Lakshmi Nivasa ; ವಿಶ್ವನ ಮನೆಯಲ್ಲಿ ಹಾಡುತ್ತಿರುವ ಜಾಹ್ನವಿ, ಗೆಳತಿಯ ಧ್ವನಿ ಕೇಳಿ ದಂಗಾದ ವಿಶ್ವ
ವೀಣಾ , ಸಿಂಚನ ಮುನಿಸು ಇದೀಗ ಅತಿರೇಖಕ್ಕೆ ಹೋಗಿದೆ. ಸಿಂಚನ ಎಂದರೆ ವೀಣಾಗೆ ಕೊಂಚ ಪ್ರೀತಿ. ಆದರೆ ಸಿಂಚನಗೆ ವೀಣಾ ಕಂಡರೆ ಆಗುವುದೇ ಇಲ್ಲ.ಇದೀಗ ಸಣ್ಣ ಸೆಂಟ್ ಬಾಟಲಿಗೋಸ್ಕರ ಇಬ್ಬರು ಕಿತ್ತಾಟವನ್ನು ನಡೆಸಿದ್ದಾರೆ. ಚಿರಾಗ್ ಮಾಡಿದ ಒಂದೇ ಒಂದು ಕಿತಾಪತಿ ಕೆಲಸದಿಂದಾಗಿ ವೀಣಾ ಗೆ ಕಳ್ಳಿ ಎಂಬ ಹಣೆ ಪಟ್ಟಿಕಟ್ಟಿದ್ದಾಳೆ. ಸಿಂಚನ ಗೆ ವೀಣಾ ಕಂಡರೆ ಮೊದಲಿನಿಂದಲೂ ಅಷ್ಟಕಷ್ಟೇ. ಆದರೆ ಇದೀಗ ಆಕೆಯನ್ನು ಕಂಡರೆ ಸ್ವಲ್ಪವೂ ಆಗುವುದಿಲ್ಲ. ತನ್ನ ಸೆಂಟ್ ಬಾಟಲಿ ಕಾಣಿಸುತ್ತಿಲ್ಲ ಎಂದ ಕೂಡಲೇ ವೀಣಾ ರೂಮ್ ಗೆ ಹೋಗಿ ಹುಡುಕಾಡಿದಾಗ ಆಕೆಗೆ ಆ ವಸ್ತು ಸಿಗುತ್ತದೆ.
ಆದರೆ ವೀಣಾನೇ ಕದ್ದಿದ್ದಾಳೆ ಎಂದು ಬಹಳ ತಪ್ಪಾಗಿ ಗ್ರಹಿಸಿಕೊಳ್ಳುತ್ತಾಳೆ. ವೀಣಾ ಗೆ ಸಂತೋಷ್ ಮೇಲೆ ಕೊಂಚ ಅನುಮಾನ ನೀವು ಯಾಕೆ ಸಿಂಚನ ರೂಮ್ ನಲ್ಲಿದ್ದ ಪರ್ಫ್ಯೂಮ್ ಬಾಟಲ್ ತೆಗೆದುಕೊಂಡಿದ್ದೀರಾ ಎನ್ನುವ ಅನುಮಾನ ನನ್ನನ್ನು ಕಾಡುತ್ತಿದೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಸಂತೋಷ್ ನಗುತ್ತಾನೆ ನನಗೆ ಯಾಕೆ ಅದೆಲ್ಲ ನಾನು ಇಂದು ದಿನವೂ ಅದೆಲ್ಲವನ್ನೂ ಹಾಕಿದವನು ಅಲ್ಲ ಎಂದು ಹೆಂಡತಿ ಬಳಿ ಹೇಳಿದಾಗ ವೀಣಾ ಮಗ ಬರುತ್ತಾನೆ ಆತನ ಜೊತೆಗೆ ವಿಚಾರಣೆ ಮಾಡಿದಾಗ ತಾನೇ ಅದನ್ನು ತೆಗೆದುಕೊಂಡಿದ್ದು ಆದರೆ ವಾಪಸ್ ಇಡಲು ಮರೆತು ಹೋದೆ ಎಂದಾಗ ನಿನಗೆ ಬಹಳ ಸಿಟ್ಟು ಬಂದು ಮಗನನ್ನೇ ಹೊಡೆಯಲು ಹೋಗುತ್ತಾಳೆ.

