Lakshmi Nivasa ; ಲಕ್ಷ್ಮೀ ಎದುರು ಕಾಣಿಸಿಕೊಂಡ ಜಾಹ್ನವಿ, ಗೊಂದಲಕ್ಕೀಡಾದ ಪ್ರೇಕ್ಷಕರು !
ಜಾಹ್ನವಿ ನರಸಿಂಹಯ್ಯನ ಮನೆಯಲ್ಲಿ ನೆಮ್ಮದಿಯಾಗಿ ಇದ್ದಾಳೆ. ಮನೆಯ ಕೆಲಸ ಮಾಡಿಕೊಂಡು ಬಹಳ ಖುಷಿಯಲ್ಲಿದ್ದಾಳೆ. ಆದರೆ ಆಕೆಗೆ ತಾನು ಯಾರು ಎಲ್ಲಿಂದ ಬಂದೆ ತನ್ನ ಹಿನ್ನೆಲೆ ಏನು ಎಂಬುವುದು ಮಾತ್ರ ಆಕೆಗೆ ಗೊತ್ತಿಲ್ಲ. ವಿಶ್ವ ಇನ್ನೂ ನಾನು ಮುಖವನ್ನು ನೋಡಿಲ್ಲ. ವಿಶ್ವ ಗೆ ಕೊಂಚ ಆತಂಕ, ಯಾರು ಏನು ಎಂಬುವುದು ಗೊತ್ತಿಲ್ಲ. ಸುಮ್ಮನೆ ಯಾರನ್ನೋ ಗೊತ್ತು ಗುರಿ ಇಲ್ಲದವರನ್ನು ಮನೆಗೆ ಕರೆದುಕೊಂಡು ಬರುವ ಅಗತ್ಯವೇನಿತ್ತು ಎಂದು ಅಮ್ಮನ ಬಳಿ ಹೇಳುತ್ತಿರುತ್ತಾನೆ . ಹಾಗೆಯೇ ವಿಶ್ವನ ತಾಯಿ ವಿಶ್ವನಿಗೆ ಸಮಾಧಾನ ಮಾಡುತ್ತಾಳೆ. ತಂದೆಯ ಜೀವ ಉಳಿಸಿದಾಕೆಗೆ ಇಷ್ಟೆಲ್ಲ ಮಾಡುತ್ತಿರುವುದು ದೊಡ್ಡ ಎನ್ನುವ ವಿಚಾರ ನನಗೆ ಅನ್ನಿಸುತ್ತಿಲ್ಲ ಎಂದು ಹೇಳುತ್ತಾಳೆ.
ಆಕೆಯ ಮಾತು ಕೇಳಿದ ವಿಶ್ವ ಸಮಾಧನಗೊಳ್ಳುತ್ತಾನೆ. ಜಾಹ್ನವಿ ಗೆ ಎಲ್ಲವೂ ಮರೆತು ಹೋಗಿದೆ. ತನ್ನ ಬಗ್ಗೆಯೇ ಮರೆತ ಜಾಹ್ನವಿ ಗೆ ಏನು ಎತ್ತ ಒಂದು ತಿಳಿಯುತ್ತಿಲ್ಲ. ಜಯಂತ್ ಮಾತ್ರ ಜಾಹ್ನವಿ ಫೋಟೋ ಹಿಡಿದು ಸೈಕೋ ತರ ಆಡುತ್ತಿದ್ದಾನೆ. ಆತನಿಗೆ ಜಾನು ಎಂದರೆ ಅದೆಷ್ಟು ಇಷ್ಟವೆಂದರೆ ಇದೀಗ ರಾತ್ರಿಯೆಲ್ಲಾ ಎದ್ದು ಕುಳಿತು ಫೋಟೋ ಜೊತೆಗೆ ಮಾತನಾಡುತಿರುತ್ತಾನೆ. ಆದರೆ ಶಾಂತಮ್ಮ ಗೆ ಈ ವಿಚಾರ ಅಷ್ಟು ಗೊತ್ತಿಲ್ಲ. ಜಯಂತ್ ಸೈಕೋ ಎಂದು ಗೊತ್ತಾದರೆ ಶಾಂತಮ್ಮ ಕೂಡ ಆತನ ಮನೆಯಲ್ಲಿ ಇರಲಾರಳು. ಶಾಂತಮ್ಮ ಜಯಂತ್ ನನ್ನು ಚಿಕ್ಕ ವಯಸ್ಸಿನಿಂದಲೂ ನೋಡಿರುತ್ತಾಳೆ. ಹಾಗೆಯೇ ಜಯಂತ್ ಎಂದರೆ ಶಾಂತಮ್ಮ ಗೆ ಬಹಳ ಇಷ್ಟ. ಆದ ಕಾರಣ ಜಯಂತ್ ಕರೆದ ಕೂಡಲೇ ಶಾಂತಮ್ಮ ಬಂದಿದ್ದಾಳೆ.

