Lakshmi Nivasa: ಶ್ರೀನಿವಾಸ ಪಿಎಫ್ ಹಣಕ್ಕೂ ಕಣ್ಣು; ತಂದೆ ಹಣಕ್ಕೆ ಆಸೆ ಬಿದ್ದ ಮಗನ ಅಸಲಿ ಆಟ ಇನ್ನೂ ಶುರು?
ಶ್ರೀನಿವಾಸ ತಾನು ಬಾಡಿಗೆ ಓಡಿಸಿಕೊಂಡು ಹೇಗೋ ಮನೆ ನಿಭಾಯಿಸುತ್ತಿರುತ್ತಾರೆ. ತನ್ನ ಮಗಳು ಭಾವನಾಗೆ ಮದುವೆ ಮಾಡಬೇಕು. ಆಕೆಗೆ ಒಂದು ಸುಂದರವಾದ ನೆಲೆಯನ್ನು ಕಲ್ಪಿಸಬೇಕು ಎಂದುಕೊಂಡಿರುತ್ತಾರೆ. ಆದರೆ, ಭಾವನಾ ಮದುವೆ ಆದ ಬಳಿಕ ಸುಂದರವಾಗಿ ಮನೆಯನ್ನು ಕಟ್ಟಿಸಬೇಕು ಎಂದು ಕೊಂಡಿರುತ್ತಾರೆ. ಆದರೆ, ಅಚಾನಕ್ ಆಗಿ ಭಾವನಾ ಮದುವೆ ನಡೆದು ಹೋಗುತ್ತದೆ.
ಇನ್ನು ಶ್ರೀನಿವಾಸ ಹಾಗೂ ಲಕ್ಷ್ಮೀಗೆ ಇರುವ ಒಂದೇ ಕನಸು ಅದೇನೆಂದರೆ ಸುಂದರವಾದ ಮನೆ ಕಟ್ಟಬೇಕು. ಮಕ್ಕಳು ಅವರ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಅವರೆಲ್ಲರೂ ಚೆನ್ನಾಗಿ ಇದ್ದರೆ ನಾವು ಚೆನ್ನಾಗಿ ಇರಬಹುದು ಅಲ್ವಾ ಎಂದು ಮಾತನಾಡಿಕೊಳ್ಳುತ್ತಿದ್ದರು. ಇತ್ತ ಭಾವನಾಗೆ ಮಾತ್ರ ಮಾವನ ಮನೆಯಲ್ಲಿ ಕಿರುಕುಳ ತಪ್ಪಿದ್ದಲ್ಲ. ತಾನು ಏನೇ ಮಾಡಲು ಹೋದರು ಅದೆಲ್ಲದರಲ್ಲಿ ಆಕೆಯ ತಪ್ಪನ್ನು ಹುಡುಕುತ್ತಾರೆ.

ಭಾವನಾ ಸ್ವಲ್ಪ ದಿನದ ಮಟ್ಟಿಗೆ ಆಕೆಯ ಮುದ್ದಿನ ಮಗಳನ್ನು ಮನೆಯಲ್ಲಿ ಬಿಟ್ಟು ಹೋಗುತ್ತಾಳೆ. ಯಾಕೆಂದರೆ ಸಿದ್ದೇ ಗೌಡರ ಮನೆಯಲ್ಲಿ ಖುಷಿಗೆ ಯಾವುದೇ ತೊಂದರೆ ಆಗಬಾರದು. ಹಾಗೆಯೇ ತಾನು ಮನೆಯಿಂದ ಕೆಲಸಕ್ಕೆ ಎಂದು ಹೋದ ಬಳಿಕ ಖುಷಿಯನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವ ಸಣ್ಣ ಅಳುಕು ಆಕೆಗೆ ಇರುತ್ತದೆ. ಅದಕ್ಕಾಗಿ ಸ್ವಲ್ಪ ದಿನದ ಮಟ್ಟಿಗೆ ಖುಷಿಯನ್ನು ಮನೆಯಲ್ಲಿಯೇ ಬಿಟ್ಟು ಭಾರವಾದ ಮನಸ್ಸಿನಿಂದ ಹೊರಟು ಹೋಗುತ್ತಾಳೆ. ಮರುದಿನ ಸಿದ್ದೇ ಗೌಡರ ಮನೆಯಿಂದ ಭಾವನಾ ಕೆಲಸಕ್ಕೆ ಎಂದು ಹೋಗಲು ರೆಡಿಯಾಗುತ್ತಾಳೆ.
