Lakshmi Nivasa ; ಸಂತೋಷ್ ಮಾತಿಗೆ ನೊಂದ ತಂದೆ ತಾಯಿ, ಮಕ್ಕಳ ಬಳಿ ಶ್ರೀನಿವಾಸ್ ಕೈ ಮುಗಿದು ಬೇಡಿದ್ದೇನು ?

By ಪೂರ್ವ

ಸಂತೋಷ್ ಗೆ ಆತನ ತಂದೆ ಎಲ್ಲಿ ತನ್ನ ಬಳಿ ಹಣ ಕೇಳುತ್ತಾರೆ ಎನ್ನುವ ಭಯ. ಯಾರು ಬೇಕಾದರೂ ಹಾಳಾಗಿ ಹೋಗಲಿ ನಾನು ನನ್ನ ಹೆಂಡತಿ ಹಾಗೂ ಮಗು ಚೆನ್ನಾಗಿರಬೇಕು ಎಂದು ಸಾಕಷ್ಟು ಯೋಚನೆ ಮಾಡುತ್ತಾನೆ. ಆದರೆ ತಂದೆ ಏನಾದರು ಹೇಳಿದರೆ ಸಾಕು ಮುಖ ಗಂಟಿಕ್ಕಿ ಮಾತನಾಡುತ್ತಾನೆ. ಇದೀಗ ಜಾಹ್ನವಿ ಸತ್ತು ಹೋಗಿದ್ದಾಳೆ ಆಕೆಗೆ ಮಾಡಬೇಕಾದ ಕಾರ್ಯವನ್ನು ನಾವು ಮಾಡಬೇಕು ಎಂದು ಹೇಳುತ್ತಾನೆ. ಇದನ್ನು ಕೇಳಿದ ಸಂತೋಷ್ ಗೆ ಕೋಪ ಬರುತ್ತದೆ. ಇದೇನು ಅಪ್ಪ ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಹಣ ಕೇಳಲು ಅಪ್ಪ ಪೀಠಿಕೆ ಹಾಕುತ್ತಿದ್ದಾರಾ ಎಂದು ಯೋಚನೆ ಮಾಡಿ ನಾನೇನು ಅದಕ್ಕೆ ಹಣ ಕೊಡಬೇಕಾ ಎಂದು ಜೋರಾಗಿಯೇ ಹೇಳುತ್ತಾನೆ.

ಇದನ್ನು ಕೇಳಿದ ಶ್ರೀನಿವಾಸ್ ಗೆ ಬಹಳಷ್ಟು ಬೇಸರವಾಗುತ್ತದೆ. ತಾನೇ ಎಲ್ಲಾ ಕೆಲಸ ನಿಭಾಯಿಸಬೇಕಾಗಿದೆ. ನನ್ನ ಮಕ್ಕಳು ದೊಡ್ಡವರಾಗಿದ್ದಾರೆ ಆದರೆ ಯಾರು ಕೂಡ ಮುತುವರ್ಜಿ ವಹಿಸಿ ಕೆಲಸ ಮಾಡುವವರು ಇಲ್ಲ ಎಲ್ಲ ಕೆಲಸವನ್ನೂ ಶ್ರೀನಿವಾಸ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಸಂತೋಷ್ ಮಾತಿಗೆ ಶ್ರೀನಿವಾಸ್ ರಾಯರು ಬಹಳ ನೊಂದುಕೊಂಡು ಮಕ್ಕಳ ಬಳಿ ಕೈ ಮುಗಿದು ಬೇಡಿಕೊಳ್ಳುತ್ತಾರೆ.

kannada-serial-lakshmi-nivasa-written-update-16th-april

ದಯವಿಟ್ಟು ಜಾಹ್ನವಿ ಕಾರ್ಯವನ್ನು ಮಾಡುತ್ತೇನೆ ಯಾರಿಗೆಲ್ಲ ಹೇಳಬೇಕು ಅವರಿಗೆಲ್ಲ ಹೇಳಿಬಿಡಿ. ಈ ಕೆಲಸವನ್ನಾದರೂ ಮಾಡಿ ಎಂದು ಬಹಳ ನೊಂದುಕೊಳ್ಳುತ್ತಾರೆ. ಶ್ರೀನಿವಾಸ್ ಮಾತು ಕೇಳಿದ ಲಕ್ಷ್ಮೀ ಗೆ ದುಃಖ ತಡೆಯಲಾಗುತ್ತಿಲ್ಲ . ಬಹಳಷ್ಟು ನೋವು ಆಗುತ್ತದೆ. ಆದರೆ ಏನು ಮಾಡಬೇಕು ಎಂದು ದಿಕ್ಕು ತೋಚದಾಗುತ್ತದೆ. ಇತ್ತ ಗಂಡನ ಮಾತು ಕೇಳಿ ವೀಣಾ ಗೆ ಮಾತ್ರ ಬಹಳ ಕೋಪ ಬರುತ್ತದೆ. ಗಂಡನಿಗಿರುವ ಕಂಜೂಸ್ ಬುದ್ದಿ ಗೆ ಬಹಳ ನೊಂದುಕೊಳ್ಳುತ್ತಾರೆ. ಸಂತೋಷ್ ಹಾಗೂ ಹರೀಶ್ ಇಬ್ಬರು ಕುಳಿತು ಕುಶಲೋಪರಿ ಮಾತನಾಡುತ್ತಿರುತ್ತಾರೆ. ಸಂತೋಷ್ ಗೆ ಹರೀಶ್ ಮೇಲೆ ಸಿಕ್ಕಾಪಟ್ಟೆ ಡೌಟು.

