Lakshmi Nivasa ; ಮನೆಯವರ ಮುಂದೆ ಸತ್ಯ ಬಿಚ್ಚಿಟ್ಟ ಜಯಂತ್ ,ಮಾತು ಕೇಳಿ ಎದೆ ಹಿಡಿದುಕೊಂಡ ಲಕ್ಷ್ಮೀ
ಜಯಂತ್ ಶ್ರೀಲಂಕಾದಲ್ಲಿ ಜಾಹ್ನವಿ ಹುಡುಕಾಟದಲ್ಲಿದ್ದಾನೆ. ಜಯಂತ್ ಅದೆಷ್ಟೇ ಜಾಹ್ನವಿಯನ್ನು ಹುಡುಕಿದರೂ ಆಕೆ ಮಾತ್ರ ಜಯಂತ್ ಕೈಗೆ ಸಿಗದೇ ಸಮುದ್ರ ಪಾಲಗಿದ್ದಾಳೆ. ಶ್ರೀಲಂಕಾ ದಿಂದ ಜಯಂತ್ ಹಾಗೂ ಜಾಹ್ನವಿ ಮನೆಗೆ ಬರುತ್ತಾರೆ ಎಂದು ಬಹಳ ಖುಷಿಯಿಂದ ಜಾಹ್ನವಿ ಮನೆ ಮಂದಿ ಕಾಯುತ್ತಿರುತ್ತಾರೆ. ಜಾಹ್ನವಿ ತಂದೆ ಶ್ರೀನಿವಾಸ ಹಾಗೂ ಲಕ್ಷ್ಮೀ ಗೆ ಜಾನು ಎಂದರೆ ಬಹಳ ಪ್ರೀತಿ. ಚಿಕ್ಕ ವಯಸ್ಸಿನಿಂದಲೂ ಜಾಹ್ನವಿಯನ್ನು ಬಹಳ ಮುದ್ದು ಮಾಡಿ ಬೆಳೆಸಿರುತ್ತಾರೆ. ಜಯಂತ್ ಜಾಹ್ನವಿ ಯನ್ನು ನೋಡಿ ಮನಸೋಲುತ್ತಾನೆ.
ಆದುದರಿಂದ ಶ್ರೀನಿವಾಸ ಜಾಹ್ನವಿಯನ್ನು ಜಯಂತ್ ಗೆ ಮದುವೆ ಮಾಡಿ ಕೊಡುತ್ತಾರೆ. ಜಾಹ್ನವಿಯನ್ನು ಮದುವೆಯಾದ ಜಯಂತ್ ಮಾತ್ರ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ಹಾಗೆ ಬಹಳ ಖುಷಿಯಲ್ಲಿರುತ್ತಾನೆ. ಜಯಂತ್ ಮಾಡುತ್ತಿರುವ ಕೆಟ್ಟ ಕೆಲಸಗಳನ್ನು ನೋಡಿ ಜಾನು ನೊಂದುಕೊಂಡು ಇರುತ್ತಾಳೆ. ಆದರೆ ಶ್ರೀಲಂಕಾಗೆ ಹೋದ ಬಳಿಕ ತಾನು ತನಗೆ ಇಷ್ಟವಿಲ್ಲದಾತನ ಜೊತೆಗೆ ಬದುಕುವುದು ಸರಿಯಲ್ಲ ಎಂದು ಜಾನುಗೆ ಅನ್ನಿಸುತ್ತಿದೆ. ಸಮುದ್ರಕ್ಕೆ ಹಾರುವಾಗ ಕೂಡ ಜಾಹ್ನವಿ ತನ್ನ ತಂದೆ ತಾಯಿಗೆ ನನ್ನ ನೋವು ಯಾವತ್ತೂ ತಿಳಿಯದಿರಲಿ. ನಾನು ಸತ್ತರೆ ಖಂಡಿತವಾಗಿಯೂ ನನ್ನ ಕುಟುಂಬದವರಿಗೆ ನೋವು ಆಗುತ್ತದೆ. ಆದರೆ ಆ ನೋವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ. ನಾನು ಇವರ ಜೊತೆಗೆ ಇದ್ದರೆ ಖಂಡಿತವಾಗಿಯೂ ಇವರಿಗೆ ಬುದ್ದಿ ಬರುವುದಿಲ್ಲ. ಅವರು ಮಾಡಿದ ತಪ್ಪು ಅವರಿಗೆ ಮನದಟ್ಟು ಆಗಬೇಕು ಎಂದು ಹೇಳುತ್ತಾಳೆ. ಹಾಗೆಯೇ ನೀರಿಗೆ ಹಾರಿ ಬಿಡುತ್ತಾಳೆ.

