ಮಕ್ಕಳಿಗಾಗಿ ಸರ್ವಸ್ವ ತ್ಯಾಗ ಮಾಡಿದ ಲಕ್ಷ್ಮಿ-ಶ್ರೀನಿವಾಸ; ಇತ್ತ ಮಗು ತೆಗಿಸಲು ಹೊರಟ ಸೈಕೋ ಜಯಂತ್

By ಪೂರ್ವ

ಲಕ್ಷ್ಮಿ ಹಾಗೂ ಶ್ರೀನಿವಾಸ ತನ್ನ ಮಕ್ಕಳಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಲು ಹೊರಟಿದ್ದಾರೆ. ಆದರೆ ಮಕ್ಕಳಿಗೆ ಇನ್ನೂ ಕೂಡ ಅರ್ಥವಾಗುತ್ತಿಲ್ಲ. ತಂದೆ ನನಗಾಗಿ ಏನು ಮಾಡಿದ್ದಾರೆ ಎನ್ನುವುದೇ ಮಕ್ಕಳ ಪ್ರಶ್ನೆ. ಸಂತೋಷ ಹಾಗೂ ಹರೀಶನಿಗೆ ಹಣಕೊಟ್ಟ ವಿಚಾರ ಮಂಗಳಾಗೆ ಯಾವಾಗ ತಿಳಿಯಿರೋ ಆಗ ಆಕೆಗೆ ತನ್ನ ತಂದೆಯ ಹಣದ ಮೇಲೆ ವ್ಯಾಮೋಹ ಇನ್ನೂ ಹೆಚ್ಚಾಗುತ್ತದೆ.

ಹೇಗಾದರೂ ಮಾಡಿ ತನ್ನ ತಂದೆಯ ಬಳಿ ಹಣ ಬೇಕು ಎಂದು ಅಂದುಕೊಂಡಿರುತ್ತಾಳೆ. ಅದೇ ರೀತಿ ಮನೆಯಲ್ಲಿ ಹಣ ಕೂಡ ಕೇಳುತ್ತಾಳೆ. ಆದರೆ, ಮೊದಲಿಗೆ ಶ್ರೀನಿವಾಸ ನನ್ನ ಬಳಿಯಲ್ಲಿ ಹಣ ಇಲ್ಲ ಎಂದು ಬಹಳ ಕಠೋರವಾಗಿ ಹೇಳುತ್ತಾರೆ. ಆಗ ಮಂಗಳಾಗೆ ತನ್ನ ತಂದೆಯ ನಿರ್ಧಾರ ಬಹಳ ಆಶ್ಚರ್ಯ ಎಂದು ಅನಿಸುತ್ತದೆ.

Kannada serial Lakshmi Nivasa November 21st Episode update

ಆಕೆ ತಂದೆಯ ಮಾತನ್ನು ಕೇಳಿ ಮನೆಯವರಿಗೆಲ್ಲಾ ನಿಂದಿಸಿ ಮನೆಯಿಂದ ಹೊರ ಹೋಗುತ್ತಾಳೆ. "ಹರೀಶ ಹಾಗೂ ಸಂತೋಷನಿಗೆ ಕೇಳಿದಾಗ ಹಣ ಕೊಡುತ್ತೀರ. ಆದರೆ ನನಗೆ ನೀವು ಹಣವನ್ನು ನೀಡುತ್ತಿಲ್ಲ ಯಾಕೆ? ಎಂದು ತಂದೆಯನ್ನು ಮಂಗಳ ಪ್ರಶ್ನೆ ಮಾಡುತ್ತಾಳೆ. ಆಗ ಲಕ್ಷ್ಮೀಗೆ ಕೋಪ ಬರುತ್ತೆ. ಈ ಮನೆಗಾಗಿ ತನ್ನ ಗಂಡ ಇಷ್ಟೆಲ್ಲ ಕಷ್ಟ ಪಡುತ್ತಿದ್ದಾರೆ. ಆದರೆ, ಮಂಗಳಾಗೆ ಅದರ ಅರಿವು ಕೂಡ ಇಲ್ಲ. ಅದಕ್ಕೆ ಲಕ್ಷ್ಮೀ ಕೊಂಚ ಕೋಪದಿಂದ ಹೇಳುತ್ತಾಳೆ.

