Lakshmi Nivasa ; ಭಾವನ ವಿಚಾರದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡ ತಾಯವ್ವ,ಹೆಂಡತಿ ಜೊತೆ ಮನೆ ಬಿಟ್ಟ ಸಿದ್ದೇಗೌಡ್ರು..!

By ಪೂರ್ವ

ಶ್ರೀಕಾಂತ್ ಸಾವಿಗೆ ನ್ಯಾಯ ಸಿಗಲೇಬೇಕು ಎನ್ನುವ ಕಾರಣಕ್ಕೆ ಭಾವನ ಪೊಲೀಸ್ ಸ್ಟೇಶನ್ ಮೆಟ್ಟಿಲೇರಿರುತ್ತಾಳೆ. ಆಕೆಗೆ ತನ್ನ ಮಾವನ ಮರ್ಯಾದೆ ಘನತೆ ಇದ್ಯಾವುದು ಕೂಡ ದೊಡ್ಡ ವಿಚಾರ ಆಗಿರುವುದೇ ಇಲ್ಲ. ಮಿನಿಸ್ಟರ್ ಸೊಸೆ ಪೊಲೀಸ್ ಸ್ಟೇಶನ್ ಎದುರುಗಡೆ ಕುಳಿತು ಧರಣಿ ಹೂಡಿದರೆ, ಸೊಸೆಗೆ ನ್ಯಾಯ ಒದಗಿಸಲಾಗದ ಮಿನಿಸ್ಟರ್ ಇದ್ದರೆ ಎಷ್ಟು, ಇರದಿದ್ದರೆ ಎಷ್ಟು ಎಂದೆಲ್ಲ ಜನರು ಮಾತನಾಡಿಕೊಳ್ಳುವುದು ಮಾತ್ರ ಸತ್ಯ. ಖುಷಿ ಗೆ ನ್ಯಾಯ ಒದಗಿಸಬೇಕು. ಹಾಗೆಯೇ ಶ್ರೀಕಾಂತ್ ಸಾವಿಗೆ ಕಾರಣ ಯಾರು ಎನ್ನುವುದು ತಿಳಿಯಬೇಕು ಎನ್ನುವುದು ಆಕೆಗೆ ಇರುವ ಹಠ.ಸಿದ್ದೇಗೌಡ್ರು ಭಾವನಳನ್ನು ಬಹಳಷ್ಟು ಪ್ರೀತಿ ಮಾಡುತ್ತಿದ್ದಾರೆ. ಆಕೆಗಾಗಿ ಏನು ಮಾಡಲು ಕೂಡ ಹಿಂದೆ ಮುಂದೆ ನೋಡುವುದಿಲ್ಲ ಅಂತಹದರಲ್ಲಿ ಶ್ರೀಕಾಂತ್ ಸಾವಿಗೆ ಸಿದ್ದೆ ಗೌಡ ಕಾರಣ ಎನ್ನುವ ವಿಚಾರ ಭಾವನ ಗೆ ತಿಳಿದರೆ ಮಾತ್ರ ಖಂಡಿತವಾಗಿಯೂ ಅದನ್ನು ತಡೆದುಕೊಳ್ಳುವ ಶಕ್ತಿ ಆಕೆಗೆ ಇರುವುದಿಲ್ಲ.

ಸಿದ್ದೇಗೌಡ್ರಿಗೆ ನಿಜವಾಗಲೂ ಶ್ರೀಕಾಂತ್ ಸಾವಿಗೆ ತಾನೇ ಕಾರಣ ಎನ್ನುವ ವಿಚಾರ ಗೊತ್ತಿಲ್ಲ. ಆದರೆ ಇದೀಗ ಶ್ರೀಕಾಂತ್ ಸಾವಿಗೆ ನ್ಯಾಯ ಬೇಕು ಎಂದು ಸ್ವತಃ ಸಿದ್ದೇಗೌಡ ಪಟ್ಟು ಹಿಡಿದಿದ್ದಾನೆ. ಭಾವನಗೆ ಬೀಳುತ್ತಿದ್ದ ಪೊಲೀಸರ ಲಾಠಿ ಏಟನ್ನು ತಪ್ಪಿಸಿದ್ದಾನೆ. ಭಾವನ ನಡವಳಿಕೆ ಕಂಡು ತಾಯವ್ವ ಬಹಳಷ್ಟು ಕೋಪದಿಂದ ಇರುತ್ತಾರೆ. ಈ ಮನೆಯಿಂದ ಹೊರಹೋಗಬಾರದು ಎಂದು ಅದೆಷ್ಟೇ ಬಾರಿ ಹೇಳಿದರು ಕೂಡ ಭಾವನ ತಾಯವ್ವ ನ ಮಾತನ್ನು ಮೀರಿ ಗಂಡನ ಜೊತೆಗೆ ಮನೆಯಿಂದ ಹೊರಗೆ ಹೋಗುತ್ತಾಳೆ.ಅದಲ್ಲದೆ ಟಿವಿಯಲ್ಲಿ ಭಾವನ ಮಾಡಿರುವ ಅವಾಂತರವನ್ನು ನೋಡಿ ಇನ್ನಷ್ಟು ಕೋಪದಿಂದ ಇರುತ್ತಾಳೆ.

