Lakshmi Nivasa ; ಇವರು ನಮ್ಮ ಮಕ್ಕಳೇನಾ ? ಲಕ್ಷ್ಮೀ ನಿವಾಸದಲ್ಲಿ ಸಿಡಿದೆದ್ದ ಶ್ರೀನಿವಾಸ್..!

By ಪೂರ್ವ

ಪ್ರೀತಿಯ ಅಮ್ಮನನ್ನು ಶ್ರೀನಿವಾಸ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆದರೆ ಇದರಿಂದ ಮನೆಯ ಹಲವರಿಗೆ ಖುಷಿಯಾದರೆ ಅನೇಕರಿಗೆ ಇದರಿಂದ ಬಹಳಷ್ಟು ಕೋಪ ಬರುತ್ತದೆ. ಯಾಕಾದರೂ ಈ ಅಜ್ಜಿಯನ್ನು ನಮ್ಮ ಮನೆಗೆ ಕರೆತಂದರೋ. ನಾವೇ ಇಲ್ಲಿ ಬಹಳ ಕಷ್ಟಪಟ್ಟು ಬದುಕುತ್ತಿದ್ದೆವು ಆದರೆ ಇಲ್ಲಿ ನಮಗೆ ಬದುಕಲು ಅವಕಾಶವೇ ಇಲ್ಲದಾಗಿ ಹೋಗಿದೆ ಎಂದು ಶ್ರೀನಿವಾಸನ ಮಕ್ಕಳು ಮನದಲ್ಲಿ ಕೋಪ ಮಾಡಿಕೊಳ್ಳುತ್ತಾರೆ. ಆದರೆ ಶ್ರೀನಿವಾಸ ಮಾತ್ರ ಯಾವುದಕ್ಕೂ ಕಿವಿಗೊಡದೆ ಸುಮ್ಮನೆ ಕುಳಿತಿರುತ್ತಾನೆ. ಮಕ್ಕಳು ಆಡುತ್ತಿರುವ ಮಾತುಗಳನ್ನು ಕೇಳಿ ಲಕ್ಷ್ಮಿಗೆ ಬಹಳ ನೋವಾಗುತ್ತದೆ ಇದ್ಯಾಕಪ್ಪ ನನ್ನ ಮಕ್ಕಳು ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎನ್ನುವ ನೋವು ಆಕೆಗೆ ಕಾಡುತ್ತದೆ.

ಇಂತಹ ಮಕ್ಕಳು ನನ್ನ ಹೊಟ್ಟೆಯಲ್ಲಿ ಹುಟ್ಟಿದವ ಎನ್ನುವ ಬೇಸರ ಆಕೆಗೆ ಇರುತ್ತದೆ. ಅಜ್ಜಿ ತಮ್ಮೆಲ್ಲರನ್ನು ಸಣ್ಣದರಲ್ಲಿ ಇರಬೇಕಾದರೆ ಸಾಕಿ ಸಲಹಿದ್ದಾರೆ ಹಾಗೆಯೆ ಆಟವಾಡಿಸಿದ್ದಾರೆ ಎನ್ನುವ ಪರಿಜ್ಞಾನ ಕೂಡ ಸಂತೋಷ್ ಗೆ ಇರುವುದಿಲ್ಲ. ಇತ್ತ ಸಿಂಚನ ಶ್ರೀನಿವಾಸನ ಮನೆಗೆ ಸೊಸೆಯಾಗಿ ಬಂದಿದ್ದಾಳೋ ಅಥವಾ ರಾಕ್ಷಸಿಯಾಗಿ ಬಂದಿದ್ದಾಳೋ ಎನ್ನುವುದು ಒಂದು ತಿಳಿಯುತ್ತಿಲ್ಲ. ಯಾಕೆಂದರೆ ಅತ್ತೆಯ ಮನೆಗೆ ಬಂದ ಬಳಿಕ ಒಂದು ದಿನವೂ ಬಾಯಿ ಮುಚ್ಚಿ ಸಂಸಾರ ಮಾಡಿದ್ದನ್ನು ಯಾರು ನೋಡಿಲ್ಲ. ಅತ್ತೆ ಮಾವ ಗೆ ಒಂದು ದಿನವೂ ಅಡುಗೆ ಮಾಡಿ ಬಡಿಸಿಲ್ಲ.