ಇದೀಗ ಅಭಿಮಾನಿಗಳ ಮನದಲ್ಲಿ ಒಂದು ಪ್ರಶ್ನೆ ಕಾಡುತ್ತಲೇ ಇದೆ. ಅದೇನೆಂದರೆ ಜಾಹ್ನವಿ ಜಯಂತ್ ಮನೆಯಲ್ಲಿ ಇರಬೇಕಾದರೆ ಶಾಂತಮ್ಮ ನನ್ನು ಯಾಕೆ ಕರೆದುಕೊಂಡು ಬರಲಿಲ್ಲ ಜಯಂತ್ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡದೇ ಇರದು. ಜಾಹ್ನವಿ ನೆನಪಿನಲ್ಲಿ ಲಕ್ಷ್ಮೀ ದಿನ ದೂಡುತ್ತಿದ್ದಾಳೆ . ಆಕೆಗೆ ಬಹಳಷ್ಟು ಭಯ ಕಾಡುತ್ತದೆ. ತನ್ನ ಮಗಳು ಇಷ್ಟು ಖುಷಿಯಲ್ಲಿದ್ದಳು ಆದರೆ ಆಕೆಗೆ ಯಾಕೆ ಇಂತಹ ಕಷ್ಟ ಕೊಟ್ಟುಬಿಟ್ಟೆ ದೇವರೇ ನೀನು ಎನ್ನುವ ಬೇಸರ ಆಕೆಗೆ ಬಹಳಷ್ಟು ಕಾಡುತ್ತದೆ. ರಾತ್ರಿ ಶ್ರೀನಿವಾಸ ಹಾಗೂ ಲಕ್ಷ್ಮಿ ಮಲಗಿರುತ್ತಾರೆ ಆಗ ಜಾನವಿ ರೂಮಿಗೆ ಬಂದ ಹಾಗೆ ಅನುಭವ ಲಕ್ಷ್ಮಿಗೆ ಆಗುತ್ತದೆ. ಲಕ್ಷ್ಮಿ. ಒಮ್ಮಿಂದೊಮ್ಮೆಲೆ ಎದ್ದು ನೋಡಿದಾಗ ಇದರಲ್ಲಿ ಜಾಹ್ನವಿ ನಿಂತಿರುತ್ತಾಳೆ. ಆಕೆಯನ್ನು ನೋಡಿದ ಲಕ್ಷ್ಮೀ ಗೆ ಖುಷಿಯಾಗುತ್ತದೆ.
ಮಗಳನ್ನು ನೋಡಿ ಖುಷಿಪಟ್ಟ ಲಕ್ಷ್ಮೀ
ಏನಮ್ಮಾ ಜಾನು ನೀನು ಅಲ್ಲಿಯೇ ನಿಂತಿದ್ದಿಯಾ ಬಾ ಅಮ್ಮ ಒಳಗಡೆ ಎಂದು ಹೇಳಿ ಜಾಹ್ನವಿ ಜೊತೆ ಮಾತನಾಡಲು ತೊಡಗುತ್ತಾಳೆ. ಜಾಹ್ನವಿ ಬಹಳ ಅಳುಕಿನಿಂದ ತನ್ನ ತಾಯಿಯ ಬಳಿಗೆ ಬರುತ್ತಾಳೆ.ಇದು ಕನಸೋ ಅಥವಾ ನನಸೋ ಎಂಬುವುದು ಇನ್ನಷ್ಟೇ ತಿಳಿದು ಬರಬೇಕಿದೆ. ಜಾನು ಗೆ ಯಾರ ನೆನಪು ಕೂಡ ಇಲ್ಲ ತನ್ನ ಪಾಡಿಗೆ ನರಸಿಂಹಯ್ಯ ನ ಮನೆಯಲ್ಲಿ ಕೆಲಸ ಮಾಡಿಕೊಂಡು ದಿನ ದೂಡುತ್ತಿದ್ದಾಳೆ. ಸಿದ್ದು ಹಾಗೂ ಭಾವನಾ ಇದೀಗ ಇಬ್ಬರು ಕೂಡ ಒಬ್ಬರನ್ನೊಬ್ಬರು ಬಹಳಷ್ಟು ಪ್ರೀತಿ ಮಾಡುತ್ತಿರುತ್ತಾರೆ ಆದರೆ ಇದೀಗ ಸಿದ್ದೇಗೌಡರ ತಂದೆ ಜವರೇಗೌಡ ತಪ್ಪಿನ ಬಗ್ಗೆ ಅರ್ಥವಾಗುತ್ತದೆ.
