Lakshmi Nivasa ; ಸಿದ್ದು ಸ್ಥಿತಿ ನೋಡಿ ಬೇಸರಗೊಂಡ ಜವರೆ ಗೌಡರು,ಇನ್ನಾದರೂ ಸಿದ್ದು ಮನೆಗೆ ಮರಳುತ್ತಾನಾ?

By ಪೂರ್ವ

ಜವರೆ ಗೌಡ ಮನೆಗೆ ಬಂದಾಯಿತು ಆದರೆ ಸಿದ್ದು ಮನೆಯಲ್ಲಿ ಕಾಣಿಸದೆ ಇದ್ದಿದ್ದನ್ನು ಕಂಡು ಕೊಂಚ ಬೇಸರ ಪಟ್ಟುಕೊಂಡಿದ್ದಾನೆ. ಸಿದ್ದು ಸ್ಥಿತಿ ಮಾತ್ರ ಯಾರಿಗೂ ಬೇಡ. ಭಾವನಳಿಗಾಗಿ ಸಿದ್ದು ಎನು ಬೇಕಾದರೂ ಮಾಡಲು ರೆಡಿ ಇರುತ್ತಾನೆ. ಆದರೆ ಭಾವನ ಗೆ ಸಿದ್ದು ಮೇಲೆ ಇನ್ನಷ್ಟೇ ಪ್ರೀತಿ ಹುಟ್ಟಬೇಕಾಗಿದೆ. ಸಿದ್ದು ಇದೀಗ ಭಾವನ ಜೊತೆ ಮನೆಯಿಂದ ಹೊರಗೆ ಬಂದಿದ್ದಾನೆ ಆದರೆ ಕೈಯಲ್ಲಿ ಸಾಕಷ್ಟು ಹಣ ಇಲ್ಲ .

ಮುಂದೆ ಹೇಗೆ ಜೀವನ ನಡೆಸುವುದು ಎನ್ನುವ ಆಲೋಚನೆ ಆತನಿಗೆ ಮೂಡದೇ ಇರದು. ತನ್ನ ಹೆಂಡತಿಯನ್ನು ಸಾಕುವಷ್ಟು ಸಾಮರ್ಥ್ಯ ನನ್ನ ಹತ್ತಿರ ಇಲ್ಲವಲ್ಲ ಎಂದು ಬಹಳಷ್ಟು ನೋವು ತೋಡಿಕೊಂಡಿದ್ದ ಸಿದ್ದೇ ಗೌಡ, ಗೆಳೆಯರ ಜೊತೆಗೆ ಕೆಲಸ ಕೇಳಿಕೊಂಡು ಗಲ್ಲಿ ಗಲ್ಲಿ ತಿರುಗುತ್ತಾನೆ. ಯಾರ ಬಳಿಯೂ ಕೆಲಸ ಕೇಳಿದರು ಅವರೆಲ್ಲ ಹೇಳುವುದು ಒಂದೇ ಮಾತು ನಮ್ಮ ಇಡೀ ಕಂಪನಿಯನ್ನು ಕೊಂಡುಕೊಳ್ಳುವ ತಾಕತ್ತು ನಿಮ್ಮ ಜೊತೆ ಇದೆ.

kannada serial Lakshmi nivasa written update 23th January

ನೀವು ಕಾಮಿಡಿ ಮಾಡುತ್ತಿರುವುದು ಎಷ್ಟು ಸರಿ ಎಂದು ನಗುತ್ತಾ ಮಾತನಾಡುತ್ತಾರೆ. ಆ ವೇಳೆ ಸಿದ್ದೆ ಗೌಡಗೆ ಮುಂದೇನು ಮಾತನಾಡಬೇಕು ಎಂದು ತಿಳಿಯುವುದಿಲ್ಲ. ಸಪ್ಪೆ ಮುಖ ಹಾಕಿಕೊಂಡು ಕೆಲಸಕ್ಕಾಗಿ ತಿರುಗಾಡುತ್ತಾನೆ. ಕೊನೆಗೆ ಒಂದು ಕೆಲಸ ಸಿಗುತ್ತದೆ. ಅದು ಮೂಟೆ ಹೊರುವ ಕೆಲಸ ಇತ್ತ ಮುಖ ಮುಚ್ಚಿಕೊಂಡೆ ಕೆಲಸ ಮಾಡುತ್ತಾನೆ ಸಿದ್ದು. ಸಿದ್ದು ಗೆ ತಾನು ಜವರೆ ಗೌಡರ ಮಗ ಎಂದು ಯಾರಿಗೂ ತಿಳಿಯಬಾರದು ಎನ್ನುವ ಆಲೋಚನೆ. ನಾನು ದುಡ್ಡು ಸಂಪಾದನೆ ಮಾಡಬೇಕು ಅಷ್ಟೆ ಎಂದುಕೊಂಡು ಮೂಟೆ ಹೊತ್ತು ಹಣ ಗಳಿಸುತ್ತಾನೆ. ಇದನ್ನೆಲ್ಲ ಶ್ರೀನಿವಾಸ್ ದೂರದಿಂದ ನಿಂತು ನೋಡುತ್ತಿರುತ್ತಾರೆ.

