Lakshmi Nivasa; ಸಂತೋಷ್ ನ ಸ್ವಾರ್ಥದ ಆಲೋಚನೆಗೆ ಬಲಿಯಾದ ವೆಂಕಿ? ಮನೆ ಬಿಟ್ಟು ಹೊರಟು ಹೋಗ್ತಾನಾ?
ಸಂತೋಷ್ ನ ಸ್ವಾರ್ಥಕ್ಕೆ ಜೊತೆಯಲ್ಲಿ ಇದ್ದ ಲಕ್ಷ್ಮಿ ಶ್ರೀನಿವಾಸ್ ರವರ ಕುಟುಂಬದಲ್ಲಿ ಬಿರುಕು ಮೂಡಿದೆ. ಸಂತೋಷ್ ಗೆ ವೆಂಕಿಯ ಮೇಲೆ ಆಗಾದವಾದ ಕೋಪ ಇದೆ ಆದರೆ ಶ್ರೀನಿವಾಸ್ ಹಾಗೂ ಲಕ್ಷ್ಮಿಗೆ ಮೊದಲಿಂದ ವೆಂಕಿಯನ್ನು ನೋಡಿದರೆ ಬಹಳ ಪ್ರೀತಿ. ಆತನೊಡನೆ ಬಹಳಷ್ಟು ಸಮಯವನ್ನು ಕಳೆಯುತ್ತಿದ್ದರು. ವೆಂಕಿಗೆ ಮಾತು ಹಾಗೂ ಕಿವಿ ಕೇಳಿಸುವುದಿಲ್ಲ ಆದರೂ ತನ್ನ ತಾಯಿಯ ಭಾವನೆಯನ್ನ ಅರ್ಥ ಮಾಡಿಕೊಳ್ಳುತ್ತಾನೆ. ಶ್ರೀನಿವಾಸ್ ವೆಂಕಿಗೆ ಹಣ ಕೊಟ್ಟಿದ್ದು ಇದೀಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ
ವೆಂಕಿಯನ್ನು ಶ್ರೀನಿವಾಸರಾಯರು ತನ್ನ ಮಗನ ಹಾಗೆ ಬೆಳೆಸಿದ್ದರು ಒಂದು ದಿನವೂ ಕೂಡ ವೆಂಕಿ ನನ್ನ ಬಳಿ ಏನೂ ಕೇಳಿಲ್ಲ ಆತ ಚೆನ್ನಾಗಿರಬೇಕು ಆತನಿಗೂ ಇದೀಗ ಮದುವೆಯಾಗಿದೆ ಜೀವನಕ್ಕೆ ಈಗ ಅಷ್ಟೋ ಇಷ್ಟೋ ಕೆಲಸ ಮಾಡುತ್ತಿದ್ದಾನೆ ಆದರೂ ಕೂಡ ಆತನಿಗೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಖರ್ಚುಗಳು ಇದ್ದೇ ಇರುತ್ತದೆ ಆದ ಕಾರಣ ಅವರಿಗೆ ಅವರ ಪಾಲಿನ ಹಣವನ್ನು ಕೊಟ್ಟರೆ ಸ್ವಲ್ಪವಾದರೂ ಆತನಿಗೆ ಸಹಾಯ ಆಗಬಹುದೇನೋ ಎನ್ನುವ ಆಲೋಚನೆಯಲ್ಲಿ ಶ್ರೀನಿವಾಸ್ ರಾಯರು ಇದ್ದರೂ. ಆದರೆ ಇದೀಗ ಅದೆಲ್ಲವೂ ಉಲ್ಟಾ ಆಗಿದೆ. ವೆಂಕಿ ಮೇಲೆ ಸಂತೋಷ ಕೈ ಮಾಡುತ್ತಾನೆ. ಇದನ್ನು ನೋಡಿದ ಲಕ್ಷ್ಮಿಗೆ ಬಹಳ ಸಿಟ್ಟು ಬರುತ್ತದೆ ಹಾಗೆಯೇ ಆ ರೀತಿ ಮಾಡಬಾರದು ವೆಂಕಿ ನಿನ್ನ ಅಣ್ಣ ಎಂದು ಹೇಳಿದಾಗ ಸಂತೋಷ್ಗೆ ಇನ್ನಷ್ಟು ಕೋಪ ಬರುತ್ತದೆ ದಾರಿಯಲ್ಲಿ ಹೋಗೋರ್ ಬರುವವರನ್ನ ನನ್ನ ಅಣ್ಣ ಎಂದು ಹೇಳಿದರೆ ನಾನು ಖಂಡಿತವಾಗಿಯೂ ಸುಮ್ಮನೆ ಇರುವುದಿಲ್ಲ ಇಂದು ಪಂಚ ಜೋರಾಗಿ ಹೇಳುತ್ತಾನೆ

