Lakshmi Nivasa; ಹೆಂಡತಿ ಜೊತೆ ಮನ ಬಿಚ್ಚಿ ಮಾತನಾಡುತ್ತಿರೋ ಜಯಂತ್; ಮುಂದೇನು?
ಜಯಂತ್‌ಗೆ ತನ್ನ ಹಳೆಯ ದಿನಗಳನ್ನು ಮೆಲುಕು ಹಾಕಿದ ಕ್ಷಣ ಆತನಿಗೆ ಹಳೆಯ ನೋವು ಕಾಡುತ್ತಿದೆ. ಆತನಿಗೆ ಇದೀಗ ಹಳೆಯ ಭಯ ಕಾಡುತ್ತಿದೆ. ತನ್ನ ಹೆಂಡತಿ ನನ್ನಿಂದ ದೂರ ಹೋದರೆ ಎನ್ನುವ ಭಯ ಆತನಿಗೆ ಮೂಡುತ್ತಿದೆ. ಜಾಹ್ನವಿ ಬೇರೆ ನಿಮ್ಮ ಹಳೆಯ ದಿನಗಳಲ್ಲಿ ಏನಾಗಿದೆ ಎನ್ನುವುದನ್ನು ನನ್ನ ಬಳಿ ಹೇಳಿ. ದಯವಿಟ್ಟು ನೀವು ಈ ರೀತಿ ಆಡುತ್ತಿರುವುದರಿಂದ ನನಗೆ ಬಹಳ ಭಯ ಕಾಡುತ್ತಿದೆ. ದಯವಿಟ್ಟು ಅದಕ್ಕೆ ಕಾರಣವನ್ನು ನನಗೆ ಹೇಳಿ ಎಂದು ಹೇಳುತ್ತಾಳೆ.
ಆಕೆಗೆ ತನ್ನ ಗಂಡ ಯಾಕೆ ಹೀಗೆಲ್ಲ ಆಡುತ್ತಿದ್ದಾರೆ. ಹಾಗೆಯೇ ನನ್ನ ಗಂಡ ಅಷ್ಟೊಂದು ಪೊಸೆಸಿವ್ ಆಗಿದ್ದಾರಾ? ಎನ್ನುವ ನೋವು ಆಕೆಗೆ ಮೂಡುತ್ತಿದೆ. ಹಾಗೆ ಮುಂದೆ ಏನು ಮಾಡಬೇಕು ಅನ್ನೋದು ತಿಳಿಯದೇ ಏನು ಮಾತನಾಡದೆ ಸುಮ್ಮನೆ ಇರುತ್ತಾಳೆ. ತನ್ನೆಲ್ಲ ದುಃಖವನ್ನು ಅಕ್ಕನ ಬಳಿ ಹೇಳಿಕೊಳ್ಳಬೇಕು ಎಂದುಕೊಳ್ಳುತ್ತಾಳೆ. ಆದರೆ ಆಕೆಗೆ ಅಕ್ಕನ ಮೊಬೈಲ್‌ಗೆ ಕರೆ ಮಾಡಬೇಕು ಎಂದಾಗ ಮೊಬೈಲ್ ಸ್ವಿಚ್ ಆಫ್ ಆಗಿ ಬಿಡುತ್ತದೆ. ಮುಂದೇನು ಮಾಡಬೇಕು ಎಂದು ಆಕೆಗೆ ತಿಳಿಯದ ಹಾಗೆ ಆಗುತ್ತದೆ.

