Lakshmi Nivasa: ಜವರೇಗೌಡರ ಮಾತಿನೇಟಿಗೆ ನಡುಗಿದ ಭಾವನಾ? ಮಾವನ ಮಾತನ್ನು ಲೆಕ್ಕಿಸದೆ ಕೆಲಸಕ್ಕೆ ಹೋಗುತ್ತಾಳಾ?
ಸಿದ್ದೇಗೌಡರು ಮಾಡಿದ ಒಂದೇ ಒಂದು ಅನಾಹುತದಿಂದ ಇದೀಗ ಇಬ್ಬರ ಜೀವನ ಕೂಡ ನರಕದಂತೆ ಆಗಿದೆ. ಯಾಕಂದ್ರೆ, ಮನೆಯವರಿಗೆ ಯಾರಿಗೂ ಕೂಡ ಈ ಮದುವೆ ಇಷ್ಟವಿಲ್ಲ. ಜವರೇಗೌಡ ಮಾತ್ರ ಭಾವನಾಗೆ ಇಲ್ಲ ಸಲದ ಮಾತುಗಳನ್ನು ಹೇಳಿ ನಿಂದನೆ ಮಾಡುತ್ತಾರೆ.
ಭಾವನಾಗೆ ತಾನು ಮಾಡದ ತಪ್ಪಿಗೆ ತನಗೆ ಇಷ್ಟೆಲ್ಲಾ ನೋವು ನೀಡುತ್ತಿದ್ದಾರೆ. ನಾನು ಅಂತಹ ದೊಡ್ಡ ತಪ್ಪೇನು ಮಾಡಿಲ್ಲ. ನನ್ನಿಂದ ಯಾವುದೇ ತಪ್ಪಾಗಿಲ್ಲ. ಗೊತ್ತಿಲ್ಲದೆ ತನಗೆ ತಾಳಿ ಕಟ್ಟಿ ತನ್ನ ಬಾಳನ್ನೇ ಹಾಳು ಮಾಡಿ, ಇದೀಗ ಏನೆಲ್ಲ ಮಾತುಗಳನ್ನು ಕೇಳಿಸಿಕೊಳ್ಳಬೇಕು ಎನ್ನುವ ಬೇಸರ ಆಕೆಗೆ.

ಭಾವನಾ, ಸಿದ್ದು ಮನೆಗೆ ಬಂದ ಬಳಿಕ ಆತನ ಮನೆಯಲ್ಲಿ ಒಪ್ಪೊತ್ತಿನ ಊಟ ಕೂಡ ಹಾಕಿರಲಿಕ್ಕಿಲ್ಲ. ಆದರೆ ಭಾವನೆಗೆ ಮಾತ್ರ ತನ್ನ ಮಾವ ಹೇಳಿದ ಮಾತುಗಳೇ ಹೊಟ್ಟೆ ತುಂಬಿಸುತ್ತಿದ್ದವು. ಮನೆಯವರಿಗೆ ಅಷ್ಟು ಬೇಡವಾದವಳ ನಾನು ಎಂದು ಬೇಸರವಾಗುತ್ತಿತ್ತು. ತಪ್ಪು ಮಾಡಿದ ಅವರ ಮಗನನ್ನು ನಿಂದಿಸುವುದನ್ನು ಬಿಟ್ಟು, ತಪ್ಪೇ ಮಾಡಿದ ನನ್ನನ್ನು ನಿಂದಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಭಾವನಗೆ ಅನ್ನಿಸುತ್ತಿತ್ತು. ಸಿದ್ದೇಗೌಡರು ತಾನು ಮಾಡಿದ ತಪ್ಪಿಗೆ ಅಂದಿನಿಂದಲೂ ಪಶ್ಚಾತಾಪವನ್ನು ಪಡುತ್ತಿದ್ದಾರೆ. ಆದರೆ ಸಿದ್ದೇಗೌಡರು ಭಾವನಾಳನ್ನು ಮನಸಾರೆ ಪ್ರೀತಿ ಮಾಡುತ್ತಿದ್ದರು.
ಸಿದ್ದೇಗೌಡರಿಗೆ ಇದೀಗ ಭಾವನಾಗೆ ತನ್ನಿಂದಲೇ ನೋವಾಗಿದೆ ಎನ್ನುವುದು ಅರಿವಾಗಿದೆ. ಸಿದ್ದೇಗೌಡರ ಬಳಿ ಜವರೇಗೌಡರು "ಲೇ ಸಿದ್ದೇಗೌಡ ನಿನ್ನ ಹೆಂಡತಿ ಕೆಲಸಕ್ಕೆ ಬೇರೆ ಹೋಗುತ್ತಿದ್ದಾಳೆ. ಅಲ್ಲಿ ಇನ್ನೇನೇನು ಮಾಡಿ ನನ್ನ ಹೆಸರನ್ನು ಕೇಡಿಸುತ್ತಾಳೋ ಏನೋ. ಆಕೆಗೆ ಸುಮ್ಮನೆ ಮನೆಯಲ್ಲಿ ಇರುವುದಕ್ಕೆ ಹೇಳು. ಕೆಲಸಕ್ಕೆ ಅಲ್ಲಿಗೆ ಇಲ್ಲಿಗೆ ಎಲ್ಲಿಗೆ ಹೋಗುವುದು ಬೇಡ. ಯಾಕೆ ಸುಮ್ಮನೆ ಮನೆಯಲ್ಲಿ ಇರಲಿ. ಕೆಲಸಕ್ಕೆ ಹೋಗಿ ನನ್ನ ಮರ್ಯಾದೆಯನ್ನು ಇನ್ನು ತೆಗೆಯುವುದು ಬೇಡ" ಎಂದು ಜವರೇಗೌಡ ಹೇಳಿದಾಗ ಸಿದ್ದೇಗೌಡರಿಗೆ ಒಂದು ಕ್ಷಣ ಏನು ಮಾತನಾಡಬೇಕು ಎಂದೇ ಗೊತ್ತಾಗುವುದಿಲ್ಲ.
ಅಪ್ಪಾಜಿಗೆ ಸಮಾಧಾನ ಮಾಡಿದ ಸಿದ್ದೇಗೌಡ
ಆಗ ಸಿದ್ದೇಗೌಡ "ಅಪ್ಪಾಜಿ ನಾನು ಈಗಾಗಲೇ ಅವರ ಹತ್ತಿರ ಈ ಬಗ್ಗೆ ಮಾತನಾಡಿದ್ದೇನೆ" ಎಂದು ಹೇಳುತ್ತಾನೆ. ಆದರೂ ಜವರೇಗೌಡರು ಮಾತ್ರ ಗತ್ತಿನಿಂದಲೇ ಇನ್ಮೇಲೆ ನಿನ್ನ ಹೆಂಡತಿ ಯಾವ ಕೆಲಸಕ್ಕೂ ಹೋಗು ಅಗತ್ಯವಿಲ್ಲ" ಎಂದು ಹೇಳಿ ಅಲ್ಲಿಂದ ಮೆಲ್ಲ ಎದ್ದು ಹೋಗಬೇಕು ಎನ್ನುವಷ್ಟರಲ್ಲಿ ಭಾವನಾಗೆ ಕಟುವಾಗಿ ಒಂದು ಮಾತು ಹೇಳುತ್ತಾರೆ. ದೊಡ್ಡವರ ಮಕ್ಕಳನ್ನು ಬುಟ್ಟಿಗೆ ಹಾಕಿಕೊಳ್ಳುವ ಕೆಲಸ ಮಾಡುತ್ತಾರೆ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ.

