Lakshmi Nivasa ; ಭಾವನ ಎದುರಿಗೆ ಬಂದ ಗೌಡ್ರು, ಗೌಡರನ್ನು ನೋಡಿ ಭಾವನ ಫುಲ್ ಶಾಕ್,ಮುಂದೇನಾಗುತ್ತೆ.?

By ಪೂರ್ವ

ಭಾವನಗೆ ಆಘಾತದ ಮೇಲೆ ಆಘಾತ ಎದುರಾಗುತ್ತಲೇ ಇದೆ. ಸಿದ್ದೆ ಗೌಡರನ್ನು ಮದುವೆಯಾದ ಬಳಿಕ ಭಾವನ ಕೊಂಚವೂ ನೆಮ್ಮದಿಯಿಂದ ಇರುವುದು ಮಾತ್ರ ಕಾಣುತ್ತಿಲ್ಲ. ಅತ್ತೆ ಮನೆಯಲ್ಲಿ ಅತ್ತೆಯ ಕಾಟ. ಭಾವನ ಮುಖ ನೋಡಿದರೆ ಸಾಕು ಉರಿದು ಬೀಳುತ್ತಾರೆ. ಆದರೆ ಇದೀಗ ಜವರೆ ಗೌಡರು ಭಾವನ ಮನೆಯಲ್ಲಿ ಇರಲಿ ಎಂದು ಹೇಳಿದ ಬಳಿಕ ಕೊಂಚ ಭಾವನಗೆ ನೆಮ್ಮದಿ ತಂದಿದೆ. ಭಾವನ ಜೊತೆ ಸಿದ್ದೆ ಗೌಡ ಇದ್ದೆ ಇರುತ್ತಾನೆ. ಆದರೆ ಇದೀಗ ಮತ್ತೊಮ್ಮೆ ಸಿದ್ದೆ ಗೌಡರ ಪಾಲಿಗೆ ಸಂಕಷ್ಟವೊಂದು ಎದುರಾಗಿದೆ.

ಇತ್ತೀಚಿಗೆ ಭಾವನ ಗೌಡ್ರೆ ಎಂದು ಫೋನ್ ಮೂಲಕ ಯಾರನ್ನು ಕರೆಯುತ್ತಿದ್ದಳೋ ಆತ ಬೇರೆ ಯಾರು ಅಲ್ಲ ಸಿದ್ದೆ ಗೌಡ ಎನ್ನುವ ವಿಚಾರ ಭಾವನ ಗೆ ತಿಳಿಯುವ ಹಂತ ಬಂದು ತಲುಪಿದೆ. ಭಾವನ ಲಕ್ಷ್ಮೀಯ ಎದುರೆ ಗೌಡ್ರ ಜೊತೆ ಮಾತನಾಡುತ್ತೇನೆ ಎಂದು ಹೇಳುತ್ತಾಳೆ ಇದನ್ನು ಕೇಳಿದ ಲಕ್ಷ್ಮೀ ಕೊಂಚ ದೂರ ಹೋಗುತ್ತಾಳೆ. ಆಗ ಸಿದ್ದೆ ಗೌಡ ರ ಫೋನ್ ರಿಂಗ್ ಆಗಿದ್ದು ಜೋಡಿ ಲಕ್ಷ್ಮೀ ಗೆ ಇನ್ನಷ್ಟು ಅನುಮಾನ ಕಾಡುತ್ತದೆ. ಸಿದ್ದೆ ಗೌಡರ ಬಳಿಗೆ ಬಂದ ಲಕ್ಷ್ಮೀ ಸಿದ್ದು ಎಂದು ಕರೆಯುತ್ತಾಳೆ. ಅತ್ತೆಯನ್ನು ನೋಡಿದ ಸಿದ್ದೆ ಗೌಡ ಗೆ ಎನು ಮಾತನಾಡಬೇಕು ಎಂದು ದಿಕ್ಕೇ ತೋಚದ ಹಾಗೆ ಆಗುತ್ತದೆ. ಲಕ್ಷ್ಮೀ ಮಾತ್ರ ಸಿದ್ದು ಗೆ ಬುದ್ದಿ ಮಾತು ಹೇಳುತ್ತಾಳೆ. ನೋಡಿ ಸಿದ್ದೇ ಗೌಡರೆ ನಿಮ್ಮ ಮೇಲೆ ನನಗೆ ಅನುಮಾನ ಕಾಡುತ್ತಿದೆ. ನೀವೇ ಭಾವನ ಬಳಿ ಗೌಡ್ರ ಹಾಗೆ ಮಾತನಾಡುತ್ತಿದ್ದೀರಿ ಎಂದು ಅನ್ನಿಸುತ್ತಿದೆ.

