Lakshmi Nivasa:ವೆಂಕಿ ನೆನಪಿನಲ್ಲಿ ಲಕ್ಷ್ಮೀ; ಹೆತ್ತ ಮಕ್ಕಳಿಂದಲೇ ನೋವಾದರೆ ಸಾಂತ್ವನ ಹೇಳೋರು ಯಾರು?

By ಪೂರ್ವ

ಲಕ್ಷ್ಮಿಯ ಪ್ರೀತಿಯ ಮಗ ವೆಂಕಿ ಇದೀಗ ಮನೆ ಬಿಟ್ಟಾಯ್ತು. ತನ್ನ ತಾಯಿಯನ್ನು ನೆನೆದು ಕಂಬನಿ ಸುರಿಸುತ್ತಿದ್ದಾನೆ. ವೆಂಕಿಗೆ ಆತನ ಹೆಂಡತಿ ಅದೆಷ್ಟೇ ಸಮಾಧಾನ ಹೇಳಿದರು ತಡೆದುಕೊಳ್ಳಲು ಆಗುತ್ತಿಲ್ಲ. ವೆಂಕಿ ತನ್ನ ಮನೆಯವರನ್ನು ಬಿಟ್ಟು ಒಂದು ದಿನ ಇದ್ದವನು ಅಲ್ಲ. ಆದರೆ, ಇದೀಗ ಮನೆ ತೊರೆದು ಬಂದಿದ್ದಾನೆ. ಆತನಿಗೆ ಇನ್ಮೇಲೆ ತನ್ನ ಹೆಂಡತಿಯ ಮನೆಯಲ್ಲಿ ಇರುವ ಹಾಗೆ ಆಯಿತು.

'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ವೀಕ್ಷಕರಿಗೆ ವೆಂಕಿ ಮನೆಯಿಂದ ಆಚೆ ಹೋಗಿದ್ದು ಬಹಳ ಖುಷಿ ಕೊಟ್ಟಿದೆ. ಸಂತೋಷ್, ವೆಂಕಿಯನ್ನು ಬಹಳ ತುಚ್ಛವಾಗಿ ನೋಡುತ್ತಿದ್ದ. ಆತನಿಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತಿದ್ದ. ಇದನ್ನೆಲ್ಲ ಕೇಳಿದ ವೀಕ್ಷಕರಿಗೆ ಮನಸ್ಸಿಗೆ ಬಹಳ ಬೇಸರ ಆಗಿತ್ತು.

Kannada serial Lakshmi Nivasa November 27th episode update

ಆದರೆ, ಲಕ್ಷ್ಮೀ ಹಾಗೂ ಶ್ರೀನಿವಾಸ ಅವನನ್ನು ಸ್ವಂತ ಮಗನ ಹಾಗೆ ನೋಡಿಕೊಂಡಿದ್ದಾರೆ. ಆದರೆ ಸಂತೋಷ್ ಮಾತ್ರ ವೆಂಕಿಯನ್ನು ಮನೆಯ ಹೊರಗಿನವನ ಹಾಗೆ ಮಾತಾಡುತ್ತಾನೆ. ಸಂತೋಷ್ ವೆಂಕಿಯನ್ನು ಮನೆಯಿಂದ ಹೊರ ಹಾಕುವ ವೇಳೆ ಶ್ರೀನಿವಾಸ್ ರಾಯರು ಸಂತೋಷ್ ನನ್ನ ಮನೆಯಿಂದ ಹೊರಗೆ ಹಾಕಬಹುದಿತ್ತು. ಆದರೆ ಅವರು ಏನೂ ಮಾತನಾಡದೆ ಸುಮ್ಮನೆ ವೆಂಕಿಯ ಮುಖ ನೋಡುತ್ತಾ ಇರುತ್ತಾರೆ. ಈ ಸನ್ನಿವೇಶ ವೀಕ್ಷಕರಿಗೆ ಮತ್ತಷ್ಟು ಬೇಸರ ಮೂಡಿಸಿರುವುದು ಮಾತ್ರ ಸತ್ಯ.

ಇತ್ತ ಜಾಹ್ನವಿ ತಾಯಿ ಆಗುತ್ತಿದ್ದಾಳೆ. ಮನೆಯವರ ಬಳಿ ಈ ಖುಷಿ ಸುದ್ದಿಯನ್ನು ಹೇಳಿಕೊಳ್ಳಲು ಕಾತರ. ಆದರೆ ಜಾಹ್ನವಿ ಜಯಂತ್ ಆಡಿದ ಮಾತುಗಳಿಂದ ಸುಮ್ಮನಿರುತ್ತಾಳೆ. ಜಯಂತ್ ಮೊದಲಿಗೆ ಮಗು ಬೇಡ ಎನ್ನುವ ಮಾತುಗಳನ್ನು ಹೇಳುತ್ತಿರುತ್ತಾನೆ. ಆತನಿಗೆ ಭಯ. ಮಗು ಆದರೆ ಜಾಹ್ನವಿ ಎಲ್ಲಿ ತನ್ನನ್ನು ಬಿಟ್ಟು ಹೋಗುತ್ತಾಳೆ ಎನ್ನುವ ಅನುಮಾನ. ಅದಕ್ಕಾಗಿ ಜಯಂತ್ ಮಗು ಬೇಡ ಎನ್ನುವ ನಿರ್ಧಾರ ಮಾಡಿರುತ್ತಾನೆ. ಆತನಿಗೆ ತನ್ನ ಹೆಂಡತಿಯ ಮೇಲೆ ಆಗಾಧವಾದ ಪ್ರೇಮ. ಇದರಿಂದಾಗಿ ಜಾಹ್ನವಿ ಮನಸ್ಸು ಕುಗ್ಗಿ ಹೋಗಿರುತ್ತದೆ. ತನ್ನ ತಾಯಿಯ ಬಳಿ ನಿಜ ವಿಚಾರ ಹೇಳಬೇಕೋ ಬೇಡವೋ ಎನ್ನುವ ಗೊಂದಲದಲ್ಲಿ ಆಕೆ ಇರುತ್ತಾಳೆ. ಬಳಿಕ ತನ್ನ ತಾಯಿಯ ಬಳಿ ತಾಯಿ ಆಗುತ್ತಿರುವ ವಿಚಾರ ಹೇಳಿದಾಗ ಲಕ್ಷ್ಮೀ ಗೆ ಬಹಳ ಖುಷಿ ಆಗುತ್ತದೆ. ಆದರೆ ಈ ಖುಷಿ ವಿಚಾರವನ್ನು ಹಂಚಿಕೊಳ್ಳಲು ವೆಂಕಿ ಇರುವುದಿಲ್ಲ.

