Lakshmi Nivasa ;ಅಜ್ಜಿ ರೂಮ್‌ನಲ್ಲಿ ಸಿಸಿ ಕ್ಯಾಮರಾ ಇಟ್ಟ ಜಯಂತ್,ಜಾಹ್ನವಿಗೆ ಗೊತ್ತಾದರೆ ಕಥೆ ಏನಾಗುತ್ತೆ ?

By ಪೂರ್ವ

ಶ್ರೀನಿವಾಸ್ ಅಮ್ಮನನ್ನು ಮನೆಗೆ ಕರೆದುಕೊಂಡು ಬಂದಿದ್ದೇ ತಪ್ಪು ಎನ್ನುವ ಹಾಗೆ ಮನೆಯ ಮಕ್ಕಳು ನಡೆದುಕೊಳ್ಳುತ್ತಿದ್ದಾರೆ.ಸಂತೋಷ್ ಗೆ ಭಯ .ಅಜ್ಜಿಯನ್ನ ಮನೆಯ ಸೈಡ್ ಇರುತ್ತಾರೆ.ತನ್ನಿಂದ ಹಣ ಖರ್ಚಾಗುವುದು ಗ್ಯಾರಂಟಿ,ಅದಕ್ಕಾಗಿ ಅಜ್ಜಿ ಮುಂಚೆ ಎಲ್ಲಿ ಮಲಗಿದ್ದರೋ ಆ ಜಾಗದಲ್ಲಿ ಅಜ್ಜಿ ಇರಲಿ ಎನ್ನುವುದು ಸಂತೋಷ್ ವಾದ .

ಆದರೆ ಅತ್ತ ಕಡೆಯಿಂದ ಹರೀಶ್ ಹೆಂಡತಿ ಸಿಂಚನ ಮಾತ್ರ ಬಹಳ ಕೋಪಗೊಂಡಿರುತ್ತಾಳೆ. ಅಜ್ಜಿ ಆಲ್ಲಿ ಇದ್ದರೆ ಏನಾದರು ಸಮಸ್ಯೆ ಯೆ ಅಜ್ಜಿ ಮುಂಚೆ ಎಲ್ಲಿದ್ದಾರೋ ಅಲ್ಲಿಯೆ ಇರಲಿ ಎಂದು ನೀವು ಯಾಕೆ ಹೇಳುವುದು, ಅಜ್ಜಿ ಇದೀಗ ರೂಮ್ ನಲ್ಲಿ ಇದ್ದಾರೆ ಅವರು ಅಲ್ಲಿಯೇ ಇರಲಿ ಎಂದು ಬಹಳಷ್ಟು ಕೋಪದಿಂದ ಹೇಳುತ್ತಾಳೆ .

kannada serial Lakshmi nivasa written update 10th March

ಈ ವೇಳೆ ಮಾತಿಗೆ ಮಾತು ಬೆಳೆದು ದೊಡ್ಡ ಜಗಳ ನಡೆದುಬಿಡುತ್ತದೆ. ಆದರೆ ಮಕ್ಕಳಿಬ್ಬರ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೆ ಲಕ್ಷ್ಮೀ ಹಾಗೂ ಶ್ರೀನಿವಾಸ್ ಮಕ್ಕಳ ದುರ್ವರ್ತನೆ ಕಂಡು ಬಹಳ ನೊಂದುಕೊಳ್ಳುತ್ತಾರೆ. ಇನ್ನು ಶ್ರೀನಿವಾಸನ ಮನೆಗೆ ಜಯಂತ್ ಬರುತ್ತಾನೆ ಆತನಿಗೆ ಅಜ್ಜಿ ರಿಕವರ್ ಆಗುತ್ತಾರಾ ಹಾಗೆಯೇ ಅಲ್ಲಿ ಏನು ನಡೆಯುತ್ತದೆ ಎಂಬುವುದನ್ನು ಹೇಗಾದರೂ ಮಾಡಿ ತಿಳಿದುಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಸಿಸಿ ಕ್ಯಾಮರಾವನ್ನು ಹೇಗಾದರೂ ಹಾಕಬೇಕು ಎಂದುಕೊಂಡಿರುತ್ತಾನೆ.

ಆ ಪ್ರಕಾರವಾಗಿ ಜಾಹ್ನವಿ ಬಳಿ ಹೇಳದೆ ನೇರವಾಗಿ ಶ್ರೀನಿವಾಸ್ ಮನೆಗೆ ಹೋಗುತ್ತಾನೆ. ಜಯಂತ್ ನ ನೋಡಿ ಶ್ರೀನಿವಾಸರಿಗೆ ಖುಷಿ ಆಗುತ್ತದೆ. ಇದೇನು ಅಳಿಯಂದಿರೆ ಸಡನ್ ಆಗಿ ಬಂದ್ರಿ ಜಾಹ್ನವಿ ಎಲ್ಲಿ ಎಂದೆಲ್ಲ ವಿಚಾರಣೆ ಮಾಡುತ್ತಾರೆ. ಇದನ್ನು ಕೇಳಿದ ಜಯಂತ್ ಹೇಗಪ್ಪಾ ಇವರ ಪ್ರಶ್ನೆಗೆ ಉತ್ತರ ನೀಡಲಿ ಎಂದು ಆಲೋಚನೆ ಮಾಡುತ್ತಾನೆ. ಶ್ರೀನಿವಾಸ್ ಮುಂದೆ ನನಗೆ ಅಜ್ಜಿಯನ್ನು ನೋಡಬೇಕು ಎಂದು ಎನಿಸಿತು ನಾವು ಅಜ್ಜಿಯ ಜೊತೆ ಯಾವತ್ತೂ ಸಮಯವನ್ನ ಕಳೆಯುತ್ತಿದ್ದೇವೆ. ಆದರೆ ಇದೀಗ ಅಜ್ಜಿ ನಮ್ಮ ಮನೆಯಲ್ಲಿ ಇಲ್ಲ. ಆದ ಕಾರಣ ನಾನು ಅವರ ಆರೋಗ್ಯ ವಿಚಾರಿಸಲು ಅವರನ್ನು ನೋಡಲು ಬಂದೆ ಎಂದು ಸುಳ್ಳು ಹೇಳುತ್ತಾನೆ. ಇದನ್ನು ಕೇಳಿದ ಲಕ್ಷ್ಮೀ ಹಾಗೂ ಶ್ರೀನಿವಾಸ್ ಗೆ ಖುಷಿ ಆಗುತ್ತದೆ.

