Lakshmi Nivasa:ಖುಷಿಯನ್ನು ಕಂಡು ದುಃಖ ಮರೆತ ಭಾವನಾ; ಹೆಂಡ್ತಿ ನೋವಿಗೆ 'ಖುಷಿ' ನೇ ಔಷಧಿ!
ಜವರೇಗೌಡ ಆಡಿದ ಮಾತಿನಿಂದ ಭಾವನಾಗೆ ಬಹಳ ನೋವು ಆಗಿದೆ. ಯಾರ ಜೊತೆಗೂ ಮಾತನಾಡದೆ ಸುಮ್ಮನೇ ಇದ್ದಾಳೆ. ಸಿದ್ದೇಗೌಡರು ಕೂಡ ಆಕೆಯನ್ನು ಸಮಾಧಾನ ಮಾಡಲು ಪ್ರಯತ್ನ ಪಡುತ್ತಾರೆ. ಆದರೆ, ಭಾವನಾ ಮಾತ್ರ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರುವುದಿಲ್ಲ. ಆಕೆಗೆ ತಾನು ಮಾಡಿದ ತಪ್ಪಿಗೆ ಎಂತಹ ಪರಿಸ್ಥಿತಿ ಬಂತು? ಇಂತಹ ಮಾತುಗಳನ್ನು ಯಾಕೆ ಕೇಳಿಸಿಕೊಳ್ಳಬೇಕು ಎನ್ನುವ ಆಲೋಚನೆಯಲ್ಲಿ ಇದ್ದಾಳೆ.
ಆಕೆಗೆ ಯಾವ ರೀತಿ ಸಮಾಧಾನ ಮಾಡಬೇಕೆನ್ನುವುದು ಮಾತ್ರ ಸಿದ್ದೇಗೌಡರಿಗೆ ಗೊತ್ತಾಗುವುದಿಲ್ಲ. ಕೊನೆಗೆ ಖುಷಿ ಜೊತೆ ಇದ್ದರೆ, ಭಾವನಾಗೆ ಕೊಂಚ ಸಮಾಧಾನ ಆಗಬಹುದು ಎನ್ನುವ ಕಾರಣಕ್ಕಾಗಿ ಖುಷಿಯನ್ನು ಹೇಗಾದರೂ ಮಾಡಿ ಈ ಮನೆಗೆ ಕರೆದುಕೊಂಡು ಬರಬೇಕು ಅಂದುಕೊಳ್ಳುತ್ತಾನೆ. ಇನ್ನು ಖುಷಿ ಸ್ಕೂಲ್ ಅಲ್ಲಿ ಇರಬೇಕಾದರೆ ಆಕೆಯನ್ನು ಕಿಡ್ನಾಪ್ ಮಾಡುವ ಕೆಲಸ ಕೂಡ ಆಗುತ್ತದೆ.

ಆದರೆ, ಖುಷಿ ಮಾತ್ರ ನನ್ನನ್ನು ಕರೆದುಕೊಂಡು ಹೋಗಲು ವೆಂಕಿ ಮಾಮ ಬರುತ್ತಾರೆ. ನಾನು ಯಾರ ಜೊತೆಯೂ ಬರುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾಳೆ. ಆ ರೌಡಿ ಮಾತ್ರ ನನ್ನನ್ನು ಭಾವನಾ ಅಮ್ಮ ಕಳುಹಿಸಿದ್ದು, ನಿನ್ನನ್ನು ಆಕೆಯ ಮನೆಗೆ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ. ಅದಕ್ಕೋಸ್ಕರ ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಹೇಳಿದಾಗಲೂ ಖುಷಿ ಆತನ ಮಾತನ್ನು ಕೇಳುವುದಿಲ್ಲ.
ಆ ವೇಳೆ ರೌಡಿ ಖುಷಿಯನ್ನು ಒತ್ತಾಯ ಮಾಡುತ್ತಿರಬೇಕಾದರೇ ಅಲ್ಲಿಗೆ ಸಿದ್ದೇ ಗೌಡರು ಬರುತ್ತಾರೆ. ಸಿದ್ದೇಗೌಡರು ಆ ರೌಡಿಯ ಕೈಯನ್ನು ಹಿಡಿದುಕೊಂಡು "ನೀನು ಯಾರು? ಯಾಕೆ ಇಷ್ಟಕೊಂದು ಮಾತನಾಡುತ್ತಿದ್ದೀಯ? ಎಂದು ಕೇಳಿದಾಗ, ಆ ರೌಡಿ ಸಿದ್ದೇಗೌಡರನ್ನು ನೋಡಿ ಓಡಿ ಹೋಗುತ್ತಾನೆ.

