Lakshmi Nivasa ; ಖುಷಿಯನ್ನು ಕಾಣದೆ ಕಂಗಾಲಾದ ಭಾವನ, ಹೆಂಡತಿಯನ್ನು ಸಮಾಧಾನ ಮಾಡಲು ಸಿದ್ದೇಗೌಡ ಹರಸಾಹಸ..!
ಭಾವನಳಿಂದ ಖುಷಿಯನ್ನು ಸೌಪರ್ಣಿಕಾ ಹಾಗೂ ರವಿ ಇಬ್ಬರು ಸೇರಿ ದೂರ ಮಾಡಿದ್ದಾರೆ. ಸೌಪರ್ಣಿಕಾ ಗೆ ತನ್ನ ಅಣ್ಣ ನ ಮಗಳ ಮೇಲೆ ಎಳ್ಳಷ್ಟೂ ಪ್ರೀತಿ ಇಲ್ಲ. ಆದರೆ ಆಸ್ತಿಗಾಗಿ ತನ್ನ ಅಣ್ಣನ ಮಗುವನ್ನು ಹೇಗಾದರೂ ಮಾಡಿ ನನ್ನ ಕೈ ವಶ ಮಾಡಿಕೊಳ್ಳಬೇಕು. ಇಲ್ಲವಾದರೆ ಖಂಡಿತವಾಗಿ ನನಗೆ ಆಸ್ತಿಯೆಲ್ಲ ಕೈ ತಪ್ಪಿ ಹೋಗುತ್ತೆ ಎನ್ನುವುದು ಸೌಪರ್ಣಿಕಾ ಗೆ ತಿಳಿದಿದೆ. ಭಾವನ ಗೆ ಮದುವೆ ಆಗಿದೆ ಇನ್ನೂ ಮೇಲೆ ಖುಷಿ ನಮ್ಮವಳೇ ಎಂದು ಸೌಪರ್ಣಿಕಾ ಭಾವನ ತವರು ಮನೆಗೆ ಬಂದು ಖುಷಿಯನ್ನು ಕರೆದುಕೊಂಡು ಹೋಗಿದ್ದಾಳೆ. ಆದರೆ ಈ ವಿಚಾರವನ್ನು ಲಕ್ಷ್ಮೀ ಮನೆಯವರು ಭಾವನ ಬಳಿ ಹೇಳಲೇ ಇಲ್ಲ. ರಾತ್ರಿ ಭಾವನಗೆ ಖುಷಿ ಯಾಕೋ ಅಪಾಯಕ್ಕೆ ಸಿಲುಕಿದ್ದಾಳೆ ಏನೋ ಎನ್ನುವ ಯೋಚನೆ ಶುರು ಆಗುತ್ತದೆ. ಖುಷಿ ನಿದ್ದೆ ಗಣ್ಣಲ್ಲಿ ಭಾವನ ಅಮ್ಮ ಎಂದು ಕನವರಿಸುತ್ತಿರುತ್ತಾಳೆ.
ಆಕೆಗೆ ಭಾವನ ಎಂದರೆ ಬಹಳಷ್ಟು ಪ್ರೀತಿ. ಭಾವನ ಖುಷಿಯನ್ನು ಮನೆಯಲ್ಲಿ ಬಿಟ್ಟು ಹೋಗಿರುತ್ತಾಳೆ. ಗಂಡನ ಮನೆಯ ವಾತಾವರಣ ಕೊಂಚ ತಿಳಿಯಾದ ಬಳಿಕ ಖುಷಿಯನ್ನು ಮನೆಯಲ್ಲಿಯೇ ಇಟ್ಟುಕೊಳ್ಳಬೇಕು ಎನ್ನುವ ಯೋಚನೆ ಆಕೆಗೆ ಬಹಳಷ್ಟು ಇರುತ್ತದೆ. ಆದರೆ ಭಾವನಗೆ ರಾತ್ರೋ ರಾತ್ರಿ ಯಾಕೋ ಖುಷಿ ನೆನಪಾಗಿ ಬಿಡುತ್ತಾಳೆ. ಭಾವನ ಬೆಚ್ಚಿ ಬೀಳುವುದನ್ನು ನೋಡಿದ ಸಿದ್ದೆ ಗೌಡರು ಯಾಕೆ ಏನಾಯಿತು ಎಂದು ಕೇಳಿದಾಗ ಖುಷಿ ಯಾಕೋ ಅಪಾಯದಲ್ಲಿ ಇದ್ದಾಳೆ ಎಂದು ನನಗೆ ಅನ್ನಿಸುತ್ತಿದೆ ಅದಕ್ಕೆ ನಾನು ಮನೆಗೆ ಹೋಗಿ ಅವಳನ್ನು ನೋಡಿಕೊಂಡು ಬರುವುದಾಗಿ ಹೇಳಿದಾಗ ಸಿದ್ದೆ ಗೌಡ್ರು ಭಾವನಳನ್ನು ಬಹಳಷ್ಟು ಸಮಾಧಾನ ಮಾಡಲು ನೋಡುತ್ತಾರೆ.

