Lakshmi Nivasa ; ಹರೀಶ್ ಮೇಲೆ ಸಂತೋಷ್ ಗೆ ಹೆಚ್ಚಿದ ಅನುಮಾನ,ವೆಂಕಿ ನೆನಪಿನಲ್ಲಿ ಕಂಬನಿ ಮಿಡಿಯುತ್ತಿರುವ ಚೆಲುವಿ !
ಚೆಲುವಿ ವೆಂಕಿ ನೆನಪಿನಲ್ಲಿ ಕಣ್ಣೀರು ಹಾಕುತ್ತಿದ್ದಾಳೆ. ವೆಂಕಿ ಗೆ ಕೂಡ ಜೈಲಿನಲ್ಲಿ ಕುಳಿತು ಮಂಕಾಗಿದ್ದಾನೆ. ಆತನಿಗೆ ತನ್ನ ಹೆಂಡತಿಯ ನೆನಪು ಕಾಡುತ್ತಿರುತ್ತದೆ. ಬಹಳಷ್ಟು ಮೌನಿಯಾಗಿರುತ್ತಾನೆ. ಆತನ ಮನದಲ್ಲಿ ಸಾಕಷ್ಟು ನೋವು ಇರುತ್ತದೆ. ಬಹಳ ಪ್ರೀತಿ ಮಾಡುತ್ತಿರುವ ವ್ಯಕ್ತಿ ಒಮ್ಮೆಲೆ ಕಾಣಿಸುತ್ತಿಲ್ಲ ಎಂದಾಗ ಚೆಲುವಿಯ ಮನಸ್ಥಿತಿ ಹೇಗಾಗಿರಬೇಡ. ಆಕೆಗೆ ಬಹಳ ನೋವಾಗುತ್ತದೆ. ಮುಂದೇನು ಮಾಡಬೇಕು ಎನ್ನುವ ಆಲೋಚನೆ ಆಕೆಗೆ ಮೂಡದಾಗುತ್ತದೆ. ತನ್ನ ಗಂಡನನ್ನು ಚೆಲುವಿ ಬಹಳ ಪ್ರೀತಿ ಮಾಡುತ್ತಿರುತ್ತಾಳೆ. ವೆಂಕಿಯನ್ನು ಬಿಟ್ಟು ಒಂದು ದಿನವೂ ಇರಲಿಲ್ಲ. ಇತ್ತ ಚೆಲುವಿ ಗೆ ಆಕೆಯ ತಾಯಿ ಧೈರ್ಯ ಹೇಳುತ್ತಾಳೆ.
ಖಂಡಿತವಾಗಿಯೂ ವೆಂಕಿ ಬಂದೆ ಬರುತ್ತಾನೆ. ಆತನಿಗೆ ಏನೋ ಯೋಚನೆ ಬಂದಿರಬಹುದು. ಅಥವಾ ಏನೋ ಬಲವಾದ ಕಾರಣ ಇದ್ದಿರಬಹುದು ಅದಕ್ಕೆ ಆತ ದಿಢೀರ್ ಆಗಿ ಕಾಣಿಸಲಿಲ್ಲ.ಬಂದೆ ಬರುತ್ತಾನೆ ಎಂದು ಚೆಲುವಿಗೆ ಸಾಂತ್ವನ ಹೇಳುತ್ತಾನೆ. ಇತ್ತ ಸಂತೋಷ್ ಗೆ ಹರೀಶ್ ಮೇಲೆ ಅನುಮಾನ ಮೂಡುತ್ತಿರುತ್ತದೆ. ಒಡವೆಯ ಅಂಗಡಿಗೆ ಹೋದಾಗ ಹರೀಶ ನಕಲಿ ಒಡವೆ ಮಾಡಿಸಿಕೊಂಡು ಹೋಗಿದರ ಬಗ್ಗೆ ಅಲ್ಲಿರುವ ಒನರ್ ಹೇಳುತ್ತಾರೆ.

ಆಗ ಸಂತೋಷ್ ಗೆ ಹರೀಶ್ ಮೇಲೆ ಡೌಟ್ ಬರುತ್ತದೆ. ಹರೀಶ್ ಹೀಗೆಲ್ಲ ಮಾಡಿರಲು ಸಾಧ್ಯನ. ಆತ ಇಷ್ಟೆಲ್ಲ ಮಾಡಿದಾಗ ನನ್ನ ಐದು ಲಕ್ಷ ಹಣವನ್ನು ಕದ್ದಿರಬಹುದು ಎಂದು ಆಲೋಚನೆ ಮಾಡುತ್ತಾನೆ. ಐದು ಲಕ್ಷ ಹಣ ಕಳ್ಳತನ ಆದ ಬಗ್ಗೆ ಪೊಲೀಸ್ ಸ್ಟೇಶನ್ ಗೆ ಕಂಪ್ಲೇಂಟ್ ಕೊಡಲು ಸಂತೋಷ್ ಬರುತ್ತಾನೆ. ಆದರೆ ಮತ್ತೆ ಐದು ಲಕ್ಷ ಎಲ್ಲಿಂದ ಬಂತು ಎಂದು ಮನೆಯವರು ಕೇಳಿದರೆ ಅವರಿಗೆಲ್ಲ ಹೇಗೆ ಉತ್ತರ ನೀಡುವುದು ಎನ್ನುವ ಆಲೋಚನೆ ಸಂತೋಷ್ ನನ್ನು ಕಾಡುತ್ತದೆ. ಕೂಡಲೇ ಪೊಲೀಸ್ ಸ್ಟೇಶನ್ ನಿಂದಾ ಹೊರಗೆ ಬಂದ ಸಂತೋಷ್ ನೇರವಾಗಿ ಮನೆಗೆ ಹೋಗುತ್ತಾನೆ.