kannada-serial-lakshmi-nivasa-written-update-09th-december

ಹಾಗೇನಾದರೂ ಆದರೆ ಭಾವನ ಮನಸ್ಸು ಒಡೆದು ಹೋಗಬಹುದು. ದಯವಿಟ್ಟು ನೀನು ಆ ರೀತಿ ಮಾಡಬೇಡ ಸತ್ಯ ಆಕೆಯ ಬಳಿ ಹೇಳಿ ಬಿಡು ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಿದ್ದೆ ಗೌಡ ಆಯಿತು ಎಂದು ಒಪ್ಪಿಕೊಳ್ಳುತ್ತಾನೆ. ಅಲ್ಲಿಯೇ ಇದ್ದ ಖುಷಿ ಅಜ್ಜಿ ಜೊತೆ ಸಿದ್ದೆ ಗೌಡ ರ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳುತ್ತಾಳೆ. ತಾನು ಕಷ್ಟದಲ್ಲಿ ಇದ್ದಾಗ ತನ್ನನ್ನು ರಕ್ಷಣೆ ಮಾಡಿದುದರ ಬಗ್ಗೆ ಎಲ್ಲಾ ಅಜ್ಜಿ ಬಳಿ ಹೇಳಿದಾಗ ಲಕ್ಷ್ಮೀಗೆ ಕೊಂಚ ಸಮಾಧಾನ ಆಗುತ್ತದೆ. ಆದರೆ ಭಾವನ ಅಮ್ಮಗೆ ಮಾತ್ರ ಗೌಡ್ರು ಅಂದರೆ ಈ ಅಂಕಲ್ ಎನ್ನುವುದು ಗೊತ್ತಿಲ್ಲ ಎಂದು ಖುಷಿ ಹೇಳುತ್ತಾಳೆ ಇದನ್ನು ಕೇಳಿದ ಲಕ್ಷ್ಮೀ ಕೊಂಚ ಬೇಸರ ಪಡುತ್ತಾಳೆ. ಹಾಗೆಯೇ ಸಿದ್ದೆ ಗೌಡರ ಬಳಿ ನಿಜ ಹೇಳಿಬಿಡುವಂತೆ ಒತ್ತಾಯ ಮಾಡುತ್ತಾಳೆ.

