Lakshmi Nivasa ; ಶ್ರೀಕಾಂತ್ ಸಾವಿನ ಸುತ್ತ ಅನುಮಾನ ಸಿದ್ದು ಗೆ ಹೆಚ್ಚಿದ ತಳಮಳ..!
ಶ್ರೀಕಾಂತ್ ಸಾವಿಗೆ ನಾನೇ ಕಾರಣ ಎಂದು ವೆಂಕಿ ಈ ಕೇಸ್ ನಲ್ಲಿ ಸರೆಂಡರ್ ಆಗಿದ್ದಾನೆ. ಶ್ರೀಕಾಂತ್ ಸಾವಿಗೆ ಕಾರಣನಾದ ಸಿದ್ದುಗೆ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ. ಶ್ರೀಕಾಂತ್ ಸಾವಿಗೆ ನಾನೇ ಕಾರಣ ಆಗಿದ್ದರು ಬೇರೆ ಯಾರು ಈ ಕೊಲೆಯನ್ನ ನಾನೇ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ.
ಆದರೆ ಆತ ಯಾರು ಏನು ಎಂಬುವುದು ಸಿದ್ದುಗೆ ಬಹಳಷ್ಟು ಕೂತೂಹಲ ಹೆಚ್ಚಿಸಿದೆ. ಅದಕ್ಕಾಗಿ ಸಿದ್ದು ತನ್ನ ಅಣ್ಣನನ್ನು ಕರೆದು ಆತನನ್ನು ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಾನೆ. ಶ್ರೀಕಾಂತ್ ಸಾವಿಗೆ ಕಾರಣ ಆಗಿದ್ದು ನಾನು. ನಾನು ಬಹಳ ಆರಾಮವಾಗಿ ಓಡಾಡುತ್ತಿದ್ದೇನೆ. ಆದರೆ ಇದೀಗ ಆ ಕೇಸ್ ಅನ್ನು ಬೇರೆಯವರ ತಲೆಗೆ ಕಟ್ಟಿದ್ದೀರಾ ಆತ ಯಾರು ಆತನಿಗೆ ನೀವು ಹಣ ನೀಡಿದ್ದೀರಾ ಎನ್ನುವ ಒಂದೊಂದೇ ಪ್ರಶ್ನೆಗಳು ಸಿದ್ದುಗೆ ಮೂಡುತ್ತದೆ.

ಸಿದ್ದು ಬಹಳ ಒಳ್ಳೆಯ ವ್ಯಕ್ತಿ. ಆತ ಬೇರೆಯವರ ಬಗ್ಗೆಯೂ ಬಹಳಷ್ಟು ಕನಿಕರ ತೋರಿಸುತ್ತಾನೆ. ತನಗೆ ಸಹಾಯ ಮಾಡಲು ಬಂದಾತ ಅದೆಂತಾ ಸಂಕಷ್ಟದಲ್ಲಿ ಸಿಲುಕಿದ್ದಾನೋ ಎನ್ನುವುದು ತಿಳಿದಿಲ್ಲ. ಆತನೇನಾದರು ಅಂತಹ ಸಂಕಷ್ಟದಲ್ಲಿ ಸಿಲುಕಿದ್ದರೆ, ಆತನ ಕುಟುಂಬದಲ್ಲಿ ಏನಾದರು ಸಂಕಷ್ಟ ಇದ್ದರೆ ಅದೆಲ್ಲವನ್ನೂ ನಾನು ಪರಿಹರಿಸುತ್ತೇನೆ ಎಂದು ಹೇಳುತ್ತಾನೆ.
