LakshmiNivasa ; ಪೊಲೀಸ್ ಸ್ಟೇಶನ್ ಎದುರು ಧರಣಿ ಕುಳಿತ ಭಾವನ, ಭಾವನ ನಡೆಗೆ ಸಿಡಿಮಿಡಿಗೊಂಡ ತಾಯವ್ವ
ಶ್ರೀಕಾಂತ್ ಸಾವಿನ ಸುತ್ತಾ ಸಾಕಷ್ಟು ಅನುಮಾನ ಇದೆ. ಹೇಗಾದರೂ ಮಾಡಿ ಖುಷಿ ತಂದೆ ಸಾವು ಹೇಗಾಗಿದೆ ಎನ್ನುವ ವಿಚಾರ ತಿಳಿದುಕೊಳ್ಳಬೇಕು ಎನ್ನುವ ಆಲೋಚನೆಯನ್ನು ಭಾವನಾ ಮಾಡುತ್ತಿರುತ್ತಾಳೆ. ಭಾವನ ಗೆ ಸಿದ್ದೇ ಗೌಡರು ಬಹಳಷ್ಟು ಸಹಾಯ ಮಾಡುತ್ತಾರೆ. ಭಾವನ ಏನೇ ಕೆಲಸ ಮಾಡಿದರೂ ಅದಕ್ಕೆ ಸಪೋರ್ಟ್ ಸಿದ್ದೆ ಗೌಡರು ಮಾಡುತ್ತಾರೆ. ಪೊಲೀಸ್ ಸ್ಟೇಶನ್ ಎದುರಿಗೆ ಭಾವನ ಧರಣಿ ಹೂಡಲು ಮುಂದಾಗುತ್ತಾರೆ. ಹೇಗಾದರೂ ಶ್ರೀಕಾಂತ್ ಸಾವಿನ ವಿಚಾರ ಬಹಿರಂಗ ಆಗಬೇಕು ಹಾಗೆಯೇ ಆಕ್ಸಿಡೆಂಟ್ ಕೇಸ್ ನ ಪೊಲೀಸ್ ಸ್ಟೇಶನ್ ನಲ್ಲಿ ತೆಗೆದುಕೊಳ್ಳಬೇಕು ಎನ್ನುವ ವಿಚಾರಕೆ ಭಾವನ ಸ್ಟ್ರೈಕ್ ಮಾಡುತ್ತಾಳೆ.
ಭಾವನಳನ್ನು ನೋಡಿದ ಮೀಡಿಯಾದವರು ಓಡೋಡಿ ಬರುತ್ತಾರೆ. ಇದನ್ನೆಲ್ಲ ಮನೆಯಲ್ಲಿ ಟಿವಿ ಮೂಲಕ ನೋಡುತ್ತಿದ್ದ ತಾಯವ್ವ ಮಾತ್ರ ಬಹಳಷ್ಟು ಕೋಪ ಮಾಡಿಕೊಳ್ಳುತ್ತಾರೆ. ಮರಿ ಗೌಡ , ಹಾಗೂ ರೇಣುಕಾ ಳನ್ನು ಜೋರಾಗಿ ಕರೆದ ತಾಯವ್ವ ನೋಡು ನಿನ್ನ ಸೊಸೆ ಪೊಲೀಸ್ ಸ್ಟೇಶನ್ ಎದುರು ಕುಳಿತು ನಮ್ಮ ಮರ್ಯಾದೆ ತೆಗೆಯಲು ನೋಡುತ್ತಿದ್ದಾಳೆ. ಮನೆಯಲ್ಲಿ ಇರು ಎಂದು ಅದೆಷ್ಟೇ ಹೇಳಿದರು ಕೂಡ ನನ್ನ ಮಾತಿಗೆ ಬೆಲೆ ಕೂಡ ಇಲ್ಲ. ನನ್ನ ಮಗನ ರಾಜಕೀಯ ಜೀವನಕ್ಕೆ ಈಕೆ ಕಲ್ಲು ಹಾಕುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ ಇವತ್ತು ಮನೆಗೆ ಬರಲಿ, ಇನ್ಮೇಲೆ ಆಕೆ ಯಾವತ್ತೂ ಮನೆ ಬಿಟ್ಟು ಹೋಗಬಾರದು ಹಾಗೆ ಮಾಡುತ್ತೇನೆ ಎಂದು ಖಡಾಖಂಡಿತವಾಗಿ ಎಲ್ಲರ ಮುಂದೆ ತಾಯವ್ವ ಹೇಳುತ್ತಾಳೆ.

