Lakshmi Nivasa:ಜಾಹ್ನವಿ ಮುಂದೆ ಕಳಚಿತು ಗಂಡನ ಅಸಲಿ ಮುಖ; ಸೈಕೊ ಗಂಡನ ಜೊತೆ ಹೇಗೆ ಬಾಳುತ್ತಾಳೆ ಚಿನ್ನುಮರಿ?
ಜಾಹ್ನವಿಗೆ ಇದೀಗ ತನ್ನ ಗಂಡನ ಬುದ್ಧಿ ಗೊತ್ತಾಗಿದೆ. ತನ್ನ ಗಂಡ ಶ್ರೀರಾಮಚಂದ್ರ. ಆತನನ್ನು ಪಡೆದ ನಾನು ಪುಣ್ಯ ಅಂದುಕೊಂಡಿದ್ದ ಜಾನುಗೆ ತನ್ನ ಗಂಡನಷ್ಟು ಕ್ರೂರಿ ಬೇರೆ ಯಾರು ಇಲ್ಲ ಅಂತ ಅನ್ನಿಸಿದೆ. ಆಕೆಯ ಗೆಳತಿಯರು ಆ ದಿನ ಒತ್ತಿ ಒತ್ತಿ ಒಂದು ಮಾತನ್ನು ಹೇಳುತ್ತಿದ್ದರು. "ನಿನ್ನ ಗಂಡ ಸರಿ ಇಲ್ಲ. ನೀನು ಜಾಗರೂಕತೆಯಿಂದ ಇರು" ಎಂದು ಹೇಳಿದ್ದರು, ಆದರೆ, ಅದೆಲ್ಲದಕ್ಕೆ ಜಾಹ್ನವಿ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ಇದೀಗ ತನ್ನ ಗಂಡ ದೊಡ್ಡ ಸೈಕೋ ಎಂದು ಆಕೆಗೆ ಅನ್ನಿಸುತ್ತಿದೆ.
ತನ್ನ ಜೊತೆ ಯಾರೆ ಕ್ಲೋಸ್ ಆಗಿ ಇದ್ದರೂ, ಅದನ್ನು ಸಹಿಸಿಕೊಳ್ಳಲು ಜಯಂತ್‌ಗೆ ಆಗುತ್ತಿಲ್ಲ. ಆತನಿಗೆ ಜಾಹ್ನವಿ ಎಲ್ಲಿ ನನ್ನಿಂದ ದೂರವಾಗಿ ಬಿಡುತ್ತಾಳೋ ಎನ್ನುವ ಭಯ ಕಾಡುತ್ತಿದೆ. ಆದರೂ ಯಾರ ಜೊತೆಯೂ ಹೇಳಿಕೊಳ್ಳದ ಜಯಂತ್ ಮಾತ್ರ ತನ್ನ ಮನೆಯಲ್ಲಿರುವ ಗಿಡದ ಜೊತೆಗೆ ಎಲ್ಲ ವಿಚಾರವನ್ನು ಶೇರ್ ಮಾಡಿಕೊಳ್ಳುತ್ತಾನೆ. ಆದರೆ, ಈ ವಿಚಾರ ಜಾಹ್ನವಿಗೆ ತಿಳಿದೆ ಇಲ್ಲ. ಜಾಹ್ನವಿಯ ಪ್ರತಿಯೊಂದು ಚಲನವಲನ ತಿಳಿಯಲು ಸಿಸಿ ಕ್ಯಾಮರವನ್ನು ಅಳವಡಿಸಿದ್ದಾನೆ. ಇದರಿಂದ ಜಾಹ್ನವಿ ಮನೆಯೊಳಗೆ ಏನು ಮಾಡುತ್ತಿದ್ದಾಳೆ ಅನ್ನೋದನ್ನು ವೀಕ್ಷಿಸುತ್ತಾನೆ.

ಇದೀಗ ಜಾಹ್ನವಿಗೆ ಆಕೆಯ ಮನೆಯ ವಾಚ್ ಮ್ಯಾನ್ ಜಯಂತ್‌ನ ಇನ್ನೊಂದು ಮುಖದ ಬಗ್ಗೆ ಹೇಳಿಕೊಂಡಿದ್ದಾನೆ. "ನಿಮ್ಮ ಗಂಡ ಸರಿ ಇಲ್ಲ ನೀವು ಅವರ ಜೊತೆ ಬಹಳ ಕೇರ್‌ಫುಲ್ ಆಗಿರಿ. ನಿಮ್ಮ ಗಂಡ ನೀವು ಅಂದುಕೊಂಡ ಹಾಗೆ ಇಲ್ಲ" ಎಂದು ಹೇಳಿ ತನಗೆ ಆದ ಸ್ಥಿತಿಯ ಬಗ್ಗೆ ಹೇಳಿ ಅಲ್ಲಿಂದ ಓಡಿ ಹೋಗುತ್ತಾನೆ. ಇದನ್ನು ಕೇಳಿ ಜಾಹ್ನವಿಗೆ ಬಹಳ ಭಯ ಆಗುತ್ತೆ. ಕೈ ಕಾಲು ನಡುಕ ಬರುತ್ತೆ. ತಾನು ಬಹಳ ಪ್ರೀತಿಸುವ ಹುಡುಗ ಹೀಗೆನಾ? ಆತನಿಗೆ ತನ್ನ ಮೇಲೆ ಇಷ್ಟೇ ಪ್ರೀತಿನಾ? ಅಂತ ಅನ್ನಿಸುತ್ತೆ.