ತನ್ನ ಮಗಳನ್ನು ಸುಖವಾಗಿಡಲು ಸಿದ್ದು ಎಷ್ಟೆಲ್ಲ ಕಷ್ಟ ಪಡುತ್ತಿದ್ದಾರೆ ಎಂದು ಸಂತೋಷ ಆಯಿತು. ಹಾಗೆಯೇ ಬಹಳಷ್ಟು ದುಃಖ ಕೂಡ ಆಯಿತು. ಇತ್ತ ಜವರೆ ಗೌಡರು ಸಿದ್ದುವನ್ನು ಹುಡುಕಿಕೊಂಡು ಬರುತ್ತಾರೆ. ಸಿದ್ದು ದಾರಿಯಲ್ಲಿ ಬರಬೇಕಾದರೆ ಹಣವನ್ನು ಲೆಕ್ಕ ಹಾಕಿಕೊಂಡು ಬರುತ್ತಾನೆ ಆದರೆ ಆ ಕೂಡಲೇ ತಂದೆಯನ್ನು ನೋಡಿ ಶಾಕ್ ಆಗುತ್ತಾನೆ. ಜನರೇ ಗೌಡರು ಸಿದ್ದೇಗೌಡರ ಬಳಿ ಮನೆ ಬಿಟ್ಟು ಯಾಕೆ ಬಂದೆ ಎಂದು ಕೇಳಿದಾಗ ಸಿದ್ದೇಗೌಡರು ತಮಗಾದ ಅವಮಾನವನ್ನ ತನ್ನ ತಂದೆಯ ಬಳಿ ಹೇಳುತ್ತಾರೆ ಹಾಗೆಯೇ ಅಜ್ಜಿ ಮನೆಯಿಂದ ಹೊರ ಹಾಕಿರುವ ವಿಚಾರವನ್ನು ಕೂಡ ತಂದೆಯ ಬಳಿ ಹೇಳಿ ಕೊಡುತ್ತಾನೆ

ಕೋಪದಿಂದ ಮನೆಬಿಟ್ಟ ಸಿದ್ದು

ನನ್ನ ಹೆಂಡತಿಗೆ ಸಿಗದ ಗೌರವ ನನಗೂ ಬೇಡ ಎಂದು ನಾನು ಮನೆ ಬಿಟ್ಟು ಬಂದೆ ಎಂದು ಸಿದ್ದೆ ಗೌಡರು ತಂದೆಯ ಬಳಿ ಹೇಳುತ್ತಾರೆ. ಅಜ್ಜಿ ಹೇಳಿದ ಹಾಗೆ ನಮಗಿಬ್ಬರಿಗೂ ಕೇಳಿಕೊಂಡಿರಲು ಸಾಧ್ಯವಿಲ್ಲ. ನಾವು ಏನೇ ಮಾಡಿದರೂ ಅಜ್ಜಿಗೆ ತಪ್ಪಾಗಿಯೇ ಕಾಣಿಸುತ್ತದೆ ಎಂದು ತಂದೆಯ ಬಳಿ ಸಿದ್ದೆ ಗೌಡರು ಅಳಲು ತೋಡಿಕೊಳ್ಳುತ್ತಾರೆ. ಇತ್ತ ರೇಣುಕಾ ಹಾಗೂ ತಾಯವ್ವ ಸಿಂಚನ ಮನೆಯ ಕಾರ್ಯಕ್ರಮಕ್ಕೆ ಹೋಗುತ್ತಾರೆ. ಅಲ್ಲಿ ಎಲ್ಲರ ಜೊತೆಗೆ ಬಹಳಷ್ಟು ಖುಷಿಯಿಂದ ಕಾಲ ಕಳೆಯುತ್ತಾರೆ. ತಾಯವ್ವ ಸಿಂಚನ ಬಳಿ ಮನೆಗೆ ಬರುವಂತೆ ಒತ್ತಾಯಿಸಿದಾಗ ಸಿಂಚನ ಭಾವನ ಇದ್ದಲ್ಲಿಗೆ ನಾನು ಬರುವುದಿಲ್ಲ ಎಂದು ಹೇಳಿ ಬಿಡುತ್ತಾಳೆ.

ಸಿಂಚನಳನ್ನು ಮನೆಗೆ ಕರೆದ ತಾಯವ್ವ

ಸಿಂಚನಗೆ ಭಾವನ ಕಂಡರೆ ಅಷ್ಟಕಷ್ಟೇ. ಆಗ ತಾಯವ್ವ ಇನ್ನೂ ಮೇಲೆ ಭಾವನ ತನ್ನ ಮನೆಗೆ ಕಾಲಿಡದೆ ಇರುವ ಹಾಗೆ ಮಾಡಿಯೇ ತೀರುತ್ತೇನೆ ಎಂದು ಪಣ ತೊಡುತ್ತಾಳೆ. ಇತ್ತ ಜವರೆ ಗೌಡರು ಮಗ ಹಾಗೂ ಸೊಸೆಯನ್ನು ಮನೆಗೆ ಕರೆದುಕೊಂಡು ಬರುವ ತೀರ್ಮಾನ ಮಾಡಿದ್ದಾರೆ.ನನ್ನ ಮಗ ಕಷ್ಟ ಪಡುವುದನ್ನು ನಾನು ನೋಡಲಾರೆ ಎಂದು ಜವರೆ ಗೌಡರು ಮಗನ ಬಳಿ ನೋವು ತೋಡಿಕೊಳ್ಳುತ್ತಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X