Lakshmi Nivasa ; ವೆಂಕಿಯನ್ನು ಕಾಣದೆ ಕಂಗಾಲಾದ ಚೆಲ್ವಿ. ಸೊಸೆಗೆ ಸಾಂತ್ವನ ಹೇಳಿದ ಮಾವ !

By ಪೂರ್ವ

ಭಾವನಾಗೆ ಜಾಹ್ನವಿ ನೆನಪು ಹೆಚ್ಚಾಗಿ ಕಾಡುತ್ತಿದೆ. ಆದರೆ ಇದೀಗ ವೆಂಕಿ ನಾಲ್ಕು ದಿನದಿಂದ ಕಾಣಿಸುತ್ತಿಲ್ಲ ಎಂದು ಗೊತ್ತಾದರೆ ಖಂಡಿತವಾಗಿಯೂ ಭಾವನಗೆ ಬೇಸರ ಆಗದೆ ಇರದು. ವೆಂಕಿ ಕಾಣಿಸುತ್ತಿಲ್ಲ ಎಂದು ಚೆಲುವಿ ಬಹಳಷ್ಟು ನೋವು ತಿನ್ನುತ್ತಿರುತ್ತಾಳೆ. ವೆಂಕಿ ಎಂದರೆ ಚೆಲುವಿಗೆ ಜೀವ. ಅಷ್ಟು ಮಾತ್ರವಲ್ಲ ವೆಂಕಿ ಕಾಣಿಸುತ್ತಿಲ್ಲ ಎಂದು ಅದೆಷ್ಟು ಹುಡುಕಾಡಿದ್ದಾಳೋ ಆಕೆಗೆ ತಿಳಿಯದು.

ಪೊಲೀಸ್ ಸ್ಟೇಶನ್ ನಲ್ಲಿ ವೆಂಕಿ ಇದ್ದರೂ ಚೆಲುವಿಗೆ ತಿಳಿಯಲಿಲ್ಲ. ಹಾಗೆಯೇ ಪೊಲೀಸ್ ಕಂಪ್ಲೇಂಟ್ ನೀಡುತ್ತಾಳೆ. ಆದರೆ ವೆಂಕಿಯ ಸುಳಿವು ಪತ್ತೆ ಆಗಲಿಲ್ಲ. ಅದಕ್ಕಾಗಿ ಇದೀಗ ಚೆಲುವಿ ಮಾವನ ಮನೆಯ ಮೆಟ್ಟಿಲೇರಿದ್ದಾಳೆ.

kannada-serial-lakshmi-nivasa-written-update-09th-april

ಆಕೆಗೆ ಬಹಳ ಬೇಸರ ಕಾಡುತ್ತದೆ. ಮನೆಯಲ್ಲಿ ಹೇಗೆ ನಾನು ವೆಂಕಿ ಕಾಣಿಸುತ್ತಿಲ್ಲ ಎಂದು ಹೇಳಲಿ ಎಂದು ಯೋಚನೆ ಮಾಡುತ್ತಿರುತ್ತಾಳೆ. ಒಂದು ಕಡೆಯಲ್ಲಿ ಜಾಹ್ನವಿ ಸಾವಿನ ಸುದ್ದಿ ಬರ ಸಿಡಿಲಿನ ಹಾಗೆ ಮನೆಯಲ್ಲಿ ಅಪ್ಪಳಿಸಿದೆ. ಇನ್ನೂ ವೆಂಕಿ ಕಾಣಿಸುತ್ತಿಲ್ಲ ಎಂದು ಹೇಳಿದರೆ ಮನೆಯವರ ಪರಿಸ್ಥಿತಿ ಹೇಗಾಗಬೇಡ ಎಂದು ಆಲೋಚನೆ ಮಾಡುತ್ತಾಳೆ. ಚೆಲುವಿಯನ್ನು ನೋಡಿದ ಶ್ರೀನಿವಾಸ ಬಹಳ ಪ್ರೀತಿಯಿಂದ ಯಾಕಮ್ಮ ಏನಾಯ್ತು. ಏನಾದರು ಕಷ್ಟ ಆಗುತ್ತಿದೆಯಾ ವೆಂಕಿ ಎಲ್ಲಿದ್ದಾನೆ. ಮೊನ್ನೆಯಿಂದ ಅದೇನೋ ಹೇಳಲು ಮನೆಯ ಬಳಿಗೆ ಬರುತ್ತೀಯಾ ಆಮೇಲೆ ಹೋಗುತ್ತಿಯಾ ಯಾಕೆ ಹೀಗೆ ನಡೆದುಕೊಳ್ಳುತ್ತಿಯಾ ಎಂದು ಹೇಳಿದಾಗ ಚೆಲುವಿ ಅಳುತ್ತಾಳೆ.

