Lakshmi Nivasa : ಮನೆಗೆ ಮರಳಿ ಬಂದ ಲಕ್ಷ್ಮೀ - ಶ್ರೀನಿವಾಸ್ ದಂಪತಿ, ಹೆತ್ತವರನ್ನು ಹೀಗಾ ಅವಮಾನ ಮಾಡೋದು..!

By ಪೂರ್ವ

ತೀರ್ಥಯಾತ್ರೆಗೆ ಹೋಗಿದ್ದ ಲಕ್ಷ್ಮಿ ಹಾಗೂ ಶ್ರೀನಿವಾಸ ಮನೆಗೆ ವಾಪಸ್ ಆಗಿದ್ದಾರೆ. ಮನೆಯಲ್ಲಿ ಅಶಾಂತಿ ಇದ್ದ ಕಾರಣ ಕೇವಲ ಪತ್ರ ಬರೆದಿಟ್ಟು ಮನೆಯಿಂದ ಅವರಿಬ್ಬರು ಹೊರಗೆ ಹೋಗಿರುತ್ತಾರೆ. ಮಕ್ಕಳ ನಡತೆಯಿಂದಾಗಿ ಶ್ರೀನಿವಾಸ್ ಹಾಗು ಲಕ್ಷ್ಮಿಗೆ ಬಹಳಷ್ಟು ನೋವಾಗಿರುತ್ತದೆ. ಆದರೆ ಅದು ಯಾವುದನ್ನು ಕೂಡ ಯಾರ ಜೊತೆಯೂ ಹೇಳಿಕೊಳ್ಳದೆ ತೋರಿಸಿಕೊಳ್ಳದೆ ಮನಸಲ್ಲಿಯೇ ಮುಚ್ಚಿಟ್ಟುಕೊಂಡಿರುತ್ತಾರೆ. ಇದೀಗ ತೀರ್ಥಯಾತ್ರೆಗೆ ಹೋಗಿ ಮನೆಗೆ ವಾಪಸ್ ಆಗಿದ್ದಾರೆ.

ಅಪ್ಪ-ಅಮ್ಮನನ್ನು ನೋಡಿ ಮಕ್ಕಳಿಗೆ ಖುಷಿಯಾಗುತ್ತದೆ. ಎಂದು ಲಕ್ಷ್ಮಿ ಹಾಗೂ ಶ್ರೀನಿವಾಸ್ ಅಂದುಕೊಂಡಿದ್ದರು. ಆದರೆ ಸಂತೋಷ್ ತಂದೆ ತಾಯಿಯನ್ನು ನೋಡಿ ಕುಹಕವಾಡುತ್ತಾನೆ. ಲಕ್ಷ್ಮಿ ಹಾಗೂ ಶ್ರೀನಿವಾಸ್ ಮನೆಯ ಹೊರಗಿನಿಂದ ಬಹಳ ಖುಷಿಯಿಂದ ಬಾಗಿಲನ್ನು ತಟ್ಟುತ್ತಾರೆ. ಅದರೆ ಮನೆಯ ಒಳಗಿನಿಂದ ಬಂದ ವೀಣಾ ಬಾಗಿಲು ತೆಗೆದಾಗ ಲಕ್ಷ್ಮಿ ಹಾಗೂ ಶ್ರೀನಿವಾಸ ಹೊರಗೆ ನಿಂತುಕೊಂಡಿರುತ್ತಾರೆ. ಅವರಿಬ್ಬರನ್ನ ನೋಡಿ ಬಹಳ ಖುಷಿಯಾಗುತ್ತದೆ.

