Lakshmi Nivasa ; ಜಾಹ್ನವಿ ಧಗಧಗ, ಬೆಚ್ಚಿ ಬಿದ್ದ ಜಯಂತ್, ಮುಂದೇನು ?
ಜಾಹ್ನವಿ ಶಾಕ್ ನಿಂದಾಗಿ ತನ್ನ ಮಗುವನ್ನು ಕಳೆದುಕೊಂಡಿದ್ದಾಳೆ. ಆಕೆಗೆ ಜಯಂತ್ ಏನೇ ಮಾಡಿದರೂ ಕೂಡಾ ಹೊಟ್ಟೆಯಲ್ಲಿರುವ ಮಗುವನ್ನು ನೆನೆದುಕೊಂಡು ಆ ಕ್ಷಣವೇ ಮರೆತು ಬಿಡುತ್ತಾಳೆ. ಆದರೆ ಇದೀಗ ಅದೇ ಮಗುವನ್ನು ಕಳೆದುಕೊಂಡು ಜಾಹ್ನವಿ ಬರಿದಾಗಿದ್ದಾಳೆ. ಜಾಹ್ನವಿ ಸ್ಥಿತಿ ನೋಡಿದ ವಿಶ್ವ ಗೆ ಬಹಳಷ್ಟು ನೋವು ಆಗುತ್ತದೆ. ಇದೇನಪ್ಪಾ ಜಾಹ್ನವಿ ಸ್ಥಿತಿ ಹೀಗೆಲ್ಲಾ ಆಗಿ ಹೋಯಿತಲ್ಲಾ ಎಂದು ಮರುಗುತ್ತಾನೆ. ಜಾನು ಮದುವೆ ಆದ ಬಳಿಕ ಕೂಡ ಗಂಡನ ಜೊತೆ ಚೆನ್ನಾಗಿಲ್ಲ ಎನ್ನುವುದು ಆತನ ಅರಿವಿಗೆ ಬರುತ್ತದೆ. ಜಾಹ್ನವಿ ಗೆ ಬಹಳಷ್ಟು ನೋವಾಗುತ್ತದೆ.
ಆದರೆ ವಿಶ್ವನ ಬಳಿ ಎಲ್ಲಾ ವಿಚಾರವನ್ನು ಹೇಳಿಕೊಳ್ಳುತ್ತಿದ್ದಳು. ಆ ವೇಳೆ ಜಯಂತ್ ಸಡನ್ ಬಂದ ಕಾರಣ ಏನು ಹೇಳಲು ಸಾಧ್ಯ ಆಗುವುದೇ ಇಲ್ಲ. ಜಾಹ್ನವಿ ಗೆ ಜಯಂತ್ ನ ಕಂಡರೆ ಬಹಳಷ್ಟು ಕೋಪ. ಇಷ್ಟೆಲ್ಲ ಆಗಲು ನೀವೇ ಕಾರಣ. ನಿಮ್ಮ ಮುಖ ಕೊಡಲು ನನಗೆ ಇಷ್ಟವಿಲ್ಲ ಎಂದು ಬಹಳ ಕೋಪದಿಂದ ಜಾಹ್ನವಿ ಹೇಳುತ್ತಾಳೆ. ಆಕೆಯ ಮಾತು ಕೇಳಿ ಜಯಂತ್ ಕಂಗಾಲಾಗುತ್ತಾನೆ. ಹಾಗೆಯೇ ಮನೆಗೆ ಅತ್ತೆ ಮಾವ ವೆಂಕಿ ಚೆಲುವಿ ಬಂದಿರುವ ವಿಚಾರವನ್ನು ತಿಳಿದು ಆಸ್ಪತ್ರೆಯಿಂದ ನೇರವಾಗಿ ಮನೆಗೆ ಹೋಗುತ್ತಾರೆ. ಜಾಹ್ನವಿ ತನ್ನ ಹೆತ್ತಬ್ಬೆಯನ್ನು ನೋಡಿ ಬಹಳ ಬೇಸರದಿಂದ ತಬ್ಬಿಕೊಂಡು ಅಳುತ್ತಾಳೆ.

ಇಂತಹ ಗಂಡನನ್ನು ಮದುವೆಯಾಗಿ ಇನ್ನೇಷ್ಟು ನರಕ ಅನುಭಸಬೇಕು ಎಂದು ಬಹಳ ಬೇಸರದಿಂದ ಮನದಲ್ಲಿ ಹೇಳಿಕೊಳ್ಳುತ್ತಾಳೆ. ಜಾಹ್ನವಿ ಮನೆಯವರ ಎದುರು ನಗು ನಗುತ್ತಾ ಇರುತ್ತಾಳೆ ಇದರಿಂದ ಆಕೆಗೆ ಮನದಲ್ಲಿ ನೋವಿದ್ದರೂ ಅದೆಲ್ಲವನ್ನೂ ನುಂಗಿಕೊಂಡು ಯಾರಿಗೂ ತನ್ನ ದುಃಖವನ್ನು ತೋರಿಸುವುದಿಲ್ಲ. ಜಾಹ್ನವಿ ಸ್ಕಾನಿಂಗ್ ಮಾಡಿಸಲು ಆಸ್ಪತ್ರೆಗೆ ಹೋಗಿದ್ದಾಳೆ ಎಂದು ಜಯಂತ್ ಹೇಳುತ್ತಾನೆ. ಇದೆ ಮಾತನ್ನು ನಂಬಿದ್ದೆ ಲಕ್ಷ್ಮೀ ಜಾಹ್ನವಿ ಬಳಿ ಕೇಳುತ್ತಾಳೆ. ಸ್ಕಾನಿಂಗ್ ರಿಪೋರ್ಟ್ ಹೇಗಿದೆ. ಮಗು ಹೇಗೆ ಬೆಳೆಯುತ್ತಿದೆ ಎಂದು ಜಾಹ್ನವಿ ಬಳಿ ಕೇಳಿದಾಗ ಜಾಹ್ನವಿ ಗೆ ಎನು ಹೇಳಬೇಕು ತೋಚದಾಗುತ್ತದೆ.
