Lakshmi Nivasa:ಜಯಂತ್ ಮೇಲೆ ಜಾಹ್ನವಿಗೆ ಅನುಮಾನ; ಸೈಕೊ ಗಂಡನ ಸ್ವಭಾವ ತಿಳಿಯುತ್ತಾ?

By ಪೂರ್ವ

ಶ್ರೀನಿವಾಸ್ ಕೂಡಿಟ್ಟ ಹಣವನ್ನು ಹೇಗಾದರೂ ಮಾಡಿ ತೆಗೆದುಕೊಳ್ಳಬೇಕು ಎಂದು ಸ್ವಂತ ಮಗನೆ ಹೊಂಚು ಹಾಕುತ್ತಿದ್ದಾನೆ. ಶ್ರೀನಿವಾಸ್‌ ಬಳಿ ಇದ್ದ ಪಿಎಫ್ ಹಣವನ್ನು ಹೇಗಾದರೂ ಮಾಡಿ ತಂದೆಯ ಕೈಯಿಂದ ತೆಗೆದುಕೊಳ್ಳಬೇಕು ಎಂದು ಸಂತೋಷ್ ಪ್ಲಾನ್ ಮಾಡುತ್ತಾನೆ. ಹಾಗೆಯೇ ವೀಣಾ ಬಳಿ ಅಳುತ್ತಾ ನನ್ನ ಕೆಲಸ ಹೋಗಿ ಬಿಡುತ್ತೆ. ಇವತ್ತು ಆಫೀಸ್ ಹಣವನ್ನು ನಾನು ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿ ಕಟ್ಟ ಬೇಕಿತ್ತು. ಆದರೆ ಬ್ಯಾಂಕ್‌ಗೆ ಹಣ ತೆಗೆದುಕೊಂಡು ಹೋಗುವಾಗ ಹಣವನ್ನು ಖದೀಮರು ಕದ್ದಿದ್ದಾರೆ ಎಂದು ಹೆಂಡತಿ ಬಳಿ ಹೇಳುತ್ತಾನೆ.

ಸಂತೋಷ್ ಮಾತು ಕೇಳಿದ ವೀಣಾಗೆ ಬಹಳ ಬೇಸರ ಆಗುತ್ತೆ. ಮನೆಗೆ ಆಧಾರವಾಗಿ ಇರಬೇಕಾದ ಇವರೇ ಈ ರೀತಿಯಾಗಿ ಹೇಳಿದರೆ ಹೇಗೆ? ಎನ್ನುವ ಆಲೋಚನೆಯೂ ಆಕೆಗೆ ಮೂಡುತ್ತೆ. ವೀಣಾ ಜೋರಾಗಿ ಡೈನಿಂಗ್ ರೂಮ್‌ನಲ್ಲಿ ಅಳುತ್ತಾ ಇರುವಾಗ ಅಲ್ಲಿಗೆ ಲಕ್ಷ್ಮೀ ಹಾಗೂ ಶ್ರೀನಿವಾಸ್ ಇಬ್ಬರು ಬರುತ್ತಾರೆ. ಅಳುತ್ತಾ ಇರುವ ವೀಣಾ ಬಳಿ ಬಂದ ಲಕ್ಷ್ಮೀ "ಯಾಕಮ್ಮ ನೀನು ಅಳುತ್ತಿದ್ದಿಯಾ..? ಅಳುತ್ತಿರುವಂತಹದ್ದು ಏನಾಯ್ತು?" ಎಂದು ಹೇಳುತ್ತಾಳೆ.

Kannada serial Lakshmi Nivasa November 4th episode update

ಆಗ ವೀಣಾಗೆ ಏನು ಮಾಡಬೇಕು ತಿಳಿಯದಾಗುತ್ತದೆ. ಕೊನೆಗೆ ಸಂತೋಷ್ ಮಾಡಿರುವ ಎಡವಟ್ಟಿನ ಕೆಲಸವನ್ನು ಬಿಡಿ ಬಿಡಿಯಾಗಿ ಅತ್ತೆ ಮಾವನ ಬಳಿ ಶೇರ್ ಮಾಡುತ್ತಾಳೆ. ಇದನ್ನು ಕೇಳಿದ ಲಕ್ಷ್ಮೀಗೆ ಆತಂಕ ಶುರು ಆಗುತ್ತದೆ. ಒಮ್ಮೆ ಗಂಡನ ಮುಖ ನೋಡಿದ ಲಕ್ಷ್ಮೀ ಮನೆಯವರೆಲ್ಲರನ್ನು ಕರೆಯುತ್ತಾಳೆ. ನಿಮ್ಮ ಬಳಿ ಒಂದು ವಿಚಾರ ಹೇಳಬೇಕು ಎಂದಾಗ ಒಳಗಿನಿಂದ ಸಪ್ಪೆ ಮುಖ ಹಾಕಿಕೊಂಡು ಸಂತೋಷ್ ಬರುತ್ತಾನೆ. ಮಗನಿಗೆ ತನ್ನ ಪಿಎಫ್ ಹಣವನ್ನು ಶ್ರೀನಿವಾಸ್ ಕೊಡುತ್ತಾರೆ.

