Lakshmi Nivasa; ಮಂಗಳಗೆ ಹಣ ಕೊಡದ ಶ್ರೀನಿವಾಸ್; ತಂದೆಯ ನಿರ್ಧಾರಕ್ಕೆ ಮಂಗಳ ಶಾಕ್

By ಪೂರ್ವ

ಮಂಗಳ ಹೇಗೆ? ಯಾವ ರೀತಿ ಏನು? ಎನ್ನುವುದು ಶ್ರೀನಿವಾಸ್ ಅವರಿಗೆ ತಿಳಿದಿದೆ. ಆದರೆ ಯಾವತ್ತೂ ಮಂಗಳಾಗೆ ನೋವು ಆಗುವ ಹಾಗೆ ಮಾತನಾಡುತ್ತಾ ಇರಲಿಲ್ಲ. ಆದರೆ ಶ್ರೀನಿವಾಸ್ ಮಗಳಿಗೆ ಹಣದ ದುರಾಸೆ. ಆಕೆಗೆ ತನ್ನ ತಂದೆಯ ಹಣದ ಮೇಲೆ ಬಹಳ ಮೋಹ. ಹೇಗಾದರೂ ಮಾಡಿ ತನ್ನ ತಂದೆಯಿಂದ ಹಣವನ್ನು ತೆಗೆದುಕೊಳ್ಳಬೇಕು. ಈಗ ಹೇಗಾದರೂ ಹರೀಶ್‌ ಹಾಗೂ ಸಂತೋಷನಿಗೆ ಹಣ ನೀಡಿದ್ದಾರೆ. ನನಗೆ ಕೂಡ ಹಣ ಕೇಳಿದರೆ ಖಂಡಿತವಾಗಿಯೂ ಕೊಡುತ್ತಾರೆ ಎನ್ನುವ ಭರವಸೆ ಆಕೆಗೆ ಮೂಡುತ್ತಿದೆ.

ತನ್ನ ತಾಯಿಯ ಮನೆಗೆ ಬಹಳ ಖುಷಿಯಿಂದ ಬಂದ ಮಂಗಳಾ ಆಸೆ ಕಣ್ಣಿನಿಂದಲೇ ಎಲ್ಲರನ್ನೂ ನೋಡುತ್ತಾಳೆ. ವೆಂಕಿ ಹಾಗೂ ಆತನ ಹೆಂಡತಿಯನ್ನು ನೋಡಿ ಖುಷಿ ಪಡುತ್ತಾರೆ. ವೆಂಕಿಯ ಬಳಿ ಬಂದು ಮಂಗಳಾ "ವೆಂಕಿ ನೀನು ಅಮ್ಮನಿಗೆ ಸೀರೆ ತೆಗೆದು ಕೊಟ್ಟೆಯಂತೆ. ನನಗೆ ಯಾವಾಗ ಸೀರೆ ತೆಗೆದುಕೊಡುತ್ತಿಯಾ?" ಎಂದಾಗ ವೆಂಕಿ ಏನು ಮಾತನಾಡದೆ ಸುಮ್ಮನೆ ಇರುತ್ತಾನೆ. ಆಗ ವೆಂಕಿಯ ಪತ್ನಿ "ಅತ್ತಿಗೆ ನಿಮಗೆ ಬರುವ ಹಬ್ಬಕ್ಕೆ ಸೀರೆ ತೆಗೆದು ಕೊಡುತ್ತೇವೆ. ದಯವಿಟ್ಟು ಏನು ಅಂದುಕೊಳ್ಳಬೇಡಿ" ಎಂದು ಹೇಳುತ್ತಾಳೆ.

Kannada serial Lakshmi nivasa November 20th episode story and update

ಮನೆಯಲ್ಲಿ ಎಲ್ಲರೂ ಇರಬೇಕಾದರೆ ಮಂಗಳ ಹೊಸ ನಾಟಕವನ್ನು ತೆರೆದಿಡುತ್ತಾಳೆ. "ಅಪ್ಪ ನನ್ನನ್ನು ನನ್ನ ಯಜಮಾನರು ಈ ಮನೆಗೆ ಕಳುಹಿಸುವ ಉದ್ದೇಶ ಬೇರೆಯೇ ಇದೆ. ನನ್ನ ಯಜಮಾನರು ಒಂದು ಸೈಟ್ ತೆಗೆಯುತ್ತಾರೆ. ಅದಕ್ಕೆ 15 ಲಕ್ಷ ಬೇಕಂತೆ. ಅದಕ್ಕೆ ನಿಮ್ಮ ತಂದೆ ಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ಕಳುಹಿದ್ದಾರೆ" ಎಂದಾಗ ಲಕ್ಷ್ಮೀ ಹಾಗೂ ಶ್ರೀನಿವಾಸ್‌ಗೆ ಸಿಡಿಲು ಬಡಿದ ಹಾಗೆ ಆಗಿಬಿಡುತ್ತದೆ.

