Lakshmi Nivasa:ಹಣಕ್ಕಾಗಿ ಮನುಷ್ಯತ್ವ ಮರೆತ ಸಂತೋಷ್; ಮಗನ ವರ್ತನೆಗೆ ಹೆತ್ತವರ ಕಣ್ಣೀರು

By ಪೂರ್ವ

'ಲಕ್ಷ್ಮೀ ನಿವಾಸ' ಹೆಸರು ಹೇಳೋ ಹಾಗೆ ಕೂಡು ಕುಟುಂಬ ಇರುವ ಮನೆ. ಎಲ್ಲರೂ ಖುಷಿ ಖುಷಿಯಿಂದ ಇರುವ ಮನೆ. ಇದೀಗ ಛಿದ್ರ ಆಗುವ ಲಕ್ಷಣ ಕಾಣಿಸುತ್ತಿದೆ. ತನ್ನ ಮಕ್ಕಳನ್ನು ಬಹಳ ಚೆನ್ನಾಗಿ ಸಾಕಿ ಸಲಹಿದ ಅಮ್ಮ ಅಪ್ಪ. ಆದರೆ, ಕೊನೆಗೆ ಮಕ್ಕಳಿಗೆ ತಂದೆ ತಾಯಿಯೇ ಬೇಡ ಎನ್ನುವ ಲೆವೆಲ್‌ಗೆ ಆಗಿ ಬಿಟ್ಟಿದೆ. ಅದೆಷ್ಟೋ ಬಾರಿ ವೆಂಕಿಯನ್ನೂ ನೋಡಿ ಸಂತೋಷ್‌ಗೆ ಬಹಳ ಕಿರಿ ಕಿರಿ ಆಗುತ್ತಿತ್ತು. ಆತನಿಗೆ ವೆಂಕಿ ಅಂದರೆ ಇಷ್ಟವೇ ಇಲ್ಲ. ಚಿಕ್ಕ ವಯಸ್ಸಿನಿಂದಲೂ ವೆಂಕಿಯನ್ನು ಕಂಡರೆ ಬೆಂಕಿ ಕೆಂಡ ಉಗುಳುತ್ತಾನೆ.

ವೆಂಕಿಗೆ ತನ್ನ ತಂದೆ ತಾಯಿ ಎಂದರೆ ಬಹಳ ಪ್ರೀತಿ. ಅವರಿಂದ ಇದೂವರೆಗೆ ವೆಂಕಿ ಏನನ್ನು ಕೂಡ ಕೇಳಿಲ್ಲ. ಆದರೆ, ಇದೀಗ ಶ್ರೀನಿವಾಸ್ ಹಾಗೂ ಲಕ್ಷ್ಮೀ ವೆಂಕಿಗೆ ಐದು ಲಕ್ಷ ಹಣ ನೀಡಿದ್ದಾರೆ. ಇದನ್ನು ನೋಡಿದ ಸಂತೋಷ್‌ಗೆ ಬಹಳ ಕೋಪ ಬರುತ್ತೆ. ತನ್ನ ತಂದೆ ತಾಯಿಗೆ ಐದು ಜನ ಮಕ್ಕಳು. ಇದೀಗ ವೆಂಕಿಗೆ ಕೂಡ ಹಣ ಕೊಡುವುದು ಸರಿಯಲ್ಲ. ಆತ ನಮ್ಮ ಮನೆಯಲ್ಲಿ ಬದುಕಿದ್ದಾನೆ. ನಾವು ಆತನನ್ನು ಕೂಡ ತಮ್ಮ ಎಂದು ಹೇಳುವುದು ಹೇಗೆ? ವೆಂಕಿ ಗೆ ಹಣ ಕೊಡುವುದು ಬೇಕಾಗಿಲ್ಲ ಎಂದು ಹೇಳುತ್ತಾನೆ. ಇದನ್ನು ಕೇಳಿದ ವೆಂಕಿ ಕೂಡ ತನ್ನ ತಂದೆ ತಾಯಿಯ ಬಳಿ ಹಣ ಬೇಡ ಎಂದು ಹೇಳುತ್ತಾನೆ.

