Lakshmi Nivasa ; ಕ್ಯಾಮರ ಕಂಡು ಬೆಚ್ಚಿ ಬಿದ್ದ ಜಾನು, ಜಯಂತ್‌ಗೆ ಢವಢವ..!

By ಪೂರ್ವ

ಜಯಂತ್ ಅತ್ತೆ ಮಾವನ ಮನೆಗೆ ಬಂದು ಕುಶಲೋಪರಿ ಮಾತನಾಡಿ ಅಜ್ಜಿಯ ಜೊತೆಗೆ ಸ್ವಲ್ಪ ಸಮಯವನ್ನು ಕಳೆದು ತನ್ನ ಕೆಲಸವನ್ನೆಲ್ಲ ಮುಗಿಸಿ ಜಯಂತ್ ಅಲ್ಲಿಂದ ಹೊರಡಲು ಅನುವಾಗುತ್ತಾನೆ. ಲಕ್ಷ್ಮೀ ಹಾಗೂ ಶ್ರೀನಿವಾಸ್ ಜಾಹ್ನವಿ ಬಗ್ಗೆ ವಿಚಾರಣೆ ಮಾಡುತ್ತಾರೆ. ಜಾಹ್ನವಿ ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳುತ್ತಾಳೆ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ.ಜಯಂತ್ ಮನೆಯಿಂದ ಹೋದ ಬೆನ್ನಲ್ಲೇ ಮನೆಗೆ ಜಾಹ್ನವಿ ಬರುತ್ತಾಳೆ. ಜಾಹ್ನವಿಯನ್ನು ನೀಡಿದ ಶ್ರೀನಿವಾಸ ರಾಯರಿಗೆ ಬಹಳ ಶಾಕ್ ಆಗುತ್ತದೆ. ಇದೇನಮ್ಮ ನೀನು ಬಂದೆ. ಈಗಾಗಲೇ ಅಳಿಯಂದಿರು ಬಂದಿದ್ದರು. ನೀನು ಅವರ ಜೊತೆಗೆ ಬರಬಹುದಿತ್ತಲ್ಲ. ನೀನು ಯಾಕಮ್ಮ ಬೇರೆಯೇ ಬರಲು ಹೋದೆ. ನಿಮ್ಮಿಬ್ಬರ ಮಧ್ಯೆ ಎಲ್ಲವೂ ಸರಿಯಾಗಿದೆ ಅಲ್ವಾ. ಏನು ಪ್ರಾಬ್ಲಂ ಇಲ್ಲ ಅಲ್ವಾ ಎಂದು ಶ್ರೀನಿವಾಸ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾನೆ.

ಜಾಹ್ನವಿ ಗೆ ಏನು ಉತ್ತರಿಸಬೇಕು ಎಂದು ಅರ್ಥವಾಗದೆ ಸುಮ್ಮನೆ ತಂದೆಯ ಮುಖ ನೋಡುತ್ತಾಳೆ. ಆಕೆಯ ನೋಟದಲ್ಲಿ ನೋವಿತ್ತು. ಅದು ಲಕ್ಷ್ಮೀಗೆ ಅರ್ಥ ಆಗುತ್ತಿತ್ತು. ಆದರೆ ಜಾಹ್ನವಿ ನೋವು ಏನು ಎನ್ನುವುದು ಮಾತ್ರ ಯಾರಿಗೂ ಕೂಡ ತಿಳಿಯಲಿಲ್ಲ. ಇತ್ತ ಶ್ರೀನಿವಾಸರಾಯರು ಮಗಳನ್ನು ಸಮಾಧಾನ ಪಡಿಸುತ್ತಾರೆ. ತಾನು ಅಜ್ಜಿಯನ್ನು ನೋಡಲು ಮನೆಗೆ ಬಂದಿದ್ದೇನೆ ಎಂದು ತಂದೆಯ ಬಳಿ ಸುಳ್ಳು ಮಾತುಗಳನ್ನು ಹೇಳುತ್ತಾಳೆ. ಜಯಂತ್ ಜೊತೆಗೆ ಇದ್ದಷ್ಟು ತನ್ನ ತಾಳ್ಮೆ ಖಂಡಿತವಾಗಿಯೂ ನಾಶವಾಗಿ ಹೋಗುತ್ತದೆ, ಆದರೆ ತಂದೆ ತಾಯಿಯ ಎದುರಿಗೆ ಬಂದಾಗ ಮನಸ್ಸಿಗೆ ಬಹಳಷ್ಟು ಖುಷಿ ನೀಡುವುದು ಮಾತ್ರ ಸತ್ಯ ಎಂದು ಮನದಲ್ಲಿ ಯೋಚನೆ ಲಹರಿಯಲ್ಲಿ ತೊಡಗಿರುತ್ತಾಳೆ. ಜಯಂತ್ ಮನೆಗೆ ಮರುಳುತ್ತಾನೆ.