kannada-serial-lakshmi-nivasa-written-update-07th-march

ಜವರೇಗೌಡ ರ ಮಗಳೆಂಬ ಜಂಭ ಆಕೆಗೆ. ಆದರೆ ಪಾಪ ಹರೀಶ್ ಮಾತ್ರ ಹೆಂಡತಿಯ ಮುಖ ಕಂಡರೆ ಸಾಕು ನಡುಗುತ್ತಾನೆ. ಆದರೆ ಅಜ್ಜಿ ವಿಷಯಕ್ಕೆ ಬಂದ ಸಿಂಚನ ಗೆ ಸರಿಯಾದ ಕ್ಲಾಸ್ ತೆಗೆದುಕೊಳ್ಳುತ್ತಾನೆ. ಅದೆಷ್ಟೇ ಬಾರಿ ಸಿಂಚನ ಅಜ್ಜಿ ವಿರೋಧವಾಗಿ ಧ್ವನಿ ಎತ್ತಿದರು ಸುಮ್ಮನಿರುವುದಿಲ್ಲ. ಇತ್ತ ಸಂತೋಷ್ ಕೂಡ ಬಹಳ ಕೋಪಿಷ್ಟ. ಆತನಿಗೆ ಅಜ್ಜಿ ತನ್ನ ಮನೆಯಲ್ಲಿರುವುದು ಬೇಡ ಹರೀಶನ ಮನೆಯಲ್ಲಿರಲಿ ಎಂದು ಬಹಳಷ್ಟು ಹೇಳುತ್ತಾನೆ. ಆದರೆ ಸಿಂಚನ ಅದಕ್ಕಿಂತಲೂ ಕೋಪಿಷ್ಟೇ.ನಮ್ಮ ಮನೆಗೆ ಅಜ್ಜಿ ಬರುವುದು ಬೇಡ ನೀವೇ ನೋಡಿಕೊಳ್ಳಿ ಎಂದು ಹೇಳಿದಾಗ ಸಂತೋಷ್ ಹಾಗೂ ಸಿಂಚನ ನಡುವೆ ಬಹಳಷ್ಟು ಕೋಪ ಹೆಚ್ಚುತ್ತದೆ. ಇದನ್ನು ನೋಡಿದ ಲಕ್ಷ್ಮೀಗೆ ತಲೆ ಕೆಡುತ್ತದೆ.

ಮಕ್ಕಳ ವಿರುದ್ಧ ಧ್ವನಿ ಎತ್ತಿದ ಲಕ್ಷ್ಮೀ

ಏನಿದೆಲ್ಲ ಯಾಕೆ ಹೀಗೆಲ್ಲ ಮಾಡುತ್ತಿದ್ದೀರಿ. ನಿಮ್ಮ ತಂದೆ ತಾಯಿ ಅವರು. ಅವರನ್ನು ನಮ್ಮ ಮನೆಯಲ್ಲಿಟ್ಟುಕೊಳ್ಳುವುದು ಬೇಡ ಎಂದು ಹೇಳಲು ನಿಮಗೆ ಹೇಗೆ ಮನಸ್ಸಾಗುತ್ತಿದೆ. ನನಗೆ ನಿಮ್ಮ ಮಾತುಗಳು ಸ್ವಲ್ಪವೂ ಇಷ್ಟ ಆಗುತ್ತಿಲ್ಲ. ನನ್ನ ಅತ್ತೆ ಅವರು. ಅಜ್ಜಿಗೆ ಹೀಗೆಲ್ಲ ಹೇಳುವವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಾ ಎನ್ನುವ ಭರವಸೆ ನನಗೆ ಸಿಗುತ್ತಿಲ್ಲ. ಒಂದಲ್ಲ ಒಂದು ದಿನ ನಮ್ಮನ್ನು ಈ ಮನೆಯಿಂದ ಹೊರ ಹಾಕುತ್ತಾರೆ ನೀವು ಮಾತನಾಡಿ ಎಂದು ಶ್ರೀನಿವಾಸ್ ಬಳಿ ಲಕ್ಷ್ಮೀ ಅತ್ತು ಹೇಳುತ್ತಾಳೆ. ಲಕ್ಷ್ಮೀ ಯ ಮಾತು ಕೇಳಿ ಶ್ರೀನಿವಾಸ್ ಗೆ ಕಣ್ಣೀರು ಬರುತ್ತದೆ.

