Lakshmi Nivasa ;ಮಿತಿ ಮೀರಿದೆ ಸಂತೋಷ್ ವರ್ತನೆ,ಸಂತು ಮಾತಿಗೆ ಕಿಡಿಕಾರಿದ ಶ್ರೀನಿವಾಸ್ !

By ಪೂರ್ವ

ಸಂತೋಷ್ ಇತ್ತೀಚಿನ ದಿನಗಳಲ್ಲಿ ಬಹಳ ಅತಿಯಾಗಿ ನಡೆದುಕೊಳ್ಳುತ್ತಿದ್ದಾನೆ ಎಂದು ಅಭಿಮಾನಿಗಳು ಬಹಳ ಕೋಪ ವ್ಯಕ್ತ ಪಡಿಸುತ್ತಿದ್ದಾರೆ. ಸಂತೋಷ್ ಗೆ ತನ್ನದು ಮಾತ್ರ ಆತನಿಗೆ ಬೇರೆಯವರ ಬಗ್ಗೆ ಕಾಳಜಿ ಸ್ವಲ್ಪವೂ ಕೂಡ ಇಲ್ಲ. ಬಹಳ ಪ್ರೀತಿಯಿಂದ ಎಲ್ಲರ ಜೊತೆಗೆ ನಡೆದುಕೊಳ್ಳುತ್ತಿದ್ದ ಸಂತೋಷ ತನ್ನಿಂದ ಹಣವನ್ನು ಯಾರಾದರೂ ಹಣ ಕೇಳುತ್ತಾರೆ ಎಂದು ತಿಳಿದರೆ ಮಾತ್ರ ಆತ ಬಹಳ ರೌದ್ರ ಮುಖವನ್ನು ಹಾಕಿಕೊಳ್ಳುತ್ತಾನೆ. ಹಾಗೆಯೇ ಮನೆಯವರ ಜೊತೆ ಬಹಳ ಕೆಟ್ಟದಾಗಿ ನಡೆದುಕೊಳ್ಳುತ್ತಾನೆ. ಸಂತೋಷ್ ಗೆ ಇದೀಗ ಹರೀಶ್ ಮೇಲೆ ಬಹಳಷ್ಟು ಕೋಪ ಬರುತ್ತದೆ.

ತನ್ನ ಹಣವನ್ನ ತಮ್ಮ ಹರೀಶ ಯಾವಾಗ ಕದ್ದನು ಎಂದು ಸಂತೋಷ್‌ಗೆ ತಿಳಿಯಿತು ಅವತ್ತಿನಿಂದ ಸಂತೋಷ್ ಬಹಳಷ್ಟು ಕೋಪದಿಂದ ಇರುತ್ತಾನೆ.ಆತನಿಗೆ ತಾನು ಕಷ್ಟಪಟ್ಟು ದುಡಿದ ಹಣವನ್ನು ಈ ರೀತಿ ಹರೀಶ ಕದ್ದು ಹಾಳು ಮಾಡ್ಬಿಟ್ಟ ಎಂದು ಬಹಳ ನೋವಿರುತ್ತದೆ. ಹಾಗೆಯೇ ಸಂತೋಷ್ ಈ ನೋವು ಯಾವತ್ತೂ ಕಾಡುತ್ತಿರುತ್ತದೆ. ಹರೀಶ ತನ್ನ ಹಣವನ್ನು ಕದ್ದ ಎಂದು ಹೇಳಿದರೆ ತನ್ನ ತಂದೆಗೆ ನನ್ನಲ್ಲಿ ಅಷ್ಟೊಂದು ಹಣ ಹೇಗೆ ಬಂತು ಎನ್ನುವ ಯೋಚನೆ ಖಂಡಿತವಾಗಿಯೂ ಬರುತ್ತದೆ. ಎಂದುಕೊಂಡು ಆತ ಸುಮ್ಮನಿರುತ್ತಾನೆ.

kannada-serial-lakshmi-nivasa-written-update-21th-april

ಏನು ಹೇಳದೆ ಮೌನಿಯಾಗಿ ನಿಂತುಕೊಳ್ಳುತ್ತಾನೆ. ಸಂತೋಷಗೆ ಹರೀಶ್ ಮೇಲೆ ಬಹಳಷ್ಟು ಕೋಪವಿರುತ್ತದೆ. ಸಂತೋಷ್ ಹರೀಶ್ ಬಳಿ ಹಣದ ಬಗ್ಗೆ ವಿಚಾರಣೆ ಮಾಡಿದಾಗ ಆತ ತಾನೇ ಹಣವನ್ನು ತೆಗೆದುಕೊಂಡಿದ್ದಾಗಿ ಹೇಳುತ್ತಾನೆ. ಆವತ್ತಿನಿಂದ ಸಂತು ಹರೀಶ್ ಜೊತೆ ಮಾತು ಬಿಟ್ಟಿದ್ದಾನೆ. ಆತನ ವರ್ತನೆ ಬಹಳಷ್ಟು ಬದಲಾಗಿದೆ.ಯಾವತ್ತೂ ಹರೀಶ್ ಜೊತೆಗೆ ಬಹಳ ಖುಷಿಯಾಗಿ ಇರುತ್ತಿದ್ದ ಸಂತೋಷ್ ಇದೀಗ ಮುಖ ದಪ್ಪ ಮಾಡಿ ಮನೆಯಲ್ಲೆಲ್ಲಾ ಓಡಾಡುತ್ತಾನೆ.