kannada-serial-lakshmi-nivasa-written-update-21th-march

ಜಾಹ್ನವಿಯನ್ನು ಅದೆಷ್ಟೇ ಕರೆದರು ಆ ಕಡೆಯಿಂದ ಯಾವುದೇ ಸ್ಪಂದನೆ ಇರುವುದಿಲ್ಲ. ಮನೆ ಎಲ್ಲಾ ಜಾಹ್ನವಿಗಾಗಿ ಹುಡುಕಾಡುತ್ತಾನೆ. ಜಾಹ್ನವಿ ಮನೆಯಲ್ಲಿ ಇಲ್ಲದನ್ನು ಕಂಡು ಜಯಂತ್ ಗೆ ತಲೆ ಕೆಟ್ಟುಹೋಗುತ್ತದೆ. ಆತ ಅಲ್ಲಿಯೇ ಇರುವ ಹೂವಿನ ಗಿಡ ದ ಜೊತೆಗೆ ಮಾತನಾಡುತ್ತಿರುತ್ತಾನೇ. ಜಾಹ್ನವಿ ಅವರು ಎಲ್ಲಿಗೆ ಹೋದರು. ಆಕೆ ಮನೆ ಬಿಟ್ಟು ಹೋಗಬೇಕಾದರೆ ನಿಮ್ಮಲ್ಲಿ ಯಾರಾದರೂ ಜಾಹ್ನವಿ ಅವರೇ ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳಬೇಕಾಗುತ್ತು. ಯಾಕೆ ನೀವು ಯಾರ ಜೊತೆಯೂ ಈ ಬಗ್ಗೆ ಪ್ರಶ್ನೆ ಮಾಡಲಿಲ್ಲ. ಜಾಹ್ನವಿ ನನ್ನ ಜೀವ ಆಕೆ ಇಲ್ಲದೆ ತಾನು ಹೇಗೆ ಬದುಕಲಿ. ಆಕೆ ಈ ಮನೆಯಲ್ಲಿ ಇಲ್ಲದೆ ಇರುವ ದಿನಗಳನ್ನು ನೆನೆದುಕೊಂಡರೆ ಖಂಡಿತವಾಗಿಯೂ ನನಗೆ ಬಹಳಷ್ಟು ನೋವು ಆಗುತ್ತದೆ. ಮಾವನ ಮನೆಗೆನಾದರು ಹೋಗಿರಬಹುದ ಎಂದು ಜಯಂತ್ ಯೋಚನೆ ಮಾಡುತ್ತಿರುವಾಗ ಶ್ರೀನಿವಾಸ್ ಜಯಂತ್ ಗೆ ಕರೆ ಮಾಡುತ್ತಾನೆ.

ಮಾವನ ಕರೆ ನೋಡಿ ಬೆದರಿದ ಜಯಂತ್

ಜಯಂತ್ ಗೆ ಮೊದಲಿಗೆ ಕರೆ ಸ್ವೀಕಾರ ಮಾಡಲು ಕೊಂಚ ಮಟ್ಟಿಗೆ ಭಯವಾಗುತ್ತದೆ. ಆದರೆ ಮನದಲ್ಲಿ ಸಮಾಧಾನ ಮಾಡಿಕೊಂಡು ಕರೆ ಸ್ವೀಕಾರ ಮಾಡಿ ಮಾತನಾಡುತ್ತಾನೆ. ಕೂಡಲೇ ಶ್ರೀನಿವಾಸರಾಯರು ಅಳಿಯನ ಯೋಗ ಕ್ಷೇಮ ತಿಳಿದುಕೊಂಡು ಒಂದು ಮುಖ್ಯವಾದ ವಿಷಯ ಮಾತನಾಡಬೇಕಿತ್ತು ಎಂದು ಹೇಳುತ್ತಾರೆ. ಈ ಮಾತನ್ನು ಕೇಳುತ್ತಿದ್ದಂತೆಯೇ ಜಯಂತ್ ಗೆ ಕೊಂಚ ಆತಂಕ ಹೆಚ್ಚಾದರೂ ಏನೆಂದು ಕೇಳುತ್ತಾನೆ. ಜಯಂತ್ ಶ್ರೀನಿವಾಸ ಜಾಹ್ನವಿ ಮನೆಗೆ ಬಂದಿರುವ ವಿಚಾರವನ್ನು ತಿಳಿಸುತ್ತಾರೆ. ಹಾಗೆಯೇ ಈ ಮನೆಯಲ್ಲಿ ಎರಡು ದಿನಗಳ ಕಾಲ ಉಳಿದುಕೊಳ್ಳಲಿ ನಾವು ಮತ್ತೆ ಆಕೆಯನ್ನು ಕಳುಹಿಸಿ ಕೊಡುತ್ತೇವೆ ಎನ್ನುವುದನ್ನು ಕೂಡ ಹೇಳುತ್ತಾರೆ. ಈ ಮಾತನ್ನು ಶ್ರೀನಿವಾಸ ಹೇಳಿದ ಕೂಡಲೇ ಜಯಂತ್ ಗೆ ಒಂದು ವಿಚಾರ ಸ್ಪಷ್ಟವಾಗಿ ತಿಳಿಯುತ್ತದೆ.