Kannada serial Lakshmi Nivasa November 27th episode update

ವೆಂಕಿಗೆ ಕರೆ ಮಾಡಿದ ಜಾಹ್ನವಿ

ವೆಂಕಿಗೆ ಜಾಹ್ನವಿ ಎಂದರೆ ಬಹಳ ಪ್ರೀತಿ. ಆತನಿಗೆ ವಿಚಾರ ತಿಳಿದರೆ ಬಹಳ ಸಂತೋಷ ಪಡುತ್ತಾನೆ ಎಂದು ಲಕ್ಷ್ಮೀ ಮನದಲ್ಲಿ ಆಂದುಕೊಳ್ಳುತ್ತಾಳೆ. ವೆಂಕಿ ಮನೆ ಬಿಟ್ಟು ಹೋಗಿರುವುದನ್ನು ತಿಳಿದ ಜಾಹ್ನವಿಗೆ ಬಹಳ ನೋವು ಆಗುತ್ತದೆ. ಜಾಹ್ನವಿ ವೆಂಕಿಗೆ ಕರೆ ಮಾಡಿ ಅಣ್ಣ ನನ್ನು ವಿಚಾರಿಸಿಕೊಳ್ಳುತ್ತಾಳೆ. ಆಕೆಗೆ ಬಹಳ ಪ್ರೀತಿಯಿಂದ ಮನೆಗೆ ಕರೆಯುತ್ತಾಳೆ. ಹಾಗೆಯೇ ಮನೆಗೆ ಬಂದರೆ ಖುಷಿ ಸುದ್ದಿಯನ್ನು ಹೇಳುತ್ತೇನೆ ಎಂದಾಗ ವೆಂಕಿ ಎರಡು ದಿನ ಕಳೆದು ಬರುತ್ತೇನೆ ಎಂದು ಹೇಳಿ ಸುಮ್ಮನಾಗಿಬಿಡುತ್ತಾನೆ. ಹಾಗೆಯೇ ಜಾಹ್ನವಿ ನೊಂದುಕೊಳ್ಳಬಾರದು ಎಂದು ತಾನು ಚೆನ್ನಾಗಿದ್ದೇನೆ ಎನ್ನುವ ಸುಳ್ಳನ್ನು ಆತ ಹೇಳುತ್ತಾನೆ.

ಜನರೇ ಗೌಡರ ಮನೆಗೆ ಬಂದ ತ್ರಿಕಾಲ ಜ್ಞಾನಿಗಳು

ಜನರೇ ಗೌಡರ ಮನೆಗೆ ತ್ರಿಕಾಲ ಜ್ಞಾನಿಗಳು ಬಂದಿದ್ದಾರೆ. ಅವರನ್ನು ನೋಡಿದ ಮನೆಯವರಿಗೆಲ್ಲಾ ಬಹಳ ಗೌರವ. ಅವರು ಏನೇ ಹೇಳಿದರೂ ಅದನ್ನು ಜವರೇ ಗೌಡರು ಚಾಚೂ ತಪ್ಪದೆ ಕೇಳುತ್ತಾರೆ. ಇದೀಗ ತ್ರಿಕಾಲ ಜ್ಞಾನಿಗಳು ಜವರೆ ಗೌಡರಿಗೆ ಕಿವಿ ಮಾತನ್ನು ಹೇಳಿದ್ದಾರೆ ಜವರೇ ಗೌಡರೆ ನಿಮ್ಮ ಮನೆಗೆ ಬಂದಿರುವ ಸೊಸೆಯಿಂದಾಗಿ ನಿಮ್ಮ ಮನೆ ಬೆಳಗಾಗುತ್ತಿರುವುದು ಇವರನ್ನು ಯಾವುದೇ ಕಾರಣಕ್ಕು ಮನೆ ಬಿಟ್ಟು ಕಳುಹಿಸಬೇಡಿ ಎಂದು ಕಿವಿ ಮಾತು ಹೇಳುತ್ತಾರೆ.

More from Filmibeat

English summary
Kannada serial Lakshmi Nivasa November 27th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X