Lakshmi Nivasa ; ಸ್ಮಶಾನ ಮೌನವಾದ ಲಕ್ಷ್ಮೀ ನಿವಾಸ,ಸಮುದ್ರದ ತಟದಲ್ಲಿ ಜಾಹ್ನವಿ ಪತ್ತೆ?

By ಪೂರ್ವ

ವೆಂಕಿ ಫೋನ್ ಗೆ ಕೂಡ ಸ್ಪಂದಿಸುತ್ತಿಲ್ಲ, ಚೆಲುವಿಯ ಕರೆಯನ್ನ ಸ್ವೀಕರಿಸುತ್ತಿಲ್ಲ ಚೆಲುವಿಗೆ ಇದರಿಂದ ಬಹಳಷ್ಟು ಭಯವಾಗುತ್ತದೆ. ಎಲ್ಲಿಗೆ ಹೋದರೂ ಯಾವತ್ತೂ ತನ್ನ ಗಂಡ ತನಗೆ ಫೋನ್ ಮಾಡುತ್ತಿದ್ದರು. ನಮ್ಮನ್ನು ಒಂದು ದಿನವೂ ಬಿಟ್ಟಿರಲಿಲ್ಲ. ಅಂಥದರಲ್ಲಿ ಇದೀಗ ಫೋನ್ ರಿಸೀವ್ ಮಾಡುತ್ತಿಲ್ಲ ಎಂದು ಬಹಳ ಆತಂಕದಿಂದ ಇರುತ್ತಾಳೆ. ಮನೆಗೆ ಏನಾದರು ಹೋಗಿರಬಹುದು ಎಂದು ಚೆಲುವಿ ಅಂದುಕೊಂಡು ಮನೆಗೆ ಓಡೋಡಿ ಹೋಗುತ್ತಾಳೆ.

ಚೆಲುವಿಯನ್ನೂ ನೋಡಿದ ಶ್ರೀನಿವಾಸರಾಯರು ಚೆಲುವಿ ಇಲ್ಲಿಗೆ ಬಂದಿದ್ದಾಳೆ ಹಾಗಾದರೆ ಜಾನು ನಿಮ್ಮ ಮನೆಯಲ್ಲಿ ಇದ್ದಾಳ ಎಂದು ಕೇಳುತ್ತಾನೆ. ಆದರೆ ಚೆಲುವಿ ಜಾಹ್ನವಿಯವರು ನಮ್ಮ ಮನೆಗೆ ಬಂದಿಲ್ಲ ಎಂದು ಹೇಳುತ್ತಾಳೆ. ಆಕೆಯ ಮಾತು ಕೇಳಿದ ಶ್ರೀನಿವಾಸ ರಾಯರಿಗೆ ಗಾಬರಿಯಾಗುತ್ತದೆ. ಜಯಂತ್ ನ ಪ್ರಶ್ನೆ ಮಾಡಿದಾಗ ನಿಜ ವಿಚಾರವನ್ನು ಹೇಳುತ್ತಾನೆ. ಜಯಂತ್ ಮಾತು ಕೇಳಿದ ಮನೆ ಮಂದಿಗೆ ಬರ ಸಿಡಿಲು ಬಡಿದ ಹಾಗಾಗುತ್ತದೆ. ಇದೆಲ್ಲಾ ಹೇಗಾಯಿತು ಎಂದು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾರೆ. ಆದರೆ ಜಯಂತ್ ಉತ್ತರ ಒಂದೇ, ಜಾಹ್ನವಿ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಬಿಟ್ಟಿದ್ದಾಳೆ ಎಂದು ಜಯಂತ್ ಜಾಹ್ನವಿ ತಂದೆ ತಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾನೆ.