ಅಮ್ಮನ ಬಳಿ ಸುಳ್ಳು ಹೇಳಿದ ಜಾಹ್ನವಿ
ಇತ್ತ ಚೆಲುವಿ ಸ್ಕಾನಿಂಗ್ ರಿಪೋರ್ಟ್ ತೋರಿಸಿ ನಾನೇ ಮಾತು ಹೇಗೆ ಬೆಳೆಯುತ್ತಿದೆ ಎಂದು ನೋಡುತ್ತೇನೆ ಎಂದು ಹೇಳುತ್ತಾಳೆ. ಆಕೆಯ ಮಾತು ಕೇಳಿದ ಜಾಹ್ನವಿ ಮೌನವಾಗಿ ಇರುತ್ತಾಳೆ. ಇದೆಲ್ಲವನ್ನೂ ಗಮನಿಸಿದ ಶ್ರೀನಿವಾಸರಾಯರು ಜಾಹ್ನವಿ ಹೇಗಿದ್ದಾಳೆ ಎಂದು ನೋಡಲು ನಾವು ಬಂದೆವು ಆಕೆಗೆ ಒಂಚೂರು ಬಿಡುವು ಕೊಡದೆ ಮಾತನಾಡುತ್ತಲೇ ಇದ್ದೇವೆ ಆಕೆಗೆ ಸ್ವಲ್ಪ ರೆಸ್ಟ್ ತೆಗೆದುಕೊಳ್ಳಲಿ. ಮನೆಯಲ್ಲಿ ಅಜ್ಜಿಯ ಕೆಲಸ ಹಾಗೆಯೇ ಮನೆ ಕೆಲಸ ಮಾಡಿ ಜಾಹ್ನವಿ ಕೊಂಚ ಸೊರಗಿ ಹೋಗಿದ್ದಾಳೆ ಎಂದು ಶ್ರೀನಿವಾಸರಾಯರು ಹೆಂಡತಿ ಬಳಿ ಹೇಳುತ್ತಾರೆ.
ಜಾಹ್ನವಿಗೆ ಇಷ್ಟವಾದ ತಿಂಡಿ ತಂದ ಜಾಹ್ನವಿ
ಇದನ್ನು ಕೇಳಿದ ಲಕ್ಷ್ಮೀ ಜಾಹ್ನವಿಯನ್ನು ಸೋಫಾ ಮೇಲೆ ಕೂರಿಸಿ ಬಿಡುತ್ತಾಳೆ. ಹಾಗೆಯೇ ಆಕೆಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ತರಲು ಆಕೆ ಹೋಗುತ್ತಾಳೆ. ಇದೆಲ್ಲವನ್ನೂ ಕೊಡಿ ಜಾಹ್ನವಿ ಗೆ ದುಃಖವಾಗುತ್ತದೆ. ಏನು ಮಾತನಾಡಬೇಕು ಎಂದು ತಿಳಿಯದೇ ಮಾತೆ ಮರೆತು ಹೋದಂತೆ ಕುಳಿತಿರುತ್ತಾಳೆ . ಜಯಂತ್ ಗೆ ಬಹಳಷ್ಟು ಭಯ ಕಾಡುತ್ತದೆ. ಎಲ್ಲಿ ಜಾಹ್ನವಿ ನಿಜ ವಿಚಾರವನ್ನು ಹೇಳಿ ಮನೆಯವರ ಮುಂದೆ ನನ್ನ ಬಂಡವಾಳ ಬಯಲು ಮಾಡುತ್ತಾಳೆ ಎನ್ನುವ ಭಯ ಆತನಿಗೆ ಕಾಡುತ್ತದೆ. ಜಾಹ್ನವಿ ರೂಮ್ ಗೆ ಹೋದಾಗ ಜಯಂತ್ ಜಾಹ್ನವಿ ಹಿಂದೆ ಬಂದು ಕ್ಷಮೆ ಕೇಳಲು ಟ್ರೈ ಮಾಡುತ್ತಾನೆ ಆದರೆ ಜಾಹ್ನವಿ ಮಾತ್ರ ಬಹಳ ಕೋಪದಿಂದ ನಾನು ಎಂದಿಗೂ ನಿಮ್ಮ ಜೊತೆ ಮಾತನಾಡುವುದೇ ಇಲ್ಲ ಎನ್ನುವ ಶಪಥ ಮಾಡುತ್ತಾಳೆ. ಇಷ್ಟೆಲ್ಲ ಆಗಲು ನೀವೇ ಕಾರಣ ನಿಮ್ಮಿಂದಾಗಿಯೇ ನನಗೆ ಈ ರೀತಿ ಆಗಿದ್ದು ಎಂದು ಬಹಳ ಕೋಪದಿಂದ ಹೇಳುತ್ತಾಳೆ. ಜಾಹ್ನವಿ ಅರಚಾಟ ಕೇಳಿದ ಗೌತಮ್ ಮಾತ್ರ ಕಂಗಾಲಾಗಿ ಬಿಡುತ್ತಾನೆ.


Click it and Unblock the Notifications











