Lakshmi Nivasa ; ಸಿದ್ದು ವಿಚಾರದಲ್ಲಿ ಗರಂ ಆಗಿರುವ ಲಕ್ಷ್ಮೀ, ಸಿದ್ದೇಗೌಡರನ್ನು ಒಪ್ಪಿಕೊಳ್ಳುತ್ತಾಳಾ?
ಖುಷಿಗೆ ಸಿದ್ದೇಗೌಡರ ನಿಷ್ಕಲ್ಮಶವಾದ ಪ್ರೀತಿ ಅರ್ಥವಾಗಿದೆ. ಖುಷಿಗೆ ಸಿದ್ದೇ ಗೌಡರು ಎಂದರೆ ಬಹಳ ಪ್ರೀತಿ. ಸಿದ್ದೇಗೌಡರು ಖುಷಿ ಜೊತೆ ನೀನು ನನ್ನನ್ನ ಅಪ್ಪ ಎಂದು ಕರೆಯೆಂದು ಹೇಳಿದಾಗ ಖುಷಿ ಮಾತ್ರ ಸುಮ್ಮನಿರುತ್ತಾಳೆ. ಆಗ ಸಿದ್ದೇಗೌಡರು ನಾನು ನಿನಗೆ ಅಪ್ಪ ಎಂದು ಹೇಳಿದಾಗ ಖುಷಿಯ ಕಣ್ಣಿನಲ್ಲಿ ಕಣ್ಣೀರು ಬರುತ್ತದೆ. ಭಾವನಾ ಅಮ್ಮ ನನಗೆ ಅಮ್ಮ ಹೌದು ಆದರೆ ನನ್ನ ಅಪ್ಪ ಹಾಗೂ ಅಜ್ಜಿ ಆಕ್ಸಿಡೆಂಟಾಗಿ ದೇವರ ಬಳಿ ಹೋಗಿದ್ದಾರೆ .
ಆದರೆ ಭಾವನಾ ಅಮ್ಮ ನನ್ನ ಜೊತೆ ಹೇಳಿದರು ಏನೆಂದರೆ ನನ್ನ ತಂದೆ ಹಾಗೂ ಅಜ್ಜಿ ದೇವರಿಗೆ ಬಹಳ ಇಷ್ಟವಾಗಿದ್ದರು ಆದ ಕಾರಣ ಅವರನ್ನು ದೇವರು ಕರೆದುಕೊಂಡು ಬಿಟ್ಟಿದ್ದಾನೆ ಎಂದು ಹೇಳಿದರು ಎಂದಾಗ ಸಿದ್ದೇಗೌಡರಿಗೆ ಬಹಳ ಬೇಸರವಾಗುತ್ತದೆ ಎಂದು ಹೇಳುತ್ತಾಳೆ. ಆ ನಂತರ ಅಂಕಲ್ ನಾನು ನಿಮ್ಮನ್ನ ಅಪ್ಪ ಎಂದು ಕರೆದರೆ ದೇವರು ನಿಮ್ಮನ್ನು ಕರೆದುಕೊಂಡು ಹೋದರೆ ಅದಕ್ಕಾಗಿ ನಾನು ನಿಮ್ಮನ್ನ ಅಪ್ಪ ಎಂದು ಕರೆಯುವುದಿಲ್ಲ ಎಂದು ಹೇಳಿದಾಗ ಸಿದ್ದೇಗೌಡರು ಆಕೆಯನ್ನು ಬಿಗಿದಪ್ಪಿಕೊಂಡು ಅಳುತ್ತಾರೆ. ಪುಟ್ಟ ಮಗುವಿಗೆ ತನ್ನ ಮೇಲೆ ಅದೆಷ್ಟು ಪ್ರೀತಿ ಎಂದು ಬಹಳ ಸಂತಸ ವ್ಯಕ್ತಪಡಿಸುತ್ತಾರೆ. ಈ ಕಡೆ ಲಕ್ಷ್ಮಿ ತನ್ನ ಮೊಂಡುತನವನ್ನು ಬಿಡುತ್ತಿಲ್ಲ. ಆಕೆಗೆ ಸಿದ್ದೇಗೌಡರು ಮಾಡಿದ ನಂಬಿಕೆ ದ್ರೋಹ ಬಹಳ ನೋವು ಕೊಟ್ಟಿದೆ. ಆದರೆ ಒಂದು ಕಾಲದಲ್ಲಿ ಲಕ್ಷ್ಮಿ ಹಾಗೂ ಆಕೆಯ ಗಂಡ ಮಾಡಿದ್ದು ಕೂಡ ತಪ್ಪೇ. ಲಕ್ಷ್ಮಿ ಮಾಡಿದ ತಪ್ಪಿನಿಂದಾಗಿ ಆಕೆಯ ತಂದೆಗೆ ಈಗಲೂ ಕೂಡ ಸರಿಯಾಗಿ ಮಾತನಾಡಲಾಗುತ್ತಿಲ್ಲ ಎದ್ದು ಓಡಾಡಲಾಗುತ್ತಿಲ್ಲ. ಲಕ್ಷ್ಮಿನ ಈಗಲೂ ಕೂಡ ಆಕೆಯ ಅಣ್ಣ ತಿರಸ್ಕಾರದಿಂದಲೇ ನೋಡುತ್ತಿರುತ್ತಾನೆ.