ಇತ್ತ ಜಯಂತ್ ಮಾತ್ರ ಮರಳಿ ಭಾರತಕ್ಕೆ ಒಬ್ಬಂಟಿಯಾಗಿ ಬರುತ್ತಾನೆ. ಬಹಳ ದುಃಖ ಪಟ್ಟುಕೊಂಡು ಇರುತ್ತಾನೆ. ಆತನಿಗೆ ತನ್ನ ಹೆಂಡತಿ ಮನೆಯವರಿಗೆ ಏನು ಹೇಳಬೇಕು ಎಂದು ದಿಕ್ಕೇ ತೋಚದಾಗುತ್ತದೆ. ಇತ್ತ ಜಾಹ್ನವಿ ಮನೆಯಲ್ಲಿ ಸಡಗರ ಸಂಭ್ರಮ ಜಾಹ್ನವಿ ಮನೆಗೆ ಬರುತ್ತಾಳೆ. ಆಕೆ ಗರ್ಭಿಣಿ ಬೇರೆ ಏನೆಲ್ಲಾ ಊಟ ತಿಂಡಿಗಳು ಆಕೆಗೆ ಇಷ್ಟವೋ ಅದೆಲ್ಲ ತಿಂಡಿಗಳನ್ನು ಮಾಡಿ ಆಕೆಗೆ ಉಣ ಬಡಿಸಬೇಕು ಎಂದು ಬಹಳ ಆಸೆಯಲ್ಲಿರುತ್ತಾರೆ. ಮನೆಗೆ ಭಾವನ ಹಾಗೂ ಸಿದ್ದು ಕೂಡ ಬಂದಿರುತ್ತಾರೆ. ಲಕ್ಷ್ಮೀ ನಿವಾಸದಲ್ಲಿ ಜಾಹ್ನವಿ ಆಗಮನದತ್ತ ನೋಡುತ್ತಿರುತ್ತಾರೆ. ಜಯಂತ್ ಅತ್ತೆ ಮಾವನ ಮನೆಗೆ ಬರುತ್ತಾನೆ. ಆದರೆ ಜಯಂತ್ ಜೊತೆಗೆ ಜಾಹ್ನವಿ ಕಾಣಿಸದೆ ಇರುವುದನ್ನು ಕಂಡ ಮನೆ ಮಂದಿ ಜಾಹ್ನವಿ ಎಲ್ಲಿದ್ದಾಳೆ ಎಂದು ಪ್ರಶ್ನೆ ಮಾಡುತ್ತಲೇ ಇರುತ್ತಾರೆ. ವೆಂಕಿಯ ಜೊತೆಗೆ ಇದ್ದಾಳೆ ಎನ್ನುವ ಜಯಂತ್ ಉತ್ತರಕ್ಕೆ ಮನೆ ಮಂದಿ ನಿರಾಳವಾಗುತ್ತಾರೆ. ಆಗ ಅಲ್ಲಿಗೆ ವೆಂಕಿ ಹೆಂಡತಿ ಓಡೋಡಿ ಬರುತ್ತಾಳೆ.