"ಚಿಕ್ಕ ವಯಸ್ಸಿನಿಂದ ನಿಮ್ಮನ್ನು ಬೆಳೆಸಲು ಅದೆಷ್ಟು ಕಷ್ಟ ಪಟ್ಟಿದ್ದಾರೆ ಎನ್ನುವುದು ನನಗೆ ಗೊತ್ತು. ಹಾಗಾಗಿ ತಂದೆಗೆ ಆ ರೀತಿಯ ಮಾತುಗಳನ್ನು ಹೇಳುವುದು ಒಳ್ಳೆಯದಲ್ಲ. ನಿನಗೆ ಹಣ ತಾನೆ ಬೇಕು. ಅದನ್ನವರು ನಿನಗೆ ಕೊಡುತ್ತಾರೆ. ಆದರೆ ಅಷ್ಟು ದೊಡ್ಡ ಹಣವನ್ನು ಇವತ್ತು ಕೊಡಲು ಸಾಧ್ಯವಿಲ್ಲ. ಆದ ಕಾರಣ ನೀನು ನಾಳೆ ಬಾ" ಎಂದು ಹೇಳುತ್ತಾರೆ. ಆಗ ಮಂಗಳಾಗೆ ಬಹಳ ಖುಷಿಯಾಗುತ್ತದೆ. ಹೇಗಿದ್ದರೂ ನನಗೆ ಹಣ ಸಿಗುತ್ತದೆ. ಇನ್ಯಾಕೆ ಚಿಂತೆ ಎಂದು ಅಲ್ಲಿಂದ ಹೊರಟು ಹೋಗುತ್ತಾಳೆ. ಮಂಗಳಾ ಗಂಡ ಹೇಗೆ ಎನ್ನುವುದು ಶ್ರೀನಿವಾಸ ಹಾಗೂ ಲಕ್ಷ್ಮಿಗೆ ಗೊತ್ತಿದೆ. ಆದರೆ ಮಂಗಳಾ ಎಲ್ಲಾ ದೂರನ್ನು ಕೂಡ ತನ್ನ ಗಂಡನ ಮೇಲೆ ಹಾಕುತ್ತಾಳೆ.

Kannada serial Lakshmi Nivasa November 21st Episode update

ಶ್ರೀನಿವಾಸ್ ಮಾತಿನಲ್ಲೇ ಅಡಗಿದೆ ಬೇಸರ

ಶ್ರೀನಿವಾಸ್ ಹಾಗೂ ಲಕ್ಷ್ಮೀ ಒಂದು ಮಾತು ಮಂಗಳಾ ಗಂಡನ ಬಗ್ಗೆ ಮಾತನಾಡಲಿಲ್ಲ. ಮರುದಿನ ಶ್ರೀನಿವಾಸ್ ಬ್ಯಾಂಕಿಗೆ ಹೋಗಿ ಸುಮಾರು ಹತ್ತು ಲಕ್ಷ ಹಣವನ್ನು ತೆಗೆದುಕೊಂಡು ಬರುತ್ತಾರೆ. ಶ್ರೀನಿವಾಸ್ ಮನೆಗೆ ಬಂದಿದ್ದನ್ನು ನೋಡಿ ಲಕ್ಷ್ಮಿಗೆ ಖುಷಿಯಾಗುತ್ತದೆ. ಹಾಗೆ ಲಕ್ಷ್ಮೀಯನ್ನು ನೋಡಿದ ಶ್ರೀನಿವಾಸ್ "ಲಕ್ಷ್ಮೀ ನನ್ನ ಬಳಿ 10 ಲಕ್ಷ ಹಣವಿದೆ. ಇದನ್ನು ನೀನು ಬಹಳ ಜಾಗರೂಕತೆಯಿಂದ ಇಟ್ಟು ಬಿಡು" ಎಂದು ಹೇಳುತ್ತಾರೆ. ಇದನ್ನು ಕೇಳಿದ ಲಕ್ಷ್ಮೀಗೆ ಮನದಲ್ಲಿ ಅಳುಕು ಮೂಡುತ್ತೆ. ಇವರು ಯಾಕೆ? 10 ಲಕ್ಷ ಹಣವನ್ನು ತೆಗೆದುಕೊಂಡು ಬಂದಿದ್ದಾರೆ ಎಂದು ಯೋಚಿಸಿ ತನ್ನ ಗಂಡನಿಗೆ ಪ್ರಶ್ನೆ ಮಾಡುತ್ತಾರೆ.