ಲಕ್ಷ್ಮೀ ನೆರಳು ಕಂಡರೆ ಕಿಡಿ ಕಾರುತ್ತಿರುವ ಆಕೆಯ ಅಣ್ಣ
ಆತನಿಗೆ ಲಕ್ಷ್ಮಿ ಎಂದರೆ ಬಹಳ ದ್ವೇಷ . ಲಕ್ಷ್ಮೀ ಮಾಡಿದ್ದು ಸರಿ. ಸಿದ್ದೇಗೌಡರು ಮಾಡಿದ್ದು ಮಾತ್ರ ತಪ್ಪು. ಹೆತ್ತವರು ತಮ್ಮ ಮಕ್ಕಳನ್ನ ಬಹಳ ಮುದ್ದಿನಿಂದ ಸಾಕಿರುತ್ತಾರೆ, ಸಲಹಿರುತ್ತಾರೆ. ಆದರೆ ಮಕ್ಕಳು ಹೇಳದೆ ಕೇಳದೆ ಮದುವೆಯಾದಾಗ ಅಥವಾ ಇತರ ಯಾವುದಾದರೂ ಒಂದು ಆಘಾತಕಾರಿ ವಿಚಾರಗಳು ಬಹಿರಂಗವಾದಾಗ ಹೆತ್ತವರಿಗೆ ನೋವು ಸಂಕಟಗಳಾಗುವುದು ಸಹಜ. ಇದೀಗ ಅದೇ ಲಕ್ಷ್ಮಿಗೆ ಕೂಡ ಆಗಿದೆ.
ಸಿದ್ದೇ ಗೌಡರ ಮೋಸ ಸಹಿಸದ ಲಕ್ಷ್ಮೀ
ಸಿದ್ದೇಗೌಡರನ್ನು ಲಕ್ಷ್ಮಿ ಬಹಳ ಹಚ್ಚಿಕೊಂಡಿದ್ದಳು. ಸಿದ್ದೇಗೌಡರ ಬಳಿ ಎಲ್ಲಾ ವಿಚಾರವನ್ನು ಲಕ್ಷ್ಮಿ ಹೇಳಿಕೊಳ್ಳುತ್ತಿದ್ದಳು. ಆದರೆ ಸಿದ್ದೇಗೌಡರು ಲಕ್ಷ್ಮಿ ಅಂದರೆ ಆಕೆಯ ಅತ್ತೆಯ ಜೊತೆ ಎಲ್ಲಾ ವಿಚಾರವನ್ನು ಹೇಳಿರುತ್ತಾನೆ. ಅತ್ತೆ ನೀವು ಪರಿಚಯ ಆಗೋದಕ್ಕಿಂತ ಮೊದಲು ನನಗೆ ಭಾವನಾ ಅವರ ಮೇಲೆ ಪ್ರೀತಿ ಆಗಿ ಹೋಗಿತ್ತು ಅದಾದ ಬಳಿಕ ನೀವು ಪರಿಚಯ ಆಗಿದ್ದು ಎಂದು ಹೇಳುತ್ತಾನೆ ಇದನ್ನು ಕೇಳಿದ ಮಾತನ್ನೇ ಕೇಳುವ ಗೋಜಿಗೆ ಹೋಗುತ್ತಿರಲಿಲ್ಲ. ಭಾವನ ತಂದೆ ಸಿದ್ದೇಗೌಡ ಹಾಗೂ ಭಾವನಳನ್ನು ಮನೆಗೆ ಕರೆದು ಔತಣ ಕೂಟ ಮಾಡಬೇಕು ಎಂದುಕೊಂಡು ಇರುತ್ತಾರೆ. ಆದರೆ ಇದಕ್ಕೆ ಲಕ್ಷ್ಮೀ ಒಪ್ಪಿಗೆ ಸೂಚಿಸುವುದಿಲ್ಲ.
ಲಕ್ಷ್ಮೀಯನ್ನು ಸಮಾಧಾನ ಪಡಿಸಲು ಮುಂದಾದ ಆಕೆಯ ಗಂಡ
ಲಕ್ಷ್ಮಿಯ ಗಂಡ ಅದೆಷ್ಟೇ ಬಾರಿ ತನ್ನ ಹೆಂಡತಿ ಗೆ ಹೇಳಿದರು ಆಕೆ ಮಾತ್ರ ಅದ್ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಇತ್ತ ಸಿದ್ದೇಗೌಡರ ಅಕ್ಕನಿಗೆ ಕೂಡ ಇದೆಲ್ಲ ಸರಿ ಕಾಣಿಸುತ್ತಿಲ್ಲ. ಈಗಾಗಲೇ ಆಕೆ ಇನ್ನೊಂದು ಬೇರೆ ಮನೆ ಕಟ್ಟಿಕೊಂಡು ಅಲ್ಲಿಗೆ ಹೋಗಬೇಕು ಎಂದು ಅಂದುಕೊಂಡು ಇರುತ್ತಾಳೆ. ಆದರೆ ಹರೀಶ ಮಾತ್ರ ತನ್ನ ಬ್ಯುಸಿನೆಸ್ ನಲ್ಲಿ ಆದ ನಷ್ಟವನ್ನು ಯಾರಿಗೂ ಹೇಳದೆ ತನ್ನಲ್ಲೇ ಸಹಿಸಿಕೊಂಡು ಇರುತ್ತಾನೆ. ಇದೀಗ ಭಾವನ ಜೊತೆ ಖುಷಿ ಬಹಳ ಖುಷಿಯಾಗಿ ಇದ್ದಾಳೆ.


Click it and Unblock the Notifications