ಹರೀಶ್ ಮೇಲೆ ಅನುಮಾನ ವ್ಯಕ್ತಪಡಿಸಿದ ಸಂತು

ನಮ್ಮ ಮನೆಗೆ ಕಳ್ಳ ಬರಲು ಹೇಗೆ ಸಾಧ್ಯ. ? ಸಿಂಚನನ ಒಡವೆ ಹೇಗೆ ಕಳುವಾಯಿತು ಈ ಬಗ್ಗೆ ಯಾಕೆ ಹರೀಶ ಪೊಲೀಸ್ ಕಂಪ್ಲೇಂಟ್ ಕೊಡಲಿಲ್ಲ ಎಂದು ಸಂತೋಷ್ ಯೋಚಿಸುತ್ತಾನೆ. ಸಂತೋಷ್ ಒಂದು ಸಿಗರೇಟ್ ತುಂಡನ್ನು ಹರೀಶ್ ಗೆ ಕೊಟ್ಟು ಮಾತು ಶುರು ಮಾಡುತ್ತಾನೆ. ನಮ್ಮ ನಡುವೆ ಯಾರೋ ಹುಳಿ ಹಿಂಡಿದ್ದು, ಒಂದಾಗಿದ್ದ ಕುಟುಂಬ ಇದೀಗ ಇಬ್ಭಾಗವಾಗಿದೆ. ಸಿಂಚನ ಒಡವೆ ಕಳ್ಳತನವಾಗಿ ಹೋಯಿತಲ್ಲಾ ನೀನು ಯಾಕೆ ಪೊಲೀಸರಿಗೆ ಕಂಪ್ಲೇಂಟ್ ಕೊಡಲು ಹೋಗಲಿಲ್ಲ. ನೀನು ಬಹಳ ದೊಡ್ಡ ತಪ್ಪು ಮಾಡಿದೆ ಎಂದು ಹೇಳುತ್ತಾನೆ. ಈ ಮಾತು ಕೇಳಿದ ಹರೀಶ್ ಗೆ ಕೊಂಚ ಗಾಬರಿಯಾಗುತ್ತದೆ. ಆದರೆ ಸಂತೋಷ್ ಗೆ ಡೌಟ್ ಬಾರದ ರೀತಿ ಮಾತನಾಡಿ ಅಲ್ಲಿಂದ ಹೊರಟು ಹೋಗುತ್ತಾನೆ. ಆದರೆ ಹರೀಶ್ ಮೇಲೆ ಸಂತೋಷ್ ಗೆ ಡೌಟ್ ಬರುತ್ತದೆ.

ಜಯಂತ್ ನಡವಳಿಕೆ ಕಂಡು ಆಶ್ಚರ್ಯ ಪಟ್ಟ ಶಾಂತಮ್ಮ

ಸಿಂಚನಳ ಒಡವೆ ಹಾಗೆಯೇ ನನ್ನ ಐದು ಲಕ್ಷ ರೂಪಾಯಿ ಹಣವನ್ನು ಯಾರು ಕದ್ದಿದ್ದಾರೆ ಎಂದು ಯೋಚನೆ ಮಾಡುತ್ತಾನೆ. ನಾವೇನಾದರೂ ಮನೆಯಲ್ಲಿಯೇ ಕಳ್ಳನನ್ನು ಸಾಕುತ್ತಿದ್ದೇವೆಯಾ ಎನ್ನುವ ಅನುಮಾನ ಆತನನ್ನು ಕಾಡುತ್ತದೆ. ಇತ್ತ ಜಯಂತ್ ಜಾಹ್ನವಿ ಇಲ್ಲಿಯೇ ಇದ್ದಾಳೆ ಎನ್ನುವ ಅನುಮಾನ ಆತನನ್ನು ಬಹಳಷ್ಟು ಕಾಡುತ್ತದೆ. ಹೇಗಾದರೂ ಮಾಡಿ ಜಾಹ್ನವಿಯನ್ನು ಹುಡುಕಿಸಬೇಕೆಂದು ಅಂದುಕೊಂಡು ಅದಕ್ಕೊಂದಿಷ್ಟು ಜನರನ್ನು ಅಪಾಯಿಂಟ್ ಮಾಡಿಕೊಂಡು ನೆರೆಕೆರೆಯ ಊರುಗಳಲ್ಲಿ ಜಾಹ್ನವಿ ಬಗ್ಗೆ ಸರ್ಚ್ ಮಾಡಲು ಹೇಳುತ್ತಾನೆ.ಇತ್ತ ಶಾಂತಮ್ಮ, ಜಯಂತ್ ಸ್ವಭಾವ ಬದಲಾಗುತ್ತಿರುವುದನ್ನು ಗಮನಿಸುತ್ತಲೇ ಇರುತ್ತಾಳೆ. ಊಸರವಳ್ಳಿಯ ಹಾಗೆ ಬಣ್ಣ ಬದಲಾಯಿಸಿಕೊಂಡಿರುತ್ತಾನೆ. ವೆಂಕಿ ಯ ಪತ್ತೆ ಇಲ್ಲ ಎಂದು ಮನೆ ಮಂದಿಗೆ ಆತಂಕ ಶುರುವಾಗಿದೆ. ಚೆಲುವಿ ತನ್ನ ಗಂಡನ ನೆನಪಿನಲ್ಲಿ ಕಣ್ಣಿರಲಿ ಕೈ ತೊಳೆಯುತ್ತಿದ್ದಾಳೆ . ವೆಂಕಿ ಗೆ ಏನಾದರು ಆದರೆ ನಾನು ಜೀವ ಸಹಿತ ಉಳಿಯಲ್ಲ ಎಂದು ಶ್ರೀನಿವಾಸ್ ಅಳಲು ತೋಡಿಕೊಂಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X