Lakshminivasa ; ಶ್ರೀಲಂಕಾದಲ್ಲಿ ಸಮುದ್ರದ ಪಾಲಾಗಿದ್ದ ಜಾಹ್ನವಿ ಚೆನ್ನೈನಲ್ಲಿ ಪತ್ತೆ, ತಲೆ ಚಚ್ಚಿಕೊಂಡ ಪ್ರೇಕ್ಷಕರು!
ಜಾಹ್ನವಿ ಅದೃಷ್ಟವಶಾತ್ ಬದುಕಿ ಬಂದಿದ್ದಾಳೆ. ತನ್ನ ಗಂಡನಿಗೆ ಪಾಠ ಕಲಿಸಲು ತನಗೆ ತಾನೇ ಶಿಕ್ಷೆ ಕೊಟ್ಟುಕೊಂಡ ಜಾಹ್ನವಿ ಬದುಕಿದ್ದಾಳೆ. ಆದರೆ ಆಕೆಗೆ ಹಳೆಯದ್ದು ಯಾವುದು ನೆನಪಿಗೆ ಬರುತ್ತಿಲ್ಲ. ಹಳೆಯದನ್ನೆಲ್ಲ ಮರೆತ ಜಾಹ್ನವಿಯನ್ನು ಅಲ್ಲಿಯೇ ಇದ್ದ ಬೆಸ್ತರು ರಕ್ಷಣೆ ಮಾಡುತ್ತಾರೆ. ಹಾಗೆಯೇ ಪೊಲೀಸರಿಗೆ ಮಾಹಿತಿಯನ್ನು ಕೊಡುತ್ತಾರೆ. ಬೆಸ್ತರ ಮಾತುಗಳನ್ನು ಪೊಲೀಸರು ಆಲಿಸುತ್ತಿದ್ದಾಗ ಜಾಹ್ನವಿ ಗೆ ಒಮ್ಮೆಲೆ ಎಚ್ಚರವಾಗುತ್ತದೆ. ಆಕೆ ಮೆತ್ತಗೆ ಅಲ್ಲಿಂದ ತಪ್ಪಿಸಿಕೊಂಡು ಹೋಗುವುದನ್ನು ಅಲ್ಲಿನ ಪೊಲೀಸರು ನೋಡಿ ಆಕೆಯನ್ನು ಹಿಡಿಯಲು ಪ್ರಯತ್ನ ಮಾಡುತ್ತಾರೆ. ಆದರೆ ಜಾಹ್ನವಿ ಎಲ್ಲರ ಕೈಯಿಂದ ತಪ್ಪಿಸಿಕೊಂಡು ಒಂದು ಕಾರಿನಲ್ಲಿ ಹೋಗಿ ಕುಳಿತುಕೊಳ್ಳುತ್ತಾಳೆ.
ಆ ಕಾರು ಬೇರೆಯಾರದ್ದು ಅಲ್ಲ ವಿಶ್ವನ ತಂದೆ ನರಸಿಂಹಯ್ಯನವರದ್ದು. ಅವರು ಕೆಲಸದ ಮೇರೆಗೆ ಚೆನೈ ಗೆ ಹೋಗಿರುತ್ತಾರೆ. ಇದೀಗ ಜಾಹ್ನವಿ ಗೊತ್ತಿಲ್ಲದೆ ನರಸಿಂಹಯ್ಯನ ಕಾರಿನ ಡಿಕ್ಕಿಯಲ್ಲಿ ಕುಳಿತುಕೊಳ್ಳುತ್ತಾಳೇ. ಆಕೆಗೆ ಬಹಳಷ್ಟು ಭಯ ಕಾಡುತ್ತದೆ. ಆಕೆಗೆ ಹಿಂದಿನದು ಯಾವುದು ನೆನಪಿಗೆ ಬರುತ್ತಿಲ್ಲ. ತಾನು ಯಾರು ಎನ್ನುವುದು ಆಕೆಗೆ ಗೊತ್ತಿರುವುದಿಲ್ಲ. ಆದರೂ ತನ್ನ ಅಮ್ಮನ ಅಣ್ಣನ ಕಾರಿನಲ್ಲಿ ಅಡಗಿ ಕುಳಿತಿರುತ್ತಾಳೆ. ಬಹಳಷ್ಟು ವೀಕ್ಷಕರಿಗೆ ಬಹಳ ಅನುಮಾನ ಕಾಡುತ್ತದೆ. ಜಾಹ್ನವಿ ಸಮುದ್ರಕ್ಕೆ ಹಾರಿದ್ದು ಶ್ರೀಲಂಕಾದಲ್ಲಿ ಆದರೆ ಆಕೆ ಚೆನೈನ ಸಮುದ್ರದ ದಡವನ್ನು ಹೇಗೆ ಸೇರಿದಳು ಎನ್ನುವುದು ಎಲ್ಲರನ್ನೂ ಕಾಡುತ್ತಿರುವ ಬಹುದೊಡ್ಡ ಪ್ರಶ್ನೆ. ಇನ್ನು ಅನೇಕ ಜನರು ಜಾಹ್ನವಿ ಖಂಡಿತವಾಗಿಯೂ ಬದುಕಿ ಬರುತ್ತಾಳೆ ಎಂದರೆ ಇನ್ನೂ ಕೆಲವರು ನರಸಿಂಹಯ್ಯನಿಗೆ ಜಾಹ್ನವಿ ಸಿಗುತ್ತಾಳೆ ಎಂದು ಊಹೆ ಮಾಡಿದ್ದರು .