ಇದಕ್ಕೆ ನೀಲು ಕೂಡ ಅಜ್ಜಿ ಗೆ ಸಪೋರ್ಟ್ ಮಾಡಿ ಭಾವನಗೆ ತಾಯವ್ವ ಮಾತು ಬಹಳಷ್ಟು ಬೇಸರ ತರಿಸಿದ್ದವು. ಆದರೆ ಆಕೆಗೆ ಶ್ರೀಕಾಂತ್ ಸಾವಿನ ಪ್ರಕರಣವನ್ನು.ಪೊಲೀಸರು ಯಾಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಬಹಳ ದೊಡ್ಡ ಪ್ರಶ್ನೆ ಆಗಿದೆ. ಪೊಲೀಸರು ನ್ಯಾಯದ ಪರ ಇದ್ದರೆ ಹೀಗೆ ಆಗುತ್ತಿರಲಿಲ್ಲ. ಅನ್ಯಾಯ ಆಗುತ್ತಿದ್ದರೂ ಅದನ್ನು ನೋಡುವುದು ಹೇಗೆ ಎಂದು ಆಲೋಚನೆ ಮಾಡುತ್ತಾಳೆ. ಮೀಡಿಯಾದವರು ಬಂದು ಆಗಾಗ ಪ್ರಶ್ನೆ ಕೇಳಿದರು ಭಾವನ ಯಾವುದೇ ಪ್ರಶ್ನೆಗೆ ಉತ್ತರಿಸದೆ ಮೌನವಾಗಿ ಕುಳಿತು ಇರುತ್ತಾಳೆ.
ಮನೆಮಗಳ ಅವಸ್ಥೆ ಕಂಡು ಕಿಡಿಕಾರಿದ ತಾಯವ್ವ
ಇದನ್ನೆಲ್ಲ ಟಿವಿಯಲ್ಲಿ ನೋಡಿದ ತಾಯವ್ವ ಪೊಲೀಸರಿಗೆ ಕರೆ ಮಾಡಿ, ನೋಡಿ ಭಾವನ ಗೆ ಮೊದಲಿಗೆ ಮಾತಿನಲ್ಲೇ ಅಲ್ಲಿಂದ ಹೋಗಲು ಹೇಳಿ ಎಲ್ಲಾದರೂ ಮಾತಿಗೆ ಬಗ್ಗಲಿಲ್ಲ ಎಂದಾದರೆ ಲಾಠಿ ಏಟಿನ ರುಚಿ ತೋರಿಸಿ ಎಂದು ತಾಯವ್ವ ಹೇಳಿದಾಗ ಪೊಲೀಸರು ಆಕೆಯ ಮಾತಿಗೆ ಸಮ್ಮತಿಸಿ ಭಾವನ ಬಳಿಗೆ ಬರುತ್ತಾರೆ. ಭಾವನ ಬಳಿ ಬಹಳ ನಯವಾಗಿ ಮಾತನಾಡಿದ ಪೊಲೀಸರು ಭಾವನಳನ್ನು ಕನ್ವಿನ್ಸ್ ಮಾಡುತ್ತಾರೆ. ಆದರೆ ಭಾವನ ಅದಕ್ಕೆ ಒಪ್ಪದ ಕಾರಣ ಲಾಠಿ ಬೀಸಿದ್ದಾರೆ.
ಲಾಠಿ ಏಟಿನಿಂದ ಪಾರಾದ ಭಾವನ
ಕೂಡಲೇ ಅಲ್ಲಿಗೆ ಬಂದ ಸಿದ್ಧೇಗೌಡರು ಲಾಠಿಯನ್ನು ಕೈಯಲ್ಲಿ ಹಿಡಿದುಕೊಂಡು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಇತ್ತ ಅಜ್ಜಿಯನ್ನು ಸಾಯಿಸುವ ಪ್ರಯತ್ನದಲ್ಲಿ ಜಯಂತ್ ಇರುತ್ತಾನೆ. ಜಯಂತ್ ನ ನಿಜ ರೂಪ ಅಜ್ಜಿಗೆ ತಿಳಿದು ಹೋಗಿದೆ ಆದ ಕಾರಣ ಅಜ್ಜಿಯನ್ನು ಸಹಿಸಿಬಿಡಬೇಕು ಎಂದುಕೊಂಡು ಇರುತ್ತಾನೆ. ಆದರೆ ಜಾಹ್ನವಿ ಮನೆಯಲ್ಲಿ ಇರುವುದನ್ನು ಮನಗಂಡ ಜಯಂತ್ ಹೇಗಾದರೂ ಜಾಹ್ನವಿಯ ಗಮೆನ್ಸ್ ಬೇರೆ ಹರಿಸಿ ಅಜ್ಜಿಯನ್ನು ಸಾಯಿಸಬೇಕು ಎಂದು ನಿರ್ಧಾರ ಮಾಡುತ್ತಾನೆ. ಇತ್ತ ವೆಂಕಿ ತನ್ನ ತಂದೆಯ ಕೈ ಗೆ ಹಣ ನೀಡಿ ಅಜ್ಜಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳುತ್ತಾನೆ.


Click it and Unblock the Notifications