ಜಾಹ್ನವಿ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುವ ಜಯಂತ್ ಇದೀಗ ಮೂಕನಾಗಿದ್ದಾನೆ. ಆತನಿಗೆ ಏನು ಮಾತನಾಡಬೇಕು ಎನ್ನುವ ಅರಿವು ಇರುವುದಿಲ್ಲ. ಆತ ತನ್ನ ತಾತನ ಬಗ್ಗೆ ಹೆಂಡತಿಯ ಜೊತೆ ಹೇಳಿಕೊಳ್ಳುತ್ತಾನೆ. ತನ್ನ ತಾತಾ ಏನೇ ಮಾಡಲು ಹೋದರೂ ನೀಟ್ ಎಂದೆಲ್ಲ ಹೇಳುತ್ತಿದ್ದರು. ಪರೀಕ್ಷೆಯಲ್ಲಿ ಚೆನ್ನಾಗಿ ಅಂಕ ತೆಗೆಯದೆ ಹೋದರೂ ಹೊಡೆಯುತ್ತಿದ್ದರು. ಹಾಗೆಯೇ ತಾನು ಏನು ಮಾಡಲು ಆತ ಬಿಡುತ್ತಿರಲಿಲ್ಲ. ಮೊದಲೆಲ್ಲ ನಾನು ನಿಮ್ಮ ಹಾಗೆಯೇ ತನ್ನ ಅಜ್ಜನ ಬಳಿ ಹೇಳುತ್ತಿದ್ದೆ ಎಂದು ಹೇಳುತ್ತಾರೆ.
ಇದನ್ನು ಕೇಳಿದ ಬಳಿಕ ನನ್ನ ತಾತ ನನ್ನನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದು ನಿನಗೆ ಮಾತನಾಡಬೇಕು ಎಂದಾಗ ಗಿಡ ಮರದ ಜೊತೆ ಮಾತನಾಡು ಎಂದು ಹೇಳುತ್ತಿದ್ದರು. ಇದನ್ನು ಕೇಳಿ ನನಗೆ ಶಾಕ್ ಆಗುತ್ತಿತ್ತು. ನನಗೆ ಏನು ಮಾಡಬೇಕು ದಿಕ್ಕೇ ತೋಚದ ಹಾಗೆ ಆಗುತ್ತದೆ. ಆದರೆ ನನಗೆ ಆಗ ಯಾರ ಜೊತೆಯೂ ಹೇಳಲು ಆಗದೆ ಮನದಲ್ಲಿ ಇಟ್ಟುಕೊಂಡು ತೋಳಲಾಡುತ್ತಿದೆ ಎಂದು ತನ್ನ ಹೆಂಡತಿಯ ಜೊತೆ ಮನದ ಅಳಲನ್ನು ತೋಡಿಕೊಂಡು ಜೋರಾಗಿ ಅಳುತ್ತಿದ್ದ. ಆತನಿಗೆ ಹೆಂಡತಿಯ ಸಾಂತ್ವನ ಸಿಕ್ಕಿದೆ.
ಇತ್ತ ಹರೀಶ ತನ್ನ ಹೆಂಡತಿ ಸಿಂಚನಾಳನ್ನು ಕರೆದುಕೊಂಡು ಬರಲು ಜವರೇಗೌಡರ ಬಳಿ ಹೋಗುತ್ತಾರೆ. ಜನರೇ ಗೌಡರು ಹರೀಶನನ್ನು ನೋಡಿದ ಕೂಡಲೇ ಆತನಿಗೆ ಬಾಯಿಗೆ ಬಂದ ಹಾಗೆ ಬೈಯುತ್ತಾರೆ. ಆದರೆ, ಹರೀಶನನ್ನು ನೋಡಿದ ಸಿಂಚನಗೆ ಬಹಳ ಕೋಪ ಬರುತ್ತದೆ. ಏನು ಮಾಡಬೇಕು ತಿಳಿಯದೇ ಹರೀಶ್‌ಗೆ ಬಾಯಿಗೆ ಬಂದ ಹಾಗೆ ಬೈಯುತ್ತಾಳೆ. ಆಗ ಜವರೇಗೌಡರು ಆತನಿಗೆ ಸರಿಯಾಗಿ ಬೈಯುತ್ತಾರೆ. ಹಾಗೆಯೇ ಮನೆಯಿಂದ ಹೊರಗೆ ಹಾಕುತ್ತಾರೆ.


Click it and Unblock the Notifications