ವೀಕ್ಷಕರ ಊಹೆಯ ಪ್ರಕಾರವಾಗಿ ಜಾಹ್ನವಿ ನರಸಿಂಹಯ್ಯ ನ ಕಾರಿನಲ್ಲಿ ಅಡಗಿ ಕುಳಿತಿದ್ದಾಳೆ. ಹಲವಾರು ವೀಕ್ಷಕರಿಗೆ ಜಯಂತ್ ಜೊತೆ ಜಾಹ್ನವಿ ಮದುವೆ ಆಗಿದ್ದೆ ಇಷ್ಟವಿಲ್ಲ. ಜಾಹ್ನವಿ ಗೆ ಜಯಂತ್ ಮ್ಯಾಚ್ ಅಲ್ಲ ಆದರೂ ಈ ಸೈಕೋ ಜಯಂತ್ ನ ಜೊತೆ ನಿರ್ದೇಶಕರು ಜಾಹ್ನವಿ ಮದುವೆ ಮಾಡಿಸಿದ್ದರು ಎಂದು ಕೋಪ ಮಾಡಿಕೊಂಡಿದ್ದರು. ಜಾಹ್ನವಿ ಹಾಗೂ ವಿಶ್ವ ಒಂದಾಗಬೇಕು ಎಂದು ಅನೇಕ ಜನರಿಗೆ ಆಸೆ ಇತ್ತು. ಆದರೆ ಜಾಹ್ನವಿ ಬೇರೆ ಮದುವೆ ಆಗಿರುವ ಕಾರಣ ವಿಶ್ವ ಒಬ್ಬಂಟಿಯಾಗಿ ಉಳಿದುಬಿಟ್ಟಿದ್ದ. ಆತನ ಮಾವನ ಮಗಳು ಆತನ ಜೊತೆಗೆ ಇದ್ದರೂ ವಿಶ್ವ ಗೆ ಜಾಹ್ನವಿಯದ್ದೆ ನೆನಪು ಕಾಡುತ್ತಿರುತ್ತದೆ. ಇದೀಗ ಜಾಹ್ನವಿ ಗೆ ಹಳೆಯ ನೆನಪುಗಳು ಮರೆತು ಹೋಗಿದೆ.
ಗಂಡನ ಹುಡುಕಾಟದಲ್ಲಿರುವ ಚೆಲುವಿ
ಇನ್ನಾದರೂ ಜಾಹ್ನವಿ ಹಾಗೂ ವಿಶ್ವ ಒಂದಾಗಲಿ ಎಂದು ಅನೇಕ ಜನರು ಬಯಸುತ್ತಿದ್ದಾರೆ. ಇತ್ತ ವೆಂಕಿ ಜೈಲು ಸೇರಿದ್ದಾನೆ ಆದರೆ ಆತನ ಹೆಂಡತಿ ಚೆಲುವಿಗೆ ಈ ವಿಚಾರವೇ ಗೊತ್ತಿಲ್ಲ. ಪಾಪ ವೆಂಕಿ ಆತನ ಅತ್ತೆಯ ಕಣ್ಣು ಆಪರೇಶನ್ ಮಾಡಿಸಲು ಹಣ ಹೊಂದಿಸಬೇಕಾಗಿತ್ತು. ಚೆಲುವಿಗೆ ಬಹಳ ಆಸೆ. ಅಮ್ಮ ನಮ್ಮಿಬ್ಬರನ್ನು ಕಣ್ತುಂಬ ನೋಡಬೇಕು ಆಕೆ ನನ್ನ ಜೊತೆಗೆ ಸದಾ ಖುಷಿಯವಿರಬೇಕು. ಹಾಗೆಯೇ ಆಕೆಗೆ ಕಣ್ಣು ಕಾಣಿಸಬೇಕು ಎನ್ನುವ ಆಸೆ ಚೆಲುವಿಗೆ. ಚೆಲುವಿ ಆಸೆಯಂತೆ ವೆಂಕಿ ನಡೆದುಕೊಳ್ಳುತ್ತಾನೆ. ಆದರೆ ವೆಂಕಿಯ ಬಳಿ ಅಷ್ಟೊಂದು ಹಣವಿಲ್ಲ. ಎನು ಮಾಡಬೇಕು ಎಂದು ತಿಳಿಯದಾಗುತ್ತದೆ.
