Lakshmi nivasa ; ನೀರಿಗೆ ಬಿದ್ದ ಜಾಹ್ನವಿ ಹುಡುಕಾಟದಲ್ಲಿ ಜಯಂತ್,ಹೆಂಡತಿಗಾಗಿ ಮಿಡಿಯುತ್ತಿದೆ ಮನಸ್ಸು..!

By ಪೂರ್ವ

ಜಾಹ್ನವಿಯನ್ನು ಜಯಂತ್ ಪ್ರೇಮಿಸಿ ಮದುವೆಯಾಗುತ್ತಾನೆ. ಆದರೆ ಜಾಹ್ನವಿಯನ್ನು ಮದುವೆಯಾಗಿ ಸ್ವಲ್ಪ ಸಮಯ ಚೆನ್ನಾಗಿಯೇ ಜೀವನ ಸಾಗಿಸುತ್ತಿರುತ್ತಾರೆ.ಆದರೆ ಜಯಂತ್ ಗೆ ಜಾಹ್ನವಿ ಮೇಲೆ ಅನುಮಾನ ಹೆಚ್ಚಾಗುತ್ತಲೇ ಹೋಯಿತು. ಜಯಂತ್ ಮನೆಯಲ್ಲಿ ಹೆಂಡತಿ ಚಲನವಲನವನ್ನು ವೀಕ್ಷಿಸಲು ಸಿಸಿ ಕ್ಯಾಮರ ಹಾಕಲಾಗುತ್ತದೆ.ಜಯಂತ್ ಬಗ್ಗೆ ಎಲ್ಲಾ ವಿಚಾರವೂ ಕೂಡ ಅಜ್ಜಿಗೆ ತಿಳಿದಿರುತ್ತದೆ. ಆದರೆ ಅಜ್ಜಿಯನ್ನು ಕೂಡ ಜಯಂತ್ ಕೋಮಾ ಸ್ಥಿತಿಗೆ ತಲುಪಿಸಿ ಬಿಟ್ಟಿರುತ್ತಾನೆ. ಆದರೆ ಜಾಹ್ನವಿಗೆ ಎಲ್ಲಾ ನಿಜ ವಿಚಾರಗಳು ತಿಳಿದು ಬಹಳಷ್ಟು ಕುಗ್ಗಿ ಹೋಗಿರುತ್ತಾಳೆ.

ಸಾಕಷ್ಟು ನೋವು ಅನುಭವಿಸಿರುತ್ತಾಳೆ ಇದೀಗ ಜಾಹ್ನವಿ ಹಾಗೂ ಜಯಂತ್ ಇವರು ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಸಿದ್ದು ಹಾಗೂ ಭಾವನ ಹನಿಮೂನ್ ಮುಗಿಸಿ ಮನೆಗೆ ಬಂದಿದ್ದಾರೆ.ಮನೆಯಲ್ಲಿ ಆರತಿ ಮಾಡಿ ನವ ಜೋಡಿಯನ್ನು ಮನೆಗೆ ವೆಲ್ಕಮ್ ಮಾಡುತ್ತಾರೆ. ಶ್ರೀಕಾಂತ್ ಸಾವಿನ ಬಗ್ಗೆ ಇದೀಗ ಭಾವನೆಗೆ ಬಹಳಷ್ಟು ಕುತೂಹಲ ಹೆಚ್ಚಾಗಿದೆ ಶ್ರೀಕಾಂತನ ಕೊಲೆ ಮಾಡಿದ್ದು ಯಾರು? ಆತನ ಕಾರಿಗೆ ಆಕ್ಸಿಡೆಂಟ್ ಮಾಡಿದವರಾದರು ಯಾರು ಎನ್ನುವ ಪ್ರಶ್ನೆ ಭಾವನಾಳನ್ನು ಕಾಡುತ್ತಿರುತ್ತದೆ ಹೇಗಾದರೂ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಆತನನ್ನ ತಾನು ನೋಡಲೇಬೇಕೆಂದು ಮನದಲ್ಲಿ ಅಂದುಕೊಳ್ಳುತ್ತಾಳೆ.

