Lakshmi Nivasa ; ಜಯಂತ್ ಗೆ ಸಿಕ್ತು ಜಾಹ್ನವಿ ಸುಳಿವು, ಗಂಡನ ಕೈಗೆ ಸಿಕ್ಕಿ ಹಾಕಿಕೊಳ್ಳುತ್ತಾಳಾ ಚಿನ್ನುಮರಿ ?
ಜಾಹ್ನವಿಗೆ ಹಳೆಯ ನೆನಪು ಬಂದು ಬಿಟ್ಟಿದೆ. ಆಕೆಗೆ ತನ್ನ ಗಂಡನ ಬಳಿಗೆ ಹೋಗುವುದು ಸ್ವಲ್ಪ ಕೂಡ ಇಷ್ಟವಿಲ್ಲ. ಆದರೆ ತಂದೆ ತಾಯಿಯನ್ನ ನೋಡಬೇಕು ಎನ್ನುವ ಆಸೆ ಮಾತ್ರ ಬಹಳಷ್ಟಿದೆ. ಅದಕ್ಕಾಗಿ ವಿಶ್ವನ ಮನೆಯಿಂದ ಜಾಹ್ನವಿ ನೇರವಾಗಿ ತನ್ನ ತಂದೆ ತಾಯಿಯ ಮನೆಗೆ ಹೋಗುತ್ತಾಳೆ. ಮನೆಗೆ ಹೋಗುವ ಹಾದಿಯಲ್ಲಿ ಒಬ್ಬ ಪಕ್ಕದ ಮನೆಯ ಹುಡುಗ ಜಾನು ಗೆ ಸಿಗುತ್ತಾನೆ. ಜಾಹ್ನವಿ ಗೆ ಬಹಳ ಖುಷಿ ಆಗುತ್ತದೆ. ಆತ ರಾತ್ರಿಯ ವೇಳೆ ಕೂಡ ಮನೆಯ ಹೊರಗಡೆ ಆಡುತ್ತಿರುವುದನ್ನು ನೋಡಿದ ಜಾಹ್ನವಿ ಬುದ್ದಿ ಮಾತು ಹೇಳುತ್ತಾಳೆ. ಆದರೆ ಜಾಹ್ನವಿ ಮಾತು ಕೇಳುವ ಸ್ಥಿತಿಯಲ್ಲಿ ಆ ಹುಡುಗ ಇರುವುದಿಲ್ಲ. ಆ ಹುಡುಗನಿಗೆ ಜಾಹ್ನವಿ ಚಾಕಲೇಟ್ ಕೊಟ್ಟು ಅಲ್ಲಿಂದ ಮನೆಗೆ ಹೋಗುತ್ತಾಳೆ.
ಬಳಿಕ ಯೋಚಿಸಿದ ಹುಡುಗ ಅಯ್ಯೋ ಅಕ್ಕ ಸತ್ತು ಹೋಗಿದ್ದಾಳೆ. ಮತ್ತೆ ಇವರ್ಯಾರೂ ಎನ್ನುವ ಯೋಚನೆ ಆತನಿಗೆ ಮೂಡುತ್ತದೆ . ಇನ್ನು ಜಾಹ್ನವಿ ಅಮ್ಮನ ಬಳಿಗೆ ಹೋಗುತ್ತಾಳೆ ಅದೇ ಲಕ್ಷ್ಮೀ ಗೆ ಜಾಹ್ನವಿಯನ್ನೂ ನೋಡಿ ಕನಸು ಎಂದು ಭಾಸವಾಗುತ್ತದೆ. ಬಳಿಕ ಜಾಹ್ನವಿ ತನ್ನ ಅಜ್ಜಿಯ ಬಳಿಗೆ ಹೋಗುತ್ತಾಳೆ. ಅಜ್ಜಿ ಜೊತೆ ಮನಬಿಚ್ಚಿ ಮಾತನಾಡುತ್ತಾಳೆ. ಈ ರೀತಿ ಗಂಡ ಸಿಕ್ಕಿರುವುದಕ್ಕೆ ವೇದನೆ ಪಡುತ್ತಾಳೆ, ನಾನು ಯಾವತ್ತೂ ಕೂಡ ಇಂತಹ ಹುಡುಗ ಸಿಗುತ್ತಾನೆ ಎಂದು ಅಂದುಕೊಂಡಿರಲಿಲ್ಲ ಇದರಿಂದ ನನಗೆ ಬಹಳಷ್ಟು ಬೇಸರವಾಗಿದೆ ಎಂದಾಗ ಅಜ್ಜಿ ಕೂಡ ಜಾಹ್ನವಿ ಜೊತೆ ಮಾತು ಶುರು ಮಾಡುತ್ತಾರೆ. ಅಜ್ಜಿ ಮಾತನಾಡುತ್ತಿರುವುದನ್ನು ನೋಡಿ ಜಾಹ್ನವಿ ಗೆ ಖುಷಿ ಆಗುತ್ತದೆ. ಆಕೆಯ ಜೊತೆ ಮನಬಿಚ್ಚಿ ಮಾತನಾಡಿ ಜಾಹ್ನವಿ ಅಲ್ಲಿಂದ ನರಸಿಂಹಯ್ಯ ನ ಮನೆಗೆ ಹೋಗುತ್ತಾಳೆ.