kannada-serial-lakshmi-nivasa-written-update-04th-april

ಆದರೆ ಜಾಹ್ನವಿ ತಾಯಿ ಲಕ್ಷ್ಮೀ ಗೆ ಮಗಳದ್ದೆ ಚಿಂತೆ.ತನ್ನ ಮಗಳು ಗರ್ಭಿಣಿ ಆಗಿದ್ದಳು ಆದರೆ ಇದೀಗ ನನ್ನ ಮಗಳೇ ಇಲ್ಲ. ಜಾಹ್ನವಿ ಚೆನ್ನಾಗಿರುತ್ತಾಳೆ ಎಂದು ಬಹಳಷ್ಟು ಖುಷಿಯಲ್ಲಿದ್ದೇ ಆದರೆ ಇದೀಗ ಆ ಖುಷಿ ಗೆ ತಣ್ಣೀರು ಎರಚಿದ ಹಾಗಾಯಿತು ಎಂದು ಬಹಳ ನೋವು ವ್ಯಕ್ತಪಡಿಸುತ್ತಾರೆ. ಭಾವನ ಮಾತ್ರ ತನ್ನ ತಂಗಿ ಶ್ರೀಲಂಕಾದಲ್ಲಿ ಇರಬೇಕಾಗದ್ರೆ ಬಹಳಷ್ಟು ನೋವಲ್ಲಿ ಇದ್ದಳು. ಆಕೆಗೆ ಬಹಳ ನೋವು ಕಾಡಿತ್ತು. ಏನು ಹೇಳು ಜಾಹ್ನವಿ ಎಂದಾಗ ಏನಿಲ್ಲಕ್ಕ ನಾನು ಚೆನ್ನಾಗಿಯೇ ಇದ್ದೇನೆ ಎಂದು ಹೇಳುತ್ತಾಳೆ. ಆದರೆ ಇದೀಗ ಜಾನುವೇ ಇಲ್ಲ ಎಂದು ಬಹಳ ನೊಂದುಕೊಳ್ಳುತ್ತಾಳೇ.

ಜಾಹ್ನವಿ ನೆನಪಲ್ಲಿ ಕುಸಿದು ಬಿದ್ದ ಭಾವನ

ಜಾಹ್ನವಿ ಇಲ್ಲ ಎಂದು ನೆನಪಿಸಿಕೊಂಡ ಭಾವನ ಅಲ್ಲಿಯೇ ಕುಸಿದು ಬೀಳುತ್ತಾಳೆ. ಜಯಂತ್ ಮಾತ್ರ ನಟನೆ ಮಾಡುವ ಹಾಗೆ ಕಾಣಿಸುತ್ತಿದ್ದಾನೆ. ಜಾಹ್ನವಿ ಬದುಕಿನುದ್ದಕ್ಕೂ ಜಯಂತ್ ಜಾಹ್ನವಿಗೆ ಕಾಟ ಕೊಡುತ್ತಲೇ ಬಂದ ಆದರೆ ಜಾಹ್ನವಿ ಗೆ ಒಂದು ದಿನವೂ ನೆಮ್ಮದಿ ಇಲ್ಲ. ಬಹಳ ಚಿತ್ರ ಹಿಂಸೆಯನ್ನು ನೀಡುತ್ತಾನೆ. ಇದರಿಂದಾಗಿಯೇ ಜಾಹ್ನವಿ ಸಾವಿಗೆ ಕಾರಣವಾಗುತ್ತದೆ. ಚೆಲುವಿ ಗೆ ತನ್ನ ಗಂಡ ಕಾಣಿಸುತ್ತಿಲ್ಲ ಎನ್ನುವ ವಿಚಾರವನ್ನು ಅತ್ತೆ ಮಾವನ ಬಳಿ ಹೇಳಿ ಹೋಗೋಣ ಎಂದು ಬಂದರೆ ಅದಕ್ಕಿಂತ ಆಘಾತ ದ ಸುದ್ದಿ ಕೇಳಿ ಚೆಲುವಿಗೆ ಇನ್ನಷ್ಟು ಆಘಾತ ಆಗುತ್ತದೆ. ಏನು ಮಾಡ್ಬೇಕು ತಿಳಿಯದೇ ಬಹಳ ನೊಂದುಕೊಳ್ಳುತ್ತಾಳೆ. ತನ್ನ ಗಂಡನಿಗೆ ಈ ವಿಚಾರ ತಿಳಿಸಬೇಕು ಎಂದು ಅಂದುಕೊಂಡ ಚೆಲುವಿಗೆ ವೆಂಕಿಯ ಸುಳಿವೇ ಇರುವುದಿಲ್ಲ.