kannada-serial-lakshmi-nivasa-written-update-18th-february

ಅತ್ತೆ ಮಾವ ಎಲ್ಲಿ ಹೋದರೂ ಏನು ಕಥೆ ಇದು ಯಾವುದು ಕೂಡ ವೀಣಾ ಗೆ ತಿಳಿದಿಲ್ಲ. ಬಹಳ ಗಾಬರಿಯಾಗಿರುತ್ತಾಳೆ. ಇದೀಗ ಆಕೆಗೆ ಇದೀಗ ಅತ್ತೆ ಮಾವನನ್ನು ನೋಡಿ ಬಹಳ ಖುಷಿ ಪಡುತ್ತಾಳೆ. ತನ್ನ ಗಂಡನನ್ನು ಕೂಗಿ ಕರೆಯುತ್ತಾಳೆ. ಸಂತೋಷ್ ಬಂದು ನೋಡಿದಾಗ ಲಕ್ಷ್ಮೀ ಹಾಗೂ ಶ್ರೀನಿವಾಸ್ ಮನೆಯಿಂದ ಹೊರಗಡೆ ನಿಂತುಕೊಂಡಿರುವುದನ್ನು ನೋಡುತ್ತಾನೆ. ನೀವಿಬ್ಬರೂ ಎಲ್ಲಿಗೆ ಹೋಗಿದ್ದು, ಅಲ್ಲ ನಮ್ಮ ಬಳಿ ಹೇಳದೆ ಹೋಗಿರುವ ಕಾರಣವಾದರೂ ಏನು? ನೀವು ಮನೆಯಲ್ಲಿ ಇಲ್ಲ ಅಂತ ಮನೆಗೆ ಅದೆಷ್ಟು ಗಾಬರಿ ಆಯಿತು ಎಂದು ಹೇಳುತ್ತಾನೆ.

ಮನೆಗೆ ಬಂದ ತಂದೆ ತಾಯಿಗೆ ಅವಮಾನಿಸಿದ ಸಂತು

ನೀವು ಪತ್ರ ಬರೆದಿಟ್ಟು ಹೋಗಿಬಿಟ್ಟರೆ ನಮಗೆ ಅದೆಷ್ಟು ಗಾಬರಿ ಆಗುತ್ತದೆ. ಇನ್ನು ಮುಂದೆ ಈ ರೀತಿ ಮಾಡಿದರೆ ನಾನು ಸುಮ್ಮನೆ ಇರುವುದಿಲ್ಲ ಎಂದು ವಾರ್ನಿಂಗ್ ಕೊಡುತ್ತಾನೆ. ಸಂತೋಷ್ ಮಾತಿಗೆ ಲಕ್ಷ್ಮೀ ಹಾಗೂ ಶ್ರೀನಿವಾಸ್ ಬಹಳ ಬೇಸರಪಟ್ಟುಕೊಂಡು ಮುಖ ಮುಖ ನೋಡುತ್ತಾರೆ. ತೀರ್ಥ ಯಾತ್ರೆಯಿಂದ ತಂದೆ ತಾಯಿ ಮನೆಗೆ ಬಂದಾಗ ಬಹಳ ಖುಷಿಯಿಂದ ವೆಲ್ ಕಂ ಮಾಡುತ್ತಾರೆ. ಆದರೆ ಸಂತೋಷ್ ತಂದೆ ತಾಯಿಗೆ ನಿಂದನೆ ಮಾಡುತ್ತಿರುತ್ತಾನೆ ಇದನ್ನು ಕಂಡು ವೀಣಾಗೆ ಕೂಡ ಬಹಳ ಬೇಸರವಾಗುತ್ತದೆ.

ಅತ್ತೆ ಮಾವನನ್ನು ನೋಡಿ ಭಾವುಕರಾದ ವೀಣಾ

ಇತ್ತ ಸಿಂಚನ ಕೂಡ ಅತ್ತೆ ಮಾವನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಸಿಂಚನ ಮಾತಿಗೆ ಹರೀಶ್ ಕೂಡ ತಂದೆ ತಾಯಿ ಗೆ ಬುದ್ದಿ ಹೇಳುವ ಮಟ್ಟಕ್ಕೆ ಬೆಳೆದು ಬಿಟ್ಟ. ವೆಂಕಿ ಹಾಗೂ ಚೆಲುವೆ ಲಕ್ಷ್ಮೀ ಹಾಗೂ ಶ್ರೀನಿವಾಸ್ ಆಗಮನಕ್ಕೆ ಕಾಯುತ್ತಿದ್ದರು. ವೆಂಕಿಗೇ ತಂದೆ ತಾಯಿ ಎಂದರೆ ಬಹಳ ಪ್ರೀತಿ. ಅನಾಥನಾಗಿದ್ದ ವೆಂಕಿಗೆ ಹೆತ್ತ ತಂದೆ ತಾಯಿಗಿಂತಲು ಹೆಚ್ಚಾಗಿ ನೋಡಿಕೊಂಡರು ಅದಕ್ಕಾಗಿ ವೆಂಕಿ ತನ್ನ ತಂದೆ ತಾಯಿಗೆ ಋಣಿಯಾಗಿರುತ್ತಾನೆ. ವೆಂಕಿ ಹಾಗೂ ಚೆಲುವೆ ರೂಮ್ನಲ್ಲಿ ಮಲಗಿರುತ್ತಾರೆ. ಅವರಿಬ್ಬರನ್ನ ಬೇಗ ಏಳಿಸುವುದು ಬೇಡ ಎಂದುಕೊಂಡು ಲಕ್ಷ್ಮಿ ಹಾಗೂ ಶ್ರೀನಿವಾಸ್ ಸುಮ್ಮನಾಗುತ್ತಾರೆ.ಇತ್ತ ಲಕ್ಷ್ಮಿ ನಿದ್ದೆಗೆ ಜಾರುತ್ತಾಳೆ