ಸಂತೋಷ್ ಸ್ವಾರ್ಥ ಬುದ್ಧಿಗೆ ನೊಂದ ಶ್ರೀನಿವಾಸ್

ಮಕ್ಕಳ ಸ್ವಾರ್ಥ ಬುದ್ಧಿಯನ್ನು ಕಂಡು ಭಯವಾಗುತ್ತದೆ. ನಮಗೆ ಹುಟ್ಟಿದ ಮಕ್ಕಳ ಇವರು ಎನ್ನುವ ಅನುಮಾನ ಕಾಡುತ್ತದೆ. ಅಷ್ಟರ ಮಟ್ಟಿಗೆ ತಲೆ ಕೆಟ್ಟು ಹೋಗಿರುತ್ತದೆ. ಆದರೂ ಅದೆಲ್ಲವನ್ನೂ ತನ್ನಲ್ಲೇ ತಡೆದುಕೊಂಡು ಶ್ರೀನಿವಾಸ ಕೊಂಚ ಜೋರಾಗಿಯೇ ಮಕ್ಕಳ ಬಳಿ ಮಾತನಾಡುತ್ತಾನೆ. ನೀವು ಮನೆಯನ್ನು ಇಬ್ಭಾಗ ಮಾಡಿದಾಗ ನಾನೇನು ಹೇಳಲಿಲ್ಲ. ಇದು ಸ್ವಂತ ಮನೆಯಲ್ಲ. ಬಾಡಿಗೆ ಮನೆಯಲ್ಲಿ ಇಬ್ಭಾಗ ಆಗಿದೆ. ನಾನು ಇದಕ್ಕೆ ಏನು ಉತ್ತರ ಕೂಡ ಕೊಡಲಿಲ್ಲ ಆದರೆ ಇದೀಗ ತನ್ನ ತಾಯಿ ಈ ಮನೆಯಲ್ಲಿ ಇರಬಾರದು ಎಂದು ಹೇಳುವ ಹಕ್ಕು ಯಾರು ಕೊಟ್ಟಿಲ್ಲ. ನನ್ನ ತಾಯಿ ಈ ಮನೆಯಲ್ಲಿಯೇ ಇರುತ್ತಾರೆ ನಾನು ಸೂಚಿಸಿದ ರೂಮ್ ನಲ್ಲೆ ಇರುತ್ತಾರೆ. ನಾನು ನಿರ್ಧಾರ ಮಾಡಿಯಾಗಿದೆ ಎಂದು ಖಡಕ್ ಆಗಿ ಹೇಳುತ್ತಾರೆ.

ಅಪ್ಪನ ಮಾತಿಗೆ ಮರು ಮಾತನಾಡದ ಮಕ್ಕಳು

ಶ್ರೀನಿವಾಸ ಮಾತನ್ನು ಕೇಳಿದ ಮಕ್ಕಳು ಬೆಪ್ಪಾಗುತ್ತಾರೆ. ತನ್ನ ತಂದೆ ಏನು ಮಾತನಾಡುವುದು ಇಲ್ಲ ಎಂದುಕೊಂಡೆವು ಆದರೆ ತಮ್ಮ ತಂದೆ ಕೋಪ ಮಾಡಿಕೊಳ್ಳುವುದು ಇದೆ ಮೊದಲು ಎಂದು ಸಂತೋಷ್ ಅಪ್ಪನ ಮಾತು ಕೇಳಿ ಬಾಯಿ ಮುಚ್ಚಿ ಕುಳಿತುಕೊಳ್ಳುತ್ತಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X