Lakshmi Nivasa ; ಮನೆ ಬಿಟ್ಟು ಹೊರಟು ಹೋದ ಜಾಹ್ನವಿ,ಹೆಂಡತಿ ಕಾಣದೆ ಹುಚ್ಚಾನಾದ ಜಯಂತ್?

By ಪೂರ್ವ

ಜಾಹ್ನವಿಗೆ ಎಲ್ಲಾ ಸತ್ಯಗಳು ತಿಳಿದು ಹೋಗಿದೆ. ತನ್ನ ಗಂಡ ಬಹಳ ಕ್ರೂರ ಮೃಗ ಎನ್ನುವುದು ಕೂಡ ಗೊತ್ತಾಗಿದೆ. ಆದರೆ ಜಯಂತ್ ಬಗ್ಗೆ ಎಲ್ಲಾ ವಿಚಾರಗಳು ಗೊತ್ತಾದ ಮೇಲೂ ಜಯಂತ್ ಜೊತೆ ಜಾಹ್ನವಿ ಗೆ ಮಾತನಾಡಲು ಕೂಡ ಇಷ್ಟ ಆಗುತ್ತಿರಲಿಲ್ಲ. ಆತನ ಜೊತೆ ಎನು ಮಾತನಾಡಲಿ ಎಂದು ಮನದಲ್ಲಿ ಬಹಳಷ್ಟು ಕೋರೆಯುತ್ತಿರುತ್ತದೆ. ಜಯಂತ್ ಮನೆಯಲ್ಲಿ ಜಾಹ್ನವಿ ಗೆ ಕುಂತರೆ ನಿಂತರೆ ಮಗುವಿದ್ದೆ ಯೋಚನೆ. ಮಗು ಅಮ್ಮ ಎಂದು ಕರೆಯುವ ಕೂಗೆ ಕೇಳಿಸುತ್ತದೆ. ಇದೆಲ್ಲವನ್ನೂ ಕೇಳಿ ಹಾಗೆಯೇ ಯೋಚಿಸಿ ಮನೆಯಿಂದ ದೂರ ನಡೆಯಬೇಕು ಎಂದು ಜಾಹ್ನವಿ ಆಲೋಚಿಸಿ ಮನೆ ಬಿಟ್ಟು ಹೊರಟು ಹೋಗುತ್ತಾಳೆ.

ಜಯಂತ್ ಜೊತೆ ಈ ಮನೆಯಲ್ಲಿರಲು ನನಗೆ ಸಾಧ್ಯವೇ ಇಲ್ಲ. ನಾನು ಯಾವತ್ತೂ ಕೂಡ ಅವರ ಜೊತೆ ಇರಲಾರೇನು ಎನ್ನುವ ನಿರ್ಧಾರವನ್ನು ಜಾಹ್ನವಿ ಮಾಡುತ್ತಾಳೆ. ಜಾಹ್ನವಿ ನಿರ್ಧಾರ ಕ್ಕೆ ಅಭಿಮಾನಿಗಳು ಬಹಳಷ್ಟು ಖುಷಿ ಪಟ್ಟಿದ್ದಾರೆ. ಜಾಹ್ನವಿ ಜಯಂತ್ ನಿಂದಾ ದೂರ ಇದ್ದರೆ ಒಳ್ಳೆಯದು. ಆತನ ಜೊತೆಗೆ ಎಲ್ಲಾದರೂ ಇದ್ದರೆ ಖಂಡಿತವಾಗಿಯೂ ಹುಚ್ಚು ಹಿಡಿಯುವುದು ಮಾತ್ರ ಸತ್ಯ. ಎಂದೆಲ್ಲ ಅಭಿಮಾನಿಗಳು ಜಾಹ್ನವಿ ಗೆ ಜಯಂತ್ ಬಿಟ್ಟು ಹೋಗಿದ್ದಕ್ಕೆ ಖುಷಿ ಪಟ್ಟಿದ್ದಾರೆ. ಜಯಂತ್ ಗೆ ಜಾಹ್ನವಿ ಎಂದರೆ ಬಹಳ ಪ್ರೀತಿ.