ಇದನ್ನು ಕೇಳಿದ ಸಿದ್ದು ಅಣ್ಣ ಅದೆಲ್ಲವನ್ನೂ ನಾವು ನೋಡಿಕೊಂಡಿದ್ದೇವೆ ಎಂದು ಹೇಳಿದರು ಕೂಡ ಆತನ ಮಾತನ್ನು ಕೇಳಲು ಸಿದ್ದು ರೆಡಿ ಇರುವುದಿಲ್ಲ. ನಾನು ಸ್ಟೇಶನ್ ನಲ್ಲಿ ಇರುವಾತ ಯಾರು ಏನು ಎಂಬುವುದನ್ನು ಸ್ವಲ್ಪ ನೋಡುತ್ತೇನೆ ಎಂದಾಗ ಅದಕ್ಕೆ ಕೂಡ ಸಿದ್ದು ಅಣ್ಣ ಒಪ್ಪಲಿಲ್ಲ. ಆದರೆ ಸಿದ್ದು ಅಣ್ಣನ ಮಾತು ಕೇಳುವ ಗೋಜಿಗೆ ಹೋಗಲೇ ಇಲ್ಲ.
ಅಣ್ಣ ನೀನು ಅದೆಷ್ಟೇ ತಡೆದರು ನಾನು ಮಾತ್ರ ಖಂಡಿತ ಆತ ಯಾರು ಎನ್ನುವುದನ್ನು ನೋಡಿಯೇ ನೋಡುತ್ತೇನೆ ಎಂದು ಹೇಳುತ್ತಾನೆ. ಇತ್ತ ಭಾವನ ಮಾತ್ರ ತಂಗಿಯನ್ನು ಕಳೆದುಕೊಂಡಿರುವ ದುಃಖದಲ್ಲಿರುತ್ತಾಳೆ. ಭಾವನ ಬಹಳಷ್ಟು ಹಚ್ಚಿಕೊಂಡಿರುವುದು ಆಕೆಯ ತಂಗಿಯನ್ನು ಆದರೆ ಜಾಹ್ನವಿ ಯಾವತ್ತೂ ಇನ್ನೂ ಬಾರದ ಲೋಕಕ್ಕೆ ಹೋಗುತ್ತಾಳೆ ಎನ್ನುವುದು ಯಾರು ಅಂದುಕೊಂಡೆ ಇರುವುದಿಲ್ಲ.ಜಾಹ್ನವಿ ತಂದೆ ತಾಯಿಗೆ ಇದು ನುಂಗಲಾರದ ಬಿಸಿ ತುಪ್ಪದ ಹಾಗೆ ಆಗುತ್ತದೆ.
ಜಾಹ್ನವಿಯನ್ನ ಕಳೆದುಕೊಂಡ ಜಯಂತ್ ವಿಲ ವಿಲ ಓದ್ದಾಡುತ್ತಾನೆ. ಜಯಂತ್ ಜಾಹ್ನವಿ ಗೆ ಕೊಟ್ಟ ಕಾಟ ಅಷ್ಟಿಷ್ಟಲ್ಲ ಅಷ್ಟಿಷ್ಟಲ್ಲ. ಬಹಳ ಕೆಟ್ಟದಾಗಿ ಜಯಂತ್ ಜಾಹ್ನವಿಯನ್ನು ನಡೆದುಕೊಂಡಿರುತ್ತಾನೆ. ಆದರೆ ಜಯಂತ್ ಗೆ ಅದ್ಯಾವುದರ ಪರಿವೆ ಇಲ್ಲ. ಆತ ಮೆತ್ತಗೆ ಜಾಹ್ನವಿ ತವರು ಮನೆಯಿಂದ ತನ್ನ ಮನೆಗೆ ಹೊರಟು ಹೋಗುತ್ತಾನೆ. ಆದರೆ ಜಾನು ಬಸುರಿಯಾಗಿದ್ದಳು. ಆದರೆ ಈಗ ಆಕೆಗೆ ಇಲ್ಲ ಎಂದು ತಿಳಿದು ಲಕ್ಷ್ಮೀ ಬಹಳ ಜೋರಾಗಿ ಅಳುತ್ತಾಳೆ.