kannada-serial-lakshmi-nivasa-written-update-02th-april

ಇತ್ತ ಸಿದ್ದೇಗೌಡರು ಕೂಡ ಅದೇ ಪ್ರಯತ್ನದಲ್ಲಿದ್ದಾರೆ.ಒಂದು ವೇಳೆ ವೆಂಕಿಯನ್ನು ಎಲ್ಲರೂ ನೋಡಿದರೆ ಭಾವನ ಮಾತ್ರ ತನ್ನ ಅಣ್ಣ ಇಂತಹ ಕೆಲಸ ಮಾಡಿದ್ದಾನೆ ಎಂದು ನಂಬಲು ಸಾಧ್ಯವೇ ಇಲ್ಲ.ಸಿದ್ದು ಮಾತ್ರ ನಾನೇ ಶ್ರೀಕಾಂತ್ ಸಾವಿಗೆ ಕಾರಣ ಎಂದು ಹೇಳುವ ಚಾನ್ಸ್ ಅಧಿಕವಾಗಿದೆ. ಇತ್ತ ಜಾನು ಹಾಗೂ ಜಯಂತ್ ಹನಿಮೂನ್ ಮೂಡ್ ನಲ್ಲಿದ್ದಾರೆ. ಜಾಹ್ನವಿಗೆ ಜಯಂತ್ ನನ್ನು ಕಂಡರೆ ಬಹಳ ಕೋಪ ಉಕ್ಕಿ ಹರಿಯುತ್ತದೆ. ಆಕೆಗೆ ಸಾಕಷ್ಟು ನೋವು ಕೂಡ ಆಗುತ್ತದೆ. ತನ್ನ ಕರುಳ ಕುಡಿಯನ್ನು ಕೊಂದ ಕೊಲೆಗಾರನ ಜೊತೆಗೆ ಹೇಗಪ್ಪಾ ನಾನು ಜೀವನ ಸಾಗಿಸಲಿ ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಜಯಂತ್ ಜೊತೆಗೆ ಬಹಳ ನಾಟಕೀಯವಾಗಿಯೇ ಇರುತ್ತಾಳೆ.

ಜಾಹ್ನವಿ ಉಪಾಯಕ್ಕೆ ಮರುಳಾದ ಜಯಂತ್

ನಾನು ಕೋಪಗೊಂಡರೆ ಜಯಂತ್ ಕೂಡ ಕೋಪಗೊಳ್ಳುತ್ತಾರೆ. ಆತ ಬಹಳ ಕೋಪ ಮಾಡಿಕೊಂಡರೆ ಖಂಡಿತ ನನ್ನನ್ನು ಸುಮ್ಮನೆ ಮಾತ್ರ ಬಿಡುವುದಿಲ್ಲ ಎಂದು ಆಲೋಚನೆ ಮಾಡುತ್ತಾಳೆ. ಜಯಂತ್ ಗೆಳೆಯ ಹೇಳಿದ ಹಾಗೆ ಮಾಡಲು ಶುರು ಮಾಡುತ್ತಾಳೆ. ಜಯಂತ್ ಗೆಳೆಯ ಜಾಹ್ನವಿ ಬಳಿ ಜಯಂತ ಜೀವಂತವಾಗಿ ಇರುವುದರಿಂದ ಸಾಕಷ್ಟು ಜನರಿಗೆ ತೊಂದರೆ ಆಗುತ್ತಿದೆ ಆತ ಸಾಯಬೇಕು ಆ ಕೆಲಸ ನೀನು ಮಾಡಲೇಬೇಕಾಗಿದೆ ಇಲ್ಲವಾದರೆ ಖಂಡಿತವಾಗಿಯೂ ಆತ ನಿನ್ನನ್ನು ಕೂಡ ಸುಮ್ಮನೆ ಬಿಡುವುದಿಲ್ಲ ನಿನ್ನ ಅಣ್ಣ ಬೆಂಕಿಯ ಗೆಳೆಯ ಜಯಂತ ಆದರೆ ಈ ವಿಚಾರ ಜಯಂತನಿಗೆ ತಿಳಿದಿದೆ ಆದರೆ ವ್ಯಕ್ತಿಯ ಜೊತೆ ಒಂದು ದಿನ ಕೂಡ ಬಂದು ಸರಿಯಾಗಿ ಮಾತನಾಡಲಿಲ್ಲ ಆದರೆ ವೆಂಕಿ ಈಗಲೂ ಜಯಂತ್ ಗಾಗಿ ಹುಡುಕಾಟ ನಡೆಸುತ್ತಿದ್ದಾನೆ ತನ್ನ ಬಾಲ್ಯದ ಗೆಳೆಯ ಎಲ್ಲಿದ್ದಾನೋ ಹೇಗಿದ್ದಾನೋ ಎನ್ನುವ ಯೋಚನೆ ಆತನನ್ನು ಕಾಡಿದೆ ಎಂದು ಜಾಹ್ನವಿಯ ಬಳಿ ಜಯಂತನ ಗೆಳೆಯ ಹೇಳುತ್ತಾನೆ.

