Lakshmi Nivasa ; ಚಿನ್ನು ಮರಿ ಬದುಕಿರುವ ವಿಚಾರ ಜಯಂತ್ ಗೆ ತಿಳಿಯುತ್ತಾ? ನರಸಿಂಹಯ್ಯ ಜಾಹ್ನವಿ ಫೋಟೊ ನೋಡ್ತಾನಾ ?
ನರಸಿಂಹಯ್ಯನ ಮನೆಯಲ್ಲಿರುವ ಚಂದನ ಯಾರು ಎನ್ನುವ ವಿಚಾರ ಎಲ್ಲರೆದುರು ಬಯಲಾಗೋ ಸಂದರ್ಭ ಏರ್ಪಟ್ಟಿದೆ. ಚಂದನ ಹೆಸರಲ್ಲಿ ಜಾಹ್ನವಿ ನರಸಿಂಹಯ್ಯ ನ ಮನೆಗೆ ಸೇರಿಕೊಂಡಿದ್ದಾಳೆ. ಜಾಹ್ನವಿ ಲಕ್ಷ್ಮೀ ಮಗಳೆಂದು ತಿಳಿದರೆ ಖಂಡಿತವಾಗಿಯೂ ಜಾಹ್ನವಿ ಗೆ ನರಸಿಂಹಯ್ಯ ನ ಮನೆಯಲ್ಲಿ ಒಂದು ತೊಟ್ಟು ನೀರು ಸಿಗುವುದು ಡೌಟು. ಆದರೆ ಆಕೆ ಯಾರು ಏನು ಎಂಬುವುದನ್ನು ತಿಳಿಯದ ನರಸಿಂಹಯ್ಯ ಆಕೆಯನ್ನು ಮನೆಯ ಕೆಲಸದವಳನ್ನಾಗಿ ನೇಮಿಸುತ್ತಾನೆ. ಆದರೆ ಇದೀಗ ಬೆಳಿಗ್ಗೆ ಎದ್ದು ನರಸಿಂಹಯ್ಯ ದಿನವೂ ದಿನಪತ್ರಿಕೆಯನ್ನು ಓದಲು ರೆಡಿಯಾಗಿರುತ್ತಾನೆ. ಬೆಳಗ್ಗೆ ಎದ್ದ ಕೂಡಲೇ ಆತನಿಗೆ ವಿಶ್ವ ಎದುರಾಗಿ ನಿಲ್ಲುತ್ತಾನೆ.
ಕೂಡಲೇ ಮಗ ವಿಶ್ವಗೆ ಗೇಟ್ ಬಳಿ ಬಿದ್ದಿರುವ ಪೇಪರ್ ತೆಗೆದುಕೊಂಡು ಬಾರೋ ಎಂದು ಹೇಳಿದಾಗ ವಿಶ್ವ ಕೊಂಚ ಉದಾಸೀನ ಮಾಡಿಕೊಂಡೆ ಹೋಗಿ ಪೇಪರ್ ಎತ್ತಿಕೊಳ್ಳುತ್ತಾನೆ. ಅಷ್ಟೊತ್ತಿಗೆ ನರಸಿಂಹಯ್ಯ ನ ಬಳಿಗೆ ಬಂದ ಜಾಹ್ನವಿ ಕಾಫಿ ಕೊಡುತ್ತಾಳೆ. ಕಾಫಿ ಕೈಯಲ್ಲಿ ಹಿಡಿದುಕೊಂಡ ನರಸಿಂಹಯ್ಯ ಪೇಪರ್ ಗೆ ಇನ್ನೂ ಜೋರಾಗಿ ಕೂಗುತ್ತಾನೆ. ವಿಶ್ವ ಪೇಪರ್ ಅನ್ನು ತಿರುಚಿ ನೋಡಿದಾಗ ಜಾಹ್ನವಿ ಶ್ರದ್ಧಾಂಜಲಿ ಫೋಟೋ ನೋಡಿ ಶಾಕ್ ಆಗುತ್ತಾನೆ.ಆತನಿಗೆ ಜಾಹ್ನವಿ ಸತ್ತಿದ್ದಾಳೇ ಎಂದು ತಿಳಿದಾಗಿನಿಂದ ಬಹಳಷ್ಟು ನೋವು ಆಗುತ್ತೆ.ತನ್ನ ತಂದೆಯ ಕೂಗು ಕೇಳುತ್ತಿದ್ದ ಹಾಗೆಯೇ ವಿಶ್ವ ಮೆತ್ತಗೆ ಪೆಪರ್ ತಂದೆಯ ಬಳಿ ಕೊಡುತ್ತಾನೇ. ಇನ್ನು ನರಸಿಂಹಯ್ಯ ಎಲ್ಲಾದರೂ ಈ ಫೋಟೋ ನೋಡಿದರೆ ಜಯಂತ್ ಹೆಂಡತಿ ಎನ್ನುವ ವಿಚಾರ ತಿಳಿಯುತ್ತದೆ.