ವೆಂಕಿ ಕಾಣಿಸುತ್ತಿಲ್ಲ ಮಾವ. ಮೂರು ನಾಲಕ್ಕು ದಿನ ಆಯಿತು. ಫೋನ್ ಮಾಡಿದರು ಸಿಗುತ್ತಿಲ್ಲ. ಎಲ್ಲಿಗಾದರೂ ಹೋದರೆ ಅವರು ಫೋನ್ ಆದರೂ ಮಾಡಿ ಹೇಳುತ್ತಿದ್ದರು ಆದರೆ ಇದೀಗ ಏನು ಹೇಳದೆ ಹೊರಟು ಹೋಗಿದ್ದಾರೆ ನನಗೆ ಬಹಳ ಭಯವಾಗುತ್ತಿದೆ ಮಾವ ಎಂದು ಜೋರಾಗಿ ಅಳುತ್ತಾಳೆ.

ಈ ಮಾತನ್ನು ಕೇಳಿದ ಶ್ರೀನಿವಾಸ ರಾಯರಿಗೆ ಬಹಳ ಶಾಕ್ ಆಗುತ್ತದೆ. ಇದೇನಮ್ಮ ಹೇಳುತ್ತಿದ್ದಿಯ ಅಲ್ಲ ಹೀಗೆಲ್ಲ ಆಯಿತು ಎಂದು ಒಂದು ಮಾತು ನನ್ನ ಬಳಿ ಹೇಳಬಹುದಾಗಿತ್ತಲ್ಲ ಎಂದು ಹೇಳಿದಾಗ ಚೆಲುವಿ ಇಲ್ಲ ಮಾವ ನಾನು ಈ ವಿಚಾರವನ್ನು ನಿಮ್ಮ ಬಳಿ ಹೇಳಲು ಎಂದು ಬಂದೆವು ಆದರೆ ಆ ದಿನ ಜಾಹ್ನವಿ ನಮ್ಮೆಲ್ಲರನ್ನೂ ಬಿಟ್ಟು ಹೋಗಿದ್ದಾಳೆ ಎಂದು ತಿಳಿಯಿತು. ಇನ್ನು ವೆಂಕಿ ಮನೆಗೆ ಬಂದಿಲ್ಲ ಎನ್ನುವ ವಿಚಾರವನ್ನು ತಾನು ಪ್ರಸ್ತಾಪ ಮಾಡಿದರೆ ನಿಮಗೆ ನೋವು ತಡೆದುಕೊಳ್ಳಲು ಆಗುವುದಿಲ್ಲ ಎಂದು ಮನದಟ್ಟಾಯಿತು. ಅದಕ್ಕೆ ನಿಮ್ಮ ಬಳಿ ಏನು ಹೇಳದೆ ಸುಮ್ಮನಾದೆ ಎಂದು ಹೇಳುತ್ತಾಳೆ. ಇನ್ನು ಶ್ರೀನಿವಾಸ ವೆಂಕಿ ಮನೆಯಲ್ಲಿ ಕಾಣಿಸದೆ ಇರುವುದನ್ನು ಭಾವನ ಬಳಿ ಹೇಳುತ್ತಾನೆ. ಭಾವನ ವೆಂಕಿ ಮನೆಗೆ ಬಾರದೆ ಮೂರು ದಿನ ಆಯಿತಂತೆ ಅಮ್ಮ. ಅವರು ಎಲ್ಲಿಗೆ ಹೋಗಿದ್ದಾರೆ ಏನು ಎತ್ತ ಎಂಬುವುದು ಯಾರಿಗೂ ತಿಳಿದಿಲ್ಲ. ಎಂದು ಹೇಳಿದಾಗ ಭಾವನಗೆ ಬಹಳ ಆಘಾತವಾಗುತ್ತದೆ.