ಅಜ್ಜಿ ನೋಡಲು ಬಂದ ಹಾಗೆ ನಟಿಸಿದ ಜಯಂತ್

ಜಯಂತ್ ನನ್ನು ಶ್ರೀನಿವಾಸ್ ಅಜ್ಜಿಯ ರೂಮ್ ಗೆ ಕರೆದುಕೊಂಡು ಹೋಗುತ್ತಾನೆ. ಅಜ್ಜಿಯ ಮುಖ ನೋಡುತ್ತ ಜಯಂತ್ ಗೆ ಹಳೆಯದೆಲ್ಲ ನೆನಪಿಗೆ ಬರುತ್ತಿತ್ತು. ಮಾವನ ಜೊತೆ ಮಾತನಾಡಿ ಮಾತನಾಡಿ ಕೊನೆಗೆ ನನಗೆ ಸ್ವಲ್ಪ ನೀರು ಬೇಕಿತ್ತು ಎಂದು ಹೇಳುತ್ತಾನೆ. ಆ ಕೂಡಲೇ ಶ್ರೀನಿವಾಸ್ ನೀರು ತರಲೆಂದು ಹೋಗುತ್ತಾನೆ. ಆಗ ಸಿಕ್ಕಿದ್ದೇ ಚಾನ್ಸ್ ಎಂದುಕೊಂಡು. ಜಯಂತ್ ಸಿಸಿ ಕ್ಯಾಮರವನು ಪಾಟ್ ನಲ್ಲಿ ಇಟ್ಟು ಬಿಡುತ್ತಾರೆ. ಈ ಕ್ಯಾಮರ ಯಾರ ಕಣ್ಣಿಗೂ ಕಾಣಿಸಲು ಸಾಧ್ಯವೇ ಇಲ್ಲ. ಅಂತಹ ಸಣ್ಣ ಕ್ಯಾಮರಾವನ್ನು ತಂದು ಫಿಕ್ಸ್ ಮಾಡುತ್ತಾನೆ. ಇತ್ತ ಜಾಹ್ನವಿ ಗೆ ತನ್ನ ಗಂಡ ತನ್ನ ತಂದೆ ತಾಯಿ ಮನೆಗೆ ಜಯಂತ್ ಹೋಗುತ್ತಾನೆ ಎನ್ನುವ ಕಲ್ಪನೆಯು ಇಲ್ಲದೆ ಮೆತ್ತಗೆ ನಡೆದುಕೊಂಡು ಜಾಹ್ನವಿ ಆಕೆಯ ತವರು ಮನೆಗೆ ಹೊರಟಿದ್ದಾಳೆ.

ಜಾಹ್ನವಿ ಅಳಲು ಕೇಳಲು ಬಂದ ವಿಶ್ವ

ವಿಶ್ವ ಗೆ ಜಾಹ್ನವಿ ಬಳಿ ಆಕೆಯ ಅವಸ್ಥೆಯ ಬಗ್ಗೆ ತಿಳಿದುಕೊಳ್ಳಲು ಕಾತರತೆ ಹೆಚ್ಚಾಗಿದೆ.ಜಾಹ್ನವಿ ಬಳಿ ಹೋಗಿ ಆಕೆಗೆ ಸಮಾಧಾನ ಮಾಡಬೇಕು.ಆಕೀಗೇ ಸಮಾಧಾನ ಹೇಳಬೇಕು ಎಂದು ತರಾತುರಿಯಲ್ಲಿ ಬರುತ್ತಾನೆ. ಆದರೆ ಜಾಹ್ನವಿ ವಿಶ್ವನ ಕಣ್ಣ ಮುಂದೆ ಪಾಸ್ ಆಗುತ್ತಾಳೆ. ಆದರೆ ವಿಶ್ವಗೆ ಜಾಹ್ನವಿಯನ್ನ ಗುರುತಿಸುವುದು ಕಷ್ಟವಾಗಬಹುದು? ಇತ್ತ ಜಾಹ್ನವಿ ನೇರವಾಗಿ ತಂದೆಯ ಮನೆಗೆ ಹೊರಟಿದ್ದಾಳೆ ಎಲ್ಲಾದರೂ ಜಯಂತ್ ಜಾಹ್ನವಿಯ ಕೈಗೆ ಸಿಕ್ಕಿದರೆ ಜಾಹ್ನವಿ ಮಾತ್ರ ಜಯಂತ್ ನನ್ನ ಸುಮ್ಮನೆ ಬಿಡುವುದಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X