ಬೆಂಕಿಯನ್ನು ಹಾಡಿ ಹೊಗಳಿದ ಶ್ರೀನಿವಾಸ್

ಶ್ರೀನಿವಾಸ್ ತನ್ನ ಮೂರು ಮಕ್ಕಳಿಗೆ ಹಣವನ್ನು ಕೊಟ್ಟಾಯ್ತು. ಅದರಲ್ಲಿ ಸ್ವಲ್ಪ ಪಾಲನ್ನಾದರೂ ವೆಂಕಿಗೆ ಕೊಡುತ್ತೇನೆ. ಆತ ಕೂಡ ನಮ್ಮ ಮಗನೇ. ಆತ ಯಾವತ್ತೂ ನಮ್ಮ ಬಳಿ ಏನೂ ಕೇಳಿಲ್ಲ. ಆತನಿಗೆ ಕೂಡ ನಾವು ಸ್ವಲ್ಪ ಹಣ ಕೊಡಬೇಕು" ಎಂದು ಹೇಳುತ್ತಾರೆ. ಆಗ ಲಕ್ಷ್ಮೀಗೆ ತುಂಬಾ ನೋವು ಆಗುತ್ತದೆ. ತನ್ನ ಗಂಡನ ರಿಟೈರ್ಮೆಂಟ್ ಹಣವೆಲ್ಲ ಮಕ್ಕಳಿಗೆ ಹೋಗಿ ಬಿಟ್ಟಿತು ಎನ್ನುವ ನೋವು ಆಕೆಗೆ ಬಹಳಷ್ಟು ಕಾಡುತ್ತದೆ. ಆಗ ತನ್ನ ಗಂಡನ ಬಳಿ "ದಯವಿಟ್ಟು ನೀವು ಬೇಸರ ಮಾಡಿಕೊಳ್ಳಬೇಡಿ. ಖಂಡಿತವಾಗಿ ದೇವರು ಕೈ ಬಿಡುವುದು ಇಲ್ಲ" ಎಂದು ಸಮಾಧಾನವಾದ ಹೇಳುತ್ತಾಳೆ.

ಗಂಡನ ಮಾತು ಕೇಳಿ ಜಾಹ್ನವಿ ಶಾಕ್

ಇತ್ತ ಜಾಹ್ನವಿ ಹಾಗೂ ಜಯಂತ್ ಗಾಢ ನಿದ್ರೆಯಲ್ಲಿ ಇರುತ್ತಾರೆ. ಆ ಕೂಡಲೇ ಜಯಂತ್‌ಗೆ ಎಚ್ಚರ ಆಗುತ್ತೆ. ಜಯಂತ್‌ನನ್ನು ನೋಡಿ ಜಾಹ್ನವಿಗೆ ಕೊಂಚ ಗಾಬರಿಯಾಗುತ್ತಾಳೆ. ಜಯಂತ್ ಎದ್ದು ಕುಳಿತು ಹೇಳುತ್ತಾನೆ. "ಈ ಮಗುವಿಂದಾಗಿ ನಮ್ಮಿಬ್ಬರ ನಡುವೆ ಅಂತರ ಇನ್ನು ಹೆಚ್ಚಾಗುತ್ತದೆ ಎಂದು ನನಗೆ ಅನಿಸುತ್ತಿದೆ. ಅದಕ್ಕಾಗಿ ಈ ಮಗುವನ್ನು ನಾವು ತೆಗೆಸಿ ಬಿಡೋಣ" ಎಂದು ಹೇಳುತ್ತಾನೆ. ಈ ಮಾತು ಕೇಳಿದ ಜಾಹ್ನವಿಗೆ ಶಾಕ್ ಆಗುತ್ತೆ.

More from Filmibeat

English summary
Kannada serial Lakshmi Nivasa November 21st Episode update;
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X