ಮನೆಗೆ ಬಂದ ಜಾಹ್ನವಿಗೆ ಒಂದೊಂದೇ ನೆನಪಿಗೆ ಬರುತ್ತದೆ. ತಾನು ಅಂದು ಅಕ್ಕನಿಗೆ ಹೂವು ತೆಗೆದುಕೊಂಡು ಬರಲು ಮಾರ್ಕೆಟ್‌ಗೆ ಹೋದೆ. ಆದರೆ ಆಗ ಜಯಂತ್ ನಡೆದುಕೊಂಡ ರೀತಿ ಮಾತ್ರ ಬಹಳ ವಿಚಿತ್ರ ಆಗಿತ್ತು. ಕೈಗೆ ಗಾಯವನ್ನು ಮಾಡಿದ್ದರು. ಇದಕ್ಕಿಂತ ಮುಂಚೆ ತನ್ನ ಗೆಳೆಯರೇ "ಜಾನು ನಿನ್ನ ಗಂಡ ಸರಿ ಇಲ್ಲ. ಆತನನ್ನು ನೀನು ನಂಬಲು ಹೋಗಬೇಡ" ಎಂದು ಹೇಳಿದ್ದನ್ನು ನೆನಪಿಸಿಕೊಂಡ ಜಾಹ್ನವಿಗೆ ಇದೀಗ ದಿಕ್ಕೇ ತೋಚದಾಗಿದೆ. ಆಕೆಗೆ ಜೋರಾಗಿ ಅಳು ಬರುತ್ತಿದೆ. ಇದನ್ನೂ ಜಯಂತ್ ಗಮನಿಸುತ್ತಿದ್ದಾನೆ.
"ಯಾಕೆ ನನ್ನ ಚಿನ್ನು ಮರಿ ಇಷ್ಟು ಡಲ್ ಆಗಿದ್ದಾಳೆ. ಅಂತಹದ್ದು ಏನಾಯಿತು ಆಕೆಗೆ" ಅಂದುಕೊಳ್ಳುತ್ತಾನೆ. ಆದರೆ, ಜಯಂತ್‌ಗೆ ವಾಚ್ ಮ್ಯಾನ್ ಸಿಕ್ಕಿ ಹೇಳಿದ ಸಂಗತಿಯನ್ನು ಜಾನು ಹೇಳುತ್ತಾಳಾ ಎನ್ನುವುದನ್ನು ನೋಡಬೇಕಿದೆ. ಇತ್ತ ಲಕ್ಷ್ಮೀ ಮಾತ್ರ ಮೌನವಾಗಿ ಕುಳಿತು ಇರುತ್ತಾಳೆ. ಲಕ್ಷ್ಮೀಗೆ ಭಾವನಾ ಅತ್ತೆ ಸಿಕ್ಕಿದ್ದು, ಲಕ್ಷ್ಮೀ ಜೊತೆ ಮಾತನಾಡಿದ ರೀತಿ ಬಹಳ ಆತಂಕ ತರುತ್ತದೆ.
ನನ್ನ ಮಗಳು ಬೀಗರ ಮನೆಯಲ್ಲಿ ಹೇಗಿದ್ದಾಳೋ ಏನೋ ಎನ್ನುವ ಆಲೋಚನೆಯಲ್ಲಿ ಲಕ್ಷ್ಮೀ ಕಾಲ ಕಳೆಯುತ್ತಿರುತ್ತಾರೆ. ಇದೀಗ ಶ್ರೀನಿವಾಸ್ ಮೆತ್ತಗೆ ಲಕ್ಷ್ಮೀ ಬಳಿ "ಯಾಕೆ ಲಕ್ಷ್ಮೀ ಏನಾಯಿತು? ಎಂದು ಕೇಳಿದಾಗ, "ರೀ ನಮ್ಮ ಭಾವನಾ ಬೀಗರ ಮನೆಯಲ್ಲಿ ಖುಷಿಯಾಗಿ ಇದ್ದಾಳಾ?" ಎನ್ನುವ ಪ್ರಶ್ನೆಯನ್ನು ಹಾಕುತ್ತಾರೆ. ಆಗ ಶ್ರೀನಿವಾಸ್‌ಗೆ ಶಾಕ್ ಆಗುತ್ತೆ. ಆದರೂ ಏನು ಮಾತನಾಡದೆ ಸುಮ್ಮನೆ ಇರುತ್ತಾನೆ. "ನನ್ನ ಮಗಳು ಭಾವನಾ ಚೆನ್ನಾಗಿ ಇದ್ದಾಳೆ. ಆಕೆಗೆ ಏನು ಆಗಿಲ್ಲ. ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ನೀವು ಏನು ಯೋಚನೆ ಮಾಡಬೇಡಿ ಎಂದು ಹೇಳುತ್ತಾರೆ. ಇನ್ನೂ ಲಕ್ಷ್ಮೀಯ ಇಬ್ಬರು ಗಂಡು ಮಕ್ಕಳು ತನ್ನ ತಂದೆಯ ಹಣಕ್ಕೇ ಕನ್ನ ಹಾಕಿರುವುದು ವೀಕ್ಷಕರಿಗೆ ಕಣ್ಣನ್ನು ಕೆಂಪಾಗಿದೆ.


Click it and Unblock the Notifications











