Lakshmi Nivasa ; ತನ್ನ ಮಗನಿಗೋಸ್ಕರ ವೆಂಕಿಯನ್ನು ಬಲಿ ಕೊಡುತ್ತಾನಾ ಜವರೇಗೌಡ..?

ಲಕ್ಷ್ಮಿ ನಿವಾಸದಲ್ಲಿ ಶ್ರೀಕಾಂತ್ ಸಾವಿಗೆ ತನ್ನ ಮಗ ಸಿದ್ದೇಗೌಡನೇ ಕಾರಣ ಎಂದು ಜವರೇ ಗೌಡಗೆ ಗೊತ್ತಾಗಿದೆ. ಸಿದ್ದೇಗೌಡರನ್ನು ರಕ್ಷಿಸಲು ಜವರೇ ಗೌಡ ವೆಂಕಿಯ ಮೇಲೆ ಆರೋಪ ಹೊರಿಸಿದ್ದಾನೆ. ಅಪರಾಧಿಯನ್ನಾಗಿ ಮಾಡಿ ಜೈಲಿಗೆ ಕೂಡ ಕಳುಹಿಸಿದ್ದಾನೆ. ಮತ್ತೊಂದೆಡೆ ಶ್ರೀಕಾಂತ್ ಬರುವಿಕೆಗಾಗಿ ಚೆಲುವಿ ಕಾಯುತ್ತಿದ್ದಾಳೆ. ಇಂದಲ್ಲ ನಾಳೆ ಶ್ರೀಕಾಂತ್ ಬರುತ್ತಾನೆ ಎನ್ನುವ ಭರವಸೆ ಚೆಲುವಿಯದ್ದು. ಆದರೆ ಇದೇ ಸಮಯದಲ್ಲಿ ವೆಂಕಿ ಮರಳಿ ಬರುತ್ತಾನಾ ಎನ್ನುವ ಪ್ರಶ್ನೆ ಈಗ ಉದ್ಭವಿಸಿದೆ.

ಹೌದು, ವೆಂಕಿಯ ಮೇಲೆ ಆರೋಪ ಹೊರಿಸಿ ಜೈಲಿಗೆ ತಳ್ಳಿರುವ ಜವರೇಗೌಡ ಇದೀಗ ವೆಂಕಿಗೆ ಗತಿ ಕಾಣಿಸಬೇಕೆಂದು ಹಾತೊರೆಯುತ್ತಿದ್ದಾನೆ. ವೆಂಕಿಯನ್ನು ನಮಗೆ ಕೊಡಿ ನಾವು ನಮ್ಮ ಫಾರ್ಮ್‌ಹೌಸ್‌ನಲ್ಲಿ ಅವನನ್ನು ಇರಿಸುತ್ತೇವೆ ಎಂದು ಹೇಳಿದ್ದಾನೆ. ಆದರೆ ಜವರೇಗೌಡ ಮನವಿಗೆ ಪೊಲೀಸರು ಮಣೆ ಹಾಕಿಲ್ಲ. ಹೀಗಾಗಿಯೇ ಕೆರಳಿರುವ ಜವರೇಗೌಡ ಸದ್ಯ ಪೊಲೀಸರ ಕಿವಿ ಚುಚ್ಚಿದ್ದಾನೆ.

kannada-serial-lakshmi-nivasa-written-update-10th-may

ವೆಂಕಿಯನ್ನು ಕೊಲ್ಲಲು ಸ್ಕೆಚ್ ಹಾಕಿರುವ ಜವರೇಗೌಡ !

ಈ ಕಡೆ ವೆಂಕಿಗೆ ಇದ್ಯಾವುದರ ಅರಿವು ಇಲ್ಲ. ಮಾತು ಬಾರದ ಕಿವಿ ಕೇಳದ ವೆಂಕಿ ಮನೆಯಿಂದ ಊಟ ಬಂದಿದೆ ಎಂದು ಖುಷಿ ಪಡುತ್ತಾನೆ. ಖುಷಿ ಖುಷಿಯಾಗಿ ಊಟ ಮಾಡುತ್ತಾನೆ. ಮತ್ತೊಂದೆಡೆ ವೆಂಕಿಯನ್ನು ತನ್ನ ವಶಕ್ಕೆ ನೀಡದ ಪೊಲೀಸರಿಗೆನೇ ಸುಪಾರಿಯನ್ನು ನೀಡಿರುವ ಜವರೇಗೌಡ ಎನ್ ಕೌಂಟರ್ ಮಾಡುವಂತೆ ಹೇಳುತ್ತಾನೆ. ಇದಕ್ಕೆ ಪೊಲೀಸ್ ಅಧಿಕಾರಿಗಳು ಹಿಂದೇಟು ಹಾಕುತ್ತಾರೆ. ಎನ್‌ಕೌಂಟರ್ ಮಾಡಿದರೆ ನಮ್ಮ ಬದುಕು ಬೀದಿಗೆ ಬರುವ ಸಾಧ್ಯತೆ ಇದೆ ಈ ಕೆಲಸದಲ್ಲಿ ತುಂಬಾ ರಿಸ್ಕ್ ಇದೆ ಎಂದು ಹೇಳಿದರು ಕೂಡ ಜವರೇಗೌಡ ಪೊಲೀಸರ ಮಾತು ಕೇಳಲು ತಯಾರಿಲ್ಲ.