ಜವರೆ ಗೌಡರ ಪ್ಲಾನ್ ಫ್ಲಾಪ್ ಆಗುತ್ತಾ ?
ತಾನು ರೂಪಿಸಿದ ಖೆಡ್ಡಾಗೆ ತಾನೆ ಬೀಳುತ್ತೇನೆ ಎನ್ನುವ ಅನುಭವ ಜವರೇಗೌಡರಿಗೆ ಆಗುತ್ತದೆ. ಜವರೇಗೌಡರೂ ತನ್ನ ಮಗ ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹೊರಿಸಲು ಸನ್ನದ್ಧದರಾಗಿರುತ್ತಾರೆ. ಆದರೆ ಜವರೇಗೌಡ ಹೂಡಿದ ಮಾಸ್ಟರ್ ಪ್ಲಾನ್ ಗೆ ಸಿಕ್ಕಿ ಹಾಕಿಕೊಂಡದ್ದು ಮಾತ್ರ ವೆಂಕಿ. ಈ ವಿಚಾರ ಜವರೇಗೌಡರಿಗೆ ತಿಳಿಯುತ್ತದೆ ಇದರಿಂದ ಬಹಳಷ್ಟು ಆತಂಕ ಪಡುತ್ತಾರೆ. ವೆಂಕಿ ಎಲ್ಲಾದರೂ ಆರೋಪಿ ಎಂದು ಎಲ್ಲರಿಗೂ ತಿಳಿದಿದ್ದರೆ ಖಂಡಿತವಾಗಿಯೂ ಬಹಳ ದೊಡ್ಡ ಕಷ್ಟ ಆಗುತ್ತಿತ್ತು ಆದರೆ ವಿಚಾರ ಪೊಲೀಸ್ ಮತ್ತು ನಡುವೆ ಇರುವುದರಿಂದ ನನಗೆ ಕೊಂಚ ಮಟ್ಟಿಗೆ ಖುಷಿ ಆಯಿತು. ಇಲ್ಲವಾದರೆ ಖಂಡಿತವಾಗಿಯೂ ಕಷ್ಟವಾಗುತ್ತಿತ್ತು ಎಂದು ಮನದಲ್ಲಿ ಅಂದುಕೊಳ್ಳುತ್ತಾರೆ.
ವೆಂಕಿ ಎಲ್ಲಿದ್ದಾನೆ ಎಂದು ಎಲ್ಲರೂ ಹುಡುಕಾಟ ಮಾಡುತ್ತಿದ್ದಾರೆ ಆದರೆ ಆತನ ಸುಳಿವು ಯಾರಿಗೂ ಸಿಗುತ್ತಿಲ್ಲ. ಸಿದ್ದು ಕೂಡ ವೆಂಕಿ ಗಾಗಿ ಸಾಕಷ್ಟು ಅಲೆದಾಡಿದ್ದಾನೆ. ಆದರೆ ವೆಂಕಿ ಎಲ್ಲಿದ್ದಾನೆ ಏನು ಎನ್ನುವುದೇ ತಿಳಿಯುತ್ತಿಲ್ಲ ಚೆಲುವಿಗೆ ಮಾತ್ರ ಬಹಳ ಬೇಸರವಾಗುತ್ತದೆ. ಅತ್ತು ಅತ್ತು ಆಕೆಯ ಕಣ್ಣೀರು ಬತ್ತಿ ಹೋಗುತ್ತಿದೆ .ಇತ್ತ ಜೈಲಿನಲ್ಲಿರುವ ವೆಂಕಿ ಮನೆಯವರ ನೆನಪಲ್ಲಿರುತ್ತಾನೆ. ಚೆಲುವಿಗೆ ತಾಯಿಯ ಕಣ್ಣು ಆಪರೇಶನ್ ಗೆ ದುಡ್ಡು ಹೊಂದಿಸಲು ವೆಂಕಿ ಶತಾಯ ಗತಾಯ ಪ್ರಯತ್ನ ಪಡುತ್ತಿದ್ದಾನೆ. ತಾನು ಜೈಲು ಪಾಲಾದರೆ ಆ ಬಂದ ಹಣದಿಂದ ಹೇಗಾದರೂ ಮಾಡಿ ಅತ್ತೆಯ ಕಣ್ಣು ಆಪರೇಶನ್ ಮಾಡಬೇಕು ಎಂದು ಯೋಚನೆ ಮಾಡುತ್ತಿರುತ್ತಾನೆ.


Click it and Unblock the Notifications











