Lakshmi Nivasa ; ಜಯಂತ್ ಕೈ ಗೆ ಸಿಲುಕಿ ನಲುಗಿದ ಜಾಹ್ನವಿ ಗೆ ಆಸರೆಯಾಗಿ ಬರುತ್ತಾಳಾ ಲಕ್ಷ್ಮೀ?
ತಾಯಿ ಆಗುತ್ತಿರುವ ಜಾಹ್ನವಿಯನ್ನು ಜಯಂತ್ ಕಣ್ಣಲ್ಲಿ ಕಣ್ಣಿಟ್ಟು ಜೋಡಿಕೊಳ್ಳುತ್ತಿದ್ದಾನೆ. ಸರಿಯಾದ ಸಮಯಕ್ಕೆ ಮಾತ್ರೆಗಳನ್ನು ನೀಡುತ್ತಾ ಜಾಹ್ನವಿಯನ್ನು ಬಹಳ ಪ್ರೀತಿಯಿಂದ ನೋಡಿಕೊಂಡು ಆರೈಕೆ ಮಾಡಿಕೊಂಡು ಇರುತ್ತಾನೆ. ಜಾಹ್ನವಿ ಗೆ ಇದೀಗ ತನ್ನ ತವರು ಮನೆಯ ನೆನಪು ಬಹಳಷ್ಟು ಕಾಡಿದೆ. ವೆಂಕಿ ಅಣ್ಣನನ್ನು ಬೇರೆ ಮನೆಯಿಂದ ಹೊರ ಹಾಕಿದ್ದಾರೆ. ಆದ ಕಾರಣ ಜಾಹ್ನವಿ ಗೆ ಈ ವಿಚಾರ ಬಹಳ ದುಃಖ ಮೂಡಿಸುತ್ತಿರುವುದು ಮಾತ್ರ ನಿಜ. ಯಾರ ಜೊತೆಯೂ ಏನು ಹೇಳದೆ ಮನದಲ್ಲಿ ನೂರೊಂದು ಆಲೋಚನೆ ಮಾಡಿಕೊಂಡು ಇರುವ ಜಾಹ್ನವಿ ಗೆ ಸಮಾಧಾನ ಹೇಳುವವರು ಇಲ್ಲ.
ಜಯಂತ್ ಅದೆಷ್ಟೇ ನೋಡಿಕೊಂಡರು, ಜಾಹ್ನವಿ ಗೆ ತನ್ನ ತಾಯಿ ಈ ಸಮಯದಲ್ಲಿ ಇದ್ದರೆ ಚೆನ್ನಾಗಿರುತ್ತಿತ್ತು ಎಂದು ಅದೆಷ್ಟೋ ಸಲ ಭಾಸವಾಗಿದೆ. ಜಾಹ್ನವಿ ಒಮ್ಮೆಲೆ ತಲೆ ತಿರುಗಿ ಬೀಳುತ್ತಾಳೆ ಆಗ ಜಯಂತ್ ಗೆ ಬಹಳಷ್ಟು ಭಯ ಆಗುತ್ತದೆ. ಜಾಹ್ನವಿ ಗೆ ಏನಾಯಿತು ಎನ್ನುವ ಆಲೋಚನೆ ಆತನಿಗೆ ಕಾಡುತ್ತದೆ . ಕೂಡಲೇ ಡಾಕ್ಟರ್ ನನ್ನು ಕರೆದುಕೊಂಡು ಬಂದ ಜಯಂತ್ ಗೆ ಜಾಹ್ನವಿಗೆ ಏನಾದರು ಹೆಚ್ಚು ಕಮ್ಮಿ ಆಗಿ ಬಿಟ್ಟಿತಾ ಎನ್ನುವ ಭಯ ಕಾಡುತ್ತದೆ.

ಜಾಹ್ನವಿಯನ್ನು ನೋಡುವ ಕಾತರದಲ್ಲಿರುವ ಅಜ್ಜಿ
ಇತ್ತ ಜಾಹ್ನವಿ ಅಜ್ಜಿ ಲಕ್ಷ್ಮೀ ಜೊತೆ ಜಾಹ್ನವಿಯನ್ನು ನಾವಿಬ್ಬರೂ ನೋಡಿಕೊಂಡು ಬರೋಣ. ಜಾಹ್ನವಿ ಬೇರೆ ಗರ್ಭಿಣಿ. ಅಲ್ಲಿ ಹೇಗಿದ್ದಾಳೆ ಎನು ಗೊತ್ತಿಲ್ಲ ಒಮ್ಮೆ ನೋಡಿಕೊಂಡು ಬರೋಣ ಎಂದು ಹೇಳಿದಾಗ ಲಕ್ಷ್ಮೀ ಕೂಡ ಅತ್ತೆಯ ಮಾತಿಗೆ ಹೂ ಎನ್ನುತ್ತಾಳೆ. ಖುಷಿಯನ್ನು ಭೇಟಿ ಆಗಲು ಭಾವನ ಹಾಗೂ ಸಿದ್ದೇ ಗೌಡರು ಸೌಪರ್ಣಿಕಾ ಮನೆಗೆ ಬರುತ್ತಾರೆ.
ಖುಷಿಯನ್ನು ಮನೆಗೆ ಕರೆದುಕೊಂಡು ಹೋದ ಭಾವನ
ಸೌಪರ್ಣಿಕಾ ಮಾತ್ರ ಖುಷಿಯನ್ನು ಮೊದಲು ಭಾವನ ಜೊತೆ ಕಳಿಸುವುದಿಲ್ಲ ಎಂದು ಹೇಳಿದರು ಸಿದ್ದೆ ಗೌಡರು ಮಾತ್ರ ಬಹಳ ಕಟುವಾಗಿ ಸೌಪರ್ಣಿಕಾ ಹಾಗೂ ರವಿ ಜೊತೆ ನಡೆದುಕೊಳ್ಳುತ್ತಾರೆ. ಖುಷಿ ಗೆ ಯಾರ ಜೊತೆ ಇರಲು ಇಷ್ಟವೋ ಅವರ ಜೊತೆಯೇ ಇರಲಿ ಎನ್ನುವ ಹಾಗೆ ಮಾತನಾಡುತ್ತಾರೆ ಇದನ್ನು ಕೇಳಿಸಿಕೊಂಡ ಖುಷಿ ನಾನು ಭಾವನ ಅಮ್ಮನ ಜೊತೆ ಇರುತ್ತೇನೆ ಎಂದು ಹೇಳುತ್ತಾಳೆ. ಕೂಡಲೇ ಭಾವನ ಖುಷಿಯನ್ನು ಕರೆದುಕೊಂಡು ಅಲ್ಲಿಂದ ಹೊರ ನಡೆದು ಬಿಡುತ್ತಾಳೆ.


Click it and Unblock the Notifications