kannada-serial-lakshmi-nivasa-written-update-02th-march

ಆಕೆ ಮನೆಯಲ್ಲಿ ಒಂದು ನಿಮಿಷ ಕಾಣಿಸದೆ ಹೋದರೆ ಜಯಂತ್ ತಡೆದುಕೊಳ್ಳುವುದಿಲ್ಲ. ಇದೀಗ ಜಯಂತ್ ಆಫೀಸ್ ಮುಗಿಸಿಕೊಂಡು ಮನೆಗೆ ಬರುತ್ತಾನೆ. ಜಾಹ್ನವಿಯನ್ನು ಪ್ರೀತಿಯಿಂದ ಚಿನ್ನು ಮರಿ ಎಂದು ಕರೆಯುತ್ತಾನೆ. ಬಹಳಷ್ಟು ಬಾರಿ ಕರೆದರೂ ಯಾವುದೇ ರಿಯಾಕ್ಷನ್ ಇಲ್ಲದೆ ಹೋಗಿರುವುದನ್ನು ಕಂಡು ಮನೆ ಎಲ್ಲಾ ಹುಡುಕಾಡುತ್ತಾನೆ. ಜಾಹ್ನವಿ ಎಲ್ಲಿಯೂ ಕಾಣಿಸದೆ ಇರುವುದನ್ನು ಕಂಡು ಗಾಬರಿಗೊಳ್ಳುತ್ತಾನೆ. ಮನೆಯಲ್ಲಿ ಹಾಕಿದ ಸಿಸಿ ಕ್ಯಾಮರ ನೋಡಿದಾಗ ಆತನಿಗೆ ತಿಳಿಯುವುದು ಒಂದೇ ಜಾಹ್ನವಿ ಮನೆ ಬಿಟ್ಟು ಹೋಗಿದ್ದಾಳೆ ಎಂಬುವುದು. ಆ ಕೂಡಲೇ ಜಾಹ್ನವಿಯನ್ನು ಹುಡುಕಿಕೊಂಡು ಮನೆಯಿಂದ ಹೊರ ಹೋಗುತ್ತಾನೆ.

ದೇವಸ್ಥಾನಕ್ಕೆ ತೆರಳಿದ ಜಾಹ್ನವಿ ಗೆ ನೆಮ್ಮದಿ ಸಿಗುತ್ತಾ?

ಜಾಹ್ನವಿಗೆ ತಾನೆಲ್ಲೇ ಹೋದರು ಖಂಡಿತವಾಗಿಯೂ ತನ್ನ ಗಂಡ ಹುಡುಕಿಕೊಂಡು ಬರುತ್ತಾರೆ. ಅವರು ಬಾರದೆ ಇರುವ ಜಾಗಕ್ಕೆ ನಾನು ಹೋಗಬೇಕು ಎಂದುಕೊಂಡು ನೆಮ್ಮದಿ ಎಲ್ಲಿ ಸಿಗುತ್ತೋ ಆ ಜಾಗಕ್ಕೆ ತೆರಳುತ್ತಾಳೆ. ಶಿವನ ಹಾಡು ಕೇಳಿ ಜಾಹ್ನವಿ ಗೆ ಬಹಳಷ್ಟು ಖುಷಿ ಆಗುತ್ತದೆ ಮನಸ್ಸಿಗೆ ನೆಮ್ಮದಿ ಅನ್ನಿಸುತ್ತದೆ. ಕೊಂಚ ದೂರ ಹೋದಾಗ ಅಲ್ಲಿಯೇ ಮರದ ಅಡಿಯಲ್ಲಿ ಸ್ವಾಮೀಜಿಯೊಬ್ಬರು ಕುಳಿತುಕೊಂಡಿರುತ್ತಾರೆ. ಸ್ವಾಮೀಜಿಯನ್ನು ನೋಡಿ ಅವರ ಬಳಿಗೆ ಜಾಹ್ನವಿ ಬರುತ್ತಾಳೆ. ಜಾಹ್ನವಿ ಮುಖವನ್ನು ಗಮನಿಸಿದ ಸ್ವಾಮೀಜಿ ಮುಗುಳುನಾಗುತ್ತಾರೆ.

ನೋವನ್ನು ಸ್ವಾಮೀಜಿ ಬಳಿ ತೋಡಿಕೊಂಡ ಜಾಹ್ನವಿ

ತನ್ನ ನೋವನ್ನು ಸ್ವಾಮೀಜಿ ಗೆ ಹೇಳಿದಾಗ ಸ್ವಾಮೀಜಿ ಹೇಳುತ್ತಾರೆ. ಮಗಳೇ ಸಾವು ಎನ್ನುವುದು ಒಂದು ಜನ್ಮದ ಅಂತ್ಯ. ಇನ್ನೊಂದು ಜನ್ಮದ ಉಗಮ ಎಂದು ಹೇಳುತ್ತಾರೆ ಸ್ವಾಮೀಜಿ ಬಳಿ ಮಾತನಾಡಿಕೊಂಡು ಕಾಲ ಕಳೆಯುತ್ತಾಳೆ. ಆದರೆ ಜಯಂತ್ ಮಾತ್ರ ಜಾಹ್ನವಿ ಸಿಗದೇ ಒದ್ದಾಡುತ್ತಿದ್ದಾನೆ. ಇತ್ತ ಭಾವನ ಶ್ರೀಕಾಂತ್ ಸಾವಿಗೆ ಕಾರಣ ಯಾರು ಎಂಬುವುದರ ಸತ್ಯ ಗೊತ್ತಾಗಲಿ ಎಂದು ದೇವರ ಜೊತೆ ಹರಕೆ ಕಟ್ಟಿಕೊಂಡಿರುತ್ತಾಳೆ. ಆದರೆ ಭಾವನ ಕಷ್ಟ ನೋಡಲಾಗದೆ ಸಿದ್ದೆ ಗೌಡರು ನಿಜ ವಿಚಾರವನ್ನು ಹೇಳಲು ಮುಂದಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X