ಮಾವನ ಮನೆಗೆ ಓಡೋಡಿ ಬಂದ ಚೆಲುವಿ
ಆಕೆ ಏನೋ ವಿಚಾರ ಹೇಳಲು ಮನೆಗೆ ಬರುತ್ತಾಳೆ ಆದರೆ ಮನೆಯಲ್ಲಿ ಎಲ್ಲರೂ ಇದ್ದಿದ್ದನ್ನು ಕಂಡು ಏನು ಹೇಳದೆ ಸುಮ್ಮನಾತ್ತಾಳೆ. ಇದೇನು ಜಯಂತ್, ವೆಂಕಿ ಜೊತೆ ಜಾಹ್ನವಿ ಇದ್ದಾಳೆ ಎಂದು ಹೇಳಿದಿರಿ ಆದರೆ ಚೆಲ್ವಿ ಇಲ್ಲಿಗೆ ಬಂದಿದ್ದಾಳೆ ಎಂದು ಶ್ರೀನಿವಾಸ ಪ್ರಶ್ನೆ ಮಾಡಿದಾಗ ಜಯಂತ್ ನಿಜ ವಿಚಾರವನ್ನು ಬಾಯಿ ಬಿಡುತ್ತಾನೆ. ಜಾಹ್ನವಿ ಶ್ರೀಲಂಕಾದಲ್ಲಿ ಐ ಲ್ಯಾಂಡ್ ಗೆ ಹೋಗಬೇಕು ಎಂದು ಆಸೆ ಪಟ್ಟರು. ನಾವು ಬೋಟ್ ನಲ್ಲಿ ಹೋಗಬೇಕಾದರೆ ಆಕೆ ಕಾಲು ಜಾರಿ ಬೋಟ್ ನಿಂದಾ ಸಮುದ್ರಕ್ಕೆ ಜಾರಿ ಬಿದ್ದರು ಎಂದು ಹೇಳಿದಾಗ ಮನೆ ಮಂದಿಗೆ ಶಾಕ್ ಆಗುತ್ತದೆ. ಲಕ್ಷ್ಮೀ ಶ್ರೀನಿವಾಸ್ ಎದೆ ಹಿಡಿದುಕೊಂಡು ಬಹಳ ಜೋರಾಗಿಯೇ ಅಳುತ್ತಾರೆ.
ಸೈಕೋ ಜಯಂತ್ ಇನ್ನಾದರೂ ಬದಲಾಗುತ್ತಾನ?
ಮುದ್ದಾದ ಮಗಳನ್ನು ಕಳೆದುಕೊಂಡ ನೋವು ಲಕ್ಷ್ಮೀಯನ್ನು ಬಹಳಷ್ಟು ಕಾಡುತ್ತದೆ. ಜಯಂತ್ ಮಾತಿಗೆ ಲಕ್ಷ್ಮೀಗೆ ಕೋಪ ದುಃಖ ಎರಡು ಆಗುತ್ತದೆ. ಆದರೆ ಯಾರ ಜೊತೆಗೆ ಅದನ್ನು ತೋರಿಸಲಾಗುವುದಿಲ್ಲ. ಜಯಂತ್ ಗೆ ಜಾಹ್ನವಿ ಬುದ್ದಿ ಕಲಿಸಬೇಕಿತ್ತು. ಆದರೆ ಜಾಹ್ನಯೇ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೈಕೋ ಜಯಂತ್ ನ ಮುದ್ದು ಚಿನ್ನು ಮರಿ ಇನ್ನಿಲ್ಲ ಎಂದು ಜಯಂತ್ ಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ನನ್ನ ಚಿನ್ನುಮರಿಯನ್ನು ನಾನು ಹೇಗೆ ಪಡೆದುಕೊಳ್ಳಲಿ ಎಂದು ಬಹಳಷ್ಟು ಅಳುತ್ತಾನೆ. ಜಯಂತ್ ಸೈಕೋ ಆದರೂ ಜಾಹ್ನವಿಯನ್ನು ಬಹಳ ಪ್ರೀತಿ ಮಾಡುತ್ತಿರುತ್ತಾನೆ. ಆದರೆ ಇದೀಗ ಜಾನು ಇನ್ನಿಲ್ಲ ಎಂಬುವುದನ್ನು ಆಕೆಯ ಮನೆಯವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಆದರೂ ಆಕೆ ಮಾತ್ರ ಜಯಂತ್ ಕೈಗೆ ಸಿಗದೇ ಸಮುದ್ರ ಪಾಲಾಗಿದ್ದಾಳೆ.


Click it and Unblock the Notifications