ಬಳಿಕ ಅಜ್ಜಿ ಸಂತೋಷಕ್ಕೆ ಬುದ್ಧಿವಾದವನ್ನು ಹೇಳುತ್ತಾರೆ. ಯಾಕೆ ನೀನು ಹೀಗೆಲ್ಲ ಮಾಡುತ್ತಿದ್ದೀಯಾ ವೆಂಕಿ ನಿನಗಿಂತ ಮುಂಚೆ ಈ ಮನೆಗೆ ಬಂದಿದ್ದಾನೆ. ಆತನಿಗೆ ಈ ಮನೆಯಲ್ಲಿರುವ ಎಲ್ಲಾ ರೈಟ್ಸ್ ಇದೆ ಎಂದಾಗ ಸಂತೋಷ ಹೇಳುತ್ತಾನೆ ಹಾಗಾದರೆ ನಮ್ಮೆಲ್ಲರನ್ನ ಹುಟ್ಟಿಸಿದ್ದಾದರೂ ಯಾಕೆ ಆತ ಒಬ್ಬನೇ ಈ ಮನೆಯಲ್ಲಿ ಇರಬಹುದು ಇತ್ತಲ್ಲ ಎಂದು ಕೇಳಿದಾಗ ಲಕ್ಷ್ಮಿಗೆ ಬರಸಿಡೀಲು ಬಡಿದ ಹಾಗೆ ಆಗುತ್ತದೆ. ನೀನು ಈಗಲೇ ಗಂಟು ಮೂಟೆ ಕಟ್ಟಿಕೊಂಡು, ಹೋಗು ಎಂದು ಜೋರಾಗಿ ಹೆಂಡತಿಯನ್ನು ಸಂತೋಷ್ ತಳ್ಳುತ್ತಾನೆ ಸಂತೋಷ್ ಮಾತಿಗೆ ವೀಣಾ ಅವಕ್ಕಾಗಿ ನಿಲ್ಲುತ್ತಾಳೆ
ಮಗನ ನಿರ್ಧಾರಕ್ಕೆ ಅತ್ತ ಲಕ್ಷ್ಮೀ
ಕೊನೆಗೆ ಲಕ್ಷ್ಮಿ ತನ್ನ ಮಗನ ಬಳಿಗೆ ಬಂದು ನಿನ್ನ ಕಾಲಿಗೆ ಬೀಳುತ್ತೇನೆ ವೆಂಕಿಯನ್ನು ಮನೆ ಬಿಟ್ಟು ಹೋಗು ಎಂದು ಹೇಳಿದರೆ ಆತ ಎಲ್ಲಿಗಪ್ಪ ಹೋಗಬೇಕು ಆತ ಮನೆಯವರಿಗಾಗಿ ತುಂಬಾ ಶ್ರಮ ಪಟ್ಟು ಕೆಲಸ ಮಾಡಿದ್ದಾನೆ ಆತ ಮನೆಯಿಂದ ಹೋಗುವುದು ಬೇಡ ಆತ ಮನೆಯಲ್ಲೇ ಇರಲಿ ಎಂದು ಗೋಗರೆದು ಬಿಡುತ್ತಾಳೆ. ಅಮ್ಮನ ಸಂಕಟವನ್ನು ನೋಡಲಾಗದೆ ವೆಂಕಿ ಮನೆ ಬಿಟ್ಟು ಹೋಗಲು ನಿರ್ಧಾರ ಮಾಡುತ್ತಾನೆ
ವೆಂಕಿಯನ್ನು ತಡೆಯಲು ಮುಂದಾದ ಶ್ರೀನಿವಾಸ್ ದಂಪತಿ
ತನ್ನ ಹೆಂಡತಿಯನ್ನು ಕರೆದುಕೊಂಡು ವೆಂಕಿ ಮನೆಯಿಂದ ಹೊರಗಡೆ ಹೋಗುತ್ತಿರುವುದನ್ನು ನೋಡಿದ ಶ್ರೀನಿವಾಸ್ ಹಾಗು ಲಕ್ಷ್ಮಿಗೆ ಬಹಳ ನೋವಾಗುತ್ತದೆ ತನ್ನ ಮಗ ಈ ಮನೆ ಬಿಟ್ಟು ಹೋಗುತ್ತಿದ್ದಾನಲ್ಲ ಎನ್ನುವ ಬೇಜಾರು ಅವರನ್ನು ಬಹಳಷ್ಟು ಕಾಡುತ್ತದೆ. ಅಮ್ಮ ಲಕ್ಷ್ಮಿ ಅದೆಷ್ಟೋ ಬಾರಿ ಬೆಂಕಿಯನ್ನು ಕರೆದರು ಕೂಡ ಆತ ಅಮ್ಮನ ಮುಖವನ್ನು ಹಾಗೂ ಅಪ್ಪನ ಮುಖವನ್ನು ನೋಡಿ ಅಲ್ಲಿಂದ ಹೊರಟು ಹೋಗುತ್ತಾನೆ ಸಂತೋಷ್ ಈ ಸ್ವಾರ್ಥದ ನಿರ್ಧಾರದಿಂದಾಗಿ ಮನೆಮಂದಿಗೆಲ್ಲ ಬಹಳಷ್ಟು ನೋವಾಗುತ್ತದೆ. ಸಂತೋಷ್ ಗೆ ಮೊದಲಿನಿಂದಲು ವೆಂಕಿಯನ್ನು ನೋಡಿದರೆ ಅಷ್ಟಕಷ್ಟೇ. ಆದರೆ ಇದೀಗ ವೆಂಕಿ ಮನೆ ಬಿಟ್ಟು ಹೋಗಿದ್ದು ಎಲ್ಲರಿಗೆ ಬೇಸರ ಆದರೂ ಸಂತೋಷ್ ಗೆ ಮಾತ್ರ ಹಾಲು ಕುಡಿದಷ್ಟೇ ಸಂತೋಷ ಆಗಿದೆ.


Click it and Unblock the Notifications