kannada-serial-lakshmi-nivasa-written-update-20th-january

ಭಾವನಳನ್ನು ಮನೆ ಒಳಗೆ ಬರದಂತೆ ತಡೆದ ಅಜ್ಜಿ

ಭಾವನ ಹಾಗೂ ಸಿದ್ದೇ ಗೌಡ ಮನೆಗೆ ಬಂದಾಗ ಇಬ್ಬರನ್ನು ತಾಯವ್ವ ತಡೆದು ನಿಲ್ಲಿಸುತ್ತಾಳೆ. ಲೇಯ್ ನಿನ್ನನ್ನು ಮನೆಯಿಂದ ಹೊರಗೆ ಹೋಗಬೇಡ ಎಂದು ಅದೆಷ್ಟೇ ಹೇಳಿದರು ನಿನಗೆ ಮಾನ ಮರ್ಯಾದೆ ಎನ್ನುವುದು ಸ್ವಲ್ಪವೂ ಇಲ್ಲ ಎಂದು ನನಗೆ ಅನ್ನಿಸುತ್ತದೆ ಎಂದು ಬಹಳ ಖಡಕ್ ಆಗಿ ಹೇಳುತ್ತಾಳೆ. ಭಾವನ ಗೆ ತಾಯವ್ವ ಕೊಡುತ್ತಿದ್ದ ಹಿಂಸೆ ಅಷ್ಟಿಷ್ಟಲ್ಲ ಆಕೆಗೆ ಏನು ಮಾಡಬೇಕು ತಿಳಿಯದೇ ಭಯವಾಗುತ್ತಿತ್ತು. ತನ್ನ ಜೊತೆಗೆ ಸಿದ್ದೇಗೌಡ ಇದ್ದ ಕಾರಣ ಆಕೆಗೆ ಕೊಂಚ ಧೈರ್ಯ ಇತ್ತು. ಆದರೆ ಈ ಬಾರಿ ಭಾವನ ಮಾಡಿದ ತಪ್ಪಿನಿಂದಾಗಿ ತಾಯವ್ವ ಬಹಳ ಕೋಪಗೊಂಡಿದ್ದರು.

ಭಾವನ ಗೆ ಸರಿಯಾಗಿ ಬೈದ ತಾಯವ್ವ

ಭಾವನ ಮುಖವನ್ನು ನೋಡಲು ಆಕೆಗೆ ಹೇಸಿಗೆ ಆಗುತ್ತಿತ್ತು. ಕೊನೆಗೆ ಕೋಪದಿಂದ ತಾಯವ್ವ ಭಾವನಗೆ ಮನೆ ಬಿಟ್ಟು ಹೋಗುವಂತೆ ಹೇಳುತ್ತಾರೆ. ಇದನ್ನು ಕೇಳಿದ ಸಿದ್ದೇ ಗೌಡ, ಭಾವನ ಅವರು ಈ ಮನೆಯಲ್ಲಿ ಇರುವುದು ಬೇಡ ಎಂದಾದರೆ ನಾನು ಈ ಮನೆಯಿಂದ ಹೊರಗಡೆ ಹೋಗುತ್ತೇನೆ. ಅವರ ಜೊತೆಗೆ ನಾನು ಪ್ರತಿ ಘಳಿಗೆ ಇರಬೇಕು ಎಂದುಕೊಂಡು ಇದ್ದೆ ಆದರೆ ಈ ಮನೆಯಲ್ಲಿ ಅವರಿಗೆ ಜಾಗ ಇಲ್ಲ ಎಂದು ತಿಳಿದ ಮೇಲೆ ನಾನು ಅಲ್ಲಿರಲು ಬಯಸುವುದು ಇಲ್ಲ ಎಂದು ಖಡಕ್ ಆಗಿ ಸಿದ್ದೆ ಗೌಡ ಹೇಳುತ್ತಾನೆ. ಇದನ್ನು ಕೇಳಿದ ರೇಣುಕಾ ಗೆ ಆಕಾಶವೇ ಕಳಚಿ ಬಿದ್ದ ಅನುಭವ ಆಗುತ್ತದೆ.

ಸಿದ್ದೇಗೌಡರ ನಿರ್ಧಾರಕ್ಕೆ ಕಂಬನಿ ಮಿಡಿದ ರೇಣುಕಾ

ನಿನ್ನ ಹೆಂಡತಿಗಾಗಿ ಮನೆಬಿಟ್ಟು ಹೋಗುವ ನಿರ್ಧಾರ ಮಾಡಿಬಿಟ್ಟೆಯಲ್ಲ ನಿನಗೆ ಅಮ್ಮನ ನೆನಪು ಸ್ವಲ್ಪ ಕೂಡ ಆಗಲಿಲ್ವ. ಯಾಕೆ ಇಂತಹ ನಿರ್ಧಾರ ತೆಗೆದುಕೊಂಡು ಬಿಟ್ರಿ ಎಂದು ಅಳುತ್ತಾಳೆ. ಆದರೆ ಸಿದ್ದೆ ಗೌಡ ಯಾರ ಮಾತೂ ಕೇಳದ ಭಾವನ ಜೊತೆಗೆ ಮನೆಬಿಟ್ಟು ಹೊರಟು ಹೋಗುತ್ತಾನೆ ಮನೆಮಂದಿಯೆಲ್ಲ ಜೋರಾಗಿ ಅಳುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X