ಇನ್ನೇನು ಭಾವನಾ ಕೆಲಸಕ್ಕೆ ಹೊರಡಲು ರೆಡಿಯಾಗುವಾಗಲೇ ಕೆಲಸ ಬಿಡು ಎಂದು ನಯವಾಗಿ ಹೇಳಲಾಗುತ್ತೆ. ಇದು ಭಾವನಾಗೆ ಬಹಳ ಬೇಸರ ತರಿಸುತ್ತೆ. ತಾನು ಅಂದುಕೊಂಡಿದ್ದು ಒಂದು. ಆಗುತ್ತಿರುವುದು ಇನ್ನೊಂದು. ತನಗೆ ಇದೀಗ ಕೆಲಸಕ್ಕೆ ಹೋಗುವ ಅನಿವಾರ್ಯ ಪರಿಸ್ಥಿತಿ ಬಂದಿದೆ. ಆದ ಕಾರಣ ನಾನು ಕೆಲಸಕ್ಕೆ ಹೋಗಲೇ ಬೇಕಾಗಿದೆ. ನನ್ನನ್ನು ದಯಮಾಡಿ ತಡೆಯಬೇಡಿ ಎಂದು ಹೇಳುತ್ತಾಳೆ. ಇದೆಲ್ಲವನ್ನು ಕೇಳಿಸಿಕೊಂಡ ಜವರೇಗೌಡರು ಕೊಂಕಿನಿಂದ ಭಾವನಾ ಬಗ್ಗೆ ಮಾತನಾಡುತ್ತಾರೆ. ಆಕೆ ಜವರೇಗೌಡರ ಮಾತನ್ನು ಲೆಕ್ಕಿಸದೆ ಅಲ್ಲಿಂದ ನೇರವಾಗಿ ಕೆಲಸಕ್ಕೆ ಹೋಗುತ್ತಾಳೆ. ಇನ್ನು ಭಾವನಾ ಅಕ್ಕನಿಗೆ ಕೂಡ ಇದೆ ಬೇಕಾಗಿತ್ತು ಎಂದು ಅನ್ನಿಸುತ್ತದೆ.

ಹೆಂಡತಿಯ ಸಲಹೆ ತೆಗೆದುಕೊಂಡ ಶ್ರೀನಿವಾಸ್
ಇತ್ತ ಶ್ರೀನಿವಾಸ ತಾನು ಬಾಡಿಗೆ ಮಾಡುತ್ತಿರುವಾಗ ಆಟೋ ಸಡನ್ ಆಗಿ ಕೆಟ್ಟು ಹೋಗುತ್ತದೆ. ಕೆಟ್ಟು ಹೋಗಿರುವ ಆಟೋವನ್ನು ನೋಡಿದ ಶ್ರೀನಿವಾಸ್‌ಗೆ ಕಸ್ಟಮರ್ ಸರಿಯಾಗಿ ಬಯ್ಯುತ್ತಾರೆ. ಮನೆಗೆ ಬಂದ ಶ್ರೀನಿವಾಸ್ ಸಪ್ಪೆ ಮುಖವನ್ನು ನೋಡಿದ ಲಕ್ಷ್ಮೀಗೆ ಮಾತ್ರ ಏನಾಯಿತು ಎನ್ನುವ ವಿಚಾರ ಗೊತ್ತಾಗಬೇಕಾಗಿತ್ತು. ಶ್ರೀನಿವಾಸ್ ನಡೆದ ವಿಚಾರವನ್ನು ಹೆಂಡತಿ ಬಳಿ ಪ್ರಸ್ತಾಪ ಮಾಡಿದಾಗ ಲಕ್ಷ್ಮೀ ಪಿಎಪ್ ಹಣ ಇದೆಯಲ್ವ. ಅದರಲ್ಲಿ ಹೊಸ ಆಟೋ ತೆಗೆದುಕೊಳ್ಳೋಣ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಶ್ರೀನಿವಾಸ್ ಕೂಡ ಲಕ್ಷ್ಮೀ ಮಾತಿಗೆ ತಲೆದೂಗುತ್ತಾರೆ.