ಆದರೆ ಪೇಪರ್ ನೆಲ್ಲಿ ತನ್ನ ಫೋಟೋ ಹಾಕಿದ್ದಾರೆ ಎನ್ನುವ ಸಣ್ಣ ಸುಳಿವು ಜಾಹ್ನವಿ ಗೆ ಇರುವುದಿಲ್ಲ. ಇನ್ನು ಸಂತೋಷ್ ಹೇಗೆ ಹರೀಶ್ ಜೊತೆಗೆ ಮಾತು ಬಿಟ್ಟಾನೋ ಅದೇ ರೀತಿ ಇದೀಗ ಸಂತೋಷ್ ಮೇಲೆ ಹರೀಶ್ ಮುನಿಸಿಕೊಳ್ಳುವ ಪ್ರಮೇಯ ಬಂದಿದೆ. ಸಂತೋಷ್ ಎಲ್ಲೆಲ್ಲಿ ಹೋಗುತ್ತಾನೆ ಏನೆಲ್ಲಾ ಮಾಡುತ್ತಾನೆ ಎಂಬುವುದನ್ನು ಹರೀಶ್ ತಿಳಿದುಕೊಳ್ಳುತ್ತಿದ್ದಾನೆ. ಹರೀಶ್ ಗೆ ತನ್ನ ಅಣ್ಣ ಮಾಡುತ್ತಿರುವ ಕೆಲಸ ಒಂದೊಂದಾಗಿ ಬೆಳಕಿಗೆ ಬಂದಿದೆ.ಸಂತೋಷ್ ಒಂದು ಮನೆ ಕಟ್ಟುತ್ತಿರುವ ವ್ಯಕ್ತಿ ಜೊತೆ ಮಾತನಾಡುತ್ತಿರುತ್ತಾನೇ. ಇದನ್ನು ನೋಡಿದ ಹರೀಶ್ ಗೆ ಮೊದಲಿಗೆ ಡೌಟ್ ಬರುತ್ತದೆ. ಬಳಿಕ ಸಂತೋಷ್ ಅಲ್ಲಿಂದ ಹೋದ ಕೂಡಲೇ ಹರೀಶ್ ಆ ಮನೆಯ ಬಳಿಗೆ ಹೋಗಿ ತಾನು ಇಂತಹ ಮನೆ ಕಟ್ಟಬೇಕು ಎಂದೆಲ್ಲ ಹೇಳಿ ಮನೆಯ ಒಳಗೆಲ್ಲ ಹೋಗಿ ಮನೆ ತುಂಬಾ ಚೆನ್ನಾಗಿದೆ ಓನರ್ ಯಾರು ಎನ್ನುವ ಮಾತನ್ನು ಕೇಳುತ್ತಾನೆ.
