತನಾಡಿದರು ಅವರು ಯಾಕೆ ಅಷ್ಟೊಂದು ಪೊಸೆಸಿವ್ ಇರುತ್ತಾರೆ. ಅವರು ಆಶ್ರಮದಲ್ಲಿ ಇರುವಾಗ ಹೇಗೆ ಇದ್ದರೂ ಎಂದು ಪ್ರಶ್ನೆ ಮಾಡುತ್ತಾಳೆ. ಫಾದರ್‌ಗೆ ಜಾಹ್ನವಿ ಜಯಂತ್ ಪತ್ನಿ ಎಂದು ತಿಳಿದು ಭಯವಾಗುತ್ತದೆ. ಆತನ ಹೆಸರು ಕೇಳಿದಾಗಲೇ ಫಾದರ್‌ಗೆ ನಡುಕ ಬಂದಿತ್ತು. ಅಷ್ಟೊಂದು ಕ್ರೂರವಾದ ವ್ಯಕ್ತಿತ್ವ ಜಯಂತ್‌ನದ್ದು.
ಮುಂದಿನ ದಿನಗಳಲ್ಲಿ ಜಯಂತ್ ಬಗ್ಗೆ ಇನ್ನಷ್ಟು ಇಂಟರೆಸ್ಟಿಂಗ್ ವಿಚಾರಗಳು ತಿಳಿಯಬಹುದು. ಇತ್ತ ಸಿಂಚನಾ, ಭಾವನಾ ಮೇಲೆ ಹಗೆತನ ಸಾಧಿಸುತ್ತಿದ್ದಾಳೆ. ಭಾವನಾ ಅವಳ ಪಾಡಿಗೆ ಅವಳು ಸುಮ್ಮನಿದ್ದರೆ, ಸಿಂಚನಾ ಮಾತ್ರ ಆಕೆಯನ್ನು ಆಕೆಯ ಪಾಡಿಗೆ ಬಿಡುವ ಹಾಗೆಯೇ ಕಾಣಿಸುತ್ತಿಲ್ಲ. ಸಿಂಚನಾಗೆ ಹರೀಶನ ಮೇಲೆ ಬಹಳಷ್ಟು ಕೋಪ ಇದೆ. ಆತನನ್ನು ಬಹಳ ಚೇಂಜ್ ಮಾಡಲು ಹೊರಟ ಸಿಂಚನಾಗೆ ಸಿಕ್ಕಿದ್ದು ಮಾತ್ರ ನಿರಾಸೆ ಎಂದು ಹೇಳಿದರೆ ತಪ್ಪಾಗದು. ಆದ್ದರಿಂದ ತಂದೆಯ ಮನೆಗೆ ಬಂದ ಸಿಂಚನಾ, ಭಾವನಾ ಮೇಲೆ ಕೂಗಾಡುತ್ತಾರೆ.

"ನೀನು ಯಾಕೆ ಇಲ್ಲಿಗೆ ಬಂದಿದ್ದೀಯಾ?" ಎಂದಾಗ ಭಾವನಾ "ಅದನ್ನು ನಿಮ್ಮ ತಮ್ಮನ ಬಳಿ ಕೇಳಿ" ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಿಂಚನಾಗೆ ಬಹಳ ಕೋಪ ಬರುತ್ತೆ. "ಎಲ್ಲದಕ್ಕೂ ನನ್ನ ತಮ್ಮನ ಮೇಲೆ ನೀನು ಗೂಬೇ ಕೂರಿಸಿ ಬಿಡು. ಅಷ್ಟಕ್ಕೂ ನಿನಗೆ ಇಲ್ಲಿಗೆ ಬಾ ಎಂದು ಕರೆದುಕೊಂಡು ಬಂದವರು ಯಾರು?" ಎಂದಾಗಲೂ ಭಾವನಾ ಸುಮ್ಮನೆ ಇರುತ್ತಾಳೆ.ಆಕೆಗೆ ಮಾತನಾಡಬಹುದು ಆದರೆ ಸುಮ್ಮನೆ ಕೆಸರೆರಚಾಟ ಮಾಡುವುದು ಯಾಕೆ ಎಂದು ಮೌನಿಯಾಗುತ್ತಾಳೆ. ಆದರೆ ಸಿಂಚನಾ, ಹರೀಶನ ಬಗ್ಗೆ ಇಲ್ಲ ಸಲ್ಲದ ಮಾತನ್ನು ಹೇಳಿದಾಗ ಭಾವನಾಗೆ ಬಹಳ ಸಿಟ್ಟು ಬರುತ್ತದೆ. "ನನ್ನ ತವರು ಮನೆಯ ಬಗ್ಗೆ ಈ ರೀತಿ ಮಾತನಾಡಲು ನಾನು ಯಾರಿಗೂ ಅವಕಾಶ ಕೊಟ್ಟಿಲ್ಲ. ಕೊಡುವುದೂ ಇಲ್ಲ" ಎಂದಾಗ ಸಿಂಚನಾ ಮಾತನಾಡದೆ ಸುಮ್ಮನೆ ನಿಂತು ಬಿಡುತ್ತಾಳೆ. ಇವರಿಬ್ಬರ ಕಾಳಗ ಇನ್ನೂ ಇಷ್ಟು ದಿನ ನಡೆಯುತ್ತೋ ನೋಡಬೇಕು.


Click it and Unblock the Notifications