ಸಿದ್ದೆ ಗೌಡರನ್ನು ನೋಡಿ ಭಾವನ ಸ್ತಬ್ದ

ಆ ಕೂಡಲೇ ಭಾವನ ಗೆ ಕರೆ ಮಾಡಿದ ಸಿದ್ದೆ ಗೌಡ , ನಾನು ಇವತ್ತು ನಿಮ್ಮ ಕಣ್ಣ ಮುಂದೆ ಬರುತ್ತೇನೆ ಇಷ್ಟು ಸಮಯ ನಾನು ಯಾರೆಂದು ನೀವು ಹುಡುಕಾಡುತ್ತಿದ್ದೀರಿ. ಆದರೆ ಇದೀಗ ಆ ಸಮಯ ಬಂದಿದೆ. ನಾನೇ ನಿಮ್ಮ ಎದುರು ಬರುತ್ತೇನೆ ಎಂದು ಹೇಳಿ ಭಾವನ ಬಳಿಗೆ ಹೋಗುತ್ತಾರೆ ಸಿದ್ದೆ ಗೌಡರೂ. ಭಾವನ ಗೆ ಸಿದ್ದೆ ಗೌಡನನ್ನು ನೋಡಿ ಶಾಕ್ ಆಗುತ್ತದೆ. ಇದಾದ ಬಳಿಕ ಲಕ್ಷ್ಮೀ ಅಜ್ಜಿ ಹಾಗೆಯೇ ವೆಂಕಿ ಆತನ ಹೆಂಡತಿ ಜಾಹ್ನವಿ ಮನೆಗೆ ಸರ್ಪ್ರೈಸ್ ವಿಸಿಟ್ ಹೋಗುತ್ತಾರೆ. ಜಾಹ್ನವಿ ಖುಷಿಗೆ ಪಾರವೇ ಇಲ್ಲ.

ಜಯಂತ್ ಮನೆಗೆ ಭೇಟಿ ನೀಡಿದ ಜಾಹ್ನವಿ ಫ್ಯಾಮಿಲಿ

ಜಾಹ್ನವಿ ಗೆ ಮನೆಗೆ ಅಮ್ಮ ಅಜ್ಜಿ ಅಣ್ಣ ಬಂದಿರುವುದು ಬಹಳಷ್ಟು ಸಂತಸ ಮೂಡುತ್ತದೆ. ಆದರೆ ಜಯಂತ್ ಗೆ ಒಳಗಿಂದ ಒಳಗೆ ಬಹಳಷ್ಟು ಕೋಪ ಬರುತ್ತದೆ. ಇವರು ಯಾಕೆ ಮನೆಗೆ ಬಂದರು. ನನ್ನ ಮತ್ತು ಜಾಹ್ನವಿ ಮದ್ಯ ಇವರು ಯಾಕೆ ಬಂದರು ಎಂದು ಮನದಲ್ಲಿ ಯೋಚನೆ ಮಾಡುತ್ತಿರುತ್ತಾನೆ. ಇತ್ತ ವೆಂಕಿ ಹಾಗೂ ಜಯಂತ್ ಗೆ ಏನೋ ಅವಿನಾಭಾವ ಸಂಬಂಧ ಇರುವ ಹಾಗೆ ಕಾಣಿಸುತ್ತದೆ. ವೆಂಕಿ ಕೈಯಲ್ಲಿ ಫೋಟೋವನ್ನು ಹಿಡಿದು ಅಳುತ್ತಾನೆ ಆತನಿಗೆ ತನ್ನ ಬಾಲ್ಯ ಸ್ನೇಹಿತನ ನೆನಪು ಕಾಣುತ್ತದೆ ಬಾಲ್ಯ ಸ್ನೇಹಿತ ಎಂದರೆ ಬೆಂಕಿಗೆ ಬಹಳ ಪ್ರೀತಿ. ಆದರೆ ಆ ಬಾಲ್ಯ ಸ್ನೇಹಿತ ಈಗ ಎಲ್ಲಿದ್ದಾನೆ ಎನ್ನುವುದು ವೆಂಕಿಗೆ ತಿಳಿದಿಲ್ಲ ಆದರೆ ಬೆಂಕಿಯ ಜೊತೆ ಆತನ ಫೋಟೋ ಭದ್ರವಾಗಿದೆ. ವೆಂಕಿ ಗೆಳೆಯ ಜಯಂತ್ ಎನ್ನುವುದು ಕೆಲವು ಪ್ರೋಮೋ ನೋಡಿದಾಗ ತಿಳಿಯುತ್ತದೆ. ಜಯಂತ್ ಹಾಗೂ ವೆಂಕಿ ಗೆಳೆತನದ ಬಗ್ಗೆ ತಿಳಿದುಕೊಳ್ಳುವ ಕಾತರದಲ್ಲಿ ಜನರಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X