ಜಯಂತ್ ಮನದಲ್ಲಿ ನಡುಕ ಶುರು

ಜಾಹ್ನವಿ ಗೆ ಇದೆಲ್ಲ ಕೇಳಿ ಏನು ಮಾಡಬೇಕೆಂದು ತೋಚದೇ ತನ್ನ ಗಂಡನನ್ನು ಸುತ್ತಾಡಲು ಕರೆದುಕೊಂಡು ಹೋಗಲು ಹೇಳುತ್ತಾಳೆ. ಜಾಹ್ನವಿ ಹಾಗೂ ಜಯಂತ್ ಇಬ್ಬರು ಸುತ್ತಾಡುತ್ತಾ ಖುಷಿಯಲ್ಲಿ ಇರುತ್ತಾರೆ. ಇನ್ನು ಬೋಟ್ ನಲ್ಲಿ ಹೋಗಬೇಕಾದರೆ ಜಾಹ್ನವಿ ಹಾಗೂ ಜಯಂತ್ ಬಹಳ ಖುಷಿಯಿಂದ ಮಾತನಾಡುತ್ತಿರುತ್ತಾನೆ. ಕೊನೆಗೆ ಜಯಂತ್ ನನ್ನ ಜಾಹ್ನವಿ ಕಟ್ಟಿ ಹಾಕುತ್ತಾಳೆ. ಆಕೆ ಜೋರಾಗಿ ಅಳುತ್ತಾ ತನ್ನ ದುಃಖವನ್ನು ತೋಡಿಕೊಳ್ಳುತ್ತಾಳೆ. ಯಾಕೆ ಹೀಗೆ ಮಾಡಿದಿರಿ ಎಂದು ಆತನನ್ನು ಪ್ರಶ್ನೆ ಮಾಡುತ್ತಾಳೆ. ಆದರೆ ಜಾಹ್ನವಿ ಏನೋ ತಮಾಷೆ ಮಾಡುತ್ತಿದ್ದಾಳೆ ಎಂದುಕೊಂಡ ಜಯಂತ್ ಗೆ ಬಹಳ ದೊಡ್ಡ ಶಾಕ್ ಎದುರಾಗಿದೆ.

ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಜಾಹ್ನವಿ

ತನ್ನ ಗಂಡನನ್ನು ಕುರ್ಚಿಗೆ ಕಟ್ಟಿ ಹಾಕಿ ತನ್ನೆಲ್ಲ ನೋವನ್ನು ಹೊರ ಹಾಕಿದ್ದಾಳೆ. ಬಳಿಕ ಜಯಂತ್ ನನ್ನು ಕೊಲ್ಲಲು ನೋಡಿದ್ದಾಳೆ ಆದರೆ ಅದು ಸಾಧ್ಯವಾಗದೇ ಕೊನೆಗೆ ಜಾಹ್ನವಿ ನೀರಿಗೆ ಬಿದ್ದು ಕಾಣೆಯಾಗುತ್ತಾಳೆ.ಜಯಂತ್ ಜಾಹ್ನವಿ ನೀರಿಗೆ ಬೀಳುತ್ತಿದ್ದಂತೆ ಜಾಹ್ನವಿ ಕಟ್ಟಿದ ಬಂಧನದಿಂದ ಬಿಡಿಸಿಕೊಂಡು ಓಡೋಡಿ ಬರುತ್ತಾನೆ. ಆದರೆ ಅದಾಗಲೇ ಜಾಹ್ನವಿ ನೀರಿನಲ್ಲಿ ಮುಳುಗಿರುತ್ತಾಳೆ. ಜಾಹ್ನವಿಗಾಗಿ ಸಾಕಷ್ಟು ಹುಡುಕಾಟ ಮಾಡಲಾಗುತ್ತದೆ. ಆದರೆ ಆಕೆಯ ಸುಳಿವೆ ಪತ್ತೆಯಾಗಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X