ತಂದೆ ತಾಯಿಯ ಜೊತೆಗೆ ಖುಷಿಯಲ್ಲಿರುವ ಜಾಹ್ನವಿ

ತನ್ನ ಹೆಂಡತಿ ಅತ್ತೆಯ ಮನೆಯಲ್ಲಿದ್ದಾಳೆ ಎಂಬುವುದು. ಇನ್ನು ಶ್ರೀನಿವಾಸ ಹೇಳಿದ ಮಾತಿಗೆ ಮನಸಿಲ್ಲದ ಮನಸಿನಿಂದ ಒಪ್ಪಿಕೊಂಡ ಜಯಂತ್ ಮಾತ್ರ ಮನದಲ್ಲಿ ಲೆಕ್ಕಾಚಾರ ಹಾಕುತ್ತಿರುತ್ತಾನೆ. ಇತ್ತ ಜಾಹ್ನವಿ ಮನೆಯವರ ಜೊತೆ ಖುಷಿಯಾಗಿ ಕಾಲ ಕಳೆಯಬೇಕು. ಅಣ್ಣ ತಮ್ಮಂದಿರ ಜೊತೆಗೆ ಊಟಕ್ಕೆ ಮಾಡಬೇಕು ಎಂದೆಲ್ಲ ಯೋಚನೆ ಮಾಡುತ್ತಾಳೆ ಅಷ್ಟರಲ್ಲಿ ಜಾಹ್ನವಿಗೆ ಆಕೆಯ ಅಮ್ಮ ಊಟಕ್ಕೆ ಬರುವಂತೆ ಕೂಗಿ ಹೇಳುತ್ತಾರೆ. ಕೂಡಲೇ ಡೈನಿಂಗ್ ಹಾಲ್ ಬಳಿ ಕುಳಿತುಕೊಂಡು ಅಣ್ಣ ಹರೀಶ್ ಜೊತೆಗೆ ಊಟ ಕ್ಕೆ ಕೂರಲು ಹೇಳಿದಾಗ ಹರಿ ಮಾತ್ರ ಈ ಜಾಗ ನಮ್ಮ ಸೈಡ್ ಇಲ್ಲ ಎಂದು ಹೇಳುತ್ತಾನೆ. ಸಂತೋಷ್ ಹಾಗೂ ಹರಿ ಆಡುತ್ತಿರುವ ರೀತಿಯನ್ನು ಕಂಡು ಜಾಹ್ನವಿ ಗೆ ತಲೆ ಕೆಟ್ಟು ಹೋಗುತ್ತದೆ. ಇತ್ತ ಜಾಹ್ನವಿ ಊಟ ಮುಗಿಸಿ ಅಜ್ಜಿ ರೂಮ್ ಗೆ ಬರುತ್ತಾಳೆ.

ಅಜ್ಜಿಯ ರೂಮ್ ಗೆ ಬಂದ ಜಾಹ್ನವಿ ಗೆ ಸಿಕ್ಕಿದ್ದಾದ್ರು ಏನು ಗೊತ್ತಾ ?

ಜಾಹ್ನವಿ ಗೆ ಮಾತ್ರ ತನ್ನ ಗಂಡ ಜಯಂತ್ ಬಗ್ಗೆ ಸ್ವಲ್ಪವೂ ನಂಬಿಕೆ ಇಲ್ಲ. ಕಾರಣ ಇಲ್ಲದೆ ಎಲ್ಲಿಗೆ ಕೂಡ ಹೋಗದವರು ಇಲ್ಲಿಗೆ ಯಾಕೆ ಬಂದರು ಎಂದು ಜಾಹ್ನವಿ ಯೋಚನೆ ಮಾಡುತ್ತಾ ಅಜ್ಜಿ ರೂಮ್ ನಲ್ಲಿ ಎಲ್ಲಾ ಸರ್ಚ್ ಮಾಡುತ್ತಾಳೆ. ಆಕೆಗೆ ಜಯಂತ್ ಏನಾದರು ಕ್ಯಾಮರ ಇಟ್ಟು ಹೋಗಿರಬಹುದೇ ಎನ್ನುವ ಅನುಮಾನ ದಟ್ಟವಾಗಿ ಕಾಡುತ್ತದೆ. ಎಲ್ಲ ಕಡೆ ಹುಡುಕಾಡಿದಾಗ ಹೂವಿನ ಪಾಟ್ ನಲ್ಲಿ ರಹಸ್ಯ ಕ್ಯಾಮರವನ್ನು ಫಿಕ್ಸ್ ಮಾಡಲಾಗಿತ್ತು . ಇದೆಲ್ಲ ನೋಡಿ ಜಾಹ್ನವಿ ಗೆ ತಲೆ ಕೆಟ್ಟು ಹೋಗಿರುವುದು ಮಾತ್ರ ಸತ್ಯ. ತನ್ನ ಸೈಕೋ ಗಂಡನಿಗೆ ಜಾಹ್ನವಿ ಹೇಗೆ ಬುದ್ದಿ ಕಲಿಸುತ್ತಾಳೆ ಎಂಬುವುದನು ಕಾದು ನೋಡಬೇಕಿದೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X