Lakshmi Nivasa ; ಕನಸಲ್ಲೂ ಜಯಂತ್ ನನ್ನು ಕಂಡು ಬೆಚ್ಚಿ ಬಿದ್ದ ಜಾಹ್ನವಿ, ಮುಂದೇನು ಮಾಡುತ್ತಾಳೆ?
ವಿಶ್ವನ ಮುಂದೆ ಜಾಹ್ನವಿ ಬರುತ್ತಿಲ್ಲ. ವಿಶ್ವನಿಗೆ ತಾನು ಯಾರೆಂದು ತಿಳಿದರೆ ಖಂಡಿತವಾಗಿಯೂ ಆತನಿಗೆ ಆಘಾತವಾಗುವುದು ಪಕ್ಕ. ಆದ ಕಾರಣ ನಾನು ಆತನ ಮುಂದೆ ಗೊತ್ತಾಗದ ಹಾಗೆ ಇರಬೇಕು. ಅವನ ಮನೆಯಲ್ಲಿ ಕೆಲಸದವಳ ಹಾಗೆ ಇರುವುದನ್ನು ಆತ ನೋಡಿದರೆ ಖಂಡಿತವಾಗಿಯೂ ನನಗೆ ಉಳಿಗಾಲವಿಲ್ಲ. ನನ್ನ ಪರಿಸ್ಥಿತಿ ನೋಡಿ ವಿಶ್ವ ಮಾತ್ರ ಬಹಳ ನೋವು ಪಡುತ್ತಾನೆ.
ಅದಕ್ಕೆ ಆತನಿಗೆ ತಾನು ಅನುಭವಿಸುತ್ತಿರುವ ನೋವಿನ ಬಗ್ಗೆ ತಿಳಿಯಬಾರದು ಎಂದುಕೊಳ್ಳುತ್ತಾಳೆ. ಇದೀಗ ಒಂದು ಕೆಟ್ಟ ಕನಸು ಬಿದ್ದಿದೆ ಜಯಂತ್ ಕಣ್ಣೆದುರಿಗೆ ಬಂದ ಹಾಗೆ ಆಕೆಗೆ ಅನ್ನಿಸುತ್ತದೆ. ಒಂದು ಕ್ಷಣಕ್ಕೆ ಜಾಹ್ನವಿ ಬೆಚ್ಚಿ ಬೀಳುತ್ತಾಳೆ. ತಾನು ಯಾರ ಕಣ್ಣಿಗೆ ಕಾಣಬಾರದು ಎಂದುಕೊಂಡಿದ್ದೇನೋ ಅವರ ಕಣ್ಣಿಗೆ ಬಿದ್ದುಬಿಟ್ಟೆನಲ್ಲ ಎನ್ನುವ ಯೋಚನೆ ಆಕೆಗೆ ಮೂಡುತ್ತದೆ.

ಹಾಗೆಯೇ ತಾನು ಎಲ್ಲಿದ್ದರೂ ಕೂಡ ತನ್ನ ಗಂಡ ಜಯಂತ ಹುಡುಕಿಕೊಂಡು ಬರುತ್ತಾನೆ ಎಂದು ಆತನಿಗೆ ಅನ್ನಿಸುತ್ತದೆ. ಬಹಳಷ್ಟು ಭಯದಿಂದ ಗಂಡನ ಮುಖ ನೋಡುತ್ತಾಳೆ. ಆಕೆಗೆ ಬಹಳ ಭಯವಾಗುತ್ತದೆ ಎನು ಮಾಡಬೇಕು ಎಂದು ತಿಳಿಯದೇ ಕಂಗಾಲಾಗುತ್ತಾಳೆ. ಬಹಳಷ್ಟು ಸಂಕಟಕ್ಕೆ ಒಳಗಾಗುತ್ತಾಳೆ. ಆಕೆಗೆ ತನ್ನ ಗಂಡನ ಜೊತೆಗೆ ಬದುಕುವುದು ಸ್ವಲ್ಪ ಕೂಡ ಇಷ್ಟ ಇಲ್ಲ.
ಇದೀಗ ಕನಸಲ್ಲಿ ಜಯಂತ್ ಎದುರಿಗೆ ಬರುತ್ತಾನೆ.ಜಾಹ್ನವಿ ಗೆ ಕೊಂಚ ಭಯ ಕಾಡುತ್ತದೆ. ಆದರೆ ಹಿಂಜರಿಯುವುದು ಇಲ್ಲ. ಜಯಂತ್ ಮಾತ್ರ ಬಹಳ ನೋಂದುಕೊಳ್ಳುತ್ತಾನೆ. ಆತನಿಗೆ ಜಾಹ್ನವಿಯನ್ನು ನೋಡಿ ಮನಸ್ಸಿಗೆ ಆನಂದವಾಗುತ್ತದೆ.