ವೆಂಕಿ ಅರೆಸ್ಟ್ ಆಗುವುದು ಭಾವನ ತಿಳಿದರೆ ಸಿದ್ದು ಗತಿ?.
ಆದ ಕಾರಣ ಯಾರದ್ದೋ ಮಾತು ಕೇಳಿ ಶ್ರೀಕಾಂತ್ ಸಾವನ್ನು ತಾನೇ ಮಾಡಿದ್ದು ಎಂದು ಒಪ್ಪಿಕೊಳ್ಳುತ್ತಾನೆ. ಹಾಗೆಯೇ ಪೊಲೀಸರು ಎಫ್ ಐಆರ್ ದಾಖಲು ಮಾಡಿಕೊಳ್ಳುತ್ತಾರೆ. ಇಲ್ಲಿ ಇರುವುದು ಇದೀಗ ಟ್ವಿಸ್ಟ್. ಭಾವನ ಮದುವೆಯಲ್ಲಿ ವೆಂಕಿ ಕೂಡ ಇರುತ್ತಾನೆ ಹಾಗೆಯೇ ವೆಂಕಿಯ ಜೊತೆ ಯಾವುದೇ ವೆಹಿಕಲ್ ಇರುವುದು ಇಲ್ಲ. ವೆಂಕಿ ಅರೆಸ್ಟ್ ಆಗಿದ್ದಾನೆ ಎನ್ನುವುದು ಮಾದೆ ಗೌಡಗೆ ತಿಳಿದಿಲ್ಲ. ಇತ್ತ ಭಾವನ ಕೊಂಚ ಸಮಾಧಾನ ಪಟ್ಟುಕೊಂಡಿದ್ದಾಳೆ.
ಶ್ರೀಕಾಂತ್ ಸಾವಿಗೆ ನ್ಯಾಯ ಒದಗಿಸಬೇಕು. ಆತನ ಮಗಳಿಗೆ ನ್ಯಾಯ ಒದಗಿಸಬೇಕು ಎನ್ನುವ ನಿಟ್ಟಿನಲ್ಲಿ ಭಾವನ ಸಾಕಷ್ಟು ಹೋರಾಟ ನಡೆಸುತ್ತಾಳೆ. ಭಾವನಗೆ ತಿಳಿದಿಲ್ಲ ಶ್ರೀಕಾಂತ್ ಸಾವಿಗೆ ಸಿದ್ದೇ ಗೌಡರು ಕಾರಣ ಎನ್ನುವ ವಿಚಾರ. ಆರೋಪಿ ಸಿಕ್ಕಿದ್ದಾನೆ ಎಂದು ಎಲ್ಲೆಡೆ ಹೇಳುತ್ತಾ ಬಂದಿದ್ದಾರೆ.
ಆದರೆ ಯಾರು ಎನ್ನುವುದನ್ನು ಇದುವರೆಗೂ ಯಾರಿಗೂ ಕೂಡ ಮುಖವನ್ನು ತೋರಿಸಿಲ್ಲ. ವೆಂಕಿಗೆ ಮನೆಯಲ್ಲಿ ಎನು ಹೇಳದೆ ಬಂದೆ ಎನ್ನುವ ಸಣ್ಣ ಅಳುಕು ಇರುತ್ತದೆ. ಇನ್ನು ಮುಂದೆ ಇದೆ ಕಾರಣಕ್ಕೆ ಭಾವನ ಹಾಗೂ ಸಿದ್ದು ದೂರ ಆಗಬಹುದು ಎಂದು ವೀಕ್ಷಕರು ಯೋಚಿಸುತ್ತಿದ್ದಾರೆ.


Click it and Unblock the Notifications