ಮಾವನ ಮಾತಿಗೆ ನೊಂದ ಭಾವನಾ
ಮಾವನ ಆತನ್ನು ಕೇಳಿಸಿಕೊಂಡ ಭಾವನಾಗೆ ಬಹಳ ಬೇಸರವಾಗುತ್ತೆ. ತನ್ನ ಜೀವನ ಮುಂದೇನು ಅನ್ನುವ ಯೋಚನೆ ಆಕೆಗೆ ಮೂಡುತ್ತೆ. ಭಾವನಾ ಬಳಿ ಬಂದಾಗ ಆಕೆಗೆ ತಲೆ ತಿರುಗುವ ಹಾಗೆ ಆಗುತ್ತೆ. ಇದನ್ನು ನೋಡಿದ ಸಿದ್ಧ ಗೌಡಗೆ ಇನ್ನೂ ಆತಂಕ ಆಗುತ್ತದೆ. ಇನ್ನೂ ತಾಯಿಯ ಮನೆಗೆ ಜಾಹ್ನವಿ ಓಡೋಡಿ ಬರುತ್ತಾಳೆ. ಮಗಳನ್ನು ನೋಡಿದ ಮನೆ ಮಂದಿ ಬಹಳ ಖುಷಿ ಪಡುತ್ತಾರೆ. ಮನೆಯಲ್ಲಿ ಅದೆಷ್ಟು ಅವಾಂತರಗಳು ಆಗಿದೆ. ನಾನು ಯಾವಾಗ ಮನೆಗೆ ಹೋಗುವುದು. ಅಕ್ಕನನ್ನು ಯಾವಾಗ ಭೇಟಿ ಮಾಡುವುದು ಎಂದು ಅಂದುಕೊಂಡಿದ್ದೆ. ಇದೀಗ ನನ್ನನ್ನು ನನ್ನ ಗಂಡ ತವರು ಮನೆಗೆ ಕರೆದುಕೊಂಡು ಬಂದರು ಎಂದು ತನ್ನ ತಂದೆಯ ಹೇಳಿ ಜಾಹ್ನವಿ ಹೇಳುತ್ತಾಳೆ.
ಅಮ್ಮನಿಗೆ ಸಮಾಧಾನ ಮಾಡಿದ ಜಾನು
ಲಕ್ಷ್ಮೀ ಮಾತ್ರ ಜಾಹ್ನವಿ ಕೈ ನೋಡಿ ಜಾನು ಇದೇನು ಮಾಡಿಕೊಂಡಿರುವೆ ಎಂದಾಗ ಆಕೆಯ ಗಂಡನಿಗೆ ಕೊಂಚ ಭಯ ಆಗುತ್ತದೆ. ಎಲ್ಲಾದರೂ ಜಾಹ್ನವಿ ನಿಜ ವಿಚಾರವನ್ನು ಹೇಳುತ್ತಾಳೆ ಎನ್ನುವ ಅಳುಕು ಆತನಿಗೆ ಹೆಚ್ಚಾಗುತ್ತೆ.


Click it and Unblock the Notifications