ಜಾಹ್ನವಿ ನೋಡಿ ಓಡಿ ಬಂದ ಬೆಸ್ತರು

ಇತ್ತ ಸಮುದ್ರ ಪಾಲಾಗಿದ್ದ ಜಾಹ್ನವಿ ಚೆನೈ ನ ಸಮುದ್ರ ದಡಕ್ಕೆ ಸೇರಿದ್ದಾಳೆ. ಅಲ್ಲಿದ್ದ ಮೀನುಗಾರರು ಜಾಹ್ನವಿಯನ್ನು ನೋಡಿ ಶಾಕ್ ಆಗುತ್ತಾರೆ. ಇದ್ಯಾರು ಹೆಂಗಸು. ಹಾಗೆಯೇ ಉಸಿರಾಡುತ್ತಿದ್ದಾಳ ಎಂದು ಮೊದಲು ಗಮನಿಸುತ್ತಾರೆ. ಜಾಹ್ನವಿ ಉಸಿರಾಡುತ್ತಿರುವುದನ್ನು ಕಂಡು ಅಲ್ಲಿನ ಜನ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಜಾಹ್ನವಿ ಜಯಂತ್ ಕೈ ಗೆ ಯಾವತ್ತೂ ಸಿಗಬಾರದು ಎಂದುಕೊಂಡಿರುತ್ತಾಳೆ. ಆದರೆ ಜಾಹ್ನವಿಗೆ ಹಿಂದಿನದು ಯಾವುದು ಕೂಡ ಸ್ವಲ್ಪವೂ ಜ್ಞಾಪಕ ಇರುವುದಿಲ್ಲ. ಜಾಹ್ನವಿ ಯಾರ ಕೈ ಗೆ ಸಿಗುತ್ತಾಳೆ ? ಹಾಗೆಯೇ ಆಕೆಯ ಮುಂದಿನ ಜೀವನ ಹೇಗಿರಲಿದೆ ಎನ್ನುವ ಕೂತೂಹಲ ಬಹಳಷ್ಟು ಹೆಚ್ಚಿಸಿದೆ. ಇತ್ತ ಸಿಂಚನ ಬಹಳ ನೋವಿನಿಂದ ಆಕೆಯ ಮನೆಗೆ ಕರೆ ಮಾಡುತ್ತಾಳೆ. ಜಾಹ್ನವಿ ಶ್ರೀಲಂಕಾದಲ್ಲಿ ಸಾವನಪ್ಪಿರುವ ವಿಚಾರ ಕೇಳಿ ಸಿಂಚನ ತಾಯಿ ಆಘಾತಗೊಳ್ಳುತ್ತಾರೆ. ಇದೇನಾಯ್ತಪ್ಪ ಎಂದು ಅಂದುಕೊಳ್ಳುತ್ತಾರೆ. ಜಾನು ಬಹಳ ಒಳ್ಳೆಯ ಹುಡುಗಿ ಆಕೆ ಗೆ ಏನಾಯ್ತಪ್ಪ ಎಂದು ಆಲೋಚನೆ ಮಾಡುತ್ತಾಳೆ ಬಹಳಷ್ಟು ನೊಂದುಕೊಳ್ಳುತ್ತಾಳೆ. ಸಿಂಚನಗೆ ಬಹಳ ಬೇಸರವಾಗುತ್ತದೆ. ಜಾಹ್ನವಿ ಬಹಳ ಒಳ್ಳೆಯ ಹುಡುಗಿ ಆಕೆಗೆ ಇಂತಹ ಸ್ಥಿತಿ ಬಂದು ಬಿಟ್ಟಿತಲ್ಲ ಎಂದು ಬಹಳ ನೊಂದುಕೊಳ್ಳುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X