ವೆಂಕಿ ರೂಮ್ ಬಳಿ ಬಂದ ಶ್ರೀನಿವಾಸರಾಯರು

ಆದರೆ ಶ್ರೀನಿವಾಸ್ ವೆಂಕಿ ಹಾಗೂ ಚೆಲುವಿ ಮಲಗಿದ್ದ ರೂಮಿನ ಬಳಿಗೆ ಬಂದು ಬಾಗಿಲು ತಟ್ಟುತ್ತಾರೆ. ಅವರಿಬ್ಬರೂ ಹೊರಗಡೆ ಬಂದು ನೋಡಿದಾಗ ಅಲ್ಲಿ ಶ್ರೀನಿವಾಸ್ ರಾಯರು ನಿಂತಿರುತ್ತಾರೆ. ಅವರನ್ನು ನೋಡಿದ ವೆಂಕಿಗೆ ಬಹಳಷ್ಟು ಖುಷಿಯಾಗುತ್ತದೆ. ತಂದೆಯ ಕಾಲಿಗೆ ಬಿದ್ದು ನಮಸ್ಕರಿಸುತ್ತಾನೆ. ಆತ ಬಹಳ ಬೇಸರದಿಂದ ಎಲ್ಲಿಗೆ ಹೋಗಿದ್ದೀರಿ ಎಂದು ಕೈ ಭಾಷೆಯಲ್ಲಿ ಕೇಳುತ್ತಾನೆ ಇದನ್ನು ಕೇಳಿದ ಶ್ರೀನಿವಾಸ್ ಕುಂಭಮೇಳಕ್ಕೆ ಹೋಗಿದ್ದೆ. ಮನೆಯಲ್ಲಿ ಆಗುತ್ತಿರುವ ಅವಾಂತರಗಳನ್ನೆಲ್ಲ ನೋಡಿ ನಮಗೆ ಬೇಸರವಾಗಿತ್ತು. ಆದ್ದರಿಂದ ಎಲ್ಲರಿಗೂ ಕೂಡ ಒಳ್ಳೆಯದಾಗಲಿ ಎಂದು ಬೇಡಲು ಹೋಗಿದ್ದೆವು ಎಂದು ಶ್ರೀನಿವಾಸ್ ವೆಂಕಿಯ ಜೊತೆ ಹೇಳುತ್ತಾನೆ. ಇದನ್ನು ಕೇಳಿದ ವೆಂಕಿಗೆ ಬಹಳ ಬೇಸರವಾಗುತ್ತದೆ ಮಾತು ಮುಂದುವರಿಸಿದ ಶ್ರೀನಿವಾಸರಾಯರು ನಿನ್ನನ್ನು ಮನೆಯಿಂದ ಸಂತೋಷ ಹಾಗೂ ಹರೀಶ್ ಹೊರ ಹಾಕಿದಾಗ ನಾವು ಎನು ಮಾಡಲು ಸಾಧ್ಯ ಆಗಲಿಲ್ಲ. ಆದ ಕಾರಣ ನಮಗೆ ಮನದ ಬೇಸರವನ್ನು ಹೊರ ಹಾಕಲು ಇದುವೇ ಸಕಾಲ ಎಂದುಕೊಂಡು ಕುಂಭ ಮೇಳಕ್ಕೆ ಹೋದೆವು ಎಂದು ಹೇಳುತ್ತಾರೆ. ಇದನ್ನು ಕೇಳಿದ ವೆಂಕಿ ಗೆ ಬಹಳ ಬೇಸರವಾಗುತ್ತದೆ. ಕೊನೆಗೆ ತಾಯಿಯ ಆಶೀರ್ವಾದವನ್ನು ಪಡೆದುಕೊಂಡು ವೆಂಕಿ ಹಾಗೂ ಚೆಲುವಿ ಮನೆಯಿಂದ ಹೋಗುತ್ತಾರೆ .

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X