ಹಾಗೆಯೇ ಜಾಹ್ನವಿಯನ್ನು ಮನೆಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡುತ್ತಾನೆ. ಆದರೆ ಜಾಹ್ನವಿಯನ್ನು ಜಯಂತ್ ಅದೆಷ್ಟೇ ಬಾರಿ ಕರೆದರು ಆತ ಜಾಹ್ನವಿ ಮಾತು ಕೇಳುವ ಗೋಜಿಗೆ ಹೋಗುವುದಿಲ್ಲ. ಜಯಂತ್ ಗೆ ಜಾಹ್ನವಿ ಎಂದರೆ ಬಹಳಷ್ಟು ಪ್ರೀತಿ.
ಆದರೆ ಜಾಹ್ನವಿಗೆ ಜಯಂತ್ ಕಂಡರೆ ಅಸಹ್ಯ. ಅದೆಷ್ಟೇ ಬಾರಿ ಜಯಂತ್ ಜಾಹ್ನವಿಯನ್ನು ಮನೆಗೆ ಕರೆದರೂ ಆಕೆ ಯಾರ ಮಾತು ಕೇಳುವುದಿಲ್ಲ.
ಜಯಂತ್ ಉಗ್ರ ರೂಪ ಕಂಡು ಮೌನಿಯಾದ ಜಾಹ್ನವಿ
ಆತನಿಗೆ ಬಹಳಷ್ಟ ಬೇಸರವಾಗುತ್ತದೆ. ಜಾಹ್ನವಿ ಕೂಡಲೇ ಹೇಳುತ್ತಾಳೆ ನಾನು ನಿಮ್ಮ ಜೊತೆ ಬದುಕಲು ಇಷ್ಟ ಪಡುವುದಿಲ್ಲ. ನನಗೆ ನೀವು ಬೇಕಾಗಿಲ್ಲ ಎಂದಾಗ ಜಯಂತ್ ಆತನ ಉಗ್ರ ರೂಪ ತೋರಿಸುತ್ತಾನೆ. ಜಾಹ್ನವಿಗೆ ಜಯಂತ್ ನೋಟ ಕಂಡು ಬಹಳ ಭಯವಾಗುತ್ತದೆ. ಕೂಡಲೇ ನಿದ್ದೆಯಿಂದ ಎದ್ದೇಳುತ್ತಾಳೆ. ಇದು ಕನಸು ಎಂದು ತಿಳಿದ ಬಳಿಕ ಆಕೆಗೆ ಕೊಂಚ ರೀಲಿಪ್ ಸಿಗುತ್ತದೆ ಶ್ರೀನಿವಾಸ್ ರಾಯರು ಭಾವನ ಮನೆಗೆ ಬರುತ್ತಾರೆ.
ತಂದೆಯ ಸ್ಥಿತಿ ನೋಡಿ ನೊಂದುಕೊಂಡ ಭಾವನ
ಜಾಹ್ನವಿ ತಿಥಿ ಕಾರ್ಯವನ್ನು ಮಾಡುವ ಸಲುವಾಗಿ ಕಾಗದ ಕೊಟ್ಟು ಹೋಗಲು ಬರುತ್ತಾನೆ. ತಂದೆಯನ್ನು ನೋಡಿದ ಭಾವನಗೆ ಖುಷಿ ಆಗುತ್ತದೆ. ಆದರೆ ತಂಗಿಯನ್ನು ನೆನೆದು ಬಹಳ ಬೇಸರ ಪಡುತ್ತಾಳೆ. ಹಾಗೆಯೇ ವೆಂಕಿಯ ಬಗ್ಗೆ ವಿಚಾರಣೆ ನಡೆಸುತ್ತಾರೆ. ವೆಂಕಿ ಬಗ್ಗೆ ಏನಾದರೂ ಗೊತ್ತಾಯ್ತಾ? ಎಂದು ಭಾವನ ಮಾವನ ಬಳಿ ಕೇಳುತ್ತಾರೆ. ಈ ವಿಚಾರ ಕೇಳುತ್ತಿದ್ದಂತೆ ಜವರೇಗೌಡರು ಅವರಿಗೆ ಶಾಕ್ ಆಗುತ್ತದೆ. ಶ್ರೀನಿವಾಸ್ ಗೆ ಎನು ಉತ್ತರ ನೀಡಬೇಕು ಎಂದು ಅರ್ಥ ಆಗದೆ ಮೌನಿಯಾಗುತ್ತಾರೆ.


Click it and Unblock the Notifications