ಜ್ವರದಿಂದ ಬಳಲುತ್ತಿರುವ ಭಾವನ ಗೆ ಆರೈಕೆ ಮಾಡುತ್ತಿರುವ ಸಿದ್ದು
ಇತ್ತ ಭಾವನ ಗೆ ಬಹಳ ಜೋರು ಜ್ವರ ಬಂದಿರುತ್ತದೆ. ಸಿದ್ದು ಗೆ ಆತಂಕ ಹೆಚ್ಚಾಗಿ ಡಾಕ್ಟರ್ ಅನ್ನು ಮನೆಗೆ ಕರೆಸುತ್ತಾನೆ. ಭಾವನಗೆ ಡಾಕ್ಟರ್ ಇಂಜೆಕ್ಷನ್ ಕೊಡುತ್ತಾರೆ. ಸಿದ್ದುಗೆ ಭಾವನ ನೋವು ತಿನ್ನುವುದು ಸ್ವಲ್ಪ ಕೂಡ ಇಷ್ಟ ಇರುವುದಿಲ್ಲ. ಭಾವನ ಕಷ್ಟ ಪಡುತ್ತಿರುವುದು ನೋಡಿ ಸಿದ್ದು ಗೆ ಬಹಳ ಬೇಸರವಾಗುತ್ತದೆ. ಮುಂದೇನು ಮಾಡಬೇಕು ಎಂದು ಆತನಿಗೆ ದಿಕ್ಕು ತೋಚದೇ ಕುಳಿತುಕೊಳ್ಳುತ್ತಾನೆ . ಜಾಹ್ನವಿ ಕಾರ್ಯಕ್ಕೆ ಮನೆಯಲ್ಲಿ ತಯಾರಿ ನಡೆಯುತ್ತಿದೆ ಲಕ್ಷ್ಮೀ ಹಾಗೂ ಶ್ರೀನಿವಾಸ್ ಪತ್ರಿಕೆಯನ್ನು ರೆಡಿ ಮಾಡಿ ಹರೀಶ್ ಕೈ ಸ್ವಲ್ಪ ನೀಡುತ್ತಾನೆ ಇನ್ನೂ ಸ್ವಲ್ಪ ಸಂತೋಷ್ ಕೈಗೆ ಕೊಡಲು ಇಟ್ಟುಕೊಂಡಿರುತ್ತಾನೆ.
ಸಂತೋಷ್ ಕೋಪ ನೋಡಿ ಬೇಸರಗೊಂಡ ತಂದೆತಾಯಿ
ಸಂತೋಷ್ ಮೆತ್ತಗೆ ಮನೆಗೆ ಬರುತ್ತಾನೆ. ಸಂತೋಷ್ ನನ್ನು ನೋಡಿದ ಶ್ರೀನಿವಾಸ್ ಬಾರಪ್ಪ ನೀನು ಕೂಡ ಸ್ವಲ್ಪ ಜನಕ್ಕೆ ಪತ್ರಿಕೆ ಕೊಡು ಎಂದು ಹೇಳುತ್ತಾನೆ. ಆದರೆ ಸಂತೋಷ್ ಗೆ ಹರೀಶ್ ಮೇಲೆ ಬಹಳ ಕೋಪವಿರುತ್ತದೆ . ಅದನ್ನು ಯಾರ ಜೊತೆಗೂ ತೋರಿಸಿಕೊಳ್ಳದೆ ಸುಮ್ಮನಿರುತ್ತಾನೆ. ಮತ್ತೆ ಜೋರಾಗಿ ಹೇಳುತ್ತಾನೆ ಈ ಕಡೆ ನಾನು ಇರುವ ಜಾಗ . ಅತ್ತ ಕಡೆ ಅವರು ಇರುವ ಜಾಗ. ನನ್ನ ಮಗನಿಗೆ ಯಾರು ಬರುವುದು ಬೇಡ ಎಂದು ಬಹಳ ಜೋರಾಗಿಯೇ ಹೇಳುತ್ತಾನೆ. ಸಂತೋಷ್ ಮಾತು ಕೇಳಿ ಲಕ್ಷ್ಮೀ ಶ್ರೀನಿವಾಸ್ ದಂಪತಿಗೆ ಬಹಳ ನೋವಾಗುತ್ತದೆ.


Click it and Unblock the Notifications