ವೆಂಕಿ ಕಾಣದೆ ಇರುವ ವಿಚಾರ ಕೇಳಿ ಶಾಕ್ ಆದ ಭಾವನ

ಇದೇನು ವೆಂಕಿ ಅಣ್ಣ ಕಾಣಿಸುತ್ತಿಲ್ಲ ಎಂದು ಹೇಳುತ್ತಿದ್ದಾರಲ್ಲ ಎಂದು ಭಾವನ ಆಲೋಚನೆ ಮಾಡುತ್ತಿರುತ್ತಾಳೆ. ಅಲ್ಲಿಗೆ ಬಂದ ಸಿದ್ದು ಜೊತೆಗೆ ಕೂಡ ಭಾವನ ಎಲ್ಲೂ ಕಾಣಿಸುತ್ತಿಲ್ಲ ಎನ್ನುವ ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ.ಸಿದ್ದು ಗಾಬರಿಯಾಗುತ್ತಾನೆ ಯಾವತ್ತೂ ಕೂಡ ವೆಂಕಿಯವರು ಎಲ್ಲಿಗೆ ಹೋಗಬೇಕಾದರೂ ಒಂದು ಮಾತು ಹೇಳಿ ಹೋಗುತ್ತಿದ್ದರು ಆದರೆ ಇದೀಗ ಯಾರ ಬಳಿಯೂ ಒಂದು ಮಾತು ಹೇಳದೆ ವೆಂಕಿ ಭಾವನ ಎಲ್ಲಿಗೆ ಹೋದರೂ ಎಂದು ಆಲೋಚನೆ ಮಾಡುತ್ತಿರುತ್ತಾರೆ. ಇತ್ತ ಜಯಂತ್ ಜಾಹ್ನವಿ ನೆನಪಿನಲ್ಲಿ ಕಾಲ ಕಳೆಯುತ್ತಿರುತ್ತಾನೆ.

ಜಾಹ್ನವಿ ನೆನಪಿನಲ್ಲಿರುವ ಜಯಂತ್

ಜಯಂತ್ ಗೆ ಜಾಹ್ನವಿಯ ನೆನಪು ಹಾಗೆಯೇ ತನ್ನ ಜೊತೆಗೆ ಬಹಳ ಪ್ರೀತಿಯಿಂದ ಇದ್ದ ನೆನಪು ಕಾಡುತ್ತಿರುತ್ತದೆ. ಜಾಹ್ನವಿ ನಿನ್ನನ್ನು ಬಿಟ್ಟು ಹೋಗುವ ಕೆಲಸ ನೀನು ಏಕೆ ಮಾಡಿದೆ. ನಾನು ತುಂಬಾ ಕೋಪಿಷ್ಟ ಹಠಮಾರಿ ನಿಜ ಆದರೆ ನೀವು ನನ್ನನ್ನು ಬಿಟ್ಟು ಹೋಗುವಷ್ಟು ಕ್ರೂರಿ ನಾನಲ್ಲ ಎಂದು ಬಹಳ ಬೇಸರ ವ್ಯಕ್ತ ಪಡಿಸುತ್ತಾನೆ. ಜಾಹ್ನವಿ ಮಾತ್ರ ನರಸಿಂಹಯ್ಯ ನ ಮನೆಯಲ್ಲಿ ಆಶ್ರಯ ಪಡೆಯುತ್ತಾಳೆ. ಜಾಹ್ನವಿ ವಿಶ್ವನ ಜೊತೆಗೆ ಹೆಚ್ಚಿನ ಕಾಲ ಕಳೆಯುವುದು ಮಾತ್ರ ಖಂಡಿತ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X