ಇನ್ನೂ ಜಾಹ್ನವಿ ತನ್ನ ಪ್ರೀತಿಯ ಮೊಲ ಎತ್ತ ಹೋಗಿದೆ ಎನ್ನುವ ಆತಂಕ ಹೆಚ್ಚಾಗಿದೆ. ತನ್ನ ಗಂಡನ ಬುದ್ದಿ ಜಾಹ್ನವಿಗೆ ತಿಳಿದಿದೆ. ಆದ ಕಾರಣ ಜಾಹ್ನವಿ ಜಯಂತ್‌ನನ್ನು ಅನುಮಾನದಿಂದ ನೋಡುತ್ತಾಳೆ. ಆ ಕೂಡಲೇ ಕುಕ್ಕರ್ ವಿಶಲ್ ಆಗುತ್ತದೆ. ಅದನ್ನು ನೋಡಿದ ಜಾಹ್ನವಿಗೆ ಕುಕ್ಕರ್‌ನಲ್ಲಿ ಏನಾದರೂ ಮೊಲ ಇದೆಯಾ ಅನ್ನೋ ಅನುಮಾನ ಮೂಡುತ್ತೆ. ನೇರವಾಗಿ ಕುಕ್ಕರ್ ಮುಚ್ಚಳ ತೆಗೆಯಲು ಹೋಗುತ್ತಾರೆ. ಇದನ್ನು ನೋಡಿದ ಜಯಂತ್‌ಗೆ ನಗು ಬರುತ್ತದೆ. ಕುಹಕ ನಗು ಬೀರುತ್ತಾ ಆತ ಸುಮ್ಮನೆ ಇರುತ್ತಾನೆ. ಆದರೆ, ಜಾಹ್ನವಿ ಮಾತ್ರ ಕುಕ್ಕರ್ ಮುಚ್ಚಳ ಓಪನ್ ಮಾಡುವ ವೇಳೆ ಕೊಂಚ ತಡೆದುಕೊಳ್ಳುವಂತೆ ಹೇಳುತ್ತಾನೆ ಜಯಂತ್. ಹಾಗೆಯೇ ಮೊಲ ಇದರಲ್ಲಿ ಹೇಗೆ ಇರಲು ಸಾಧ್ಯ? ಎಂದು ಕೇಳುತ್ತಾನೆ.

ಆತ ಖಂಡಿತವಾಗಿಯೂ ಮೊಲವನ್ನು ಸುಮ್ಮನೆ ಬಿಡುವುದಿಲ್ಲ ಎಂದು ಆಕೆಗೆ ಗೊತ್ತು. ಇತ್ತ ಜಯಂತ್ ಜಾಹ್ನವಿ ಬಳಿ "ನೀನು ನನ್ನ ಬಗ್ಗೆ ಯಾಕೆ ಅನುಮಾನ ಪಡುತ್ತಿದ್ದೀಯಾ? " ಎಂದು ಕೇಳುತ್ತಾನೆ. ಜಾಹ್ನವಿ ತನ್ನ ಮೇಲೆ ಅನುಮಾನ ಪಡುತ್ತಿದ್ದಾಳೆ ಎಂದು ಜಯಂತ್‌ಗೆ ತಿಳಿಯುತ್ತೆ. ಆತನಿಗೆ ಹೆಂಡತಿ ತನ್ನ ಮೇಲೆ ಅನುಮಾನ ಪಟ್ಟಿದ್ದು ಬಹಳ ಬೇಸರ ತರಿಸಿದೆ.

More from Filmibeat

English summary
Kannada serial Lakshmi Nivasa November 4th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X