ಜಾಹ್ನವಿ ಕಾರ್ಯಕ್ಕೆ ಸಿದ್ಧತೆ

ಮನೆಯಲ್ಲಿ ಜಾಹ್ನವಿ ಕಾರ್ಯ ಮಾಡಲು ಶ್ರೀನಿವಾಸ ರಾಯರು ಯೋಚನೆ ಮಾಡುತ್ತಾರೆ ಹಾಗೆಯೇ ಪತ್ರಿಕೆಯನ್ನು ಪ್ರಿಂಟ್ ಮಾಡಿಸಿ ಮನೆಗೆ ತರುತ್ತಾರೆ. ಹರೀಶ್ ಗೆ ಸ್ವಲ್ಪ ಕಾಗದವನ್ನು ಹಾಗೆಯೇ ಸಂತೋಷ್ ಗೆ ಸ್ವಲ್ಪ ಕಾಗದವನ್ನು ಕೊಡಲು ರೆಡಿ ಮಾಡುತ್ತಾನೆ. ಈ ರೀತಿ ಕಾಗದವನ್ನು ಕೊಡುವ ವೇಳೆ ಅಲ್ಲಿಗೆ ಸಂತೋಷ್ ಬರುತ್ತಾನೆ ಸಂತೋಷ್ ಗೆ ಬಹಳ ಸಿಟ್ಟು ಬರುತ್ತದೆ. ನಮ್ಮ ಮನೆ ಇರದು ಇಬ್ಭಾಗ ಆಗುತ್ತು . ಜಾಹ್ನವಿ ಗರ್ಭಿಣಿ ಆಕೆ ಮನೆಗೆ ಬಂದಾಗ ಇದೆಲ್ಲ ಸರಿ ಕಾಣುವುದಿಲ್ಲ ಎಂದು ನೀವು ಹೇಳಿ ಇಬ್ಭಾಗ ಇದ್ದ ಮನೆಯನ್ನು ಒಂದು ಮಾಡಿದಿರಿ. ಆದರೆ ಇದೀಗ ಜಾಹ್ನವಿ ನಮ್ಮನ್ನು ಬಿಟ್ಟು ಹೋಗಿದ್ದಾಳೆ. ಹಾಗೆಯೇ ಈ ಮನೆ ಮುಂಚೆ ಹೇಗೆ ಇತ್ತೋ ಅದೇ ರೀತಿ ಇರಲಿ ಎಂದು ಸಂತೋಷ್ ಹೇಳುತ್ತಾನೆ.

ಅಣ್ಣನ ಮಾತಿಗೆ ಸುಮ್ಮನಾದ ತಮ್ಮ

ಹಾಗೆಯೇ ಬಹಳ ಜೋರಾಗಿಯೇ ಹರೀಶ್ ನನ್ನು ಸಂತೋಷ್ ಕರೆಯುತ್ತಾನೆ. ಹರೀಶ್ ಬಹಳ ಗಾಬರಿಯಿಂದ ಅಣ್ಣನ ಬಳಿಗೆ ಓಡಿಕೊಂಡು ಬರುತ್ತಾನೆ. ಹಾಗೆಯೇ ಸಂತೋಷ್ ಬಳಿ ಏನಾಯ್ತೆಂದು ಬರಲು ಹೇಳಿದೆ ಎಂದು ಹರೀಶ್ ಹೇಳಿದಾಗ ಇನ್ನೂ ಮೇಲೆ ನಾವು ಬೇರೆ ನೀವು ಬೇರೆ. ಮುಂಚೆ ಹೇಗೆಲ್ಲಾ ಇತ್ತು ಹಾಗೆಯೇ ಇರಲಿ. ನೀವು ಈ ಗೆರೆ ದಾಟಿ ಬರುವ ಹಾಗಿಲ್ಲ ಎಂದು ಹೇಳಿದಾಗ ಶ್ರೀನಿವಾಸ ಹಾಗೂ ಲಕ್ಷ್ಮೀ ಗೆ ಆಘಾತವಾಗುತ್ತದೆ. ಮೊದಲಿನಿಂದಲೂ ಸಂತೋಷ್ ಗೆ ಬಹಳ ಕೋಪ. ಆದರೆ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚು ಕೋಪ ಪಟ್ಟುಕೊಂಡು ಇರುತ್ತಾನೆ. ಆತನಿಗೆ ತನ್ನ ಹಣ ತಮ್ಮ ಕದ್ದುಕೊಂಡು ಹೋಗಿಬಿಟ್ಟನಲ್ಲ. ತಾನು ಬಹಳ ಕಷ್ಟ ಪಟ್ಟು ಹಣವನ್ನು ಸಂಪಾದನೆ ಮಾಡಿದ್ದೆ ಆದರೆ ಹೀಗೆಲ್ಲ ಆಗಿ ಬಿಟ್ಟಿತಲ್ಲ ಎನ್ನುವ ಯೋಚನೆ ಬಹಳಷ್ಟು ಕಾಡುತ್ತದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X