ಆದರೆ ಅದ್ಯಾಕೋ ಭಾವನ ಯಾರ ಮಾತನ್ನೂ ಕೇಳಲು ರೆಡಿ ಇರುವುದು ಇಲ್ಲ. ಆಕೆಗೆ ಖುಷಿಯೇ ಮುಖ್ಯ ಆಗಿತ್ತು. ಭಾವನಳನ್ನು ತಡೆಯುವಲ್ಲಿ ಅಸಾಯಕರಾಗಿ ಬಿಟ್ಟಿದ್ದರು ಸಿದ್ದೇ ಗೌಡ. ಇತ್ತ ಲಕ್ಷ್ಮೀ ಹಾಗೂ ಶ್ರೀನಿವಾಸ ರಾಯರು ಅಸಹಾಯಕರಾಗಿ ಬಿಟ್ಟಿದ್ದರು. ಅವರಿಗೆ ಖುಷಿಯನ್ನು ಸೌಪರ್ಣಿಕಾ ಕರೆದುಕೊಂಡು ಹೋಗಿರುವುದನ್ನು ಭಾವನ ಬಳಿ ಹೇಳಲು ಆಗದೆ ಪರದಾಡುತ್ತಿದ್ದಾರೆ. ಆದರೆ ಸಂತೋಷ್ ಮಾತ್ರ ನಮಗೆ ಇದ್ದ ತಲೆ ಬಿಸಿ ಕಡಿಮೆ ಆಯಿತು ಎನ್ನುವ ಹಾಗೆ ಮಾತನಾಡುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಸಂತೋಷ್ ಮಾಡುತ್ತಿರುವ ಯಾವುದೇ ಕೆಲಸ ಮನೆ ಮಂದಿಗೆ ಇಷ್ಟ ಆಗುತ್ತಿಲ್ಲ.
ಖುಷಿಯನ್ನು ನೋಡದೆ ಮಂಕಾದ ಲಕ್ಷ್ಮೀ, ಶ್ರೀನಿವಾಸ್
ಆದರೂ ಅದೆಲ್ಲವನ್ನೂ ಸಹಿಸಿಕೊಂಡು ಲಕ್ಷ್ಮೀ ಹಾಗೂ ಶ್ರೀನಿವಾಸ್ ಇದ್ದಾರೆ. ಇತ್ತ ಜಾಹ್ನವಿ ಬಹಳ ಮಂಕಾಗಿ ಇರುತ್ತಾಳೆ. ಆಕೆಗೆ ತನ್ನ ಅಣ್ಣ ವೆಂಕಿ ಮನೆ ಬಿಟ್ಟು ಹೋಗಿರುವುದೇ ಬಹಳ ದೊಡ್ಡ ಚಿಂತೆ ಆಗಿಬಿಟ್ಟಿದೆ. ವೆಂಕಿ ಅಣ್ಣ ಎಷ್ಟು ಒಳ್ಳೆಯವನು ಅವನಿಗೆ ಯಾಕೆ ಹೀಗೆಲ್ಲ ಆಗುತ್ತಿದೆ. ಯಾವತ್ತೂ ಯಾರನ್ನು ಒಂದು ಪದ ಬಯ್ದವನು ಅಲ್ಲ ಎಂದೆಲ್ಲ ಮನದಲ್ಲಿಯೇ ಕೊಡಗುತ್ತಿರುತ್ತಾಳೆ. ಜಾಹ್ನವಿ ಗರ್ಭಿಣಿ ಆಗಿರುವ ಕಾರಣ ಜಯಂತ್ ಅವಳನ್ನು ಬಹಳ ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದ. ಮೊದಲೆಲ್ಲ ನನಗೆ ಮಗು ಬೇಡ ಎಂದು ಹೇಳುತ್ತಿದ್ದ ಜಯಂತ್ ಇದೀಗ ಜಾಹ್ನವಿ ಖುಷಿಗಾಗಿ ಎನು ಬೇಕಾದರೂ ಮಾಡಲು ತಯಾರಾಗಿ ಇರುತ್ತಾನೆ.
ಜಾಹ್ನವಿ ಗೆ ಗಿಫ್ಟ್ ನೋಡಿದ ವಿಶ್ವ
ಆದರೆ ವಿಶ್ವನಿಗೆ ಇದೀಗ ಜಾಹ್ನವಿ ತಾಯಿ ಆಗುತ್ತಿರುವ ವಿಚಾರ ತಿಳಿದಿದೆ. ಆದರೆ ಜಾಹ್ನವೀಯನ್ನು ಮೀಟ್ ಮಾಡುವಷ್ಟು ಧೈರ್ಯ ವಿಶ್ವನಿಗೆ ಇಲ್ಲ. ಆತನಿಗೆ ಜಾನು ಚೆನ್ನಾಗಿ ಇರಬೇಕು ಎನ್ನುವ ಆಸೆ ಬಹಳವಾಗಿ ಇರುತ್ತದೆ. ಜಾಹ್ನವಿ ಖುಷಿಯಾಗಿದ್ದರೆ ನಾನು ಚೆನ್ನಾಗಿ ಇರುತ್ತೇನೆ ಎನ್ನುವ ಯೋಚನೆ. ಇದೀಗ ಜಾಹ್ನವಿಗೆ ಇದೀಗ ಗೊಂಬೆಯನ್ನು ನೋಡಿ ಬಹಳ ಖುಷಿಯಾಗಿದೆ.


Click it and Unblock the Notifications