ವೆಂಕಿ ಪಾತ್ರ ಅಂತ್ಯವಾಗುತ್ತಾ ?

ಪೊಲೀಸರಿಗೆ ಈಗ ಜವರೇಗೌಡ ಬಿಸಿ ತುಪ್ಪವಾಗಿದ್ದಾನೆ. ಆ ಕಡೆ ಉಗಳಲು ಆಗದೇ ಈ ಕಡೆ ಜವರೇಗೌಡ ಹೇಳಿದ ಮಾತನ್ನು ಅರಗಿಸಿಕೊಳ್ಳಲಾಗದೇ ಪೊಲೀಸರು ಅಡ್ಡಕತ್ತರಿಯಲ್ಲಿ ಸಿಲುಕಿದ್ದಾರೆ. ಹೀಗಾಗಿ ಜವರೇಗೌಡನ ಮಾತುಗಳಿಗೆ ಕಟ್ಟು ಬಿದ್ದು ಪೊಲೀಸರು ವೆಂಕಿಯ ಎನ್‌ಕೌಂಟರ್ ಮಾಡುತ್ತಾರಾ ಎನ್ನುವ ಪ್ರಶ್ನೆ ಸದ್ಯ ಅನೇಕ ಪ್ರೇಕ್ಷಕರನ್ನು ಕಾಡುತ್ತಿದೆ.

ಭಾವನಾಗೆ ಸತ್ಯ ಗೊತ್ತಾಗುತ್ತಾ ?

ಹಾಗೇ ನೋಡಿದರೆ ಶ್ರೀಕಾಂತ್ ಜೊತೆ ಭಾವನಾ ಮದುವೆಯಾಗಬೇಕಿತ್ತು. ಆದರೆ ಉದ್ದೇಶಪೂರ್ವಕವಾಗಿ ಮಾಡದಿದ್ದರೂ ಸಿದ್ದು ಕಡೆಯಿಂದ ಅಚಾತುರ್ಯ ನಡೆದಿದೆ. ಅಪಘಾತದಲ್ಲಿ ಶ್ರೀಕಾಂತ್ ಸಾವನ್ನಪ್ಪಿದ್ದಾನೆ. ಶ್ರೀಕಾಂತ್ ಸಾವಿಗೆ ನಾನೇ ಕಾರಣ ಎಂದು ವೆಂಕಿ ಈ ಕೇಸ್ ನಲ್ಲಿ ಸರೆಂಡರ್ ಆಗಿದ್ದಾನೆ. ಶ್ರೀಕಾಂತ್ ಸಾವಿಗೆ ಕಾರಣನಾದ ಸಿದ್ದುಗೆ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿಲ್ಲ.ಮತ್ತೊಂದೆಡೆ ಈ ಎಲ್ಲ ವಿಚಾರ ಭಾವನಾಗೆ ಗೊತ್ತಾದರೆ ಮುಂದೇನು ? ಈ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಸದ್ಯ ನಾನಾ ಕಸರತ್ತು ಮಾಡಿ ಭಾವನಾ ಜೊತೆ ಮದುವೆಯಾಗುವಲ್ಲಿ ಸಿದ್ದೇಗೌಡ್ರು ಯಶಸ್ವಿಯಾಗಿದ್ದು ಭಾವನಾ ಈಗ ಸಿದ್ದು ತಂದೆ ಮತ್ತು ಅಣ್ಣನ ಮನಸನ್ನು ಕೂಡ ಗೆದ್ದಿದ್ದಾಳೆ. ಮತ್ತೊಂದೆಡೆ ವೆಂಕಿಯನ್ನು ಮುಗಿಸಲು ಜವರೇಗೌಡ ಪ್ಲಾನ್ ಮಾಡಿದ್ದು ಮುಂದೇನಾಗುತ್ತೆ ಎನ್ನುವ ಕುತೂಹಲ ಸದ್ಯಕ್ಕೆ ಪ್ರೇಕ್ಷಕರಲ್ಲಿದೆ. ವೆಂಕಿ ವಿಚಾರ ಧಾರಾವಾಹಿಗೆ ಮತ್ತೊಂದು ತಿರುವು ನೀಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
kannada serial Lakshmi Nivasa written update 10th May
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X