Kannada serial Lakshmi Nivasa November 22nd episode update

"ನನಗೆ ಹಣಕ್ಕಿಂತ ನಿಮ್ಮ ಪ್ರೀತಿಯೇ ನನಗೆ ಮೇಲು. ನನಗೆ ಹಣ ಬೇಡ. ನಿಮ್ಮಿಬ್ಬರ ಪ್ರೀತಿ ಇದ್ದರೆ ನನಗೆ ಅದಷ್ಟೇ ಸಾಕು" ಎಂದು ಹೇಳುತ್ತಾನೆ. ಆದರೆ ತಂದೆ ತಾಯಿಯ ಮೇಲೆ ಕೋಪಗೊಂಡ ಸಂತೋಷ್, ವೆಂಕಿಯನ್ನು ಹೊಡೆಯುವ ಮಟ್ಟಕ್ಕೆ ಹೋಗುತ್ತಾನೆ. "ವೆಂಕಿಯನ್ನು ಈ ಮನೆಯಲ್ಲಿ ಸಾಕಿದ್ದೇ ಬಹಳ ದೊಡ್ಡ ತಪ್ಪು. ಆದರೂ ನಿಮ್ಮಿಷ್ಟದಂತೆ ನಾನೇನು ಮಾತನಾಡಲಿಲ್ಲ. ಆದರೆ, ಇದೀಗ ಪುನಃ ವೆಂಕಿಗೆ ಹಣ ಬೇರೆ ಕೊಡುತ್ತಿದ್ದೀರ. ನನಗೆ ಇದ್ಯಾಕೋ ಸರಿ ಕಾಣುತ್ತಿಲ್ಲ. ನಾನು ವೆಂಕಿಗೆ ನೀವು ಹಣ ಕೊಡುವುದನ್ನು ಒಪ್ಪುವುದಿಲ್ಲ. ದಯವಿಟ್ಟು ಕ್ಷಮಿಸಿ" ಎಂದು ಹೇಳುತ್ತಾನೆ. ಆದರೂ ಶ್ರೀನಿವಾಸರಾಯರು ವೆಂಕಿಗೆ 5 ಲಕ್ಷ ರೂಪಾಯಿಯನ್ನು ಕೊಡುತ್ತಾರೆ. ಇದನ್ನು ನೋಡಿದ ಸಂತೋಷ್‌ಗೆ ಇನ್ನೂ ಕೋಪ ಬರುತ್ತದೆ.

ಸಂತೋಷ್ ಅತಿರೇಕದ ಮಾತಿಗೆ ಉತ್ತರವಿಲ್ಲ

"ತಂದೆಗೆ ಇಷ್ಟೆಲ್ಲ ಹೇಳಿದರು ಕೂಡ ಅವರಿಗೆ ನನ್ನ ಮನಸ್ಸಿನ ಮಾತು ಅರ್ಥನೇ ಆಗುತ್ತಿಲ್ಲ. ಖಂಡಿತವಾಗಿಯೂ ನಾನು ಸುಮ್ಮನೆ ಕುಳಿತರೆ ಆ ಹಣ ವೆಂಕಿಯ ಪಾಲಾಗುತ್ತದೆ. ಅದಕ್ಕೋಸ್ಕರ ನಾನು ಈಗ ಮಾತನಾಡದಿದ್ದರೆ, ನನಗೆ ಆ ಹಣ ದೊರಕುವುದಿಲ್ಲ" ಎಂದುಕೊಂಡು ಜೋರಾಗಿ ವೆಂಕಿಯ ವಿರುದ್ಧ ಸಿಡಿದೇಳಿದ್ದಾನೆ ಸಂತೋಷ್. ಆಗ ವೆಂಕಿಗೆ ಬಹಳ ನೋವಾಗುತ್ತೆ. ತನ್ನ ಅಣ್ಣನಿಂದ ಅಂತಹ ಮಾತುಗಳನ್ನು ವೆಂಕಿ ನಿರೀಕ್ಷೆ ಮಾಡಿರಲಿಲ್ಲ. ಆತನಿಗೆ ಹಣಕ್ಕಿಂತ ಸಂಬಂಧಗಳನ್ನು ಉಳಿಸಿಕೊಂಡು ಹೋಗುವುದು ಹೇಗೆ ಎನ್ನುವುದೇ ಚಿಂತೆ.