ಸಂತೋಷ್ ಮನೆಯಲ್ಲಿ ಹರೀಶ್
ಸಾರ್ ನೀವು ಸ್ವಲ್ಪ ಮುಂಚೆಯೇ ಬರುತ್ತಿದ್ದರೆ ಖಂಡಿತವಾಗಿಯೂ ನಿಮ್ಮನ್ನು ಅವರಿಗೆ ಪರಿಚಯ ಮಾಡಿಸುತ್ತಿದ್ದೆ ಅವರ ಹೆಸರು ಸಂತೋಷ್. ಈಗ ಹೋಗಿದಷ್ಟೇ ಅವರು ಎಂದು ಹೇಳುತ್ತಾನೆ. ಈ ಮಾತು ಕೇಳಿ ಹರೀಶ್ ಗೆ ಖಚಿತ ಆಗುತ್ತದೆ. ಅಣ್ಣ ಮನೆ ಕಟ್ಟಿಸುತ್ತಿದ್ದಾನೆ. ಆದರೆ ಈ ವಿಚಾರ ಯಾರಿಗೂ ಹೇಳಿಲ್ಲ ಎನ್ನುವುದು ಅರ್ಥವಾಗುತ್ತದೆ. ಕೂಡಲೇ ಮನೆಗೆ ಹೋಗುತ್ತಾನೆ. ಸಂತೋಷ್ ಮನೆಯಲ್ಲಿ ಸಿಕ್ಕಾಗ ಮುಖ ದೊಡ್ಡದು ಮಾಡಿಕೊಂಡು ಅತ್ತ ಕಡೆಯಿಂದ ಇತ್ತ ಕಡೆ ಹೋಗಬೇಕಾದರೆ ಹರೀಶ್ ಮೆತ್ತಗೆ ಅಣ್ಣನ ಬಳಿ ಬರುತ್ತಾನೆ. ಹರೀಶ್ ಮಾತು ಕೇಳಿ ನಡುಗಿದ ಸಂತೋಷ್.
ಅಣ್ಣ ನೀನು ಏನು ಎಂಬುವುದು ನನಗೆ ಅರ್ಥ ಆಗಿದೆ. ನೀನು ಕದ್ದು ಮುಚ್ಚಿ ಮನೆ ಕಟ್ಟಿಸುತ್ತಿರುವ ವಿಚಾರ ನನಗೆ ಗೊತ್ತಾಗಿದೆ. ಅಪ್ಪ ಬಹಳ ಕಷ್ಟ ಪಡುತ್ತಿದ್ದಾರೆ ಒಂದು ಮನೆ ಕಟ್ಟಬೇಕು ಎಂದು ಆದರೆ ನೀನು ಅವರಿಗೆ ತಿಳಿಯದ ಹಾಗೆ ಮನೆ ಕಟ್ಟುತ್ತಿದ್ದಿಯ ಎಂದು ಹೇಳುತ್ತಾನೆ. ಈ ಮಾತು ಕೇಳಿದ ಸಂತೋಷ್ ಗೆ ಬಹಳ ಶಾಕ್ ಆಗುತ್ತದೆ. ತಾನು ಮನೆ ಕಟ್ಟಿಸುತ್ತಿರುವ ವಿಚಾರ ಈತನಿಗೆ ಹೇಗೆ ತಿಳಿಯಿತು ಎನ್ನುವ ಆಲೋಚನೆ ಮೂಡುತ್ತದೆ. ಎಲ್ಲಾದರೂ ಈ ವಿಚಾರವನ್ನು ಹರೀಶ್ ಮನೆ ಮಂದಿಗೆ ಹೇಳಿದರೆ ಖಂಡಿತವಾಗಿಯೂ ಮನೆ ಮಂದಿ ಹಾಗೆಯೇ ಅಪ್ಪ ಅಮ್ಮ ನನ್ನ ಬಳಿ ಸಾವಿರಾರು ಪ್ರಶ್ನೆ ಕೇಳುತ್ತಾರೆ. ಅದೆಲ್ಲವನ್ನೂ ನಾನು ಮರೆಮಾಚಿದರೆ ಬದುಕಿದೆ ಎನ್ನುವ ರೀತಿಯಲ್ಲಿ ಸುಮ್ಮನಾಗುತ್ತಾನೆ.


Click it and Unblock the Notifications