ಬ್ಯಾಂಕ್‌ನಲ್ಲಿ ತಂದೆ ನೋಡಿ ಅನುಮಾನ
ಶ್ರೀನಿವಾಸ್ ಬ್ಯಾಂಕ್‌ಗೆ ಪಾಸ್ ಬುಕ್ ಹಿಡಿದು ಬರುತ್ತಾರೆ. ಇದನ್ನು ನೋಡಿದ ಸಂತೋಷ್ ಅಪ್ಪ ಬ್ಯಾಂಕ್‌ಗೆ ಏಕೆ ಬಂದಿದ್ದಾರೆ. ಅವರ ಪಾಸ್ ಬುಕ್ ನೋಡಿದರೆ ಅವರ ಬಳಿ ಎಷ್ಟು ದುಡ್ಡಿದೆ ಎನ್ನುವ ವಿಚಾರ ತಿಳಿದುಕೊಂಡಿರುತ್ತಾನೆ ಇರುತ್ತಾನೆ. ಹಾಗೆಯೇ ಶ್ರೀನಿವಾಸ್‌ಗೆ ಪಿಎಫ್ ಎಷ್ಟು ಬಂದಿದೆ ಎನ್ನುವ ವಿಚಾರ ಆತನ ಹಿರಿಯ ಮಗ ಸಂತೋಷ್‌ಗೆ ತಿಳಿಯುತ್ತೆ. ಆಗ ತನ್ನ ತಂದೆಯ ಬಳಿ ಇರುವ ಹಣವನ್ನು ಹೇಗಪ್ಪಾ ತೆಗೆದುಕೊಳ್ಳುವುದು ಎಂದು ಆಲೋಚನೆ ಮಾಡುತ್ತಾನೆ.
ಜಾಹ್ನವಿಗೆ ಮೊಲದ ಮರಿ ತಂದುಕೊಟ್ಟ ಜಯಂತ್
ಆತನಿಗೆ ತನ್ನ ತಂದೆ ತಾಯಿ ಎನ್ನುವ ಮಮಕಾರ ಕಿಂಚಿತ್ತು ಇರುವುದಿಲ್ಲ. ಆತ ಆಡಿದ್ದೇ ಆಟ. ಇದೆಲ್ಲವನ್ನೂ ನೋಡಿದ ಪ್ರೇಕ್ಷಕರಿಗೆ ಮಾತ್ರ ಬಹಳ ಬೇಸರ ತರಿಸಿದೆ. ಇತ್ತ ಜಯಂತ್ ಕೂಡ ಜಾಹ್ನವಿ ಜೀವನದಲ್ಲಿ ಚೆಲ್ಲಾಟ ಆಡುತ್ತಿದ್ದಾನೆ ಎಂದು ಅನ್ನಿಸುತ್ತಿದೆ. ಆಕೆ ಯಾರನ್ನು ಇಷ್ಟ ಪಟ್ಟು ಮಾತನಾಡಿದರು ಅವರು ಜೀವಂತವಾಗಿರಲು ಜಯಂತ್ ಬಿಡುತ್ತಿಲ್ಲ. ಇದೀಗ ಜಾಹ್ನವಿಗೆ ಮುದ್ದಾದ ಮೊಲದ ಮರಿಯನ್ನು ತಂದುಕೊಟ್ಟಿದ್ದಾನೆ.


Click it and Unblock the Notifications