ಹಣ ಬೇಡವೆಂದ ವೆಂಕಿ

ಇತ್ತ ಸಂತೋಷ್ ಮಾತು ಮಿತಿ ಮೀರುತ್ತಿದೆ. ಆತನಿಗೆ ಹಣದ ವ್ಯಾಮೋಹದಿಂದ ತಾನು ಏನು ಮಾಡುತ್ತಿದ್ದೇನೆ ಎನ್ನುವ ಪ್ರಜ್ಞೆ ಕೂಡ ಆತನಿಗೆ ಇರುವುದಿಲ್ಲ. ಕೊನೆಗೆ ವೆಂಕಿಯ ಮೇಲೆ ಕೈ ಮಾಡಲು ಬರುತ್ತಾನೆ ಸಂತೋಷ್. ಇದನ್ನೆಲ್ಲಾ ನೋಡಿದ ಲಕ್ಷ್ಮಿಗೆ ಬಹಳ ಬೇಸರವಾಗುತ್ತೆ. ತನ್ನ ಕಣ್ಣ ಮುಂದೆಯೇ ಮಕ್ಕಳು ಈ ರೀತಿ ಕಚ್ಚಾಡುತ್ತಿರುವುದನ್ನು ನೋಡಿ ಆಕೆಗೆ ಬಹಳಷ್ಟು ನೋವಾಗುತ್ತದೆ. ಲಕ್ಷ್ಮಿಗೆ ವೆಂಕಿ ಕೂಡ ತನ್ನ ಮಗನೇ. ಆತ ಯಾವತ್ತೂ ಕೂಡ ತನಗೆ ಇಂತಹದೊಂದು ಬೇಕು ಎಂದು ಕೇಳಿದವನಲ್ಲ. ಆದರೆ ಇದೀಗ ಆತನಿಗೆ ಹಣ ನೀಡಿದ್ದೇವೆ ಎನ್ನುವ ಕಾರಣಕ್ಕೆ ಸಂತೋಷ್‌ ಆತನನ್ನು ಮನೆ ಬಿಟ್ಟೆ ಹೋಗು ಎಂದು ನಿಷ್ಟೂರವಾಗಿ ಹೇಳಿದ್ದಾನೆ. ಇದರಿಂದ ಲಕ್ಷ್ಮಿ ಹಾಗೂ ಶ್ರೀನಿವಾಸ್ ಇಬ್ಬರಿಗೂ ಬಹಳ ನೋವಾಗುತ್ತೆ.

Kannada serial Lakshmi Nivasa November 22nd episode update

ವೆಂಕಿಗೆ ಮನೆಬಿಟ್ಟು ಹೋಗಲು ತಾಕೀತು

ವೆಂಕಿ ಆ ಕೂಡಲೇ ಆ ಹಣವನ್ನು ಸಂತೋಷ್ ಕೈಗೆ ನೀಡುತ್ತಾನೆ. ಈ ಹಣ ಯಾವುದು ಬೇಡ ಎಂದು ಹೇಳುತ್ತಾನೆ. ಆದರೂ ಕೂಡ ಸಂತೋಷ್‌ಗೆ ವೆಂಕಿಯ ಮೇಲೆ ದಯೆ ಬರುವುದಿಲ್ಲ. ಆತನ ಮೇಲೆ ಕೂಗಾಡುತ್ತಾನೆ. ಇತ್ತ ಭಾವನಾ ಪಾಡು ಬಹಳ ಕಷ್ಟಕರವಾಗಿದೆ. ಆಕೆಗೆ ತಾನು ಕುಂತರೂ ತಪ್ಪು, ನಿಂತರೂ ತಪ್ಪು ಎನ್ನುವಂತಹ ಸ್ಥಿತಿಯಿದೆ. ಅಂತ ಇಕ್ಕಟ್ಟಿನ ಸ್ಥಿತಿಗೆ ಆಕೆ ತಲುಪಿ ಬಿಟ್ಟಿದ್ದಾಳೆ.

More from Filmibeat

English summary
Kannada serial Lakshmi Nivasa November 22nd episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X