ಜಯಂತ್ ಗೆ ಈಗಾಗಲೇ ಜಾಹ್ನವಿ ಬದುಕಿದ್ದಾಳೇ ಎಂದು ಅನ್ನಿಸುತ್ತಿದೆ.ಆದರೆ ಜಾಹ್ನವಿ ಬದುಕಿದ್ದಾಳೆ ಎನ್ನುವ ಸಣ್ಣ ಸುಳಿವು ಆತನಿಗೆ ಸಿಕ್ಕರೆ ಖಂಡಿತವಾಗಿ ಜಾಹ್ನವಿಯನ್ನು ಹುಡುಕುತ್ತಾನೆ. ಜಯಂತ್ ಮರುದಿನ ಜಾಹ್ನವಿ ಮನೆಗೆ ಬರುತ್ತಾನೆ. ಹತ್ತಿರದಲ್ಲಿಯೇ ಕಾರು ನಿಲ್ಲಿಸಿ ಅಲ್ಲಿಂದ ಜಾಹ್ನವಿ ಮನೆಗೆ ಹೋಗಬೇಕು ಎಂದುಕೊಳ್ಳುವ ವೇಳೆ ಪಕ್ಕದ ಮನೆಯ ಹುಡುಗ ಬಂದು ಜಾಹ್ನವಿ ಅಕ್ಕ ಎಲ್ಲಿದ್ದಾರೆ ನಿನ್ನೆ ನನಗೆ ಚಾಕಲೇಟ್ ಕೊಟ್ಟು ಮನೆಗೆ ಹೊರಟು ಹೋದರು ಎಂದು ಹೇಳುತ್ತಾನೆ. ಆ ಮಾತು ಕೇಳಿದ ಜಯಂತ್ ಮಾತ್ರ ಶಾಕ್ ಆಗುತ್ತಾನೆ. ಹಾಗೆಯೇ ಜಯಂತ್ ಜಾಹ್ನವಿ ಮನೆಗೆ ಹೋಗಿ ಅಜ್ಜಿ ರೂಮ್ ಬಳಿಗೆ ಹೋಗುತ್ತಾನೆ. ಅಲ್ಲಿ ಜಾಹ್ನವಿ ಕಾಲು ಗೆಜ್ಜೆ ಜಯಂತ್ ಕೈಗೆ ಸಿಗುತ್ತದೆ.
ಜಾಹ್ನವಿ ಕಾಲ್ಗೆಜ್ಜೆ ನೋಡಿ ಆಶ್ಚರ್ಯಗೊಂಡ ಜಯಂತ್
ಇದೆಲ್ಲವನ್ನೂ ನೋಡಿದ ಜಯಂತ್ ಗೆ ತನ್ನ ಹೆಂಡತಿ ಬದುಕಿದ್ದಾಳೆ ಅನ್ನಿಸುತ್ತದೆ. ಇದೆಲ್ಲಾ ನೋಡಿದ ಶಾಂತಮ್ಮಗೆ ಕೊಂಚ ಶಾಕ್ ಆಗುತ್ತದೆ. ಇದೆಲ್ಲಾ ಹೇಗೆ ಸಾಧ್ಯ ಶ್ರೀಲಂಕಾ ದಲ್ಲಿ ಸಮುದ್ರಕ್ಕೆ ಬಿದ್ದವಳು ಮತ್ತೆ ಬದುಕಿ ಬರಲು ಹೇಗೆ ಸಾಧ್ಯ ಎಂದು ಯೋಚನೆ ಮಾಡುತ್ತಾರೆ.ಹಾಗೆಯೇ ಖಂಡಿತ ಜಾಹ್ನವಿ ಮತ್ತೆ ಬರಲು ಸಾಧ್ಯವಿಲ್ಲ ಆದರೆ ಆಕೆಯ ಆತ್ಮ ಏನಾದರು ಓಡಾಡುತ್ತಿದೆಯಾ ಎಂದು ಶಾಂತಮ್ಮ ಗೆ ಅನಿಸದೆ ಇರದು.
ವೆಂಕಿ ನೆನೆದು ಅಳುತ್ತಿರುವ ಚೆಲುವಿ
ಇತ್ತ ವೆಂಕಿ ಜೈಲಿನಲ್ಲಿ ದಿನ ಕಳೆಯುತ್ತಿದ್ದಾನೆ.ಅನ್ನ ನೀರು ಇಲ್ಲದೇ ಬಸವಳಿದಿದ್ದಾನೆ. ಆತನಿಗೆ ಆತನ ಹೆಂಡತಿಯ ಬಗ್ಗೆ ಮಾತ್ರ ಬಹಳ ದೊಡ್ಡ ಯೋಚನೆ. ಚೆಲುವಿ ಏನು ಮಾಡುತ್ತಿದ್ದಾಳೆ ಏನೋ, ಆಕೆಗೆ ಗೊತ್ತಿಲ್ಲದೆ ಇಂತಹ ಕೆಲಸ ಮಾಡುತ್ತಿದ್ದೇನೆ ಆದರೆ ಈ ವಿಚಾರ ಆಕೆಗೆ ಗೊತ್ತಾದರೆ ಮಾತ್ರ ಆಕೆ ತನ್ನನ್ನು ಸುಮ್ಮನೆ ಬಿಡುವುದಿಲ್ಲ ಎನ್ನುವುದು ವೆಂಕಿ ಗೆ ಗೊತ್ತಿರುತ್ತದೆ. ಜವರೆ ಗೌಡರಿಗೆ ಇದೀಗ ಬಿಸಿ ತುಪ್ಪ ಬಾಯಲ್ಲಿಟ್ಟ ಅನುಭವವಾಗುತ್ತದೆ. ಹೇಗಾದರೂ ಇದರಿಂದ ಪಾರಾಗಬೇಕು ಎನ್ನುವ ಯೋಚನೆ ಮಾಡುತ್ತಿರುತ್ತಾನೆ.


Click it and Unblock the Notifications