ಜಾಹ್ನವಿಯ ಸಮಯ ಪ್ರಜ್ಞೆ ಯಿಂದ ತಪ್ಪಿದ ಭಾರಿ ಅನಾಹುತ
ಇತ್ತ ವಿಶ್ವ ತಂದೆ ನರಸಿಂಹಯ್ಯ ಸ್ವಲ್ಪದರಲ್ಲಿ ಅವಘಡದಿಂದ ಪಾರಾಗಿದ್ದಾರೆ. ಅವರನ್ನು ಜಾಹ್ನವಿ ಅಪಾಯದಿಂದ ತಪ್ಪಿಸಿದ್ದಳು. ಬಹಳ ದೊಡ್ಡ ಅಪಘಾತದಿಂದ ಬಚಾವಾದ ನರಸಿಂಹಯ್ಯ ಜಾಹ್ನವಿಯನ್ನು ನೋಡುತ್ತಾನೆ. ಆತನಿಗೆ ಬೀಚ್ ನಲ್ಲಿ ನೋಡಿದ ಹುಡುಗಿ ಈಕೆ ಎನ್ನುವ ಅನುಮಾನ ಶುರುವಾಗುತ್ತದೆ. ಹಾಗೆಯೇ ನರಸಿಂಹ ಈ ಬಗ್ಗೆ ಜಾಹ್ನವಿಯನ್ನು ಪ್ರಶ್ನೆ ಮಾಡಿದಾಗ ಮೊದಲು ಕೊಂಚ ಯೋಚನೆ ಮಾಡುತ್ತಾಳೆ. ಅದಾದ ಬಳಿಕ ಯೋಚಿಸಿ ಉತ್ತರವನ್ನು ನೀಡುತ್ತಾಳೆ. ಇನ್ನು ಜಾಹ್ನವಿಯನ್ನು ಎಲ್ಲಿಯವಳು ಎಂದೆಲ್ಲ ಪ್ರಶ್ನೆ ಮಾಡಿದಾಗ ತಾನು ಕುಂದಾಪುರದವಳು ಎನ್ನುವ ಉತ್ತರವನ್ನು ನೀಡುತ್ತಾಳೆ. ಜಾಹ್ನವಿ ನರಸಿಂಹಯ್ಯ ನ ಆಶ್ರಯ ಪಡೆಯುತ್ತಾಳ? ಎನ್ನುವ ಹಲವಾರು ಪ್ರಶ್ನೆಗಳನ್ನು ಅಭಿಮಾನಿಗಳು ಮಾಡುತ್ತಿದ್ದಾರೆ.
ವಿಶ್ವ ಜಾನು ಒಂದಾಗಲಿ ಎಂದ ಪ್ರೇಕ್ಷಕ ಪ್ರಭುಗಳು
ಹಾಗೆಯೇ ವಿಶ್ವ ಜಾನು ಒಂದಾಗಲಿ ಎಂದು ಅನೇಕ ಜನರು ಒತ್ತಾಯವನ್ನು ಮಾಡುತ್ತಿದ್ದಾರೆ. ವಿಶ್ವ ಜಾಹ್ನವಿ ಚಿಕ್ಕ ವಯಸ್ಸಿನಿಂದಲೂ ಕೂಡ ಒಂದೇ ಶಾಲೆಯಲ್ಲಿ ಓದಿದವರು. ವಿಶ್ವ ಗೆ ಜಾಹ್ನವಿ ಎಂದರೆ ಬಹಳ ಅಚ್ಚುಮೆಚ್ಚು. ಜಾಹ್ನವಿ ಬಳಿ ತನ್ನ ಪ್ರೀತಿಯನ್ನು ಹೇಳಿಕೊಳ್ಳಬೇಕು ಎನ್ನುವ ಆಸೆಯಲ್ಲಿ ವಿಶ್ವ ಇದ್ದ. ಪ್ರೇಕ್ಷಕರಿಗೂ ಈ ಎಪಿಸೋಡ್ ಬಹಳ ಖುಷಿಯನ್ನು ನೀಡಿತ್ತು. ಆದರೆ ಇದೀಗ ವಿಶ್ವನ ಮನೆಗೆ ಜಾಹ್ನವಿ ಹೋಗುತ್ತಿದ್ದಾಳೆ ಇನ್ನಾದರೂ ಇವರಿಬ್ಬರೂ ಒಂದಾಗಲಿ ಎಂದು ಪ್ರೇಕ್ಷಕರು ಅಪೇಕ್ಷೆ ಪಡುತ್ತಿದ್ದಾರೆ.


Click it and Unblock the Notifications