ಇನ್ನು ಖುಷಿಯನ್ನ ಸಿದ್ದೇಗೌಡರು ಮನೆಗೆ ಕರೆದುಕೊಂಡು ಬರುತ್ತಾರೆ. ಖುಷಿಗೆ ಭಾವನಾ ಅಮ್ಮನನ್ನು ನೋಡಿ ಬಹಳ ಖುಷಿ ಆಗುತ್ತೆ. ಭಾವನಾಳನ್ನು ನೋಡಿ ಖುಷಿಗೂ ಕೂಡ ಬಹಳ ಸಂತೋಷ. ಖುಷಿಯನ್ನು ನೋಡಿ ಓಡೋಡಿ ಬಂದು ಭಾವನಾ ಆಕೆಯನ್ನು ತಬ್ಬಿ ಕೊಳ್ಳುತ್ತಾಳೆ. ಇನ್ನು ಖುಷಿಗೆ ಭಾವನಾಳನ್ನು ನೋಡಿ "ನೀವು ಯಾಕೆ ಏನು ಊಟ ತಿಂಡಿ ಏನು ಮಾಡುತ್ತಿಲ್ಲ? ಊಟ ತಿಂಡಿ ಮಾಡದೆ, ನೀವು ಸೊರಗಿ ಹೋಗಿದ್ದೀರ" ಎಂದು ಖುಷಿ ಹೇಳುತ್ತಾಳೆ. ಈ ಮಾತಿಗೆ ಭಾವನಾ ಏನು ಮಾತನಾಡಿದೆ ಸುಮ್ಮನಾಗುತ್ತಾಳೆ.
ಖುಷಿಯನ್ನು ಸಿದ್ದೇಗೌಡರು ಕರೆದುಕೊಂಡು ಬಂದಿರುವುದು ಎಂದು ಭಾವನಾಗೆ ತಿಳಿಯುತ್ತೆ. ಇನ್ನು ಖುಷಿ ಒಂದು ಡಬ್ಬಿಯನ್ನು ಭಾವನಾ ಮುಂದೆ ಇಟ್ಟು, ಇದನ್ನು ನೀವು ತಿನ್ನಿ ಎಂದು ಹೇಳುತ್ತಾಳೆ. ಆಗ ಭಾವನಾ "ನೀನು ಈ ಡಬ್ಬದಲ್ಲಿರುವ ಅನ್ನವನ್ನು ಇನ್ನೂ ಯಾಕೆ ಖಾಲಿ ಮಾಡಿಲ್ಲ. ನೀನು ಹಾಗೆಲ್ಲ ಮಾಡಬಾರದು" ಎಂದು ಹೇಳುತ್ತಾಳೆ. ಆಗ ಖುಷಿ "ಅಮ್ಮ ನೀನು ಇಲ್ಲದೆ ನನಗೆ ಯಾವುದೇ ಊಟ ಸೇರುತ್ತಿಲ್ಲ. ನಿದ್ದೆ ಮಾಡಬೇಕೆಂದು ಅನಿಸುವುದಿಲ್ಲ" ಎಂದು ಹೇಳುತ್ತಾಳೆ. ಆ ವೇಳೆ ಭಾವನಾ ಕಣ್ಣಂಚಲ್ಲಿ ನೀರು ಕಾಣಿಸುತ್ತೆ. ಇದೆಲ್ಲವನ್ನೂ ಸಿದ್ದೇಗೌಡರು ಮರೆಯಲಿ ನಿಂತು ನೋಡುತ್ತಾರೆ.


Click it and Unblock the Notifications