ತಂದೆಯ ಹಣಕ್ಕೇ ಆಸೆಪಟ್ಟ ಮಂಗಳಾ

ಹಾಗೇ ಮಂಗಳಾ ತನ್ನ ಬಗ್ಗೆ ಆರೋಪ ಬಾರದ ಹಾಗೇ ಸೇಫ್ ಆಗಲು ನೋಡುತ್ತಾಳೆ. "ನನ್ನ ಗಂಡನ ಬಳಿಯಲ್ಲಿ ಅವರ ಬಳಿ ಅಷ್ಟೊಂದು ಹಣ ಎಲ್ಲಿದೆ ಎಂದು ನಾನು ಅದೆಷ್ಟು ಬಾರಿ ಹೇಳಿದರೂ ನನ್ನ ಗಂಡ ಮಾತ್ರ ನನ್ನ ಮಾತನ್ನು ಕೇಳುತ್ತಿಲ್ಲ. ಇದರಿಂದ ನನಗೆ ಬಹಳ ಬೇಸರವಾಗಿದೆ. ಅದಕ್ಕೆ ಅವರು ನಿನ್ನ ಮನೆಯಿಂದ 6 ಲಕ್ಷ ಆದರೂ ದಯವಿಟ್ಟು ತೆಗೆದುಕೊಂಡು ಬಾ ಎಂದು ಹೇಳಿದ್ದಾರೆ. ಎಂದಾಗ ಸಂತೋಷ್ ಹಾಗೂ ಹರೀಶ್‌ಗೆ ಶಾಕ್ ಆಗುತ್ತೆ. ನಮ್ಮಿಬ್ಬರಿಗೂ ಹಣ ಕೊಟ್ಟಿದ್ದಾರೆ ಅಂತ ಮಂಗಳಾಗೆ ಹೇಳಿದ್ದು ಬಹಳ ದೊಡ್ಡ ತಪ್ಪಾಯಿತು. ಆಕೆಗೆ ಏನು ಹೇಳಬಾರದಾಗಿತ್ತು ಎಂದು ಇಬ್ಬರೂ ಮಾತನಾಡಿಕೊಳ್ಳುತ್ತಾರೆ.

Kannada serial Lakshmi nivasa November 20th episode story and update

ಮಂಗಳಾ ಮೇಲೆ ಸಂತೋಷ್‌ಗೆ ಅನುಮಾನ

ಕೊನೆಗೆ ಸಂತೋಷ್ "ಲೇ ಮಂಗಳಾ.. ಭಾವನಿಗೆ ನೀನು ಯಾಕೆ ಹೀಗೆಲ್ಲ ಹೇಳುತ್ತಿಯ? ಅವರು ಯಾವತ್ತೂ ಹಣ ಎಲ್ಲಾ ಕೇಳಿದವರಲ್ಲ" ಎಂದಾಗ ಮಂಗಳಾ ನಯವಾಗಿ "ಇಲ್ಲ ಈ ಬಾರಿ ಹಣ ತೆಗೆದುಕೊಂಡೆ ಬರಲು ಹೇಳಿದ್ದಾರೆ" ಎಂದು ಅಳುತ್ತಾಳೆ. ಲಕ್ಷ್ಮೀಗೆ ಏನು ಮಾಡಬೇಕು ಎಂದು ತಿಳಿಯದಾಗುತ್ತೆ. ಆದರೆ ಆಗಲೇ ಶ್ರೀನಿವಾಸ್ ತನ್ನ ಮಗಳ ಮಾತು ಕೇಳಿ ಒಂದು ನಿರ್ಧಾರಕ್ಕೆ ಬಂದಿರುತ್ತಾರೆ. ತಾನು ಈಗ ತನ್ನ ಮಗಳಿಗೆ ಹಣ ಕೊಟ್ಟರೆ, ತನ್ನ ಬಳಿ ಬಿಡಿಗಾಸು ಉಳಿಯಲ್ಲ ಎನ್ನುವುದು ಆಕೆಗೆ ತಿಳಿದಿದೆ. ಅದಕ್ಕೆ ಆತ ಮೌನಿಯಾಗಿ ಇದ್ದು ಬಿಡುತ್ತಾರೆ.

ಜವರೇಗೌಡರ ಕೋಪ ತಣ್ಣಗಾಗುತ್ತಾ?

ತನ್ನ ತಂದೆಯ ಬಳಿ ಹಣ ಕೊಡಪ್ಪ ಎಂದಾಗ ಶ್ರೀನಿವಾಸ್ "ನನ್ನ ಬಳಿ ಹಣ ಇಲ್ಲ ಮಂಗಳಾ. ನಾನು ನಿನಗೆ ಹಣ ಕೊಡಲು ಆಗುವುದು ಇಲ್ಲ" ಎಂದು ಹೇಳುತ್ತಾರೆ. ಆಗ ಮಂಗಳಾಗೆ ಆಶ್ಚರ್ಯ ಆಗುತ್ತೆ. ಹಾಗೆ ಶಾಕ್ ಕೂಡ ಆಗುತ್ತೆ. ತಾತನ ನಿರ್ಧಾರದಿಂದ ಮಕ್ಕಳಿಗೆ ಖುಷಿ ಆಗುತ್ತೆ. ಇತ್ತ ತನ್ನ ತಂದೆಯನ್ನು ಇಕ್ಕಟ್ಟಿನ ಸ್ಥಿತಿಯಿಂದ ಸಿದ್ದೇಗೌಡ ಬಚಾವ್ ಮಾಡಿದ್ದಾನೆ. ಇನ್ನಾದರೂ ಮಗ ತಪ್ಪು ಮಾಡಿದ್ದರೂ ಕ್ಷಮಿಸುತ್ತಾರಾ ನೋಡಬೇಕಿದೆ.

More from Filmibeat

English summary
Kannada serial Lakshmi Nivasa November 20th episode update;
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X