ಇದನೆಲ್ಲ ನೋಡಿದ ಸಂತೋಷ ಸುಮ್ಮನಿರು ಎಂದು ತನ್ನ ಹೆಂಡತಿಯ ಬಳಿ ಹೇಳುತ್ತಾನೆ. ಭಾವನ ತನ್ನ ಗಂಡನ ಪ್ರೀತಿಗಾಗಿ ಬಹಳಷ್ಟು ಹಾತೊರೆಯುತ್ತಿದ್ದಾಳೆ. ಭಾವನೆಗೆ ತನ್ನ ಗಂಡ ಎಂದರೆ ಬಹಳ ಪ್ರೀತಿ, ಆತನ ಜೊತೆಗೆ ಕಾಲ ಕಳೆಯುವುದೆಂದರೆ ಆಕೆಗೆ ಎಲ್ಲಿಲ್ಲದ ಖುಷಿ. ಒಂದು ವೇಳೆ ಸಿದ್ದೇಗೌಡರು ಶ್ರೀಕಾಂತ್ ಸಾವಿಗೆ ಕಾರಣರಾಗಿದ್ದಾರೆ ಎಂದು ಎಲ್ಲಾದರೂ ತಿಳಿದರೆ ಖಂಡಿತವಾಗಿಯೂ ಭಾವನ ತನ್ನ ಗಂಡನನ್ನು ಕ್ಷಮಿಸುವುದಿಲ್ಲ ಆದರೆ ಇದೀಗ ಭಾವನಗೆ ಸಿದ್ದೇಗೌಡರ ಮೇಲೆ ಮನಸ್ಸು ಪ್ರೀತಿ ಬರುತ್ತದೆ.
ಸಿದ್ದು ಪ್ರೀತಿಗಾಗಿ ಹಂಬಲಿಸುತ್ತಿರುವ ಭಾವನ
ತನ್ನ ಗಂಡ ತುಂಬಾ ಒಳ್ಳೆಯವರು ತಾನೆ ಅವರನ್ನು ಅರ್ಥ ಮಾಡಿಕೊಳ್ಳಲು ಒದ್ದಾಡುತ್ತಿದ್ದೆ. ಅವರ ಮನಸ್ಸಿಗೆ ಬಹಳಷ್ಟು ನೋವನ್ನು ನಾನು ಮಾಡಿದ್ದೇನೆ ಆದರೆ ಇನ್ನೂ ಮೇಲೆ ಯಾವುದೇ ಕಚ್ಚಾಟ ಮಾಡದೆ ತನ್ನ ಗಂಡನ ಜೊತೆಗೆ ಸುಖವಾದ ಸಂಸಾರ ಮಾಡಬೇಕು ಎಂದು ಆಕೆ ಅಂದುಕೊಳ್ಳುತ್ತಾಳೆ. ಇತ್ತ ವಿಶ್ವ ಜಾಹ್ನವಿಯನ್ನು ಬಹಳಷ್ಟು ಹಚ್ಚಿಕೊಂಡಿರುತ್ತಾನೆ. ಆದರೆ ತನು ವಿಶ್ವನನ್ನು ಪ್ರೀತಿ ಮಾಡುತ್ತಿದ್ದಾಳೆ. ವಿಶ್ವನಿಗೆ ತನುವನ್ನು ನೋಡಿದರೆ ಅಂತಹ ಯಾವುದೇ ಭಾವನೆ ಬರುತ್ತಿಲ್ಲ. ಇದೀಗ ಜಾಹ್ನವಿ ವಿಶ್ವನ ಮನೆಯಲ್ಲಿ ಹಾಡುತ್ತಿರುತ್ತಾಳೆ. ಜಾಹ್ನವಿಗೆ ಯಾರದೇ ಪರಿವೆ ಇಲ್ಲ.
ವಿಶ್ವನ ಮನೆಯಲ್ಲಿ ಹಾಡುತ್ತಾ ಮಗ್ನವಾಗಿ ಕುಳಿತ ಜಾಹ್ನವಿ
ಆದರೆ ವಿಶ್ವನಿಗೆ ಜಾಹ್ನವಿ ಹಾಡುತ್ತಿರುವ ಹಾಡು ಕಂಡು ಕೊಂಚ ಮನಸ್ಸಿಗೆ ಖುಷಿ ಆಗುತ್ತದೆ. ಜಾಹ್ನವಿ ತನ್ನ ಮನೆಯಲ್ಲಿದ್ದಾಳೆ ಎನ್ನುವ ವಿಚಾರ ಗೊತ್ತಾಗದೆ ವಿಶ್ವ ತನ್ನಲ್ಲಿ ತಾನೇ ಹೇಳಿಕೊಳ್ಳುತ್ತಾನೆ. ಜಾನು ಹಾಡುತ್ತಿರುವುದು ನನಗೆ ಈಗಲೂ ಕೇಳಿಸುತ್ತಿದೆ ಎಂದರೆ ಜಾಹ್ನವಿ ಅದೆಷ್ಟು ತನ್ನ ಮನದಲ್ಲಿ ಬೇರೂರಿಬೇಡ ಎಂದು ವಿಶ್ವ ತನ್ನಲ್ಲಿ ತಾನು ಹೇಳಿಕೊಳ್ಳುತ್ತಾನೆ. ಜಾಹ್ನವಿ ಹಾಡು ಕೇಳಿ ವಿಶ್ವನ ತಾಯಿ ಮನೆಯಿಂದ ಹೊರಗಡೆ ಬರುತ್ತಾರೆ. ಜಾಹ್ನವಿ ಮುದ್ದಾಗಿ ಹಾಡುತ್ತಿರುವುದನ್ನು ನೋಡಿ ವಿಶ್ವನ ತಾಯಿಗೆ ಬಹಳ ಸಂತಸವಾಗುತ್ತದೆ.


Click it and Unblock the Notifications











